Thursday, November 20, 2014

ಭಾಷಣ ಭಗ್ನವಾಗಿದ್ದಕ್ಕೆ ವೇದಿಕೆಯಿಂದಲೇ ಚಿಟಿ ಚಿಟಿ ಚೀರಿದ್ದ ಪಾಪು (ಪಾಟೀಲ್ ಪುಟ್ಟಪ್ಪ)

ಮೊನ್ನೆ ಪಾಟೀಲ್ ಪುಟ್ಟಪ್ಪ ಉರ್ಫ್ ಪಾಪು ಮತ್ತೊಮ್ಮೆ ನೆನಪಾದರು. ತಮ್ಮ ಆತ್ಮಚರಿತೆಯಲ್ಲಿ ದಿವಂಗತ ಶಿವರಾಂ ಕಾರಂತರ ಮದುವೆ ಬಗ್ಗೆ ಏನೋ ಬರೆದರಂತೆ. ಅದು ಕಾರಂತರ ಬೆಂಬಲಿಗರಿಗೆ ಸಹ್ಯವಾಗಲಿಲ್ಲ. ಅದಕ್ಕೇ ಪಾಟೀಲ್ ಪುಟ್ಟಪ್ಪನವರು ಕ್ಷಮೆ ಕೇಳಬೇಕು ಅದು ಇದು ಅಂತ ಏನೋ ಗದ್ದಲ. ಅದೆಲ್ಲ ಬೇರೆ ಬಿಡಿ. ವಿಷಯ ಅದಲ್ಲ. ಪಾಪು ನೆನಪಾಗಲಿಕ್ಕೆ ಒಂದು ಕಾರಣ ಅಷ್ಟೇ.

ಧಾರವಾಡ. ಇಸವೀ ೧೯೮೧. ನಾವು ನಾಲ್ಕನೇ ಕ್ಲಾಸು.  ಒಂಬತ್ತೂ ಚಿಲ್ಲರೆ ವರ್ಷ ವಯಸ್ಸು ಅಷ್ಟೇ. ಅದೇನೋ ನಾಟಕ ಸ್ಪರ್ಧೆ ಇತ್ತು. ನಮ್ಮ ಪ್ರಾಥಮಿಕ ಶಾಲೆಯೂ ಭಾಗವಹಿಸಿತ್ತು. 'ಸತ್ಯ ಹರಿಶ್ಚಂದ್ರ' ಅನ್ನುವ ನಾಟಕ. ಅದು ನಾಟಕವೋ, ರೂಪಕವೋ, ಮೂಕಿ ತರಹದ ಸಿನಿಮಾನೋ ಇದ್ದ ಹಾಗೆ ಇತ್ತು. ಸಂಭಾಷಣೆ ಕಡಿಮೆ. ತೆರೆ ಹಿಂದಿನಿಂದ ಹಾಡುತ್ತಿದ್ದ ಹಾಡಿಗೋ, ಡೈಲಾಗುಗಳಿಗೋ ನಮ್ಮ ಹಾವ ಭಾವ ಇತ್ಯಾದಿ. ಒಂದು ತರಹದ ವಿಭಿನ್ನ ಪ್ರಯೋಗ. ಹಾಗೆ ವಿಭಿನ್ನವಾಗಿತ್ತು ಅಂತಲೇ ಏನೋ ಗೊತ್ತಿಲ್ಲ. ನಮ್ಮ ನಾಟಕಕ್ಕೇ ಪ್ರಥಮ ಬಹುಮಾನ ಬಂದು ಬಿಡಬೇಕೇ! ಸಿಕ್ಕಾಪಟ್ಟೆ ಥ್ರಿಲ್ಲೋ ಥ್ರಿಲ್ಲು. ನಾನೇ ಹರಿಶ್ಚಂದ್ರನ ಪಾತ್ರ ಮಾಡಿದ್ದು. ದೊಡ್ಡ ಪಾತ್ರವೇನೂ ಅಲ್ಲ. ದೊಡ್ಡ ಪಾತ್ರ ಹಿಂದಿಂದ ಹಾಡಿ, ಪಿಟೀಲು ಕೊಯ್ದು, ಅದು ಇದು ಮಾತಾಡುತ್ತಿದ್ದ ಸೂತ್ರಧಾರನದು ಆಗಿತ್ತು. ಆ ಕಾಲದಲ್ಲಿ ಸುನಿಲ್ ಶೆಟ್ಟಿ ಮಾದರಿಯಲ್ಲಿ ತೋತ್ಲಾ, ಹಕ್ಲಾ ಮಾತಾಡುತ್ತಿದ್ದ ನಮಗೆ ಬಹಳ ಸಂಭಾಷಣೆ ಇರುವ ಪಾತ್ರ ಕೊಟ್ಟಿರಲಿಲ್ಲ ಅನ್ನಿ. ಏನೋ 'ಕುರುಡರಲ್ಲಿ ಮೆಳ್ಳಗಣ್ಣು ಇದ್ದವ ಶ್ರೇಷ್ಠ' ಅಂತ ಹೇಳಿ ಆ ಕಾಲದಲ್ಲಿ ಸ್ವಲ್ಪ ಎತ್ತರಕ್ಕೆ, ತೆಳ್ಳಗೆ, ಬೆಳ್ಳಗೆ ಇದ್ದು, ತಕ್ಕ ಮಟ್ಟಿನ ಉದ್ದದ ಹೇರ್ ಸ್ಟೈಲ್ ಮಡಗಿದ್ದ ನಾವು ರಾಜನ ಪಾತ್ರಕ್ಕೆ ಓಕೆ ಅಂತ ಹೇಳಿ ಹರಿಶ್ಚಂದ್ರನ ಪಾತ್ರ ಕೊಟ್ಟಿದ್ದರು ಅಷ್ಟೇ.

ನಾಟಕಕ್ಕೆ ಪ್ರಥಮ ಬಹುಮಾನ ಬಂದಿದ್ದೇ ಬಂದಿದ್ದು ನಮ್ಮ ಗ್ರಹಚಾರ ಶುರುವಾಯಿತು. ಆ ವರ್ಷದ ಮಕ್ಕಳ ದಿನಾಚರಣೆ ದಿನ ಬಹುಮಾನ ಕೊಡುವ ದಿನ ಅಂತ ನಿಕ್ಕಿಯಾಗಿತ್ತು. ಧಾರವಾಡದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸಮಾರಂಭ ಇತ್ತು ಅಂತ ನೆನಪು. ಆ ಸಮಾರಂಭದಲ್ಲಿ ಮತ್ತೊಮ್ಮೆ ನಾಟಕ ಮಾಡಬೇಕಂತೆ! ಇದೆಲ್ಲಿ ಕರ್ಮ ಅಂತ ಅನ್ನಿಸಿದರೂ ಏನು ಮಾಡೋದು? ಮಾಸ್ತರು, ಟೀಚರು ಹೇಳಿದಂತೆ ನಾಟಕದ ತಾಲೀಮು ಮುಂದುವರಿಸಿದ್ದೆವು. ಶಾಲೆಗೆ ಪ್ರಥಮ ಬಹುಮಾನ ಬಂದರೂ ನಮಗೇನೂ ಗಿಟ್ಟಿದ ನೆನಪಿಲ್ಲ ಬಿಡಿ. ಮೇಲಿಂದ ಶಾಲೆ ಶುರುವಾಗುವಗಿಂತ ಮೊದಲು, ನಡುವೆ ಸೂಟಿ ಬಿಟ್ಟಾಗ, ಶಾಲೆ ಮುಗಿದ ನಂತರ ನಾಟಕದ ತಾಲೀಮೋ ತಾಲೀಮು. ನಾವೆಲ್ಲ ಬಸ್ಸಿಗೆ ಹೋಗಿ ಬಂದು ಮಾಡುತ್ತಿದ್ದ ದೊಡ್ಡ ಮಂದಿ. ಇವರ ತಾಲೀಮಿನ ಅಬ್ಬರದಲ್ಲಿ ಬಸ್ಸು ತಪ್ಪಿ, ನಡೆದುಕೊಂಡು ಹೋಗಿ ಬಂದು ಮಾಡುವ ತೊಂದರೆ ಎಕ್ಸಟ್ರಾ.

ಅಂತೂ ಇಂತೂ ಆ ವರ್ಷದ ಮಕ್ಕಳ ದಿನಾಚರಣೆ ಬಂತು. ಸಂಜೆ ಸಮಾರಂಭವಿತ್ತು. ಮಧ್ಯಾನ ಮೂರು ಘಂಟೆಗೇ ನಮ್ಮನ್ನು ಅಲ್ಲಿ ಕರೆದುಕೊಂಡು ಹೋಗಿ ಕೂಡಿಸಿ ಬಿಟ್ಟಿದ್ದರು. ಪ್ರಾರಬ್ಧ! ನಾಕು ಘಂಟೆ ಹೊತ್ತಿಗೆಲ್ಲ ಮೇಕ್ಅಪ್ ಮಾಡಿ, ಕಿರೀಟ ಇತ್ಯಾದಿ ಎಕ್ಸಟ್ರಾ ಫಿಟ್ಟಿಂಗ್ ಎಲ್ಲ ಫಿಕ್ಸ್ ಮಾಡಿ, ಉತ್ಸವ ಮೂರ್ತಿ ಮಾಡಿ ಕೂಡಿಸಿಬಿಟ್ಟಿದ್ದರು. ಕರ್ಮ!

ಮಧ್ಯಾನದ ಚಹಾ, ನಾಷ್ಟಾ ಅಂತ ಏನೂ ಸಿಗಲಿಲ್ಲ. ಎಲ್ಲರಿಗೂ ಮಧ್ಯಾನ ಮಾಡಿದ ಊಟ ಎಲ್ಲ ಕರಗಿ, ಸಣ್ಣಗೆ ಹೊಟ್ಟೆ ಚುರುಗುಡಲು ಆರಂಭವಾಗಿತ್ತು. ಹೇಗೂ ಸಂಜೆ ಐದು ಐದೂವರೆಗೆ ಸಮಾರಂಭ ಶುರುವಾಗಿಬಿಡುತ್ತದೆ, ಬೇಗ ನಮ್ಮ ನಾಟಕವೂ ಮುಗಿಯುತ್ತದೆ, ಮುಗಿದ ನಂತರ ಸಮಾರಂಭ ನೋಡಲು ಬರುವ ಪಾಲಕರೊಂದಿಗೆ ಮನೆಗೆ ಓಡಿ, ಮಿಸ್ಸಾದ ನಾಷ್ಟಾ, ರಾತ್ರಿಯ ಊಟ ಎಲ್ಲ ಕೂಡಿಯೇ ಜಡಿದು ಬಿಟ್ಟರಾಯಿತು ಅಂತ ಪ್ಲಾನ್ ಹಾಕಿಕೊಂಡರೆ ಅದು ಫುಲ್ ಚೌಪಟ್ ಆಗುತ್ತದೆ ಅಂತ ಗೊತ್ತಿರಲಿಲ್ಲ.

ನಾವೆಲ್ಲ ಚಿಲ್ಲರ್ ಪಾರ್ಟಿ ಮಕ್ಕಳು ತಯಾರಾಗಿ ಕೂತಿದ್ದೇ ಬಂತು. ಹೇಳಿ ಕೇಳಿ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್. ಸಮಾರಂಭ ಬರೋಬ್ಬರಿ ಒಂದೋ, ಒಂದೂವರೆ ತಾಸೋ ತಡವಾಗಿ ಶುರುವಾಯಿತು. ನಾಟಕ ನೋಡಲು ಬಂದಿದ್ದ ಪಾಲಕರು ಗ್ರೀನ್ ರೂಮಿಗೆ ಬಂದು, ನಮ್ಮನ್ನು ನೋಡಿಕೊಂಡು ಹೋಗಿ, ಸಭೆಯಲ್ಲಿ ಕೂತು, ಬೋರ್ ಹೊಡೆದು, ಮತ್ತೆ ಬಂದು ಮಾತಾಡಿಸಿ, ಮತ್ತೆ ಹೋಗಿ ಕೂತು, ಮತ್ತೂ ಬೋರ್ ಹೊಡೆಸಿಕೊಂಡು, ಏನೇನೋ ಮಾಡುತ್ತ ಕೂತಿದ್ದರು. ಕೆಲವರು ಎದ್ದು ಹೋಗೇ ಬಿಟ್ಟಿದ್ದರೋ ಏನೋ. ಗೊತ್ತಿಲ್ಲ.

ನಮಗೆಲ್ಲಾ ಅಂತೂ ಕೆಟ್ಟ ಬೋರ್ ಹೊಡೆಯುತ್ತಿತ್ತು. ಅಷ್ಟು ಮಕ್ಕಳನ್ನು ಒಂದು ರೂಮಿನಲ್ಲಿ, ಮೇಕ್ಅಪ್ ಮಾಡಿ, ಕೂಡಿ ಹಾಕಿದರೆ ಅವರು ಏನು ಮಾಡಬೇಕು? ತಮ್ಮ ತಮ್ಮಲ್ಲೇ ಕಿತಾಪತಿ, ಕಿತಬಿ, ಚೂಟೋದು, ಪರಚೋದು, ಜಗಳ ಮಾಡಿಕೊಳ್ಳೋದು ಮಾಡುತ್ತಾರೆ. ನಾವೂ ಅದನ್ನೇ ಸಣ್ಣ ಪ್ರಮಾಣದಲ್ಲಿ ಮಾಡುತ್ತ, ಅಲ್ಲೇ ಠಳಾಯಿಸುತ್ತಿದ್ದ ಮಾಸ್ತರ್, ಟೀಚರ್ ನಿಗರಾಣಿಯಿಂದ ಬಚಾವ್ ಆಗುತ್ತ, ಹೇಗೋ ಟೈಮ್ ಪಾಸ್ ಮಾಡುತ್ತ ಕೂತಿದ್ದೆವು. ಮೇಕ್ಅಪ್ ಮಾಡಿಸಿ ಕೂಡಿಸಿದ್ದ ಮಕ್ಕಳಿಗೆ ಎಂದಿನಂತೆ ಹಿಡಿದು ಬಡಿಯವ ಸೌಲಭ್ಯ ಮಾಸ್ತರುಗಳಿಗೆ ಇರಲಿಲ್ಲ ಅನ್ನುವದು ಗದ್ದಲಾ ಹಾಕಲಿಕ್ಕೆ ಬೋನಸ್. ಮಾಸ್ತರುಗಳು ಜಬರಿಸುತ್ತ, ಸುಮ್ಮನಾಗಿಸುತ್ತ ಅಲ್ಲೇ ತಿರುಗುತ್ತಿದ್ದರು. ಲೇಡಿ ಟೀಚರಗಳು ಇಲ್ಲದ ಹರಟೆ ಹೊಡೆಯುತ್ತ ಕೂತಿದ್ದರು. ಚೇಂಜ್ ಇರಲಿ ಅಂತ ಬಂದ ಪಾಲಕರ ಜೊತೆಗೂ ಹರಟೆ ಹೊಡೆಯುತ್ತಿದ್ದರು.

ಆರು ಘಂಟೆಯಾಯಿತು, ಆರೂವರೆ ಆಯಿತು, ಏಳೂ ಆಯಿತು, ಏಳುವರೆಯೋ ಆಯಿತು ಅಂತೆಲ್ಲ ಆಕಳಿಸುತ್ತ ಕೂತಿದ್ದ ಶಿಕ್ಷಕರು, ಪಾಲಕರು ಹೇಳಿದ್ದಕ್ಕೆ ಗೊತ್ತಾಯಿತು. ತಡ ಮಾಡಿದ್ದೂ ಅಲ್ಲದೆ ಮೇಲಿಂದ ದೊಡ್ಡ ದೊಡ್ಡ ಭಾಷಣ ಹೊಡೆಯುತ್ತ, ಮೇಕ್ಅಪ್ ಮಾಡಿಕೊಂಡು ಆ ಸಣ್ಣ ರೂಮಿನ ಕೆಟ್ಟ ಗರ್ಮಿಯಲ್ಲಿ, ಹಸಿದ ಹೊಟ್ಟೆಯಲ್ಲಿ ಕೂತಿದ್ದ ಮಕ್ಕಳನ್ನು ನರಳಿಸುತ್ತಿದ್ದ ಭಾಷಣಕೋರರಿಗೆ, ಸಮಾರಂಭದ ಆಯೋಜಕರಿಗೆ ಎಲ್ಲರೂ ಶಾಪ ಹೊಡೆಯುತ್ತಿದ್ದರು. ಅವರದ್ದೆಲ್ಲ ಭಾಷಣ ಇತ್ಯಾದಿ ಮುಗಿದ ನಂತರ ನಮ್ಮ ನಾಟಕವಂತೆ! ಹೋಗ್ಗೋ!

