Wednesday, January 21, 2015

ಒಬಾಮಾ ಮೋದಿ ಮಧ್ಯೆ ಸಿಕ್ಕಾಪಟ್ಟೆ ಭಯಂಕರ ಹರಟೆ

'ಭಾರತದ ಗಣರಾಜ್ಯೋತ್ಸವಕ್ಕೆ ಆಗಮಿಸಬೇಕು,' ಅಂತ ಆಹ್ವಾನ ಬಂದೈತಿ ಅಂತ ಇಲ್ಲೆ ಬರಾಕ್ ಒಬಾಮಾ ಸಾಹೇಬರು ಭಾಳ ಖುಷಿಯೊಳಗ ಇದ್ದಾರ. ಒಮ್ಮೆ ಮೊದಲೂ ಅವರು ಭಾರತಕ್ಕೆ ಹೋಗಿ ಬಂದಾರ. ಆದ್ರ ಆವಾಗ ಏನೂ ಮಜಾ ಬಂದಿದ್ದಿಲ್ಲ ಅಂತ ಹೇಳಿದ್ದರು. ಮಜಾ ಹ್ಯಾಂಗ ಬರಾಕ್ ಸಾಧ್ಯ ಇತ್ತು? ಇದ್ದವಾ ಆವಾ MMS (ಮನಮೋಹನ ಸಿಂಗ). ಒಟ್ಟೇ ಮಾತೇ ಆಡ್ತಿದ್ದಿಲ್ಲ ಆ ಪುಣ್ಯಾತ್ಮ. ಮಾತಾಡೋದು ದೂರ ಉಳಿತು. ಬಾಯೇ ಬಿಡ್ತಿದ್ದಿಲ್ಲ. ಇನ್ನು ಅಕಿ ಸೋನಿಯಾ ಗಾಂಧಿ ಮತ್ತ ಅಕಿ ಮಬ್ಬ ಮಗ ರಾಹುಲ್ ಗಾಂಧಿ. ಅವರ ಜೋಡಿ ಇವಾ ಶಾಣ್ಯಾ ಒಬಾಮಾ ಏನು ಮಾತಾಡಬೇಕು? ಕೆಟ್ಟ ಬೋರ್ ಹೊಡಿಸಿಕೊಂಡು, ಕೆಟ್ಟ ಮಾರಿ ಮಾಡಿ ಬಂದಿದ್ದ. ಅಲ್ಲೆ ಮುಂಬೈದಾಗ ಸಣ್ಣು ಹುಡುಗುರ ಜೋಡಿ ಕೂಡಿ ಮಾಡಿದ ಮೀನುಗಾರರ ಡಾನ್ಸ್ ಒಂದೇ ಆ ಟ್ರಿಪ್ಪಿನ ಹೈಲೈಟ್ ಅಂತ ಹೇಳಿದ್ದ. ಅದು ಬಿಟ್ಟರೆ ಬಾಕಿ ಎಲ್ಲಾ ಹಡಬಿಟ್ಟಿ ಇತ್ತ ನೋಡಪಾ ಅಂತ ಬ್ಯಾಸರ ಮಾಡಿಕೊಂಡು ಹೇಳಿದ್ದಾ ಒಬಾಮಾ.ಈಗ ಸ್ವಲ್ಪ ತಿಂಗಳದ ಹಿಂದ ಮೋದಿ ಸಾಹೇಬರು ಏನು ಆರಿಸಿ ಬಂದರು ನೋಡ್ರೀ ಫುಲ್ ಮಾಹೋಲೇ ಬದಲಾಗಿಬಿಡ್ತು. ಮೋದಿ ಸಾಹೇಬರಿಗೆ ಒಬಾಮಾನೇ, 'ಬರ್ರಿ ಸರ್ರಾ. ನಮ್ಮ ದೇಶಕ್ಕ ಒಂದು ಭೆಟ್ಟಿ ಕೊಡ್ರೀ,' ಅಂತ ಹೇಳಿ ಆಹ್ವಾನ ಕೊಟ್ಟಿದ್ದ. ಅದರ ಪ್ರಕಾರ ಮೋದಿ ಸಾಹೇಬರೂ ಬಂದರು ಅಮೇರಿಕಾಗೆ. ಅದೇನು ಮೋಡಿ ಮಾಡಿ ಹೋದರು ಅಂದ್ರ ಏನು ಕೇಳ್ತೀರಿ. ಒಬಾಮಾನ್ನೂ ಹಿಡದು ಎಲ್ಲರೂ ಸಿಕ್ಕಾಪಟ್ಟೆ ಫುಲ್ ಇಂಪ್ರೆಸ್ ನೋಡ್ರೀ. ಒಬಾಮಾ ಜೋಕ್ ಮಾಡವಾ, 'ಈ ಮೋದಿ ಇನ್ನೂ ಸ್ವಲ್ಪ ದಿವಸ ಇಲ್ಲೇ ಇದ್ದ ಅಂದ್ರ ಇಲ್ಲಿ ಮಂದಿ ಅವನ್ನೇ ಅಮೇರಿಕಾದ ಪ್ರೆಸಿಡೆಂಟ್ ಮಾಡಿ ಬಿಡ್ತಾರ ನೋಡ್ರೀ. ಯಪ್ಪಾ! ಏನು ಗಂಡ ಆದಮೀ ಈ ಮೋದಿ. ಭಾರಿ ಅದಾನ,' ಅಂತ ತುಂಬು ಮನಸ್ಸಿನಿಂದ ಹೊಗಳತಿದ್ದ. 'ಇಂದಿರಾ ಗಾಂದಿ ನಂತರ ಯಾರರೆ ಗಂಡು ಮನುಷ್ಯಾ ಪ್ರಧಾನಿ ಆಗಿದ್ದ ಅಂದ್ರ ಇವನೇ ನೋಡ್ರೀ, ಮೋದಿ' ಅಂತ ಹೆಚ್ಚಿಗಿ ತಾರೀಫ್ ಬ್ಯಾರೆ.

