Thursday, July 11, 2019

೫ ಟ್ರಿಲಿಯನ್ ಡಾಲರ್ ಎಕಾನಮಿ

ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಉಲ್ಲೇಖಿಸಿದ್ದು ಅಂತ ನೆನಪು. "ನಾವು ಸಾಮಾನ್ಯವಾಗಿ ಮಾಡುವ ತಪ್ಪೇನೆಂದರೆ, ಅಲ್ಪಾವಧಿಯ ಬದಲಾವಣೆಗಳನ್ನು ಜಾಸ್ತಿಯಾಗಿ ಅಂದಾಜಿಸುತ್ತೇವೆ ಮತ್ತು ದೀರ್ಘಾವಧಿಯ ಬದಲಾವಣೆಗಳನ್ನು ಕಮ್ಮಿಯಾಗಿ ಅಂದಾಜಿಸುತ್ತೇವೆ."

ಮುಂದಿನ ಐದು ವರ್ಷಗಳಲ್ಲಿ ಭಾರತದ ಎಕಾನಮಿ ೫ ಟ್ರಿಲಿಯನ್ ಡಾಲರ್ ಆಗುವ ಸಾಧ್ಯತೆಗಳಿಗಿಂತ ಮುಂದಿನ ಹತ್ತು ವರ್ಷಗಳಲ್ಲಿ ೧೦ ಟ್ರಿಲಿಯನ್ ಡಾಲರ್ ಎಕಾನಮಿ ಆಗುವ ಸಾಧ್ಯತೆಗಳೇ ಹೆಚ್ಚಿರಬಹುದು. ನೋಡಿದರೆ ಜಾಸ್ತಿ ವ್ಯತ್ಯಾಸವಿಲ್ಲ. ಐದು ವರ್ಷದಲ್ಲಿ ಡಬಲ್ ಆಗಿ, ಮುಂದಿನ ಐದು ವರ್ಷಗಳಲ್ಲಿ ಮತ್ತೆ ಡಬಲ್ ಆದರೆ ೧೦ ಟ್ರಿಲಿಯನ್ ಡಾಲರ್ ಎಕಾನಮಿ ಆದಂತೆಯೇ. ಆ ಸಾಧ್ಯತೆಗಳು ಹೆಚ್ಚು ಏಕೆಂದರೆ ಹೆಚ್ಚಿನ ಸಮಯ ಸಿಗುತ್ತದೆ. ಉದಾಹರಣೆ: ಶೇರ್ ಮಾರ್ಕೆಟ್ ಸರಾಸರಿ ೧೦% ಲಾಭ ಕೊಡುತ್ತದೆ ನಿಜ. ದೀರ್ಘಾವಧಿಯಲ್ಲಿ ನೋಡಿದಾಗ ಮಾತ್ರ. ಒಂದು ವರ್ಷ ಹೆಚ್ಚು, ಒಂದು ವರ್ಷ ಕಮ್ಮಿ, ಮತ್ತೊಂದು ವರ್ಷ ಬಂಪರ್ ಲಾಭ, ಮತ್ತೊಂದು ವರ್ಷ ದೊಡ್ಡ ಲಾಸ್. ಹೀಗೆಲ್ಲಾ ಆಗಿ ದೀರ್ಘಕಾಲದ (೨೦-೩೦ ವರ್ಷಗಳ) ಸರಾಸರಿ ೧೦%. ಅದನ್ನು ನಂಬಿಕೊಂಡು ಪ್ರತಿವರ್ಷ ಅಷ್ಟೇ ಬರುತ್ತದೆ ಅಂದುಕೊಳ್ಳಲಿಕ್ಕೆ ಸಾಧ್ಯವಿಲ್ಲ.

೧೯೬೦-೭೦ ಸಮಯದಲ್ಲಿ ಚೀನಾ ತನ್ನ ಆರ್ಥಿಕ ಪ್ರಗತಿಯ ಬಗ್ಗೆ ಕೊಚ್ಚಿಕೊಳ್ಳುತ್ತಿತ್ತಂತೆ. ತಮ್ಮದೇ ರೀತಿಯಲ್ಲಿ ಚೀನಾದ ಎಕಾನಮಿಯನ್ನು ಅಭ್ಯಸಿಸಿದ್ದ ಸುಬ್ರಮಣಿಯನ್ ಸ್ವಾಮಿ, ಚೀನಾದ GDP ಅಷ್ಟು ಜಾಸ್ತಿ ಇರಲಿಕ್ಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಚೀನಾ ಕೊಟ್ಟ ಅಂಕಿಅಂಶಗಳನ್ನೇ ಇಟ್ಟುಕೊಂಡ IMF, ವಿಶ್ವಬ್ಯಾಂಕ್ ಇತ್ಯಾದಿ ಚೀನಾಕ್ಕೆ ಆರ್ಥಿಕ ನೆರವನ್ನು ನಿರಾಕರಿಸಿದವು. ಆವಾಗ ಚೀನಾ ಹೇಳಿತಂತೆ - ನಾವು GDP ತಪ್ಪಾಗಿ ಲೆಕ್ಕ ಹಾಕಿದ್ದೇವೆ. ಸುಬ್ರಮಣಿನ್ ಸ್ವಾಮಿ ಹಾಕಿದ GDP ಲೆಕ್ಕ ಸರಿಯಿದೆ. ಅದರ ಪ್ರಕಾರ ಆರ್ಥಿಕ ನೆರವು ನೀಡಿ!!

2 comments:

sunaath said...

ಭಾರತದ ಜಿ.ಡಿ.ಪಿ.ಯನ್ನು ಲೆಕ್ಕಿಸಲು ಸುಬ್ರಹ್ಮಣ್ಯಮ್ ಸ್ವಾಮಿಯವರನ್ನು ಆಹ್ವಾನಿಸುವುದು ಡೇಂಜರಸ್ ಆದಂತಾಯಿತು!

Mahesh Hegade said...

ಕಾಮೆಂಟಿಗೆ ಧನ್ಯವಾದಗಳು, ಸುನಾಥ್ ಸರ್.

ಭಾರತದ GDP ಬಗ್ಗೆ ಸ್ವಾಮಿ ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಭಾರತದ ಸರಕಾರವೇ ಭಾರತದ ಸ್ಥಾನ ಆರನೆಯದು ಅಂದರೆ ಸ್ವಾಮಿ ಮೂರನೆಯದು ಅನ್ನುತ್ತಿದ್ದಾರೆ. :)


https://www.firstpost.com/india/subramanian-swamy-says-modi-jaitley-dont-know-economics-as-they-dub-india-fifth-largest-economy-not-third-6315841.html