ಆ ಸಮಾರಂಭದ ಅತಿಥಿಯೋ, ಅಧ್ಯಕ್ಷರೋ ಆಗಿ ಬಂದಿದ್ದವರು ಇದೇ ಪಾಟೀಲ್ ಪುಟ್ಟಪ್ಪ ಅಂತ ನಂತರ ಗೊತ್ತಾಯಿತು. ಪುಣ್ಯಾತ್ಮರು ದೊಡ್ಡ ಭಾಷಣಕ್ಕೆ ನಿಂತು ಬಿಟ್ಟಿದ್ದರಂತೆ. ಅವರ ಭಾಷಣ ಮುಗಿಯುತ್ತಲೇ ಇರಲಿಲ್ಲ. ಮಕ್ಕಳ ದಿನಾಚರಣೆ ಅಂತ ನೆಹರು ಬಗ್ಗೆ ತೌಡು ಕುಟ್ಟುತ್ತ ಕೂತು ಬಿಟ್ಟಿದ್ದರು ಪಾಪು. ೧೯೫೦ ರ ಟೈಮಿನಲ್ಲೋ ಏನೋ ಅವರು ನೆಹರು ಅವರನ್ನು ಭೆಟ್ಟಿಯಾಗಿದ್ದು, ಮತ್ತೊಂದು ಮಗದೊಂದು ಅಂತೆಲ್ಲ ಮೊಳೆ ಹೊಡೆದರು ಅಂತ ಭಾಷಣ ಕೇಳಿ, ಭೇಜಾ ಫ್ರೈ ಆಗಿ ಬ್ರೈನ್ ಬರ್ಬಾದ ಆಗಿದ್ದ ಅಮ್ಮ ಹೇಳಿದ್ದಳು. ಪಾಪು ಜೋರ್ದಾರ್ ಭಾಷಣಕಾರರು. ವೇದಿಕೆ ಸಿಕ್ಕರೆ ಮತ್ತೇನು? ಕುಟ್ಟಿದ್ದೇ ಕುಟ್ಟಿದ್ದು.

ಇಲ್ಲಿ ನಮ್ಮ ಮಕ್ಕಳ ಹಾಲತ್ ಭಯಂಕರ ಖರಾಬ್ ಆಗುತ್ತಿತ್ತು. ಕೆಟ್ಟ ಹಸಿವೆ. ಎಲ್ಲರೂ, 'ಟೀಚರ್ ಭಾಳ ಹಸಿವಿರಿ,' ಅಂತಲೋ, ಬಂದಿದ್ದ ಪಾಲಕರನ್ನು ಕುರಿತು, 'ಅಪ್ಪಾ, ಅವ್ವಾ ಏನರೆ ತಿನ್ನಲಿಕ್ಕೆ ಕೊಡ್ರಿ,' ಅಂತಲೋ ರಾಗ ಎಳೆಯುತ್ತ ಕೂತಿದ್ದೆವು. ಯಾರು ಎಲ್ಲಿಂದ ಏನು ತಂದು ಕೊಟ್ಟಾರು? ಅದೂ ಫುಲ್ ಮೇಕ್ಅಪ್ ಮಾಡಿಕೊಂಡ ಮಂದಿ ತಿಂದು ಉಂಡು ಕುಡಿದು ಮಾಡಿ, ಮೇಕ್ಅಪ್ ಎಕ್ಕುಟ್ಟಿ ಹೋದರೆ ಏನು ಗತಿ? ತಿಂದು, ಕುಡಿದ ನಂತರ ನಾಟಕದ ಆಯ್ತ ವೇಳ್ಯಾಕ್ಕ ಯಾರರೆ ಕಿರುಬೆರಳು ಎತ್ತಿ ಬಿಟ್ಟರೆ ಏನು ಗತಿ? ಸೂ ಸೂ ಅನ್ನೋ ಮಂಗ್ಯಾ ಸೂಳಿಮಕ್ಕಳು. ಯಾರಾದರೂ ನಂಬರ್ ಟೂ ವತ್ರ ಅಂದರೆ? ಅಧೋಗತಿ. ಇದೆಲ್ಲ ಟೆನ್ಷನ್ ಮಾಸ್ತರ್ ಮಂದಿಗೆ. ಏನೋ ಒಂದು ರೀತಿಯಲ್ಲಿ, ಏನೇನೋ ಚೌಕ್ ಗುಳಿಗಿ ಉಳ್ಳಿಸುತ್ತ (ಸುಳ್ಳು ಹೇಳುತ್ತ), 'ಭಾಷಣ ಮುಗಿದ ಕೂಡಲೇ ನಿಮ್ಮದss ನಾಟಕ. ಹೆಚ್ಚ ಅಂದ್ರ ಒಂದು ಇಪ್ಪತ್ತು ನಿಮಿಷ. ನಂತರ ಎಲ್ಲಾರಿಗೂ ಬಿಟ್ಟು ಬಿಡ್ತೇವಿ. ಅಲ್ಲಿ ತನಕಾ ಹಸಿವಿ ತಡ್ಕೊರೀ. ಹಾಂ. ಓಕೆ?' ಅಂತೆಲ್ಲ ಮಾಸ್ತರ್ ಮಂದಿಯ ಓಳು.

ಈ ಪುಣ್ಯಾತ್ಮರೆಲ್ಲರ ಭಾಷಣ ಯಾವಾಗ ಮುಗಿಯುತ್ತದೆಯೋ ಅಂತ ತಲೆ ಮೇಲೆ ಹಾಕಿದ್ದ ಕಿರೀಟದ ಮೇಲೆ ಕೈ ಹೊತ್ತು ಕೂತಿದ್ದಾಗ ಯಾರೋ ಬಂದರು. ಸಮಾರಂಭದ ಆಯೋಜಕರಲ್ಲಿ ಒಬ್ಬರಿರಬೇಕು. 'ಲಗೂ ಲಗೂ ಕರ್ಕೊಂಡು ಬರ್ರಿ. ನಾಟಕಾ ಮಾಡಿಸಿ ಬಿಡ್ರೀ. ಲಗೂನ ಮುಗಿಸಬೇಕಾ ಮತ್ತ!' ಅಂತ ಗಡಿಬಿಡಿ ಮಾಡಿದರು. ತಡಾ ಆಗಿದ್ದು ಇವರಿಂದ, ನಾವು ಈಗ ಲಗೂ ಲಗೂ ಮುಗಿಸಬೇಕು. ಇದೊಳ್ಳೆ ಮಾತು.

ನಾವೇನೋ ನಾಟಕಾ ಮಾಡಲಿಕ್ಕೆ ಸ್ಟೇಜ್ ಕಡೆ ಹೋದೆವು. ಆದರೆ ಆ ಗ್ರೀನ್ ರೂಂ ಒಳಗೆ ನಡೆದ ವಿಚಿತ್ರ ಘಟನೆಯೊಂದನ್ನ ನಂತರ ಅಮ್ಮ ಹೇಳಿದರು. ನಾಟಕ ನೋಡಲಿಕ್ಕೆ ಅವರೂ ಬಂದಿದ್ದರಲ್ಲ. ಬಾಕಿ ಮಂದಿ ಪಾಲಕರ ಜೊತೆಗೆ, ಮಾಸ್ತರ್ ಟೀಚರ್ ಮಂದಿ ಜೊತೆ ಅವರೂ ಅಲ್ಲಿ ಇಲ್ಲಿ ಹೋಗಿ ಬಂದು ಮಾಡುತ್ತ, ಪರಿಚಿತರೇ ಆಗಿದ್ದ ಎಲ್ಲರೊಂದಿಗೆ ಮಾತಾಡುತ್ತ ಇದ್ದರು.

ಪುಂಖಾನುಪುಂಖವಾಗಿ ನೆಹರು, ಗಾಂಧಿ ಅಂತೆಲ್ಲ ಪುಂಗುತ್ತಿದ್ದ ಪಾಪು ಅವರ ಭಾಷಣ ಹೇಗೆ ನಿಂತಿತು? ಅದೂ ಅಷ್ಟು ಸಡನ್ ಆಗಿ ಹೇಗೆ ನಿಂತಿತು?

ಅಷ್ಟು ದೊಡ್ಡ ಮಹನೀಯರಿಗೆ, 'ಸರ್ರಾ, ನೀವು ಜಡಿಯಾಕ ಶುರು ಮಾಡಿ ಒಂದು ತಾಸು ಆಗಲಿಕ್ಕೆ ಬಂತು. ಕೃಪಾ ಮಾಡಿ ಸ್ವಲ್ಪ ನಿಮ್ಮ ಭಾಷಣ ಮುಗಿಸಿದರ ನಾವು ಮುಂದಿನ ಕಾರ್ಯಕ್ರಮ ಮಾಡಿಕೋತ್ತೇವಿ,' ಅನ್ನುವ ತಾಕತ್ತು, ಹಿಮ್ಮತ್ತು, ಜುರ್ರತ್ತು ಆಯೋಜಕರಲ್ಲಿ ಯಾರಿಗೂ ಇರಲಿಲ್ಲ ಬಿಡ್ರೀ. ಪಾಪು ಹೇಳಿ ಕೇಳಿ ಖತರ್ನಾಕ್ ಪತ್ರಕರ್ತರು. ಮರುದಿವಸ ಅವರ ಪೇಪರ್ ಒಳಗೆ ಬೈದು ಬರೆದು ಬಿಟ್ಟರೇನು ಗತಿ? ಅವರ ಪತ್ರಿಕೆಯಾಗಿದ್ದ 'ಪ್ರಪಂಚ' ಅದೆಷ್ಟು ಕೋಟಿ (!) ಮಂದಿ ಓದ್ತಿದ್ದರೋ ಏನೋ?

ಓವರ್ ಟು ನಮ್ಮ ಅಮ್ಮ ಫಾರ್ ಮುಂದಿನ ಕಥೆ.

ಹೀಗಿದ್ದಾಗ ಒಬ್ಬ ಚಿಕ್ಕ ಹುಡುಗಿ ಸ್ಟೇಜ್ ಮೇಲೆ ಹತ್ತಿ ಬಂದಳು. ಸೀದಾ ಹೋದವಳೇ ಸ್ಟೇಜ್ ಮೇಲೆ ಭಾಷಣ ಕುಟ್ಟುತ್ತಿದ್ದ ಪಾಪು ಅವರ ಕೈಗೇ ಒಂದು ಚೀಟಿ ಕೊಟ್ಟು ಬಿಟ್ಟಳು. ಆ ಚೀಟಿಯಲ್ಲಿ ಬರೆದಿದ್ದನ್ನು ಓದಿದ ಪಾಪು, ಕೆಂಡಾಮಂಡಲರಾಗಿ, ಸಭಿಕರನ್ನು, ಆಯೋಜಕರನ್ನು ಮತ್ತೊಂದು ಹತ್ತು ನಿಮಿಷ ಬೈದರು. 'ರಾಜೇಶ್ ಖನ್ನಾನೋ, ಹೇಮಾ ಮಾಲಿನಿಯೋ ಬಂದು ಇಲ್ಲಿ ಕುಣಿದಿದ್ದರೆ ನೋಡಿಕೋತ್ತ ಕೂಡ್ತಿದ್ದಿರಿ. ನಾನು ಮಾತಾಡಿದ್ದು ಭಾಳ ಆಯಿತು ನಿಮಗೆ. ಅಲ್ಲ? ಈ ದೇಶಕ್ಕೆ ಭವಿಷ್ಯವಿಲ್ಲ. ಏನೂ ಸಾಧ್ಯವಿಲ್ಲ,' ಅದು ಇದು ಅಂತೆಲ್ಲ ಬೈದು, ಭುಸುಗುಡುತ್ತ ಪಾಪು ಕೂತರು. ಆಷ್ಟು ಗರಂ ಆಗಿದ್ದ ಪಾಪುವಿನ ಮುಂದೆ ನಮ್ಮ ನಾಟಕ ಪ್ರದರ್ಶನ ನಡೆಯಿತು. ಇದೆಲ್ಲ ನಮಗೆ ಆಮೇಲೆ ಗೊತ್ತಾಯಿತು.

ಆ ಚಿಕ್ಕ ಹುಡುಗಿ ಕೊಟ್ಟಿದ್ದ ಚೀಟಿಯಲ್ಲಿ ಅಂತಾದ್ದೇನು ಬರೆದಿತ್ತು? ಓದಿದ ಪಾಟೀಲ್ ಪುಟ್ಟಪ್ಪ ಆ ಪರಿ ಗರಂ ಆಗಿ, ಬೈದಾಡಿ, ಚೀರಾಡಿ ಸಡನ್ನಾಗಿ ಭಾಷಣ ಮುಗಿಸುವಂತಾದ್ದು?

'ನಿಮ್ಮ ಭಾಷಣ ಮುಗಿಸಿ. ಮಕ್ಕಳಿಗೆ ತುಂಬ ತಡವಾಗುತ್ತಿದೆ.' ಇಷ್ಟೇ ಇದ್ದಿದ್ದು ಪಾಪುವಿಗೆ ಬಂದಿದ್ದ ಚೀಟಿಯಲ್ಲಿ. ಮೊದಲಿಗೊಂದು 'ದಯವಿಟ್ಟು' ಕೊನೆಗೊಂದು 'ಧನ್ಯವಾದ' ಅಂತ ಇತ್ತೇ? ಗೊತ್ತಿಲ್ಲ.

ಭಾಷಣ ಭಗ್ನವಾಗಿ, ದುರ್ವಾಸನ ಅವತಾರ ತಾಳಿದ್ದ  ಪಾಟೀಲ್ ಪುಟ್ಟಪ್ಪನವರಿಂದ ಆ ಪರಿ ಬೈಸ್ಕೊಂಡು ಮಂಗ್ಯಾ ಆಗಿದ್ದ ಆಯೋಜಕರಲ್ಲಿ ಒಬ್ಬರು ತನಿಖೆಗೆ ಇಳಿದರು. ಚೀಟಿ ಕೊಟ್ಟು ಬಂದಿದ್ದ ಮಗುವನ್ನು ಹಿಡಿದು ಕೇಳಿದರು. ಪಾಪ ಕತ್ತಲೆಯಲ್ಲಿ ಯಾರೋ ಕೊಟ್ಟಿದ್ದರು. ಮಹಿಳೆಯೊಬ್ಬರು ಕೊಟ್ಟಿದ್ದರು ಅಂತಷ್ಟೇ ಆ ಚಿಕ್ಕ ಹುಡುಗಿ ಹೇಳಿದಳು. ಅದಕ್ಕಿಂತ ಜಾಸ್ತಿ ಪಾಪ ಆಕೆಯಿಂದ ಏನೂ ಹೊರಬೀಳಲಿಲ್ಲ. ಚಳಿಗಾಲ ಬೇರೆ. ರಾತ್ರಿ ಕತ್ತಲು ಬೇಗ ಕವಿಯುತ್ತದೆ. ಇಲ್ಲದ ಧೈರ್ಯ ಮಾಡಿ ಪಾಪುವಿಗೆ ಚೀಟಿ ಕಳಿಸಿದ್ದ ಮಹಿಳೆಯ ಚಹರಾಪಟ್ಟಿ ಗೊತ್ತಾಗಲಿಲ್ಲ. ಆ ತನಿಖೆ ಆಸಾಮಿ ಸ್ವಲ್ಪ ಶಾಣ್ಯಾ ಇರಬೇಕು. ಏನೋ ಯೋಚನೆ ಮಾಡಿದ. 'ಮಕ್ಕಳಿಗೆ ತಡವಾಗುತ್ತಿದೆ,' ಅಂತ ಚೀಟಿ ಕಳಿಸಿದ್ದಾರೆ ಅಂದ ಮೇಲೆ ನಮ್ಮ ನಾಟಕಕ್ಕೇ ಸಂಬಂಧಿಸಿದವರೇ ಯಾರೋ ಇರಬೇಕು ಅಂತ ಯೋಚಿಸಿದ. ಯಾಕೆಂದರೆ ಇವರ ಭಾಷಣಗಳ ಅಬ್ಬರಕ್ಕೆ ಬೇರೆ ಎಲ್ಲ ಮಕ್ಕಳು ಎಸ್ಕೇಪ್ ಆಗಿ ಕೇವಲ ಕಳ್ಳನನ್ನಮಕ್ಕಳು (ಉರ್ಫ್ ವಯಸ್ಕರು) ಮಾತ್ರ ಉಳಿದುಕೊಂಡಿದ್ದರು.

ಹೀಗೆಲ್ಲ ಸ್ಕೀಮ್ ಹಾಕಿದ ಆ ತನಿಖೆ ಆಸಾಮಿ ಸೀದಾ ನಮ್ಮ ಗ್ರೀನ್ ರೂಮಿಗೆ ಬಂದ. ಪಾಟೀಲ್ ಪುಟ್ಟಪ್ಪನವರ ಭಾಷಣ ಹಠಾತ್ ಮುಗಿದಿತ್ತು. ನಾವು ಗ್ರೀನ್ ರೂಂ ಬಿಟ್ಟು ಮಾತ್ರ ಹೊರಗೆ ಬಿದ್ದಿದ್ದೆವು. ಪಾಲಕರು ಮತ್ತು ಕೆಲ ಶಿಕ್ಷಕರು ಎಲ್ಲ ಅಲ್ಲೇ ಇದ್ದರು. ಆವಾಗ ನಮ್ಮ ಅಮ್ಮ ಅದು ಎಷ್ಟನೇ ಸಲಕ್ಕೋ ಮತ್ತೊಮ್ಮೆ ಗ್ರೀನ್ ರೂಂ ಕಡೆ ಬಂದಿದ್ದರು. ಭಾಷಣ ಮುಗಿದ ಖುಷಿಯಲ್ಲಿ.