ಮೋದಿ ಸಾಹೇಬರು ಇಲ್ಲೆ ಬಂದಾಗ ಅವರಿಗೆ ಮತ್ತ ಒಬಾಮಾಗ ಭಾರಿ ದೋಸ್ತಿ ಆಗಿಬಿಡ್ತು. ಭಾರಿ ಅಂದ್ರ ಭಾರಿ ಕ್ಲೋಸ್ ದೋಸ್ತಿ. ಮೊದಮೊದಲು ಭೆಟ್ಟಿ ಆದಾಗ ಭಾಳ ಫಾರ್ಮಲ್ ಆಗಿ 'ಮೋದಿಯವರ, ಮೋದಿ ಸರ್' ಅನ್ನವಾ ಒಬಾಮಾ. ಮೋದಿಯವರೂ  ಸಹ 'ಒಬಾಮಾ ಅವರ, ಪ್ರೆಸಿಡೆಂಟ್ ಸಾಹೇಬರ' ಅಂತ ಫುಲ್ ಫಾರ್ಮಲ್ ಆಗೇ ಮಾತಾಡಿಸೋರು. ಆದ್ರ ಇದ್ದ ಸ್ವಲ್ಪೇ ದಿವಸದಾಗ ಭಾಳ ಆತ್ಮೀಯ ದೋಸ್ತಿ ಆಗಿ, ಮೋದಿ ಮತ್ತ ಒಬಾಮ ಭಾಳ ಕೇವಲ ಆಗಿಬಿಟ್ಟರು. ಅದು ಎಷ್ಟು ಕೇವಲ ಅಂದ್ರ ಈಗ ಇಬ್ಬರು ಹಳೆ ದೋಸ್ತರಾಂಗ ಫುಲ್ ಏಕವಚನದಾಗ ಮಾತಾಡ್ಲಿಕ್ಕೆ ಶುರು ಮಾಡಿಬಿಟ್ಟಾರ. ಒಬಾಮಾ ಈ ಟ್ರಿಪ್ ಮುಗಿಸಿಕೊಂಡು ಬರೋ ತನಕಾ ಇಬ್ಬರೂ 'ಲೇ' ಹಚ್ಚಿ ಮಾತಾಡಲಿಕ್ಕೆ ಶುರು ಮಾಡಿಬಿಟ್ಟರೂ ಆಶ್ಚರ್ಯ ಇಲ್ಲ ನೋಡ್ರೀ. ಒಬಾಮಾ ಅವರು, 'ಲೇ ಮೋದ್ಯಾ, ಲೇ ನಾರ್ಯಾ' ಅನ್ನೋದು. ಅದಕ್ಕೆ ಉತ್ತರವಾಗಿ ಮೋದಿ, 'ಲೇ ಬರ್ಕ್ಯಾ, ಲೇ ಒಬ್ಯಾ' ಅಂತ ಅಂದು, ಡುಬ್ಬಾ ಚಪ್ಪರಸಿ ಮಾತಾಡಾಕ ಹತ್ತಿದರ ಏನೂ ಆಶ್ಚರ್ಯ ಇಲ್ಲವೇ ಇಲ್ಲ ನೋಡ್ರೀ. ಅಷ್ಟು ದೋಸ್ತಿ ಆಗಾಕತ್ತೈತಿ ಇಬ್ಬರು ನಾಯಕರ ನಡುವೆ.