'ಯಾರು ಚೀಟಿ ಕಳಿಸಿದ್ದು? ನಿಮ್ಮಲ್ಲೇ ಯಾರೋ ಕಳಿಸಿರಬೇಕು. ನಾಚಿಗೆ ಬರೋದಿಲ್ಲ? ನಿಮ್ಮಿಂದಾಗಿ ನಮ್ಮ ಮಾನ ಹೋತು. ಬಹಳ ಕೆಟ್ಟ ಕೆಲಸ. ಯಾರು? ಯಾರು ಚೀಟಿ ಕಳಿಸಿದ್ದು ಅಂತ ಹೇಳ್ರೀ!' ಅಂತ ಫುಲ್ ಅವಾಜ್ ಹಾಕಿದ ತನಿಖೆಗೆ ಬಂದಿದ್ದ ಆಯೋಜಕ.

ಅಲ್ಲಿದ್ದ ಯಾರಿಗೂ ಏನೂ ತಲೆ ಬುಡ ಅರ್ಥವಾಗಲಿಲ್ಲ. ಅರ್ಥವಾಗಿದ್ದು ಒಬ್ಬರಿಗೆ ಮಾತ್ರ. ಅವರೇ ಚೀಟಿ ಕಳಿಸಿ, ಭಾಷಣ ನಿಲ್ಲಿಸಿ, ಮಕ್ಕಳನ್ನು ಬಚಾವ್ ಮಾಡಿದವರು. 'ನಾನೇರೀ ಸರಾ. ನಾನೇ ಚೀಟಿ ಕಳಿಸಿದಾಕಿ,' ಅಂತ ಹೇಳೋಕೆ ಅವರಿಗೇನು ಹುಚ್ಚನಾಯಿ ಕಚ್ಚಿತ್ತೆ? ಇಲ್ಲ. ಎಲ್ಲರೂ ಮಳ್ಳ ಮಾರಿ ಮಾಡಿಕೊಂಡು ನಿಂತರು.

ತನಿಖೆಗೆ ಬಂದವ ಚಿಟಿ ಚಿಟಿ ಚೀರಿ, ಚೀಟಿ ಕಳಿಸಿದ್ದಕ್ಕೆ ಸಾಮೂಹಿಕವಾಗಿ ಎಲ್ಲರಿಗೆ ಛೀಮಾರಿ ಹಾಕಿ, ಚೀಟಿ ವಿಷಯ, ಪಾಪು ಭಾಷಣ ನಿಂತ ವಿಷಯ ಎಲ್ಲ ವಿವರಿಸಿ, ಅವನು ಹೋದ ಅಂತಾಯಿತು. ಆವಾಗ ಅಲ್ಲಿದ್ದ ಪಾಲಕರಿಗೆ, ಶಿಕ್ಷಕರಿಗೆ ಎಲ್ಲ ತಿಳಿಯಿತು. ಯಾರೋ ಮಸ್ತ ಕಿತಾಪತಿ ಮಾಡಿ, ಬತ್ತಿ ಇಟ್ಟು, ಭಾಷಣಕಾರರ ಬಾಯಿ ಬಂದು ಮಾಡಿಸಿದ್ದಾರೆ ಅಂತ.

ಪಾಪುವಿಗೇ ಪಾಪಡಿ ತಿನ್ನಿಸಿದವರ್ಯಾರು?????

ಯಾರ ಕಿತಾಪತಿ ಅದು??????

ನಮ್ಮ ಅಮ್ಮ ಸಹಿತ ಅಲ್ಲೇ ಇದ್ದರಲ್ಲ. ತಿಳ್ಕೊಬೇಕು ಅಂತ ಅವರಿಗೂ ಕೆಟ್ಟ ಕುತೂಹಲ. ಯಾರನ್ನು ಕೇಳೋಣ ಅಂತ ಅವರಿಗೆ ಹೊಳೆಯಲಿಲ್ಲ. ಎದುರಿಗೆ ಕಂಡಾಕೆ ಅವರ ಶಾಲೆ, ಕಾಲೇಜ್ ಗೆಳತಿ, ಕ್ಲಾಸ್ಮೇಟ್. ಅವರ ಮಗ ನಮ್ಮ ಕ್ಲಾಸ್ಮೇಟ್. ಅವನೂ ನಾಟಕದಲ್ಲಿ ಇದ್ದವನೇ. ಅದಕ್ಕೇ ಅಲ್ಲಿ ಅವರು, ನಮ್ಮ ಅಮ್ಮ ಎಲ್ಲ ಜಮೆಯಾಗಿದ್ದು.

'ಏ ಇಕಿನ. ಗೊತ್ತದಯೇನಾ ನಿನಗ? ಯಾರು ಅಂತಹ ಚೀಟಿ ಕಳಿಸಿದರು ಅಂತ? ಹಾಂ?' ಅಂತ ನಮ್ಮ ಅಮ್ಮ ಅವರ ಗೆಳತಿಯನ್ನು ಕೇಳಿದರು.

'ನನಗೇನೂ ಗೊತ್ತಿಲ್ಲವಾ. ಯಾರೋ ಏನೋ,' ಅಂದ ಗೆಳತಿ, 'ಏ ಇಕಿನ, ಇಲ್ಲೆ ನೋಡ. ಇವರೇ ಚೀಟಿ ಕಳಿಸಿದವರು!' ಅಂತ ಸಣ್ಣ ದನಿಯಲ್ಲಿ ಹೇಳಿ, ತಮ್ಮನ್ನೇ ತಾವು ತೋರಿಸ್ಕೊಂಡು, ಚೀಟಿ ಕಳಿಸಿದವರ ರಹಸ್ಯ ತುಂಬ selective ಆಗಿ ಹೊರಗೆ ಹಾಕಿದ್ದರು.

'ನಿಂದೇನು ಈ ಕಿತಾಪತಿ? ಭಾಳ ಛೋಲೋ ಕೆಲಸಾ ಮಾಡಿದಿ ಬಿಡು. ನಡಿ ಈಗ ಅಲ್ಲೇ ಹೋಗಿ ಕೂಡೋಣ. ಭಾಷಣಾ ಅಂತೂ ಮುಗಿಸಿ ಒಗದಿ. ನಡಿ ನಡಿ. ನಾಟಕ ನೋಡೋಣ,' ಅನ್ನುವಷ್ಟರಲ್ಲಿ ಇಬ್ಬರೂ ಗೆಳತಿಯರಿಗೆ ತಡೆಯಲಾರದಷ್ಟು ನಗು. ಹೇಳಿ ಕೇಳಿ ಮೊದಲೆಲ್ಲ ಅಂತಾದ್ದೆಲ್ಲ ಕಿತಾಪತಿ ಬೇಕಾದಷ್ಟು ಮಾಡಿದವರೇ ಅಲ್ಲವೇ? ಧಾರವಾಡದಲ್ಲಿನ ನಮ್ಮದೇ ಕಿಡಿಗೇಡಿ ಶಾಲೆಯ ಮಾಜಿ ವಿದ್ಯಾರ್ಥಿನಿಯರು.

'ಏ! ಸಾವಕಾಶ ಮಾತಾಡ ಮಾರಾಳ. ಯಾರರ ಕೇಳಿಸಿಕೊಂಡರೆ ಕಷ್ಟ,' ಅಂತ ಹೇಳಿದ ಗೆಳತಿಯೂ ಸಿಕ್ಕಾಪಟ್ಟೆ ನಕ್ಕಳು.

ಹೀಗೆ ಅನಾಮಧೇಯರಿಂದ ಬಂದಿದ್ದ ಚೀಟಿಯೊಂದು ಪಾಪುವಿನ ಭಯಂಕರ ಭಾಷಣ ಭಗ್ನ ಮಾಡಿ, ನಮ್ಮನ್ನು ಬಚಾವ್ ಮಾಡಿ, ಏನೋ ಒಂದು ತರದಲ್ಲಿ ನಾಟಕ ಮುಗಿಸಿ, ಮೇಕ್ಅಪ್ ಕಳಚಿ, ಆ ದರಿದ್ರ ಜಾಗದಿಂದ ಹೊರಬಿದ್ದಾಗ ರಾತ್ರಿ ಒಂಬತ್ತೂವರೆ ಮೇಲಾಗಿ ಹೋಗಿತ್ತು. ನಮ್ಮನ್ನು ಬಿಟ್ಟರೆ ಬೇರೆ ಯಾವ ಮಕ್ಕಳೂ, ಮಮ್ಮಕ್ಕಳೂ, ಮಿಮ್ಮಕ್ಕಳೂ ಅಲ್ಲಿ ಕಾಣಲಿಲ್ಲ. ಇದ್ದವರೆಲ್ಲ ಕಳ್ಳನನ್ನಮಕ್ಕಳೇ.

ಅದಾದ ಮೇಲೆ ಪಾಪು ಅವರನ್ನು ಎಲ್ಲೂ ನೋಡಿಲ್ಲ ಬಿಡಿ. ಆದರೆ ಪಾಪು ಅಂದಾಕ್ಷಣ ಈ ಘಟನೆ ನೆನಪಾಗುತ್ತದೆ. ಕಿತಾಪತಿ ಮಾಡಿ, ಚೀಟಿ ಕಳಿಸಿ, ಭಾಷಣ ನಿಲ್ಲುವಂತೆ ಮಾಡಿ, ಮಕ್ಕಳನ್ನು ಬಚಾವು ಮಾಡಿದ ಅಮ್ಮನ ಖಾಸ್ ಗೆಳತಿ ನೆನಪಾಗುತ್ತಾರೆ. ಅವರ ಮಗ, ಮಿತ್ರ ನೆನಪಾಗುವದೊಂದೇ ಅಲ್ಲ ಆಗಾಗ ಅಲ್ಲಿ, ಇಲ್ಲಿ ಸಿಗುತ್ತಾನೆ ಕೂಡ. ಬಹಳ ವರ್ಷದ ನಂತರ ಭೇಟಿಯಾದಾಗ ಈ ಘಟನೆ ನೆನಪಿಸಿಕೊಂಡು ನಕ್ಕಿದ್ದೆವು.

ಭಾಷಣ ಭಗ್ನ ಮಾಡಿದ್ದಕ್ಕೆ ಪಾಪು ಅವರ ಕ್ಷಮೆ ಯಾರು ಕೇಳಿದರೋ ಬಿಟ್ಟರೋ ಗೊತ್ತಿಲ್ಲ. ಈಗ ನಾವಂತೂ ಕೇಳುತ್ತೇವೆ. ಆವತ್ತಿನ ಪರಿಸ್ಥಿತಿ ಹಾಗಿತ್ತು. ಇನ್ನೂ ಸ್ವಲ್ಪ ಹೊತ್ತು ಹಾಗೇ ಮುಂದುವರೆದಿದ್ದರೆ ನಮ್ಮ ನಾಟಕದ ಮಕ್ಕಳಲ್ಲಿ ಕೆಲವರಿಗಾದರೂ ತಲೆ ಸುತ್ತು ಬಂದು, ಮತ್ತೊಂದು ಮಗದೊಂದು ಆಗಿ, ದೊಡ್ಡ ಅನಾಹುತವಾಗುವದರಲ್ಲಿ ಸಂಶಯವೇ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಅಂತಹ ಒಂದು ಬಂಡಾಯಕಾರಿ ನಿರ್ಣಯ ತೆಗೆದುಕೊಳ್ಳಬೇಕಾಯಿತು ಅಂತ ಕಾಣಿಸುತ್ತದೆ. ಪಾಪು ಅವರ ಕ್ಷಮೆಯನ್ನು ಕೇಳುತ್ತೇವೆ. ಹಾಗೆಯೇ ಬಚಾವ್ ಮಾಡಿದ ದೋಸ್ತನ ತಾಯಿಯವರಿಗೂ ಒಂದು ದೊಡ್ಡ ಧನ್ಯವಾದ, ನಮಸ್ಕಾರ.

ಮಕ್ಕಳ ದಿನಾಚರಣೆಯಂದು ದೊಡ್ಡವರಿಂದ ಭಾಷಣ ಇಲ್ಲ ಅಂತ ಒಂದು ಠರಾವು ಪಾಸ್ ಮಾಡಿಬಿಟ್ಟರೆ ಒಳ್ಳೆದೇನೋ!

ಶ್ರೀ ಪಾಟೀಲ್ ಪುಟ್ಟಪ್ಪ ಉರ್ಫ್ ಪಾಪು

Saturday, November 15, 2014

Q & A between Swami Vivekananda & Ramkrishna Paramahansa. WISDOM overloaded!

1. Swami Vivekanand:- I can’t find free time. Life has become hectic.
Ramkrishna Paramahansa:- Activity gets you busy. But productivity gets you free.


2. Swami Vivekanand:- Why has life become complicated now?
Ramkrishna Paramahansa:- Stop analyzing life.. It makes it complicated. Just live it.


3. Swami Vivekanand:- Why are we then constantly unhappy?
Ramkrishna Paramahansa:- Worrying has become your habit. That’s why you are not happy.


4. Swami Vivekanand:- Why do good people always suffer?
Ramkrishna Paramahansa:- Diamond cannot be polished without friction. Gold cannot be purified without fire. Good people go through trials, but don’t suffer.
With that experience their life becomes better, not bitter.


5. Swami Vivekanand:- You mean to say such experience is useful?
Ramkrishna Paramahansa:- Yes. In every term, Experience is a hard teacher. She gives the test first and the lessons .


6. Swami Vivekanand:- Because of so many problems, we don’t know where we are heading…
Ramkrishna Paramahansa:- If you look outside you will not know where you are heading. Look inside. Eyes provide sight. Heart provides the way.


7. Swami Vivekanand:- Does failure hurt more than moving in the right direction?
Ramkrishna Paramahansa:- Success is a measure as decided by others. Satisfaction is a measure as decided by you.


8. Swami Vivekanand:- In tough times, how do you stay motivated?
Ramkrishna Paramahansa:- Always look at how far you have come rather than how far you have to go. Always count your blessing, not what you are missing.


9. Swami Vivekanand:- What surprises you about people?
Ramkrishna Paramahansa:- When they suffer they ask, “why me?” When they prosper, they never ask “Why me?”


10. Swami Vivekanand:- How can I get the best out of life?
Ramkrishna Paramahansa:- Face your past without regret. Handle your present with confidence. Prepare for the future without fear.


11. Swami Vivekanand:- One last question. Sometimes I feel my prayers are not answered.
Ramkrishna Paramahansa:- There are no unanswered prayers. Keep the faith and drop the fear. Life is a mystery to solve, not a problem to resolve. Trust me. Life is wonderful if you know how to live.

(copied from somebody's Facebook status)

Mamta Kulkarni, Vicky Goswami complete saga summarized for the uninitiated


Has the ghost of late music moghul Gulshan Kumar come back to haunt Vicky Goswami, husband of ex-actress Mamta Kulkarni?

It was at the inauguration of Vicky Goswami's brand new hotel in Dubai, in 1997, the plot to bump off Gulshan Kumar was discussed, finalized and supari was given and accepted. Police had interrogated all the Bollywood actors and actresses who had gone to perform at the show organized by Vicky Goswami. That's when the vital clues regarding the conspiracy emerged. Apparently Nadeem (of Nadeem Shravan music duo) did the show free of cost to cover the expenses of the Gulshan Kumar supari. At that time don Abu Salem was named as main accused. After being arrested in Lisbob and extradited to India, Abu Salem dumped all the blame on Anees Ibrahim, D's brother.

Vicky Goswami provided convenient place, pretext and opportunity for all the concerned parties to gather and hatch the plot to kill Gulshan Kumar. So, some bad Karma and unhappy soul of Gulshan Kumar is probably taking its revenge on Goswami, for the second time.

Soon after the killing of Gulshan Kumar, Vicky Goswami shifted his allegiance to Chota Rajan, Dawood's bitterest rival. So, Dawood got him arrested in Dubai and made him spend good 15 years in prison. Mamata, who had become his moll after being friendly with D company men, managed his business in Dubai, mainly real estate and patiently waited for his release. Vikcy's 25 years sentence was reduced to 15 for good conduct and for converting to Islam. Mamta also converted and that was added bonus to release him early.