ಈಗ ಒಬಾಮ ಬ್ಯಾರೆ ಫುಲ್ ಖಾಲಿ ಕುಂತಾನ. ಯಾಕ ಅಂದ್ರ ಅವಂದು ಇದು ಸೆಕೆಂಡ್ ಟರ್ಮ್ ಅಂದ್ರ ಎರಡನೇ ಅವಧಿ ನೋಡ್ರೀ. ಇದೇ ಲಾಸ್ಟ್. ಮುಂದೆ ಮತ್ತೊಮ್ಮೆ ಪ್ರೆಸಿಡೆಂಟ್ ಆಗಬೇಕು ಅಂದ್ರೂ ಅದಕ್ಕೆ ಕಾನೂನಿನ ಪ್ರಕಾರ ಅವಕಾಶ ಇಲ್ಲ. ಹಾಂಗಾಗಿ ಒಬಾಮಾಗ ಮುಂದಿನ ಚುನಾವಣೆ ಚಿಂತಿ ಅಂತೂ ಇಲ್ಲೇ ಇಲ್ಲ. ಹಾಂಗಾಗಿ ಅವನೂ ಆರಾಮ ಅದಾನ. ಹಿಂದೆ ಬಿಲ್ ಕ್ಲಿಂಟನ್ ಸಹಿತ ಸೆಕೆಂಡ್ ಟರ್ಮ್ ಒಳಗೇ ಎಲ್ಲಾ ಲಫಡಾ ಮಾಡಿಕೊಂಡು ಕುಂತಿದ್ದ. ಅವಂಗೂ ಕೆಲಸ ಇರಲಿಲ್ಲ. ಅವನ ಆಫೀಸಿನ್ಯಾಗ ಕೆಲಸಾ ಮಾಡೋ ಮೋನಿಕಾ ಲೆವಿನಸ್ಕಿ ಅನ್ನೋ ಹುಡುಗಿಯನ್ನು ಪಟಾಯಿಸಿಬಿಟ್ಟ. ಕ್ಲಿಂಟನ್ ಅಂದ್ರ ಆವಾ ದೊಡ್ಡ ರಸಿಕರ ರಾಜ ಕಾಮಣ್ಣ ಇದ್ದಂಗ. ಅವನೌನ್! ಬಾಯಾಗ ಇಟ್ಟುಕೊಳ್ಳೋ ಸಿಗಾರ್ ಆ ಮೋನಿಕಾ ಲೆವಿನಸ್ಕಿ 'ಬ್ರಹ್ಮ ರಂಧ್ರ'ದಲ್ಲಿ ಇಟ್ಟು, ಅದನ್ನ ಮೂಸಿ ನೋಡಿ, ಅಕಿ ಜೋಡಿ ಜಮ್ಮ ಚಕ್ಕಾ ಮಾಡಿ, ಆಮ್ಯಾಲೆ ಅದೇ ಸಿಗಾರ್ ಸೇದಿ..... ಅಯ್ಯೋ! ರಾಮ ರಾಮ! ವೈಟ್ ಹೌಸ್ ಒಳಗೇ ಒಳ್ಳೆ ಮಲಯಾಳೀ ಬ್ಲೂಫಿಲಂ ಚಿತ್ರದ ಶೂಟಿಂಗ್ ಮಾಡಿಬಿಟ್ಟ. ಆಮೇಲೆ ಅದು ಔಟ್ ಆಗಿಬಿಡ್ತು. ಕ್ಲಿಂಟನ್ ಮಂದಿಗೆ ಮಳ್ಳು ಮಾಡಿ ರೂಢಿ ಐತಿ ಅಂತ ತಿಳ್ಕೊಂಡು ಸುಳ್ಳು ಹೇಳಿದ. 'ನನಗ ಮತ್ತ ಆ ಹುಡುಗಿ ಮೋನಿಕಾ ಲೆವಿನಸ್ಕಿಗೆ ಏನೂ ಸಂಬಂಧ ಇಲ್ಲ. ಸುಮ್ಮನೆ ನನ್ನ ಹೆಸರು ಕೆಡಸಾಕ ಸುಳ್ಳ ಸುಳ್ಳೇ ಸುದ್ದಿ ಹಬ್ಬಿಸಿದ್ದಾರೆ,' ಅಂತ ಹೇಳಿ ತಪ್ಪಿಸಿಕೊಳ್ಳಲಿಕ್ಕೆ ನೋಡಿದ. ಅಮೇರಿಕಾದ ಕೆನ್ ಸ್ಟಾರ್ ಅನ್ನೋ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಲ್ ಕ್ಲಿಂಟನ್ನನ ಹಿಡಕೊಂಡು ಕಾಡಿಬಿಟ್ಟ. ಅಕಿ ಮೋನಿಕಾ ಲೆವಿನಸ್ಕಿ ಬ್ಯಾರೆ ಭಾರಿ ಜಾಬಾದಿದ್ದಳು. ತನ್ನ ಒಂದು ಹಳೆ ವಸ್ತ್ರ ಕಾದು ಇಟ್ಟಿದ್ದಳು. ಅದನ್ನೇ ಸಾಕ್ಷಿ ಅಂತ ಹೇಳಿ ತೊಗೊಂಡು ಹೋಗಿ ಕೊಟ್ಟೇ ಬಿಟ್ಟಳು. DNA ಟೆಸ್ಟ್ ಮಾಡಿಸಿ, 'ಕ್ಲಿಂಟನ್ ಸಾಹೇಬರ, ಇಕಿ ಮೋನಿಕಾ ಅರಬಿ (ವಸ್ತ್ರ) ಮ್ಯಾಲೆ ನಿಮ್ಮ 'ಆಯಿಲ್' ಹ್ಯಾಂಗ ಲೀಕ್ ಆಗೇತ್ರೀ?????' ಅಂತ ಕೆನ್ ಸ್ಟಾರ್ ರಿವರ್ಸ್ ಫಿಟ್ಟಿಂಗ್ ಇಟ್ಟ ಕೂಡಲೇ ಸಿಕ್ಕೊಂಡುಬಿದ್ದ ನೋಡ್ರೀ ಕ್ಲಿಂಟನ್. ಆತು ಇನ್ನೂ ಸುಳ್ಳು ಹೇಳಿದ್ರ ನಡಿಯಂಗಿಲ್ಲ ಅಂತ ಹೇಳಿ, ಪಬ್ಲಿಕ್ ಮುಂದ ಬಂದು, ಕೈಯೆತ್ತಿ ದೊಡ್ಡ ನಮಸ್ಕಾರ ಹಾಕಿ, 'ತಪ್ಪಾತ್ರೀ. ಕ್ಷಮಾ ಮಾಡ್ರೀ. ಆ ಹುಡುಗಿ ಜೊತಿ ನಾ ಜಮ್ಮಾ ಚಕ್ಕಾ, ಜಿಂಗಾ ಚಿಕ್ಕಾ ಎಲ್ಲಾ ಮಾಡಿಬಿಟ್ಟೆ. ಹೇಳಾಕ ನಾಚಿಗಿ ಆಗಿ ಮುಚ್ಚಿಟ್ಟು ಸುಳ್ಳ ಹೇಳಿದೆ. ಕ್ಷಮಾ ಮಾಡ್ರೀ!' ಅಂತ ಅಂಬೋ ಅಂದ. 'ಹ್ಯಾಂಗೂ ಇನ್ನು  ಕೇವಲ ಎರಡೇ ವರ್ಷ ಅದ ನಿಂದು. ರಿಟೈರ್ಮೆಂಟ್ ಹತ್ರ ಬಂದೈತಿ. ಹಾಳಾಗಿ ಹೋಗು,' ಅಂತ ಅಮೇರಿಕಾ ಮಂದಿ ಸಹಿತ ಅವನ್ನ ಬಿಟ್ಟು ಬಿಟ್ಟರು.

ಸೆಕೆಂಡ್ ಟರ್ಮ್ ಒಳಗ ಕೆಲಸವಿಲ್ಲದೆ ಹೀಂಗೆಲ್ಲ ಲಫಡಾ ಮಾಡಿಕೊಂಡು ಕುಂದರ್ತಾರ ನೋಡ್ರೀ ಈ ಪ್ರೆಸಿಡೆಂಟ್ ಮಂದಿ. ಆದ್ರ ಒಬಾಮಾ ಅಂತಾದ್ದೆಲ್ಲ ಲಫಡಾ ಮಾಡಿಕೊಂಡಿಲ್ಲ. ಮತ್ತ ಎಲ್ಲರೆ ಬ್ಯಾರೆ ಹುಡುಗಿ ಹಿಂದ ಹೊಂಟ್ರ ಒಬಾಮಾನ ಹೆಂಡತಿ ಮಿಷೆಲ್ ಜಿಗದು ಜಿಗದು ಒದಿತಾಳ. ಬಿಡಂಗಿಲ್ಲ ಅಕಿ. ಭಾರಿ ಖಡಕ್ ಹೆಣ್ಣುಮಗಳು ಅಕಿ. ತಾನೆ ಆರು ಫೂಟ್ ಮ್ಯಾಗ  ಇದ್ದಾಳ. ಬಾಸ್ಕೆಟ್ ಬಾಲ್ ಪ್ಲೇಯರ್ ಅಕಿ ಮತ್ತ ಅಕಿ ಅಣ್ಣ. ಒಬಾಮಾ ಏನರೆ ಬೇಲಿ ಹಾರೋ ಕೆಲಸ ಮಾಡಲಿಕ್ಕೆ ಹೊಂಟ ಅಂದ್ರ ಅಕಿ ಬಿಡಂಗಿಲ್ಲ. ಜಿಗದು ಜಿಗದು ಕುಂಡಿಗೇ ಒದಿತಾಳ. ಜಾಡಿಸಿ ಜಾಡಿಸಿ ಒದಿತಾಳ. ಮತ್ತ ಒಬಾಮಾ ಭಾರಿ ಸಂಭಾವಿತ ಮನುಷ್ಯ. ಫುಲ್ ಫ್ಯಾಮಿಲಿ ಮ್ಯಾನ್. ಅವನೂ ಅದಕ್ಕೇ ಸುಮ್ಮ ಕುಂತಿರ್ತಾನ.