Around the year 2000, Mamta's career also took nose dive because of her hifi nakhras and underworld connections. She, who was a D company moll, approached rival don Chota Rajan to force producer/ director RK Santoshi take her back into the movie 'China Gate' after he had booted her out. Producer RKS was threatened by Rajan at Mamta's behest and she was back in the movie but she was barely given any prominence. Santoshi had taken his revenge by editing out many of her important scenes.

Bollywood then controlled by D company got annoyed by Mamta's histrionics and her Chota Rajan connection and ejected her from Bollywood for good. Unwritten law was passed and diktat was issued - she was a persona non grata. That was the end of her Bollywood career. So she shifted to Dubai and managed Goswami's business while he rotted in Dubai jails.

After his release, Goswami returned to Kenya where he had connections. Back to the old game of drug trafficking. Some other drug baron of Mozambique got upset by Akasha brothers of Kenya whose bidding Goswami was doing and contacted Dawood and gave supari to take care of Goswami and company. Once again Dawood did take care of the unfinished business and leaked info to authorities. As a result of that Goswami is again behind the bars. This time along with wife, ex-actress Mamta Kulkarni.

Meanwhile nobody was convicted for the murder of Gulshan Kumar. Some were bumped off. Some died of natural causes. Many were acquitted.

So it's left for music baron's ghost to do what it thinks is necessary and it is probably doing just that!

(copied from my Facebook status)

Thursday, November 06, 2014

ಗಾಗಿ ಮತ್ತು ಸೂಪರ್ ಮ್ಯಾನ್ (ಗುಲ್ಜಾರ್ ಹೇಳಿದ ಕಥೆ)

ನಮ್ಮ ಮನೆಯಲ್ಲಿ ಎಲ್ಲೆಡೆ ಸೂಪರ್ ಮ್ಯಾನ್ ಕಾಮಿಕ್ ಪುಸ್ತಕಗಳು ಮತ್ತು ಸೂಪರ್ ಮ್ಯಾನ್ ವೀಡಿಯೊ ಕ್ಯಾಸೆಟ್ಟುಗಳು  ಬಂದು ತುಂಬ ತೊಡಗಿದ್ದವು. ಮೊದಲು ಮಕ್ಕಳ ಕೋಣೆಯಲ್ಲಿ ಮಾತ್ರ ಕಂಡು ಬರುತ್ತಿದ್ದವು. ಈಗ ಅಲ್ಲಿ ಜಾಗ ಸಾಲದೇ, ನಿಧಾನವಾಗಿ ಹೊರಬಿದ್ದು, ನನ್ನ ಪುಸ್ತಕದ ಶೆಲ್ಫ್ ಮೇಲೆ ಸಹಿತ ಜಾಗ ಆಕ್ರಮಿಸತೊಡಗಿದವು. ಇದು ಯಾವ ಮಟ್ಟಕ್ಕೆ ಹೋಯಿತು ಅಂದರೆ ನಾನು ಎಲ್ಲಾದರೂ ನನ್ನ ಒಂದು ಪುಸ್ತಕ ಈಚೆ ತೆಗೆಯಲು ಹೋದರೆ ನಾಲ್ಕಾರು ಸೂಪರ್ ಮ್ಯಾನ್ ಕಾಮಿಕ್ ಪುಸ್ತಕಗಳು, ವೀಡಿಯೊ ಕ್ಯಾಸೆಟ್ಟುಗಳು ಪುತಪುತನೆ ಉದುರಿ ಕೆಳಗೆ ಬೀಳತೊಡಗಿದವು. 'ಇವುಗಳನ್ನು ಏನು ಮಾಡಲಿ?' ಅಂತ ಒಂದು ಕ್ಷಣ ವಿಚಾರ ಬರುತ್ತಿತ್ತು. ಆದರೂ ಮರುಕ್ಷಣ ಬಿದ್ದವನ್ನು ಆರಿಸಿ, ನನ್ನ ಪುಸ್ತಕಗಳ ಮಧ್ಯೆಯೇ ತುರುಕಿ, ನನ್ನ ಕೆಲಸ ನೋಡಿಕೊಂಡು ಹೋಗುತ್ತಿದ್ದೆ.

'ಇವನ್ನು ಯಾಕೆ ರದ್ದಿ ಪೇಪರಿನವನಿಗೆ ಹಾಕಬಾರದು?'  ಅಂತ ಉಮಿಗೆ ಕೇಳಿಯೂ ಇದ್ದೆ.

'ಮಮ್ಮಿ!!!! ನೋ......! ನೋ!' ಅಂತ ಕೂಗುತ್ತ, ಎಲ್ಲಿಂದಲೋ ಹಾರಿ ಬಂದಳು ನನ್ನ ಚಿಕ್ಕ ಮಗಳು ಬುಚ್ಕಿ. ಅವಳ ಕೈಯಲ್ಲಿ ಆಗಲೂ ಒಂದು ಸೂಪರ್ ಮ್ಯಾನ್ ಕಾಮಿಕ್ ಪುಸ್ತಕ ಇತ್ತು. ನನ್ನನ್ನು ದಿಟ್ಟಿಸಿ ನೋಡಿದ ಆಕೆ ಹೇಳಿದಳು, 'ಪಪ್ಪಾ! ಅದು ಹೇಗೆ ಅವನ್ನು ರದ್ದಿಗೆ ಹಾಕುತ್ತೀಯಾ? ಸೂಪರ್ ಮ್ಯಾನ್ ಅಂದರೆ ಸೂಪರ್ ಮ್ಯಾನ್. ಬೇಕಾದರೆ ನಿನ್ನ ಪುಸ್ತಕಗಳನ್ನು ರದ್ದಿಗೆ ಹಾಕಿಕೋ! ಸೂಪರ್ ಮ್ಯಾನ್ ಗೂ ಸ್ವಲ್ಪ ಜಾಗ ಕೊಡಬೇಕಪ್ಪಾ. ಓss.........ಬಂದ್ಬಿಟ್ಟರು ದೊಡ್ಡ, ರದ್ದಿಗೆ ಹಾಕೋಕೆ.'

'ಇದು ಇನ್ನೂ ಶುರುವಾತು ಅಷ್ಟೇ. ಇನ್ನೂ ಒಂದಿಷ್ಟು ವೀಡಿಯೊ ಕ್ಯಾಸೆಟ್ಟುಗಳು ಬರುವದಿವೆ. ಅವಳ ರೂಮಂತೂ ಆಗಲೇ ತುಂಬಿ ತುಳುಕುತ್ತಿದೆ,' ಅಂದ ಉಮಿ ನಗುತ್ತ ಹೊರಟಳು.

'ಒಂದು ಮಾತು ಉಮಿ. ಎಲ್ಲಿಂದ ಬಂದವು ಇವೆಲ್ಲ? ಹಾಂ?' ಅಂತ ಕೇಳಿದೆ.

'ಗಾಗಿ! ಅವಳೇ. ಅವಳೇ ಇವೆಲ್ಲ ತಂದು ಕೊಡುವವಳು,' ಅಂದಳು ಉಮಿ.

ಗಾಗಿ. ನನ್ನ ಮಗಳ ವಯಸ್ಸಿನವಳೇ. ಒಂದೇ ತರಗತಿ ಕೂಡ. ಆದರೆ ಬೇರೆ ಶಾಲೆಗೆ ಹೋಗುತ್ತಿದ್ದಳು. ಸರಾಸರಿ ಅರ್ಧ ದಿವಸ ನಮ್ಮ ಮನೆಯಲ್ಲೇ ಕಳೆಯುತ್ತಿದ್ದಳು. ಉಳಿದರ್ಧ ಅವರ ಮನೆಯಲ್ಲಿ. ಮಿತ್ರರಾದ ಅರುಣಾ ರಾಜೆ ಪಾಟೀಲ ಮತ್ತು ವಿಕಾಸ್ ದೇಸಾಯಿ ದಂಪತಿಗಳ ಪುತ್ರಿ 'ಗಾಗಿ' ಅನ್ನುವ ಆ ಹುಡುಗಿ.

ಗಾಗಿ ಬದುಕಿದ್ದು ಕೇವಲ ಹನ್ನೊಂದೇ ವರ್ಷ.

ದಿನ ಪೂರ್ತಿ ಈ ಮಕ್ಕಳು ಸೂಪರ್ ಮ್ಯಾನ್ ವೀಡಿಯೊ ಕ್ಯಾಸೆಟ್ಟುಗಳನ್ನು ನೋಡುತ್ತಿದ್ದರು. ಇಲ್ಲ ಸೂಪರ್ ಮ್ಯಾನ್ ಕಾಮಿಕ್ಸ್ ಓದುತ್ತಿದ್ದರು. ನಾನೇನಾದರೂ ಆಕ್ಷೇಪಿಸಿದರೆ ತಮ್ಮ ತಮ್ಮ ಪ್ರೋಗ್ರೆಸ್ ಕಾರ್ಡ್ ರಪ್ ಅಂತ ಮುಖಕ್ಕೆ ಹಿಡಿಯುತ್ತಿದ್ದರು ಈ ಮಕ್ಕಳು. ಎಲ್ಲ ವಿಷಯಗಳಲ್ಲೂ ಯಾವಾಗಲೂ ಸೀದಾ A ಗ್ರೇಡನ್ನೇ ಪಡೆಯುತ್ತಿದ್ದ ಮಕ್ಕಳಿಗೆ ನಾವಾದರೂ ಏನಂತ ಹೇಳೋಣ? ಈ ಮಕ್ಕಳು ಓದುವದರಲ್ಲಿ ಮಾತ್ರವಲ್ಲ ಎಲ್ಲ ಚಟುವಟಿಕೆಗಳಲ್ಲೂ ಮುಂದಿದ್ದರು.

ಒಂದು ದಿನ ನನಗೆ ಈ ಮಕ್ಕಳು, ಅವರ ಸೂಪರ್ ಮ್ಯಾನ್ ಹುಚ್ಚಿನಿಂದ ಸಾಕಾಗಿ ಹೋಯಿತು. ಸಹನೆ ಕಳೆದುಕೊಂಡು ಸಿಕ್ಕಾಪಟ್ಟೆ ರೇಗಿ ಬಿಟ್ಟೆ.

'ಅಂಕಲ್! ಸೂಪರ್ ಮ್ಯಾನ್ ಅಂದರೆ ದೇವರು ಇದ್ದ ಹಾಗೆ. ಅವನು ಏನು ಬೇಕಾದರೂ ಮಾಡಬಲ್ಲ, ದೇವರ ಹಾಗೆ. ಗೊತ್ತೇನು!?' ಅಂದು, ರಪ್ ಅಂತ ತಿರುಗಿ ಉತ್ತರಿಸಿದ್ದ ಗಾಗಿ ನನ್ನ ಬಾಯಿ ಮುಚ್ಚಿಸಿದ್ದಳು. ಭಯಂಕರ ಚುರುಕು ಹುಡುಗಿ ಅವಳು.

ಗಾಗಿಗೆ ಕೇವಲ ಒಂಬತ್ತು ವರ್ಷ ವಯಸ್ಸಾಗಿತ್ತು. ಆಗ ಅವಳಿಗೆ ಕ್ಯಾನ್ಸರ್ ಅಂತ ಗೊತ್ತಾಯಿತು. ಮೂಳೆ ಕ್ಯಾನ್ಸರ್. ಅಂದಿನಿಂದ ಅವಳ ಗೆಳತಿಯರಾದ ಪುಗ್ಗಿ ಮತ್ತು ಬುಚ್ಕಿಯರ ಪರಿಸ್ಥಿತಿ ಪಾಪ. ಪುಗ್ಗಿ, ಅಂದರೆ ಬಸು ಭಟ್ಟಾಚಾರ್ಯನ ಮಗಳು. ನಾನು, ವಿಕಾಸ್, ಬಸು ಮೂವರೂ ಚಿತ್ರರಂಗದವರಾಗಿದ್ದರಿಂದ ನಮ್ಮ ಮಕ್ಕಳು ಸಹ ಫ್ರೆಂಡ್ಸ್. ನಮ್ಮ ಮೂವರಲ್ಲಿ ಒಬ್ಬರ ಮನೆಯಲ್ಲಿ ಮೂರೂ ಮಕ್ಕಳ ಠಿಕಾಣಿ. ಮತ್ತೆ ನಮ್ಮ ಮನೆ ಸ್ವಲ್ಪ ದೊಡ್ಡದಿದ್ದು, ಇಂಡಿಪೆಂಡೆಂಟ್ ಇದ್ದಿದ್ದರಿಂದ ನಮ್ಮ ಮನೆ ಆ ಮಕ್ಕಳಿಗೆ ಆಡುವ ಮೈದಾನವಾಗಿ ಬಿಟ್ಟಿತ್ತು.

ಒಮ್ಮೆ ನಾವೆಲ್ಲ ಕೂಡಿ ಬೆಂಗಳೂರಿಗೆ ಹೋಗಿದ್ದೆವು. ಗಾಗಿಯ ಅಪ್ಪ ವಿಕಾಸನಿಗೆ ಈಜು ಅಂದರೆ ತುಂಬ ಇಷ್ಟ. ಅವನು ತನ್ನ ಫ್ರೀ ಟೈಮ್ ಎಲ್ಲ ಈಜುಕೊಳದಲ್ಲಿಯೇ ಕಳೆಯುತ್ತಿದ್ದ. ಮಕ್ಕಳಿಗೂ ಈಜು ಕಲಿಸುತ್ತಿದ್ದ.

ವಿಕಾಸ್ ಸ್ವಲ್ಪ ಧಪ್ಪಗಿದ್ದ. 'ಪಪ್ಪಾ, ಇಷ್ಟು ಧಪ್ಪಗಿದ್ದೀಯ. ಅದು ಹೇಗೆ ನೀನು ನೀರಲ್ಲಿ ಮುಳುಗಿ ಹೊಗೋದಿಲ್ಲ? ಹಾಂ?' ಅಂತ ಗಾಗಿಯ ಪ್ರಶ್ನೆ.

'ನೀರು ತುಂಬ ಶಕ್ತಿಶಾಲಿಯಾಗಿದೆ, ಕಂದಾ. ದೊಡ್ಡ ದೊಡ್ಡ ಹಡಗುಗಳನ್ನೂ ಸಹ ಅದು ಎತ್ತಿ ಹಿಡಿಯಬಲ್ಲದು. ಗೊತ್ತಾ?' ಅಂತ ಅಪ್ಪ ವಿಕಾಸನ ವಿವರಣೆ.

'ಹಾಗಿದ್ರೆ ನೀರಲ್ಲಿ ಹಾಕಿದರೆ ನನ್ನ ರಿಸ್ಟ್ ವಾಚ್ ಯಾಕೆ ಮುಳುಗಿಹೋಗುತ್ತದೆ!?' ಅಂತ ಗಾಗಿಯ ಭಯಂಕರ ಮರುಪ್ರಶ್ನೆ.

ಇದಕ್ಕೆ ವಿಕಾಸನ ಹತ್ತಿರ ಉತ್ತರವಿರಲಿಲ್ಲ. ಅವನು ಪತ್ನಿ ಅರುಣಾಳತ್ತ ನೋಡಿದ. ಆಕೆ ಬಿದ್ದು ಬಿದ್ದು ನಕ್ಕು ಬಿಟ್ಟಳು. ಮಕ್ಕಳೆಲ್ಲರ ಮುಂದೆ ಅಪಮಾನವಾದಂತಾಗಿ ಮಳ್ಳ ಮುಖ ಮಾಡಿದ ವಿಕಾಸ್.

ಆವತ್ತು ಕಾಲು ನೋವು ಅಂತ ಗಾಗಿ ಯಾಕೋ ಸ್ವಲ್ಪ ಕುಂಟುತ್ತಿದ್ದಳು. ಮುಂದಾಗಲಿರುವ ಭಯಾನಕ ದುರಂತಕ್ಕೆ ಅದು ಸೂಚನೆಯಾಗಿತ್ತು.

ಮುಂದೆ ಗಾಗಿಗೆ ಓಡಾಡಲು ತುಂಬ ತೊಂದರೆಯಾಗತೊಡಗಿತು. ಚಿಕಿತ್ಸೆ ಆರಂಭವಾಯಿತು. ಬೇರೆ ಬೇರೆ ತರಹದ ವಿಶೇಷ ಪಾದರಕ್ಷೆಗಳನ್ನು ಮಾಡಿಸಿ, ಹಾಕಿಸಿ, ನೋಡಲಾಯಿತು. ಆದರೆ ಆಕೆಯ ಕಾಲುಗಳಲ್ಲಿಯ ನೋವು ಮಾತ್ರ ಏನೂ ಮಾಡಿದರೂ ಕಮ್ಮಿಯಾಗಲಿಲ್ಲ. ಅವಳಿಗೆ ಕಥಕ್ ನೃತ್ಯ ಕಲಿಯುವದೆಂದರೆ ತುಂಬ ಇಷ್ಟ. ಕಾಲು ನೋವಿಗೆ ಮೊದಲ ಬಲಿಯೇ ಕಥಕ್. ನೃತ್ಯ  ಮಾಡುವದನ್ನು ಬಿಟ್ಟರೂ ಗಾಗಿ ನೃತ್ಯದ ಸಂಗೀತವನ್ನು ಬಾಯಲ್ಲೇ ಸದಾ ಗುಣುಗುಣಿಸುತ್ತಲೇ ಇರುತ್ತಿದ್ದಳು. ಹೋದಲ್ಲಿ, ಬಂದಲ್ಲಿ, 'ಥಕ ಥೈ, ಥಕ ಥೈ'

ಗಾಗಿಯ ರಕ್ತದಲ್ಲಿ ಸಂಗೀತವಿತ್ತು. ಅವಳ ತಂದೆ ವಿಕಾಸ್ ದೇಸಾಯಿಯ ಚಿಕ್ಕಪ್ಪ ವಸಂತ್ ದೇಸಾಯಿ ಹಿಂದಿ ಚಿತ್ರರಂಗದ ದೊಡ್ಡ ಸಂಗೀತ ನಿರ್ದೇಶಕರರಾಗಿದ್ದರು. ಗಾಗಿಯ ಕಾಲುಗಳಲ್ಲಿ ನೋವು ಪದೇ ಪದೇ ನಿರಂತರವಾಗಿ ಬರತೊಡಗಿತು. ಶಾಲೆ ತಪ್ಪುವದು ಜಾಸ್ತಿಯಾಯಿತು. ಶಾಲೆಗಿಂತ ಆಕೆ ಹೆಚ್ಚಾಗಿ ಮಿಸ್ ಮಾಡಿಕೊಂಡಿದ್ದು ಆಕೆಯ ಕಥಕ್ ನೃತ್ಯದ ಕ್ಲಾಸುಗಳನ್ನು. ಆಕೆಯ ತಾಯಿ ಅರುಣಾ ಖಾಸಗಿಯಾಗಿ ಮನೆ ಪಾಠಕ್ಕೆ ಅಂತ ಕಥಕ್ ನೃತ್ಯ ಗುರುವೊಬ್ಬರನ್ನು ನೇಮಕ ಮಾಡಿದಳು. ಅದೇನೇ ಮಾಡಿದರೂ ಗಾಗಿ ನೃತ್ಯದ ಗೆಜ್ಜೆ ಕಟ್ಟಿಕೊಂಡು, ವೇಷ ಭೂಷಣ ಧರಿಸಿ, ಮನೆತುಂಬ ನಡೆದಾಡಲು ಮಾತ್ರ ಶಕ್ಯಳಾದಳು. ಕಾಲು ನೋವಿನ ಕಾರಣ ಮುಂದೆಂದೂ ಆಕೆ ನೃತ್ಯ ಮಾಡಲೇ ಇಲ್ಲ.  ಅದೇ ಆಕೆಯ ಕೊರಗು.

ಗಾಗಿಯನ್ನು ಗಮನಿಸುತ್ತಿದ್ದ ಡಾ. ಅಧಿಕಾರಿಗೆ ಬೇರೆ ಏನೋ ವಿಚಾರ ಬಂತು. ನೋವು ಕಾಲಲ್ಲಿದ್ದರೂ ಮೂಲ ಬೇರೆ ಎಲ್ಲೋ ಇರಬೇಕು ಅನ್ನಿಸಿತು. ಮೊಣಕಾಲಿನ ಕೆಳಗಿನ ಮೂಳೆಯ ನೆಣದಲ್ಲಿ ಏನಾದರೂ ಹೆಚ್ಚು ಕಮ್ಮಿಯಾಗಿ ನೋವು ಬರುತ್ತಿರಬಹುದೇ? ಅಂತ ಒಂದು ಊಹೆ ಅವರದು. ಎಕ್ಸ್-ರೇ ನಲ್ಲಿ ಏನೂ ನಿಖರವಾಗಿ ತಿಳಿದು ಬರಲಿಲ್ಲ. ಹಾಗಾಗಿ ಹೆಚ್ಚಿನ ಬೇರೆ ಬೇರೆ ಪರೀಕ್ಷೆ ಮಾಡಬೇಕಾಯಿತು. ಈಗ ವಿಕಾಸ್ ತನ್ನ ಮನೆ ಬಿಟ್ಟು, ಚಿಕ್ಕಪ್ಪ ವಸಂತ್ ದೇಸಾಯಿ ಅವರ ಮನೆಗೆ ಶಿಫ್ಟ್ ಮಾಡಿದ. ಅವರ ಮನೆ ಜಸಲೋಕ್ ಆಸ್ಪತ್ರೆಯ ಎದುರೇ ಇದ್ದಿದ್ದರಿಂದ ಅದು ಗಾಗಿಯ ವೈದ್ಯಕೀಯ ಅಗತ್ಯತೆಗಳಿಗೆ ಅನುಕೂಲಕರವಾಗಿತ್ತು.

ಡಾ. ಅಧಿಕಾರಿಗೆ ಗಾಗಿಯ ಪರಿಸ್ಥಿತಿ ಬಗ್ಗೆ ಒಂದು ಪಕ್ಕಾ ಐಡಿಯಾ ಬಂದು ಬಿಟ್ಟಿತ್ತು. ಆದರೂ ಇನ್ನೂ ಒಂದಿಷ್ಟು ಟೆಸ್ಟ್ ಮಾಡಿಬಿಡೋಣ ಅಂತ ಅಂದುಕೊಂಡರು. ತಾವು ಮಾಡಿದ diagnosis ತಪ್ಪೇ ಆಗಿರಲಿ ಅಂತ ಅವರೇ ಆಶಿಸುತ್ತಿದ್ದರು. ಆದರೆ ಒಂದು ದಿವಸ ಗಾಗಿಯ ಮೆಡಿಕಲ್ ರಿಪೋರ್ಟ್ ಗಳನ್ನು ಗಾಗಿಯ ಪಾಲಕರಾದ ಅರುಣಾ ಮತ್ತು ವಿಕಾಸರ ಮುಂದೆ ಇಡಲೇ ಬೇಕಾಯಿತು. ಇಟ್ಟರು. ಹೇಳಿದರು, ಕ್ಯಾನ್ಸರ್ ಇದೆ, ಅಂತ.

ಗಾಗಿ ಡಾಕ್ಟರ ಚೇಂಬರ್ ಹೊರಗೆ ಕೂತಿದ್ದಳು. ಒಳಗೆ ಹೋಗಿ, ವೈದ್ಯರು ಹೇಳಿದ್ದನ್ನು ಕೇಳಿದ ಅರುಣಾ, ವಿಕಾಸ್ ದೊಡ್ಡ ಶಾಕ್ ಆಗಿ, ದಂಗು ಹೊಡೆದು ಕೂತರು. ಈಗ ಯಾವದೇ ಸಂಶಯವಿರಲಿಲ್ಲ. ಗಾಗಿಗೆ ಕ್ಯಾನ್ಸರ್ ಇರುವದು ಪಕ್ಕಾ ಆಗಿಹೋಗಿತ್ತು. ಡಾಕ್ಟರ್ ಚೇಂಬರ್ ಬಿಡುವ ಮೊದಲು ದಂಪತಿ ಪರಸ್ಪರ ಆಣೆ ಹಾಕಿ, ಮಾತಾಡಿಕೊಂಡರು, 'ಗಾಗಿಯ ಮುಂದೆ ಮಾತ್ರ ಕ್ಯಾನ್ಸರ್ ಇರುವ ವಿಷಯ ಎಂದೂ ಹೇಳುವದಿಲ್ಲ,' ಅಂತ. ಬಹಳ ಧೈರ್ಯದಿಂದಲೇ ಅಂತಹ ದುಸ್ತರ ಪರಿಸ್ಥಿತಿಯನ್ನು ಎದುರಿಸಿದರು ಅವರು. ಗಾಗಿಯ ಮುಂದೆ, ಒಂದೇ ಒಂದು ಸಲ, ಒಂದೇ ಒಂದು ಹನಿ ಕಣ್ಣೀರು ಹಾಕಿದ್ದನ್ನು ನಾವ್ಯಾರೂ ನೋಡಿಲ್ಲ. ತಾವಿಬ್ಬರೇ ಗಂಡ ಹೆಂಡತಿ ಇದ್ದಾಗ ಅದೆಷ್ಟು ನೊಂದುಕೊಂಡರೋ, ಅದೆಷ್ಟು ರೋದಿಸಿದರೋ, ಪಾಪ ಆ ದಂಪತಿ.

ತರಹ ತರಹದ ಆಟಿಕೆಗಳು, ವೀಡಿಯೊ ಗೇಮ್ ಗಳು, ವೀಡಿಯೊ ಕ್ಯಾಸೆಟ್ಟುಗಳು, ಇತ್ಯಾದಿಗಳು ಬಂದು ಬಂದು ಗಾಗಿಯ ಕೋಣೆ ತುಂಬ ತೊಡಗಿದವು. ನೆಂಟರು, ಇಷ್ಟರು, ಹಳೇ ಗೆಳತಿಯರು ಸದಾ ಬಂದು ಗಾಗಿ ಜೊತೆ ಸಮಯ ಕಳೆಯತೊಡಗಿದರು. ಇದರಿಂದಾಗಿ ಕೆಲವೇ ದಿನಗಳಲ್ಲಿ ಗಾಗಿ ಅಂತಾಕ್ಷರಿ ಆಡುವದರಲ್ಲಿ ನಿಪುಣೆಯಾಗಿ ಬಿಟ್ಟಳು. ತನ್ನ ಕಾಯಿಲೆ ಬಗ್ಗೆ ತಲೆಕೆಡಿಸಿಕೊಂಡು ಕೂಡಲು ಗಾಗಿಯ ಬಳಿ ಒಂದು ಕ್ಷಣವಿರುತ್ತಿರಲಿಲ್ಲ. ಭರಿಸಲು ಅಸಾಧ್ಯ ಅನ್ನುವಂತಹ ಆಸ್ಪತ್ರೆಯ ವಾತಾವರಣವನ್ನು ಗಾಗಿಯ ಕೋಣೆಗೆ ಒಳಗೆ ಒಂದು ಸ್ವಲ್ಪವೂ ಬಿಟ್ಟುಕೊಂಡಿರಲಿಲ್ಲ ಗಾಗಿಯ ತಂದೆ ತಾಯಿ.

ಯಾವಾಗ ಔಷಧಗಳು ಕೆಲಸ ಮಾಡುವದನ್ನು ನಿಲ್ಲಿಸಿದವೋ ಆವಾಗ ಬೇರೆ ನಿರ್ವಾಹವಿಲ್ಲದೆ ಗಾಗಿಯ ಕಾಲನ್ನು ಕತ್ತರಿಸಿಬೇಕೆಂದು ವೈದ್ಯರು ಹೇಳಿದರು . ಆವಾಗ ಅರುಣಾ ಮತ್ತು ವಿಕಾಸ್ ಗಾಗಿಯನ್ನು ಅಮೇರಿಕಾಗೆ ಕರೆದುಕೊಂಡು ಹೋದರು. ಆವಾಗ ಗಾಗಿಗೂ ಗೊತ್ತಾಗಿ ಹೋಯಿತು, 'ತನಗೆ ಕ್ಯಾನ್ಸರ್ ಇದೆ,' ಅಂತ.

'ಆದರೆ ಕಾಲಿನಲ್ಲಿ ಯಾಕೆ ಕ್ಯಾನ್ಸರ್ ಪಪ್ಪಾ?' ಅಂತ ಗಾಗಿಯ ಪ್ರಶ್ನೆ.

'ಅದು ಮೂಳೆಯ ಕ್ಯಾನ್ಸರ್ ಕಂದಾ. ಕಾಲಿನ ಮೂಳೆಯಲ್ಲಿದೆ. ಇಲ್ಲಿನ ಅಮೇರಿಕಾ ಡಾಕ್ಟರಗಳು ಕಾಲ ಮೂಳೆಯನ್ನು ಆಪರೇಷನ್ ಮಾಡಿ, ಮೂಳೆಯನ್ನು ಕೆರೆದು, ಸ್ವಚ್ಛ ಮಾಡಿ, ಕ್ಯಾನ್ಸರ್ ಬೇರೆ ಕಡೆ ಹರಡದಂತೆ ಮಾಡುತ್ತಾರೆ,' ಅಂತ ಹೇಳಿದ ಅಪ್ಪ ವಿಕಾಸ್.

ಅಮೇರಿಕಾದಲ್ಲಿ ಗಾಗಿಯ ಚಿಕಿತ್ಸೆ ಸುಮಾರು ತಿಂಗಳುಗಳ ಕಾಲ ನಡೆಯಿತು. ಕೆಮೋಥೆರಪಿಯಿಂದಾಗಿ ಆಕೆಯ ತಲೆ ಮೇಲಿನ ಕೂದಲೆಲ್ಲ ಉದುರಿ ಹೋದವು. ಆಕೆಗೆ ತನ್ನ ಬೋಳು ತಲೆ ನೋಡುವದು, ಮುಟ್ಟಿಕೊಳ್ಳುವದು ಅಂದರೆ ಒಂದು ತರಹ ಆತಂಕ, ಹೆದರಿಕೆ. ಅರುಣಾ, ವಿಕಾಸ್ ಆಕೆಯ ಹೆದರಿಕೆಗಳನ್ನು, ಆತಂಕಗಳನ್ನು ನಕ್ಕು ಹಾರಿಸಿಬಿಡಲು ಯತ್ನ ಮಾಡಿದರು.

'ಏ, ಗಾಗಿ, ಬೋಡಿ ಸುಂದರಿ, ಏನೂ ಹೆದರಬೇಡ. ಇನ್ನು ಕೆಲವೇ ಕೆಲವು ತಿಂಗಳಲ್ಲಿ ನಿನ್ನ ಕೂದಲು ಮತ್ತೆ ಬರುತ್ತವೆ. ಚಿಂತೆ ಬೇಡ,' ಅಂತ ಏನೋ ಭರವಸೆ ಕೊಡುತ್ತಿದ್ದ ಪಾಲಕರು, 'ಮತ್ತೆ ನಮಗೆ ನಿನ್ನ ಇದೇ ಬೋಡಿ ಲುಕ್ ತುಂಬ ಇಷ್ಟ. ಈಗ ಇದೇ ಫ್ಯಾಷನ್. ಈಗೆಲ್ಲ ಇದೇ ಟ್ರೆಂಡ್. ಗೊತ್ತಿಲ್ಲವೇ ನಿನಗೆ ಪುಟ್ಟೀ?' ಅಂತ ಏನೇನೋ ಪೂಸಿ ಹೊಡೆಯುತ್ತಿದ್ದರು.

'ಹಾ! ಹಾ! ನಟ ಯೂಲ್ ಬ್ರೈನೆರ್ ತರಹಾನೇ? ಅವನೇ ತಾನೇ ಬೋಡಾ?' ಅಂತ ಗಾಗಿ ನಕ್ಕು ಕೇಳುತ್ತಿದ್ದಳು.

ನನಗನಿಸುವ ಹಾಗೆ ಗಾಗಿಗೆ ಆಕೆಯ ಪಾಲಕರಲ್ಲಿ ಪೂರ್ತಿ ವಿಶ್ವಾಸವಿತ್ತು. ಅವರು ಕೊಡುತ್ತಿದ್ದ ಅಶ್ವಾಸನೆಯಂತೆ ತಾನು ಬೇಗನೆ ಗುಣಮುಖಳಾಗುತ್ತೇನೆ ಅಂತ ತಿಳಿದುಕೊಂಡಿದ್ದಳು ಆಕೆ. ಮತ್ತೆ ಅಮೇರಿಕಾದಲ್ಲಿ ಡಾಕ್ಟರಗಳು ಆಪರೇಷನ್ ಮಾಡಿ, ಕಾಲು ಕತ್ತರಿಸದೇ, ಬ್ಯಾಂಡೇಜ್ ಕಟ್ಟಿ, ನಕ್ಕಾಗ ಆಕೆಯ ವಿಶ್ವಾಸ ದುಪ್ಪಟ್ಟಾಗಿತ್ತು.