ಆದ್ರ ಒಬಾಮಾಗ ಈಗಿತ್ತಲಾಗ ಇಲ್ಲೆ ಕೆಟ್ಟ ಬೋರ್ ಹೊಡಿಯಾಕ ಹತ್ತೈತಿ. ಯಾರದ್ದಾರ ಜೋಡಿ ಮಾತಾಡಿ ಹರಟಿ ಹೊಡಿಬೇಕು, ಮಷ್ಕಿರಿ ಮಾಡಬೇಕು ಅಂತ ಭಾಳ ಅನ್ನಿಸ್ತೈತಿ ಅವಂಗ. ಅದರ ಮ್ಯಾಲೆ ಮೋದಿ ಅಂತೂ ಭಾಳ ಸೇರಿ ಬಿಟ್ಟಾನ. ಮತ್ತ ಸದ್ಯ ಇನ್ನು ಸ್ವಲ್ಪೇ ಸ್ವಲ್ಪ ದಿವಸದಾಗ ಭಾರತಕ್ಕೆ ಬರೋದು ಐತಿ, ರಿಪಬ್ಲಿಕ್ ಡೇ ಸಲುವಾಗಿ. ಎಲ್ಲಾ ಆತ ಅಂತ ಹೇಳಿ ಮ್ಯಾಲಿಂದ ಮ್ಯಾಲೆ ಮೋದಿ ಅವರಿಗೆ ಫೋನ್ ಹಚ್ಚೇ ಹಚ್ಚತಾನ ಒಬಾಮಾ. ಮೋದಿ ಸಹಿತ ಅವನ್ನ ಭಾಳ ಹಚ್ಚಿಕೊಂಡಾರ. ಅವರು ಕೆಲಸದಾಗ ಭಾಳ ಬ್ಯುಸಿ ಇದ್ದರೂ ಹ್ಯಾಂಗೋ ವ್ಯಾಳ್ಯಾ ಮಾಡಿಕೊಂಡು ಒಬಾಮಾ ಜೋಡಿ ಮಾತಾಡ್ತಾರ.

ಮೊನ್ನೆ ಹಾಂಗss ಆತು. ಒಬಾಮಾ ಮೋದಿಗೆ ಪೋನ್ ಮಾಡಿದ್ದ. ಮಾಡಿ, 'ಏ ಮೋದಿ, ಹ್ಯಾಂಗ ಅದೀಪಾ ದೋಸ್ತ? ನನಗ ಒಂದು ಮಾತು ಹೇಳ ನೀ. ನಾ ಬಂದು ನಿಮ್ಮ ದಿಲ್ಲಿ ಏರ್ಪೋಟಿನ್ಯಾಗ ಯಾವ ಪ್ಲಾಟಫಾರ್ಮ್ ಮ್ಯಾಲೆ ನನ್ನ ವಿಮಾನ ಹಚ್ಚಿ ಬರಲಿ? ಹಾಂ?' ಅಂದು ಬಿಟ್ಟ.

ಇದೇನು ಜೋಕೋ? ಖರೆನೋ? ಅಂತ ಮೋದಿ ತಲಿ ಕೆರಕೊಂಡರು.

'ಏನಪಾ ನೀ ಒಬಾಮಾ? ಪ್ಲಾಟಫಾರ್ಮ್ ಮ್ಯಾಲೆ ಹಚ್ಚಾಕ ನೀ ಏನು ರೇಲ್ವೇ ಸ್ಟೇಷನ್ನದಾಗ ಲ್ಯಾಂಡ್ ಆಗಾಕತ್ತಿಯೇನೋ? ಸುಮ್ಮ ಬಾರಪಾ. ದಿಲ್ಲಿ ಏರ್ಪೋರ್ಟ್ ಒಳಗ VIP ರನ್ ವೇ ದಾಗ ಲ್ಯಾಂಡ್ ಆಗು. ಆಮ್ಯಾಲೆ ಬೇಕಾದ್ರ ನಿನಗ ಹ್ಯಾಂಗ ಬೇಕು ಹಾಂಗ ವಿಮಾನ ಹಚ್ಚೆರೆ ಬಾ ಇಲ್ಲಾ ನಿನ್ನ ವಿಮಾನಾ ಅಡ್ಡಡ್ಡ ಮಲಗಿಸಿಯಾರೆ ಬಾ. ತಿಳೀತ?' ಅಂತ ಕೇಳಿದರು ಮೋದಿ.

'ಹೇ! ಹೇ! ಹಾಂಗೆ ಸುಮ್ಮನೆ ಜೋಕ್ ಹೊಡದೆ. ಗೊತ್ತೈತಿ. ಆತು ಇನ್ನೇನು ಮೂರ್ನಾಕು ದಿವಸ ಐತಿ. ಆಮ್ಯಾಲೆ ಬಂದೇ ಬಿಡ್ತೇನಿ. ಮಸ್ತ ಎಂಜಾಯ್ ಮಾಡೋಣ. ಓಕೆ?' ಅಂತ ಹೇಳಿ ನಕ್ಕೋತ್ತ ಫೋನ್ ಇಟ್ಟ ಒಬಾಮಾ.

ಯಾಕೋ ಭಾಳ ತಲಿ ತಿನ್ನದೇ, ಲಗೂನ ಫೋನ್ ಇಟ್ಟನಪಾ ನಮ್ಮ ದೋಸ್ತ ಅಂತ ಹೇಳಿ ಮೋದಿ ಸಾಹೇಬರು ತಮ್ಮ ಕೆಲಸ ಮಾಡ್ಲಿಕತ್ತರು.

ಏನು ಒಂದು ನಿಮಿಷ ಆಗಿತ್ತೋ ಇಲ್ಲೋ. ಮತ್ತ ಅವರ ಫೋನ್ ರಿಂಗಾತು. ನೋಡಿದರೆ ಮತ್ತೆ ಒಬಾಮಾ.