ಆದರೆ ಅಮೇರಿಕಾದಿಂದ ಬಂದ ಕೆಲವೇ ದಿನಗಳಲ್ಲಿ ಆಕೆಯ ಕಾಲು ಕೊಳೆಯಲು ಆರಂಭಿಸಿ ಬಿಟ್ಟಿತು. ಸಿಕ್ಕಾಪಟ್ಟೆ ನೋವಿನಲ್ಲಿದ್ದಳು. ಈ ಸಲ ಮೊದಲಿನ ಡಾಕ್ಟರ್ ಬಿಟ್ಟು ಬೇರೆ ಯಾರೋ ಡಾಕ್ಟರನ್ನು ನೋಡಿದರು. ಹೊಸ ಡಾಕ್ಟರ್ ಆಕೆಯ ಕಾಲಿನ ಬ್ಯಾಂಡೇಜ್ ಕತ್ತರಿಸಿ, ತೆಗೆಸಿ ನೋಡಿದ. ಕಾಲು ಕೀವಿನಿಂದ ತುಂಬಿ ಹೋಗಿತ್ತು. ಯಾಕೋ ಈಗ ಹೊಸ ಡಾಕ್ಟರ ಮತ್ತು ತಂಡಕ್ಕೆ ಇದು ಕ್ಯಾನ್ಸರ್ ಇರಲಿಕ್ಕಿಲ್ಲ ಅನ್ನಿಸತೊಡಗಿತು. ಆದರೆ ಯಾವ ಟ್ರೀಟ್ಮೆಂಟಗಳೂ ಕೆಲಸ ಮಾಡುತ್ತಿರಲಿಲ್ಲ. ಡಾಕ್ಟರಗಳು, ಔಷದಗಳು ಬದಲಾಗುತ್ತವೇ ಹೋದವು. ಪರಿಣಾಮ ಮಾತ್ರ ನಾಸ್ತಿ. ಎಲ್ಲಾದರೂ ಇಡೀ ದೇಹಕ್ಕೇ ಸೋಂಕು ಹರಡಿ ಬಿಟ್ಟೀತು ಅಂತ ಹೆದರಿಕೆಯಲ್ಲಿ ಡಾಕ್ಟರಗಳು ಆಕೆಯ ಕಾಲು ಕತ್ತರಿಸಿದರು. ಕತ್ತರಿಸಿದ ಕಾಲನ್ನು ವಿದ್ಯುತ್ ಚಿತಾಗಾರದಲ್ಲಿ ಸುಟ್ಟು, ಮೃತರಿಗೆ ಮಾಡುವ ಸಂಸ್ಕಾರ ಎಲ್ಲವನ್ನೂ ಸರಿಯಾಗಿ ಮಾಡಲಾಯಿತು.

ಒಂದು ದಿನ ಮಲಗಿದ್ದಾಗ, ಛಾವಣಿ ನೋಡುತ್ತ, ತಣ್ಣನೆಯ ದನಿಯಲ್ಲಿ ಗಾಗಿ ಕೇಳಿದಳು, 'ಪಪ್ಪಾ, ದೇವರು ನನಗೇಕೆ ಹೀಗೆ ಶಿಕ್ಷೆ ಕೊಡುತ್ತಿದ್ದಾನೆ? ನಾನ್ಯಾವ ತಪ್ಪೂ ಮಾಡಿಲ್ಲ.'

ತಾಯಿ ಅರುಣಾ ಗಾಗಿಯ ಕೋಣೆಯಲ್ಲಿ ಕೃಷ್ಣನ ಒಂದು ಚಿಕ್ಕ ಮೂರ್ತಿ ತಂದಿಟ್ಟಿದ್ದಳು. ಮೂರ್ತಿಯ ಮುಂದೆ ಹಗಲೂ ರಾತ್ರಿ ನಿರಂತರವಾಗಿ ದೀಪ ಉರಿಯುತ್ತಿತ್ತು. ವ್ರತದ ರೀತಿಯಲ್ಲಿ ಅರುಣಾ, ವಿಕಾಸ್ ಮೀನು ಮಾಂಸ ತಿನ್ನುವದನ್ನು ಬಿಟ್ಟಿದ್ದರು. ಆದರೆ ಗಾಗಿ ಆಕೆಗೆ ತುಂಬ ಇಷ್ಟವಾಗುತ್ತಿದ್ದ ಕಬಾಬ್, ಟಿಕ್ಕಾ ಕೇಳಿದರೆ ಮಾತ್ರ ಎಂದೂ ಇಲ್ಲ ಎನ್ನುತ್ತಿರಲಿಲ್ಲ. ಇದಕ್ಕೆ ಡಾಕ್ಟರುಗಳ ಅನುಮತಿ ತೆಗೆದುಕೊಂಡಿದ್ದರು.

ಒಂದು ದಿನ ಗಾಗಿಯ ಕೋಣೆಗೆ ಮತ್ತೂ ಒಬ್ಬ ಹೊಸ ಡಾಕ್ಟರ್ ಎಂಟ್ರಿ ಕೊಟ್ಟ. ಅದೆಷ್ಟು ಡಾಕ್ಟರಗಳನ್ನು ನೋಡಿದ್ದಳೋ ಆಕೆ.

'ಪಪ್ಪಾ, ಮತ್ತೆ ಡಾಕ್ಟರ್ ಬದಲು ಮಾಡಿದೆಯಾ?' ಅಂತ ಕೇಳಿದಳು.

'ಹೌದು ಮಗೂ, ಮೊದಲಿನ ಡಾಕ್ಟರ್ ಬಳಿ ಏನೂ ಮಾಡಲಾಗಲಿಲ್ಲ,' ಅಂತ ವಿಷಾದದಿಂದ ಹೇಳಿದ ವಿಕಾಸ್.

ತನ್ನ ಕೋಣೆಯಲ್ಲಿದ್ದ ಕೃಷ್ಣನ ಮೂರ್ತಿಯನ್ನು ನೋಡುತ್ತ ಗಾಗಿ ಹೇಳಿದಳು, 'ಈ ದೇವರೂ ಅಷ್ಟೇ. ಏನೂ ಮಾಡಲಾರ. ಮತ್ತೊಂದು ಬೇರೆ ದೇವರಿಲ್ಲವೇ ಪಪ್ಪಾ?'

ಸಾಮಾನ್ಯವಾಗಿ ಅರುಣಾ ಎಂದೂ ಹೀಗೆ ಮಾತಾಡಿದವಳೇ ಅಲ್ಲ. ಅವತ್ಯಾಕೋ ಒಂದು ಮಾತು ಅಂದು ಬಿಟ್ಟಳು, 'ದೇವರು ಸಹಿತ ಸೂಪರ್ ಮ್ಯಾನ್ ಇದ್ದ ಹಾಗೆ ಕಂದಾ. ಪುಸ್ತಕದಲ್ಲಿ ಮಾತ್ರ ಅವನೂ ಸಹ ಏನು ಬೇಕಾದರೂ ಮಾಡಬಲ್ಲ.'

ಮುಂದೆ ಗಾಗಿ ಹೆಚ್ಚು ದಿನ ಬದುಕಲಿಲ್ಲ.

ಗಾಗಿಯನ್ನು ಉಳಿಸಿಕೊಳ್ಳಲಾಗದ ದುಃಖತಪ್ತ ಸೂಪರ್ ಮ್ಯಾನ್


* ಇದು ಗುಲ್ಜಾರರ ಅಠಣ್ಣಿ (ಎಂಟಾಣೆ) ಎಂಬ ಕಥಾಸಂಕಲನದಿಂದ ಆಯ್ದ ಕಥೆ. ಅದೇ ಕಥಾಸಂಕಲನದ ಇನ್ನೊಂದು ಕಥೆ LoC ಯ ಅನುವಾದ ಇಲ್ಲಿದೆ ನೋಡಿ.

* ಇದೊಂದು ನೈಜ ಘಟನೆಗಳ ಮೇಲೆ ಆಧಾರಿತ ಕಥೆ ಅಂತ ಹೇಳಲು ಯಾವದೇ ಸಂದೇಹ ಇಲ್ಲ. ಇದರಲ್ಲಿ ಬರುವ ಅರುಣಾ ರಾಜೆ ಪಾಟೀಲ್, ವಿಕಾಸ್ ದೇಸಾಯಿ, ಬಸು ಭಟ್ಟಾಚಾರ್ಯ ಎಲ್ಲ ಸಿನಿಮಾ ಬಗ್ಗೆ ತಿಳಿದ ಎಲ್ಲರಿಗೂ ಗೊತ್ತಿರುವವರೇ. ಗಾಗಿಯ ತಾಯಿ ಅರುಣಾ ರಾಜೆ ಪಾಟೀಲ ಅನ್ನುವವರು ಹುಲಕೋಟಿ ಹುಲಿ, ಮಾಜಿ ಮಂತ್ರಿ, ದಿವಂಗತ ಶ್ರೀ ಕೆ. ಎಚ್. ಪಾಟೀಲರ ಪುತ್ರಿ ಅಂತ ಎಲ್ಲೋ ಓದಿದ ನೆನಪು. ಆ ಮಾಹಿತಿ ಸರಿಯಿದ್ದರೆ ಅವರು ಇಂದಿನ ಮಂತ್ರಿ ಶ್ರೀ ಎಚ್. ಕೆ. ಪಾಟೀಲರ ಸಹೋದರಿ.

Saturday, November 01, 2014

ಇಂದಿರಾ ಗಾಂಧಿ ಹತ್ಯೆಯ ಹಿಂದೆ ಹೀಗೊಂದು ಭಯಾನಕ ಅಂತರಾಷ್ಟ್ರೀಯ ಸಂಚು ಇತ್ತೇ?

ಅಕ್ಟೋಬರ್ ೩೧, ೧೯೮೪ ರಂದು ಇಂದಿರಾ ಗಾಂಧಿ ಹತ್ಯೆಯಾಯಿತು. ನಿನ್ನೆಗೆ ಮೂವತ್ತು ವರ್ಷ. ಅವರ ಸಿಖ್ ಅಂಗರಕ್ಷಕರೇ ಗುಂಡಿಟ್ಟು ಕೊಂದು ಬಿಟ್ಟರು. ಅದಾಗುವ ಕೆಲವೇ ತಿಂಗಳ ಹಿಂದೆ ಇಂದಿರಾ ಗಾಂಧಿ ಪಂಜಾಬಿನಲ್ಲಿ ಖಲಿಸ್ತಾನಿ ಉಗ್ರವಾದವನ್ನು ಹತ್ತಿಕ್ಕಲು ಆಪರೇಷನ್ ಬ್ಲೂಸ್ಟಾರ್ ಅನ್ನುವ ಸೈನಿಕ ಕಾರ್ಯಾಚರಣೆ ಮಾಡಿದ್ದರು. ಫಿರಂಗಿ ಹಚ್ಚಿ ಸಿಖ್ ಜನರ ಪರಮ ಪವಿತ್ರ ಸುವರ್ಣ ಮಂದಿರವನ್ನು ಉಡಾಯಿಸಿ ಬಿಟ್ಟಿದ್ದರು. ಆ ಹೊತ್ತಿನ ಮಟ್ಟಿಗೆ ದೊಡ್ಡ ಮಟ್ಟದ ಖಲಿಸ್ತಾನಿ ಉಗ್ರರೆಲ್ಲರನ್ನೂ ಕೊಂದು ಉಗ್ರವಾದಕ್ಕೆ ಒಂದು ಮಂಗಳ ಹಾಡಿದ್ದರು ಇಂದಿರಾ ಗಾಂಧಿ. ಆದರೆ ಸಿಖ್ ಸಮುದಾಯ ಸಿಕ್ಕಾಪಟ್ಟೆ ಸಿಟ್ಟಿಗೆದ್ದಿತ್ತು. ಸೈನ್ಯದಲ್ಲಿ ಸಿಖ್ ಸೈನಿಕರ ಆಂತರಿಕ ದಂಗೆಗಳಾಗಿದ್ದವು. ಉಕ್ಕಿನ ಹಸ್ತದಿಂದ ಅವನ್ನೂ ಸಹ ಹತ್ತಿಕ್ಕಿದ್ದರು ಇಂದಿರಾ ಗಾಂಧಿ. ಆವಾಗ ಸುವರ್ಣ ಮಂದಿರದಲ್ಲಿ ಅನೇಕ ಅಮಾಯಕರು ಸತ್ತು ಹೋಗಿದ್ದರು. ಸೈನ್ಯ, ಇಂದಿರಾ ಗಾಂಧಿ ನಿರ್ದೇಶಿಸಿದಂತೆ, ಬೇಕಂತಲೇ ಅವರನ್ನು ಕೊಂದರು ಅಂತ ಸುದ್ದಿ ಹರಡಿಕೊಂಡಿದ್ದರು ಸಿಖ್ ಜನರು. ಇದೆಲ್ಲ ಕೂಡಿ ಇಂದಿರಾ ಅಂದರೆ ಸಿಖ್ ಜನಾಂಗ ಕೊತ ಕೊತ ಕುದಿಯುತ್ತಿತ್ತು. ಮೊದಲೇ ಯುದ್ಧ, ಗದ್ದಲ, ಇತ್ಯಾದಿಗಳಿಗೆ ಹೆಸರಾದ ಮಂದಿ ಸಿಖ್ ಜನ. ಸೇಡು ತೀರಿಸಿಕೊಳ್ಳದೇ ಬಿಡುವರಲ್ಲ. ಹಾಗಂತಲೇ ನೀಟಾಗಿ ಸ್ಕೆಚ್ ಹಾಕಿ, ಇಂದಿರಾ ಗಾಂಧಿಯ ಸಿಖ್ ಅಂಗರಕ್ಷಕರಿಂದಲೇ ಅವರನ್ನು ಕೊಲ್ಲಿಸಿಬಿಟ್ಟರು.

ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಆ ಅಂಗರಕ್ಷಕರು ಎಲ್ಲದನ್ನೂ ಅವರೇ ಮಾಡಿದರೇ? ಅಥವಾ ಅವರ ಹಿಂದೆ ಸೂತ್ರಧಾರರಾಗಿ ಬೇರೆ ಯಾರೋ ಇದ್ದರೋ? ಇಂದಿರಾ ಗಾಂಧಿ ಹತ್ಯೆಯ ಹಿಂದೆ ಕಣ್ಣಿಗೆ ಕಾಣದ ಒಂದು ಷಡ್ಯಂತ್ರವಿತ್ತೇ?

ಇದೆಲ್ಲ ವಿಷಯವನ್ನು ವಿಚಾರಿಸಲು ನೇಮಿಸಿದ್ದು ನ್ಯಾಯಮೂರ್ತಿ ಥಕ್ಕರ್ ಆಯೋಗ. ಅದು ಕೆಲವು ಸಂಶಯಗಳನ್ನು ವ್ಯಕ್ತಪಡಿಸಿದರೂ, ಯಾರನ್ನೂ ಬೆರಳು ತೋರಿಸಿ, 'ಇಂತಿಂತವರು ಹತ್ಯೆಯ ಹಿಂದಿನ ಸಂಚಿನಲ್ಲಿ ಇದ್ದರು. ಹೀಗೀಗೆ ಸಂಚು ಮಾಡಿದರು. ಮಾಡಿ ಮುಗಿಸಿಬಿಟ್ಟರು,' ಅಂತ ಮಾತ್ರ ಹೇಳಲಿಲ್ಲ. ಇಂದಿರಾ ಗಾಂಧಿಯ ಆಪ್ತ ಸಹಾಯಕ ಆರ್. ಕೆ. ಧವನ್ ಮೇಲೆ ದೊಡ್ಡ ಪ್ರಮಾಣದ ಸಂಶಯ, ಅಸಮಾಧಾನ ವ್ಯಕ್ತಪಡಿಸಿತ್ತು ಥಕ್ಕರ್ ವರದಿ. ಅಷ್ಟೇ. ಆದರೆ ಸ್ವತಃ ರಾಜೀವ್ ಗಾಂಧಿಯೇ, 'ಧವನ್ ಮೇಲೆ ಯಾವದೇ ಸಂಶಯ ಪಡಲು ಸಾಧ್ಯವೇ ಇಲ್ಲ. ಅವರು ನಮ್ಮ ಕುಟುಂಬದ ಒಂದು ಭಾಗವೇ ಆಗಿದ್ದರು. ಅಂತವರ ಮೇಲೆ ಸಂಶಯ ಪಡುವದೇ? ಅದು ಮಹಾ ಪಾಪ,' ಅನ್ನುವ ಧಾಟಿಯಲ್ಲಿ ಹೇಳಿಕೆ ನೀಡಿ, ಆರ್. ಕೆ. ಧವನ್ ಅವರನ್ನು ಬಚಾವು ಮಾಡಿದ್ದಲ್ಲದೇ ಅವರಿಗೆ ದೊಡ್ಡ ಸ್ಥಾನ ಮಾನ ಕೊಟ್ಟು ಚೆನ್ನಾಗಿಯೇ ನೋಡಿಕೊಂಡರು.

ಥಕ್ಕರ ಆಯೋಗದ ವರದಿ ಬಿಟ್ಟರೆ ಇಂದಿರಾ ಗಾಂಧಿ ಹತ್ಯೆಯ ಹಿಂದೆ ಇರಬಹುದಾದ ಸಂಚಿನ ಮೇಲೆ ಬೆಳಕು ಚೆಲ್ಲುವಂತಹ ಮಾಹಿತಿ ಹೊರಗೆ ಬಂದಿಲ್ಲ ಬಿಡಿ. ರಾಜೀವ್ ಗಾಂಧಿ ಹತ್ಯೆಯ ಬಗ್ಗೆ, ಹಿಂದಿದ್ದ ಸಂಭವನೀಯ ಷಡ್ಯಂತ್ರದ ಬಗ್ಗೆ ಅನೇಕ ಒಳ್ಳೊಳ್ಳೆ ಪುಸ್ತಕಗಳು ಬಂದಿವೆ. ಆಸಕ್ತಿಯಿಂದ ಓದಿಕೊಂಡು, ಒಂದಕ್ಕೊಂದು ಮಾಹಿತಿ ಜೋಡಿಸುತ್ತ ಹೋದರೆ ಒಂದು ಭಯಾನಕ ಷಡ್ಯಂತ್ರದ ಪೂರ್ತಿ ಮಾಹಿತಿ ಸಿಕ್ಕು ಬಿಡುತ್ತದೆ. ಆದರೆ ಇಂದಿರಾ ಗಾಂಧಿ ಹತ್ಯೆಯ ಬಗ್ಗೆ ಆ ತರಹದ ಮಾಹಿತಿ ಸಿಗುವದಿಲ್ಲ.

ಆದರೆ ಲಂಡನ್ ಮೂಲದ ತಾರಿಕ್ ಅಲಿ ಅನ್ನುವವರು ಒಂದು ಪುಸ್ತಕ ಬರೆದಿದ್ದಾರೆ. ಅವರು ಯಾವದೋ ಒಂದು ಡಾಕ್ಯುಮೆಂಟರಿಗೆ ಅಂತ ಒಂದು 'ಕಾಲ್ಪನಿಕ' ಸ್ಕ್ರಿಪ್ಟ್ ಬರೆದಿದ್ದರಂತೆ. ಯಾವದೋ ಕಾರಣಕ್ಕೆ ಆ ಡಾಕ್ಯುಮೆಂಟರಿ ಆಗಲಿಲ್ಲ. ಬರೆದ ಸ್ಕ್ರಿಪ್ಟನ್ನೇ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಪುಸ್ತಕದ ಹೆಸರು - The Assassination: Who Killed Indira G?

ಲೇಖಕರೇ ಹೇಳಿಕೊಂಡಂತೆ ಇದು ಒಂದು fictional ಪುಸ್ತಕ. ಕಾದಂಬರಿ ತರಹದ್ದು. ಆದರೆ ಇಂದಿರಾ ಗಾಂಧಿ ಹತ್ಯೆಯ ಕಾಲದ geopolitical realities ಗಳನ್ನು ಗಮನಕ್ಕೆ ತೆಗೆದುಕೊಂಡು, 'ಇಂದಿರಾ ಹತ್ಯೆಗೆ ಇವೂ ಕಾರಣವಾಗಿರಬಹುದೇ? ಹತ್ಯೆಯನ್ನು ಅಂಗರಕ್ಷಕರೇ ಮಾಡಿದ್ದರೂ ಸೂತ್ರಧಾರರೂ ಇಂತವರು ಇರಬಹುದೇ?' ಅನ್ನುವ ಒಂದು theory ಯನ್ನು ಲೇಖಕ ತಾರಿಕ್ ಅಲಿ ಹರಿಬಿಡುತ್ತಾರೆ. ಮತ್ತೊಮ್ಮೆ ನೆನಪಿರಲಿ ಇದೆಲ್ಲ ಅವರ ಕಲ್ಪನೆ ಅಷ್ಟೇ.

ಪುಸ್ತಕದ ಸಾರಾಂಶ ಇಷ್ಟು. ೧೯೮೪ ಜೂನ್ ತಿಂಗಳಲ್ಲಿ ಆಪರೇಷನ್ ಬ್ಲೂಸ್ಟಾರ್ ಮಾಡಿ, ಸಿಖ್ ಉಗ್ರವಾದವನ್ನು ಮಟ್ಟ ಹಾಕಿ ಇಂದಿರಾ ಗಾಂಧಿ ಯಶಸ್ಸಿನ ಪರಾಕಾಷ್ಠೆಯಲ್ಲಿದ್ದರು. ಆಗ ಅತ್ತಕಡೆ ಆಫ್ಘಾನಿಸ್ತಾನವನ್ನು ಸೊವಿಯಟ್ ರಶಿಯಾ ಆಕ್ರಮಿಸಿಕೊಂಡಿತ್ತು. ಅಮೇರಿಕಾ ಆಫ್ಘನ್ ಮುಜಾಹಿದೀನ್ ಬಂಡುಕೋರರಿಗೆ ಎಲ್ಲ ಸಹಾಯ ಮಾಡಿ ರಶಿಯಾವನ್ನು ಸರಿಯಾಗಿ ಹಣಿಯುತ್ತಿತ್ತು. ಪಾಕಿಸ್ತಾನ ಎಂಬ ತಗಡು ದೇಶ ಆಫ್ಘನ್ ಬಂಡುಕೋರರು ಮತ್ತು ಅಮೇರಿಕಾ ಮಧ್ಯೆ ದಲ್ಲಾಳಿ ತರಹ ಕೂತು ರಶಿಯಾಕ್ಕೆ ಸರಿಯಾಗಿ ಬತ್ತಿ ಇಡುತ್ತಿತ್ತು. ಆಫ್ಘನ್ ಮುಜಾಹಿದೀನರಿಗೆ ಪಾಕಿಸ್ತಾನ ಅಂದರೆ ತವರು ಮನೆ ತರಹ ಆಗಿತ್ತು. ಆಫ್ಘನ್ ಗಡಿಯೊಳಕ್ಕೆ ನುಗ್ಗಿ, ರಶಿಯಾ ವಿರುದ್ಧ ಗೆರಿಲ್ಲಾ ಕಾರ್ಯಾಚರಣೆ ಮಾಡಿ, ಪಾಕಿಸ್ತಾನದೊಳಕ್ಕೆ ವಾಪಸ್ ಬಂದು, ಬಲೂಚಿಸ್ತಾನದ ಎಲ್ಲೋ ಮೂಲೆಯಲ್ಲಿ ಹೊಕ್ಕಿ ಕೂತು ಬಿಡುತ್ತಿದ್ದರು. ರಶಿಯಾಕ್ಕೆ ಸಾಕು ಸಾಕಾಗಿ ಹೋಗಿತ್ತು. ಪಾಕಿಸ್ತಾನವನ್ನು ಹಿಡಿದು, ಸರಿಯಾಗಿ ಬಾರಿಸಿಬಿಡೋಣ ಅಂದರೆ ಅದೊಂದು ಹೆಚ್ಚಿನ ತಲೆನೋವು. ಆಕ್ರಮಿಸಿದ್ದ ಅಫಘಾನಿಸ್ತಾನವನ್ನೇ ಸಂಬಾಳಿಸಿಕೊಂಡು ಹೋಗುವದು ಸಾಕಾಗಿದೆ. ಹಾಗಿರುವಾಗ ಹೊಸದಾಗಿ ಪಾಕಿಸ್ತಾನವನ್ನೆಲ್ಲಿ ಆಕ್ರಮಿಸೋಣ? ಅಂತ ರಶಿಯಾದ ತಲೆಬಿಸಿ. ಆದರೆ ಪಾಕಿಸ್ತಾನಕ್ಕೆ ಒಂದು ಗತಿ ಕಾಣಿಸಿದ ಹೊರತೂ ಮುಜಾಹಿದೀನ ಬಂಡುಕೋರರ ಹಾವಳಿ ನಿಲ್ಲುವದಿಲ್ಲ. ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕು ಅಂದರೆ ಏನು ಮಾಡಬೇಕು? ಅಂತ ರಶಿಯಾ ವಿಚಾರ ಮಾಡಿತು. ಹೇಗೂ ಭಾರತ, ಇಂದಿರಾ ಗಾಂಧಿ ರಶಿಯಾಕ್ಕೆ ಪರಮಾಪ್ತರು. ಇಂದಿರಾ ಗಾಂಧಿಗೆ ಹೇಳಿ, ಮನವಿ ಮಾಡಿಕೊಂಡು, ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿ ಅಂತ ಹೇಳಿದರೆ ಹೇಗೆ? ಹೇಗೂ ಇಂದಿರಾ ಗಾಂಧಿಗೆ ಪಾಕಿಸ್ತಾನ ಕಂಡರೆ ಬದ್ಧ ದ್ವೇಷ. ಅದೂ ಎಲ್ಲರಿಗೂ ಗೊತ್ತಿತ್ತು.

೧೯೭೧ ರಲ್ಲಿ ಪಾಕಿಸ್ತಾನವನ್ನು ಒಡೆದು, ಬಾಂಗ್ಲಾದೇಶ ಮಾಡಿಕೊಟ್ಟುಬಿಟ್ಟಿದ್ದರು ಇಂದಿರಾ ಗಾಂಧಿ. ಆವಾಗಲೇ ಪಾಕಿಸ್ತಾನವನ್ನು ಪೂರ್ತಿಯಾಗಿ ನಾಶ ಮಾಡಿ, ಆಪೋಶನ ತೆಗೆದುಕೊಳ್ಳುವ ಒಂದು ಮಾಸ್ಟರ್ ಪ್ಲಾನ್ ಹಾಕಿದ್ದರು ಅವರು. ಆದರೆ ಅವರದ್ದೇ ಸಂಪುಟದಲ್ಲಿದ್ದ ಗದ್ದಾರ್ ಜನರಿಂದ ಮಾಹಿತಿ ಸೋರಿ ಹೋಗಿ, ಅಮೇರಿಕಾಕ್ಕೆ ಮುಟ್ಟಿ, ಅಲ್ಲಿನ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಬಂಗಾಲ ಕೊಲ್ಲಿಗೆ ದೊಡ್ಡ ಮಟ್ಟದ ನೌಕಾಪಡೆ ಕಳಿಸಿ, ಬರೋಬ್ಬರಿ ಆವಾಜ್ ಹಾಕಿದ್ದರು. ಅಷ್ಟು ದೊಡ್ಡ ಮಟ್ಟದ ಆವಾಜ್ ಬಂತು ಅಂತ ಆವತ್ತು ಇಂದಿರಾ ಭುಸುಗುಡುತ್ತಲೇ ಪಾಕಿಸ್ತಾನ ನಿರ್ನಾಮ ಮಾಡುವ ಆಲೋಚನೆಯಿಂದ ಹಿಂಜರಿದಿದ್ದರು. ಆದರೆ ಒಳಗೆ ರೋಷ ಹಾಗೇ ಇತ್ತು. ಈಗ ರಶಿಯಾ ಸುಪಾರಿ ಕೊಟ್ಟು, 'ಸ್ವಲ್ಪ ಪಾಕಿಸ್ತಾನವನ್ನು ವಿಚಾರಿಸಿಕೊಳ್ಳಿ. ನಾವು ಉಳಿದಿದ್ದನ್ನು ನೋಡಿಕೊಳ್ಳುತ್ತೇವೆ. ಅಮೇರಿಕಾದ ಚಿಂತೆ ನಿಮಗೆ ಬೇಡ,' ಅಂತ ಹೇಳಿದಾಗ ಇಂದಿರಾ ಸಿಕ್ಕಾಪಟ್ಟೆ ಹುರುಪಾಗಿಬಿಟ್ಟರು.

ಬ್ಲೂಸ್ಟಾರ್ ಕಾರ್ಯಾಚರಣೆಯ ಯಶಸ್ಸಿನಿಂದ ಥ್ರಿಲ್ ಆಗಿದ್ದ ಸೈನ್ಯ ಕೂಡ ರೈಟ್ ಅಂತು. ಪಾಕಿಸ್ತಾನದ ಮೇಲೆ ಆಕ್ರಮಣದ ಒಂದು ಯೋಜನೆ ತಯಾರಾಯಿತು. ಇದು ಹೇಗೋ ಲೀಕ್ ಆಗಿ, ಈ ಯೋಜನೆ ಪಾಕಿಸ್ತಾನಕ್ಕೆ ಮತ್ತು ಅಮೇರಿಕಾಗೆ ತಿಳಿದು ಬಿಟ್ಟಿತು. ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಅಮೇರಿಕಾ ಬೆಚ್ಚಿ ಬಿತ್ತು. ಭಾರತ ಆಕ್ರಮಣ ಮಾಡಿ, ಪಾಕಿಸ್ತಾನ ಏನಾದರೂ ಯುದ್ಧ ಮಾಡಬೇಕಾಗಿ ಬಂದರೆ ಆಫ್ಘನ್ ಮುಜಾಹಿದೀನರು ಅನಾಥರಾಗಿ ಬಿಡುತ್ತಿದ್ದರು. ರಶಿಯಾ ಆರಾಮಾಗಿ ಅವರ ಬ್ಯಾಂಡ್ ಬಾರಿಸಿ ಬಿಡುತ್ತಿತ್ತು. ಹಾಗೇನಾದರೂ ಆಗಿದ್ದರೆ USA ಮತ್ತು USSR ಎಂಬ ಎರಡು ಸೂಪರ್ ಪವರ್ ಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರದಲ್ಲಿ ಅಮೇರಿಕಾಗೆ ಸೋಲಾಗುತ್ತಿತ್ತು. by hook or by crook ಸೊವಿಯಟ್ ಯೂನಿಯನ್ ನನ್ನು ನಿರ್ನಾಮ ಮಾಡಿ ಒಗೆಯಬೇಕೆಂದು ಪಣ ತೊಟ್ಟಿದ್ದ ಅಂದಿನ ಅಧ್ಯಕ್ಷ ರೇಗನ್, ಉಪಾಧ್ಯಕ್ಷ ಬುಶ್ (ಹಿರಿಯ), CIA ಮುಖ್ಯಸ್ಥ ವಿಲಿಯಂ ಕೇಸೀ ಅವರಿಗೆ ಮತ್ತು ಅಮೇರಿಕಾದ ವಿದೇಶಾಂಗ ನೀತಿ ರೂಪಿಸುತ್ತಿದ್ದ ಮಂದಿಗೆ ಇದು ಸುತಾರಾಂ ಇಷ್ಟವಿರಲಿಲ್ಲ. ಪಾಕಿಸ್ತಾನವನ್ನು ಬೆಂಡೆತ್ತುವ ಭಾರತದ ಮಹದಾಸೆಗೆ ಒಂದು ಕಡಿವಾಣ ಹಾಕಿ, ಪಾಕಿಸ್ತಾನದ ಮೇಲೆ ಆಗಲಿರುವ ಆಕ್ರಮಣ ತಪ್ಪಿಸಲೇ ಬೇಕಿತ್ತು. ಅದಕ್ಕೆ ಏನು ಮಾಡಬೇಕು? ಬೇರೆ ಬೇರೆ ಸಾಧ್ಯತೆಗಳನ್ನು ಹುಡುಕುತ್ತ ಹೊರಟರು ಪಾಕಿಸ್ತಾನ ಮತ್ತು ಅಮೇರಿಕಾ.

ಪಾಕಿಸ್ತಾನ ಪಂಜಾಬಿನ ಖಲಿಸ್ತಾನ ಉಗ್ರರಿಗೆ ಬೇಕಾದಷ್ಟು ಸಪೋರ್ಟ್ ಮಾಡಿತ್ತು. ಈಗ ಬ್ಲೂಸ್ಟಾರ್ ಕಾರ್ಯಾಚರಣೆಯ ನಂತರ ಸಿಖ್ ಸಮುದಾಯದಲ್ಲಿ ಇಂದಿರಾ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ, ಸೇಡಿನ ಭಾವನೆ ಎದ್ದಿದ್ದು ಗೊತ್ತಿರದ ಸಂಗತಿಯೇನಾಗಿರಲಿಲ್ಲ. ಎಲ್ಲ ಗೊತ್ತೇ ಇತ್ತು. ಇಂದಿರಾ ಹತ್ಯೆಗೆ ಅನೇಕ ಯೋಜನೆಗಳನ್ನು ಬೇರೆ ಬೇರೆ ಸಿಖ್ ಉಗ್ರಗಾಮಿ ಸಂಘಟನೆಗಳು ಹಾಕಿ ಕೊಳ್ಳುತ್ತಿದ್ದವು. ಅಂತಹ ಸಂಘಟನೆಗಳನ್ನು ಪಾಕಿಸ್ತಾನದ ISI, ಅಮೇರಿಕಾದ CIA ಬೇಹುಗಾರರು infiltrate ಮಾಡಿದ್ದರು!

ಯಾವಾಗ ಸಿಖ್ ಅಂಗರಕ್ಷರನ್ನು ಉಪಯೋಗಿಸಿಕೊಂಡು ಇಂದಿರಾ ಗಾಂಧಿಯ ಹತ್ಯೆ ಮಾಡಿಬಿಡಬೇಕು ಎನ್ನುವ ಯೋಜನೆಯ ಸುಳಿವು ಪಾಕಿಸ್ತಾನ, ಅಮೇರಿಕಾ ಕಿವಿಗೆ ಬಿತ್ತೋ ಅಂತರಾಷ್ಟ್ರೀಯ ಬೇಹುಗಾರರು ಜಾಗೃತರಾಗಿ ಬಿಟ್ಟರು. ಅಥವಾ ಅಂತಹದೊಂದು ಖತರ್ನಾಕ್ ಐಡಿಯಾ ಅವರೇ ಕೊಟ್ಟಿದ್ದರೋ ಏನೋ. ಒಟ್ಟಿನಲ್ಲಿ ಇಂತಹ ಸದಾವಕಾಶ ಮತ್ತೆ ಸಿಗುವದಿಲ್ಲ ಅಂತ ಅವರಿಗೆ ಖಾತ್ರಿಯಾಗಿ ಹೋಯಿತು. ಅಂತಹ ಇಂದಿರಾ ಹತ್ಯೆಯ ಯೋಜನೆಯನ್ನು ಯಾವದೇ ರೀತಿಯಲ್ಲಿ ವಿಫಲವಾಗಲು ಬಿಡಬಾರದು ಅಂತ ಖುದ್ದಾಗಿ ತಾವೇ ಅದರ ಮೇಲ್ವಿಚಾರಣೆಗೆ ನಿಂತು ಬಿಟ್ಟರು. ಕೇವಲ ಭಾರತದ ಸಿಖ್ ಜನರೇ ಆಗಿದ್ದರೆ ಎಲ್ಲಾದರೂ ತಪ್ಪು ಮಾಡಿಕೊಂಡು ಹತ್ಯೆಯ ಯತ್ನದಲ್ಲಿ ವಿಫಲರಾಗುತ್ತಿದ್ದರೋ ಏನೋ. ಆದರೆ ಈಗ ವೃತ್ತಿಪರ ಬೇಹುಗಾರರು, covert operation specialist ಗಳು ಟೊಂಕ ಕಟ್ಟಿ ಅವರ ಸಹಾಯಕ್ಕೆ ನಿಂತರು. ಶಿಸ್ತುಬದ್ಧವಾಗಿ ಯೋಜನೆ ಹಾಕಿಕೊಟ್ಟರು. ಅದಕ್ಕೆಂದೇ ಬೇರೆ ಬೇರೆ ಬೇಹುಗಾರಿಕೆ ಸಂಸ್ಥೆಗಳ ಸ್ಪೆಷಲಿಸ್ಟಗಳು ಪಾಕಿಸ್ತಾನಕ್ಕೆ ಬಂದು ಕೂತಿದ್ದರು. ಹಂತಕರಲ್ಲಿ ಒಬ್ಬನಾದ ಬೀಯಂತ್ ಸಿಂಗನನ್ನು ರಹಸ್ಯವಾಗಿ ಪಂಜಾಬ್ ಗಡಿಯಿಂದ ಹೆಲಿಕಾಪ್ಟರ್ ನಲ್ಲಿ ಪಾಕಿಸ್ತಾನಕ್ಕೆ ಲಿಫ್ಟ್ ಮಾಡಿ, ಅವನನ್ನು ಪಾಕಿಸ್ತಾನದಲ್ಲಿ ವಾರಗಟ್ಟಲೆ ಇಟ್ಟುಕೊಂಡು, ಬರೋಬ್ಬರಿ ತರಬೇತಿ ನೀಡಿ, step by step ಸೂಚನೆ ಕೊಟ್ಟು, rehearsal ಮಾಡಿಸಿಯೇ ಕಳಿಸಲಾಗಿತ್ತು. ಅವರು ಹೇಳಿದಂತೆ ಬಂದು ಮಾಡುವದಷ್ಟೇ ಅವನ ಕೆಲಸವಾಗಿತ್ತು. ಅದಕ್ಕೆ ಬೇಕಾದ ಇನ್ನಿತರ ವ್ಯವಸ್ಥೆಗಳನ್ನು ಅಂತರಾಷ್ಟ್ರೀಯ ಬೇಹುಗಾರಿಕೆ ಸಂಸ್ಥೆಗಳ covert operators ಅವರದ್ದೇ ರೀತಿಯಲ್ಲಿ ಮಾಡುತ್ತಿದ್ದರು.

ಹೀಗೆ ಪಾಕಿಸ್ತಾನ ಮತ್ತು ಅಮೇರಿಕಾ ಎರಡೂ ಕೂಡಿ, ಆಫ್ಘಾನಿಸ್ತಾನದಲ್ಲಿ ಸೊವಿಯಟ್ ರಶಿಯಾ ಹಣಿಯುವ ತಮ್ಮ ಪ್ಲಾನಿಗೆ ಎಲ್ಲಿ ಇಂದಿರಾ ಗಾಂಧಿ ಮುಳ್ಳಾಗಿ ಬಿಡುತ್ತಾರೋ ಅನ್ನುವ ಆತಂಕದಲ್ಲಿ, ಇಂದಿರಾ ಗಾಂಧಿಯನ್ನು ತೆಗೆಸಿಬಿಟ್ಟರು ಅಂತ ತಾರಿಕ್ ಅಲಿ ಅವರ ಕಲ್ಪನೆ. once again ಕಲ್ಪನೆ. ಆದರೆ ಆಗಿನ geopolitical ವಸ್ತುಸ್ಥಿತಿ ಗಮನಿಸಿದರೆ ಇದ್ದರೂ ಇರಬಹುದು ಅನ್ನಿಸುತ್ತದೆ. ತಾರಿಕ್ ಅಲಿ ಇನ್ನೂ ಹೆಚ್ಚಿನ ಕಲ್ಪನೆ ಮಾಡಿಕೊಂಡು covert operators, ಅವರ ತರಬೇತಿ ವಿಧಾನ ಎಲ್ಲ ವಿವರವಾಗಿ ಬರೆದಿದ್ದಾರೆ. ಅದು ಬೇರೆ ಬಿಡಿ.

ತಾರಿಕ್ ಅಲಿ ಕಲ್ಪಿಸಿಕೊಂಡಿರುವ ಥಿಯರಿಯಲ್ಲಿ ಭಯಾನಕ ಅನ್ನಿಸುವ ಒಂದು ಅಂಶವಿದೆ. ಅದು ಏನಾದರೂ ನಿಜವೇ ಆಗಿ, ಒಂದು ದಿವಸ ಹೊರಗೆ ಬಂದರೆ ಅದೊಂದು ದೊಡ್ಡ ಸ್ಪೋಟಕ explosive ಸುದ್ದಿ ಆಗುವದರಲ್ಲಿ ಯಾವದೇ ಸಂಶಯವಿಲ್ಲ.

ಅದೇನೆಂದರೆ, ಹಂತಕರಲ್ಲಿ ಒಬ್ಬನಾದ ಬೀಯಂತ್ ಸಿಂಗನನ್ನು, ಇಂದಿರಾ ಹತ್ಯೆಯ ನಂತರ, ಅಲ್ಲೇ ಇದ್ದ ರಕ್ಷಣಾ ಪಡೆಯವರು ಗುಂಡಿಟ್ಟು ಕೊಂದು ಬಿಟ್ಟರು. ಪರಿಸ್ಥಿತಿ ನಿಯಂತ್ರಿಸಲು ಅಂತ ಗುಂಡು ಹಾರಿಸಿದರು. ಅದರಲ್ಲಿ ಗುಂಡು ತಿಂದ ಬಿಯಾಂತ್ ಸಿಂಗ್ ಸತ್ತು ಹೋದನೇ? ಅಥವಾ ಬೀಯಂತ್ ಸಿಂಗನನ್ನು ಮುಗಿಸೇ ಬಿಡಿ ಅಂತ ಬೇರೆ ಎಲ್ಲಿಂದಲೋ ಆಜ್ಞೆ ಬಂದಿತ್ತೆ? ಲೇಖಕ ತಾರಿಕ್ ಅಲಿ ಅವರ ಕಲ್ಪನೆ ಪ್ರಕಾರ ಇಂದಿರಾ ಹತ್ಯೆಯ ಮಾಸ್ಟರ್ ಪ್ಲಾನ್ ಹಾಕಿದವರಿಗೆ ಬಿಯಾಂತ್ ಸಿಂಗ್ ಉಳಿಯುವದು ಬೇಕಾಗಿಯೇ ಇರಲಿಲ್ಲ. ಯಾಕೆಂದರೆ ಅವನು ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ನಾಮೀ ಬೇಹುಗಾರರನ್ನು ಭೆಟ್ಟಿಯಾಗಿದ್ದ. covert operations ಮಾಡುವ ವಿಶ್ವದ ಕೆಲವೇ ಕೆಲವು ಸ್ಪೆಷಲಿಸ್ಟಗಳ ಮುಖ ಪರಿಚಯ ಎಲ್ಲ ಅವನಿಗೆ ಇತ್ತು. ಅನೇಕ ರಹಸ್ಯಗಳನ್ನು ಅರಿತಿದ್ದ. ಮುಂದೊಂದು ದಿನ ಅವನು ಅದನ್ನೆಲ್ಲ ಯಾರ ಮುಂದಾದರೂ ಬಾಯಿ ಬಿಟ್ಟರೆ ಕಷ್ಟ ಅಂತ ಅವನನ್ನು 'ತೆಗೆದು' ಬಿಡುವಂತೆ ಇಂದಿರಾ ನಿವಾಸದ ರಕ್ಷಣಾ ಸಿಬ್ಬಂದಿಗೆ ಆಜ್ಞೆಯಾಗಿತ್ತು. ಹಾಗಿದ್ದರೆ ವಿದೇಶದ ಬೇಹುಗಾರರು ಭಾರತದ ರಕ್ಷಣಾ ಏಜನ್ಸಿಗಳನ್ನೂ ಸಹ infiltrate ಮಾಡಿದ್ದರೆ? ಅವುಗಳಲ್ಲೂ ಅವರ ಏಜೆಂಟಗಳು ಇದ್ದರೆ? ಅಂತವರು ಗದ್ದಾರಿ ಮಾಡಿಬಿಟ್ಟರೆ? ಅಂತೆಲ್ಲ ಯೋಚನೆಗಳನ್ನು ಹರಿಬಿಡುತ್ತಾರೆ ತಾರಿಕ್ ಅಲಿ. ಮತ್ತೆ ಬೀಯಾಂತ್ ಸಿಂಗ್ ಹತ್ಯೆ ಬಗ್ಗೆ ಅನೇಕ ಗೊಂದಲಗಳೂ ಇವೆ. ಅವನ್ನು ಮೊದಲು ಬಂಧಿಸಿ ನಂತರ ಕೊಲ್ಲಲಾಯಿತು ಅಂತಲೂ ಸುದ್ದಿಯಾಗಿತ್ತು.

ಒಟ್ಟಿನಲ್ಲಿ ಒಂದು ಇಂಟೆರೆಸ್ಟಿಂಗ್ ಮಾಹಿತಿ. 'ಹೀಗೂ ಆಗಿರಬಹುದೇ?' ಅಂತ ಅನ್ನಿಸದೇ ಇರುವದಿಲ್ಲ. ಚಿಕ್ಕ ಪುಸ್ತಕ. ಅದೂ ನಾಟಕದಂತೆ ಬರೆದಿದ್ದು. ಒಂದೆರೆಡು ಘಂಟೆಗಳಲ್ಲಿ ಓದಿ ಮುಗಿಸಿಬಿಡಬಹುದು. ಆದರೆ ಅದರಲ್ಲಿನ ಸಾಧ್ಯತೆಗಳು, ಅಂತರಾಷ್ಟ್ರೀಯ ಮಟ್ಟದ covert operations, ದೊಡ್ಡ ದೊಡ್ಡ ಷಡ್ಯಂತ್ರಗಳು ಇತ್ಯಾದಿಗಳ ಬಗ್ಗೆ ಯೋಚನೆ ಮಾಡಿದಂತೆ ತಲೆ ಗಿಂವ್ವೆನ್ನುತ್ತದೆ.

ಒಮ್ಮೊಮ್ಮೆ ಹೀಗಾಗುತ್ತದೆ. ಕೆಲವು ಖತರ್ನಾಕ್ ಲೇಖಕರಿಗೆ ಇಂತಹ ರೋಚಕ ಘಟನೆಗಳ ಬಗ್ಗೆ ಎಲ್ಲ ಮಾಹಿತಿ ಬರೋಬ್ಬರಿ ಸಿಕ್ಕಿರುತ್ತದೆ. ಆದರೆ ಎಲ್ಲವನ್ನೂ ಇದ್ದಕ್ಕಿದ್ದ ಹಾಗೆ ಬರೆದು ಬಿಟ್ಟರೆ ಏನೇನೋ ಸಮಸ್ಯೆಗಳು ಎದುರಾಗುತ್ತವೆ. ಕೋರ್ಟು, ಕೇಸು, ಅದು ಇದು ಅಂತ ರಗಳೆ. ಅದಕ್ಕೇ ಅಂತಲೇ ಇದ್ದದ್ದನ್ನು ಇದ್ದ ಹಾಗೆಯೇ ಬರೆದು, ಹೆಸರು ಗಿಸರು ಒಂದಿಷ್ಟು ಚೇಂಜ್ ಮಾಡಿ, ಕಾಲ್ಪನಿಕ ಅಂತ ಒಂದು ಲೇಬಲ್ ಅಂಟಿಸಿಬಿಡುತ್ತಾರೆ. ಅವರ ತಪ್ಪಲ್ಲ ಬಿಡಿ. ಇದೇ ಮಾದರಿಯಲ್ಲಿ ಜಾನ್ ಕೆನಡಿ ಹತ್ಯೆ (Kennedy Must Be Killed: A Novel by Chuck Helppie), ವಿಮಾನ ಸ್ಪೋಟದಲ್ಲಿ ಪಾಕಿಸ್ತಾನದ ಅಧ್ಯಕ್ಷ ಜಿಯಾ ಉಲ್ ಹಕ್ ಸಂಶಯಾಸ್ಪದ ಸಾವು (A Case of Exploding Mangoes by Mohammed Hanif) ಬಗ್ಗೆ ಒಳ್ಳೊಳ್ಳೆ ಪುಸ್ತಕಗಳು ಬಂದಿವೆ. ಕಾಲ್ಪನಿಕ ಅಂತ ಅವರು ಹೇಳಿಕೊಂಡಿದ್ದು ಬಿಟ್ಟರೆ ಸ್ವಲ್ಪ ಸಾಮಾನ್ಯ ಜ್ಞಾನ ಇರುವವರಿಗೂ ಎಲ್ಲ ಬರೋಬ್ಬರಿ ಗೊತ್ತಾಗಿ, ಸಂಚಿನ ಸೂತ್ರಧಾರಿಗಳು ಯಾರು, ಎಂತ ಅಂತ ಎಲ್ಲ ತಿಳಿದುಬಿಡುತ್ತದೆ. ಇದೂ ಅದೇ ಮಾದರಿಯ ಪುಸ್ತಕ ಇರಬಹುದೇ? ಗೊತ್ತಿಲ್ಲ ;)

ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆ R&AW ದ ಸ್ಥಾಪಕ ಮತ್ತು ಇಂದಿರಾ ಗಾಂಧಿಯ ಪರಮಾಪ್ತ, ಅವರ ಸುತ್ತ ಇರುತ್ತಿದ್ದ ಕಾಶ್ಮೀರಿ ಕೂಟದಲ್ಲಿನ ಪ್ರಮುಖ, ದಿವಂಗತ ರಾಮೇಶ್ವರ್ ನಾಥ್ ಕಾವ್ ಇಂದಿರಾ ಹತ್ಯೆಯ ಬಗ್ಗೆ most authentic & real ಅನ್ನುವಂತಹ ಒಂದು ಪುಸ್ತಕ ಬರೆದಿಟ್ಟಿದ್ದಾರಂತೆ. ಆದರೆ ಅವರು ಒಂದು ಕಂಡೀಶನ್ ಹಾಕಿ ಸತ್ತು ಹೋದರು. 'ನನ್ನ ಸಾವಿನ ಇಪ್ಪೈತ್ತೈದು ವರ್ಷಗಳ ನಂತರವೇ ಇದನ್ನು ಪ್ರಕಟಿಸಬಹುದು. ಅಲ್ಲಿಯವರೆಗೆ ಸೀಲ್ ಮಾಡಿ ಇಡತಕ್ಕದ್ದು,' ಅಂತ. ಅದೇನೇನು ಸ್ಪೋಟಕ ಮಾಹಿತಿ ಬರೆದಿದ್ದಾರೋ ಭಾರತದ ಗೂಢಚರ್ಯೆಯ ಪಿತಾಮಹ ಕಾವ್. ಹಾಗಂತ ಅವರು R&AW  ದ ನಿವೃತ್ತ ಅಧಿಕಾರಿ ಯಾದವ್ ಅವರಿಗೆ ಹೇಳಿಕೊಂಡಿದ್ದರಂತೆ. ಅದನ್ನು ಯಾದವ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಅದೂ ಒಂದು ಅದ್ಭುತ ಪುಸ್ತಕ. Mission R&AW by RK Yadav. ಆ ಪುಸ್ತಕದಿಂದ ಆಯ್ದ ಒಂದು ಬರಹ ಇಲ್ಲಿದೆ ನೋಡಿ.