'ಏನೋ ಮಾರಾಯಾ? ಈಗರೆ ಮಾತಾಡಿ ಇಟ್ಟಿ. ಮತ್ತ ಏನು ಈಗ?' ಅಂದ್ರು ಮೋದಿ.

'ಏ ಮೋದಿ, ಲ್ಯಾಂಡ್ ಆಗಿ, ಏರ್ಪೋರ್ಟ್ ಹೊರಗ ಬಂದ ಕೂಡಲೇ ನಿಮ್ಮ ಮನಿಗೆ ಬರಾಕ ಆಟೋ ರಿಕ್ಷಾ ತೊಗೊಳ್ಳಿ ಏನು? ನಿಮ್ಮ ಊರಾಗ ಆಟೋಗಳಿಗೆ ಮೀಟರ್ ಹಾಕ್ತಾರೋ ಅಥವಾ ಮೊದಲೇ ರೇಟ್ ಫಿಕ್ಸ್ ಮಾಡ್ಕೊಂಡೇ ಹತ್ತಬೇಕೋ????' ಅಂದು ಬಿಟ್ಟ.

ಅಲಲಲಾ! ಒಬಾಮಾ. ಭಾಳ ಮಷ್ಕಿರಿ ಮಾಡಾಕತ್ತಿ. ಎಲ್ಲಾ ತಿಳ್ಕೊಂಡೀ. ಆದರೂ ಸುಮ್ಮ ಮಷ್ಕಿರಿ ಅಲ್ಲಾ? - ಅಂತ ಅಂದುಕೊಂಡರು ಮೋದಿ.

'ನೀ ಯಾಕ ಆಟೋದಾಗ ಬರ್ತಿಯೋ? ಎಲ್ಲಾ ಲಿಮೋಸಿನ್ ಗಾಡಿ ಬಂದು ನಿನ್ನ ಪಿಕಪ್ ಮಾಡಿಕೊಂಡು ಹೋಗ್ತಾವ. ಅದರಾಗ ಆರಾಮ ಬಾ ನೀ. ಆತ?' ಅಂದ್ರು ಮೋದಿ.

'ಹೇ! ಹೇ! ಓಕೆ. ಅಂತೂ ಹಲ್ಕಟ್ ಆಟೋ ರಿಕ್ಷಾ ಮಂದಿ ಜೋಡಿ ಗುದ್ದಾಡೋದು ಇಲ್ಲ ಅಂತಾತು. ಥ್ಯಾಂಕ್ಸ್ ಮೋದಿ ಭಾಯ್!' ಅಂತ ಹೇಳಿ ಒಬಾಮಾ ಫೋನ್ ಇಟ್ಟಾ.

'ಏ ಅಮಿತ್! ಈ ಒಬಾಮಾನ ಒಮ್ಮೆ ಧಾರವಾಡಕ್ಕೆ ಕರಕೊಂಡು ಹೋಗಿ ಬಿಟ್ಟ ಬಾರಲೇ. ಅಲ್ಲಿ ಆಟೋ ರಿಕ್ಷಾ ಮಂದಿ ಭಾಳ ಖತರ್ನಾಕ. ಮೀಟರ್ ಗೀಟರ್ ಇಲ್ಲೇ ಇಲ್ಲ. ಮ್ಯಾಲಿಂದ ಜಗಳ. ಅವರ ಜೋಡಿ  ಜಗಳಾಡಿ ಬಂದ್ರ ಬುದ್ಧಿ ಬರತೈತಿ ನಮ್ಮ ದೋಸ್ತಗ. ಇಂಡಿಯಾಕ್ಕೆ ಬರೋದೈತಿ ಅಂತ ಭಾಳ ಖುಷಿ ಒಳಗ ಅದಾನು ಮಗಾ ಒಬಾಮಾ,' ಅಂತ ಅಲ್ಲೇ ಇದ್ದ ಅಮಿತ್ ಷಾಗೆ ಹೇಳಿದರು. ಅಮಿತ್ ಷಾ ಸುಮ್ಮ ನಕ್ಕ.

ಮತ್ತ ಫೋನ್ ರಿಂಗಾತು. ಮತ್ತೆ ಒಬಾಮಾನೇ ಫೋನ್ ಮಾಡಿದನೋ ಏನೋ ಅಂತ ನೋಡಿದರು. ನೋಡಿದರ ಶಶಿ ತರೂರ್ ಫೋನ್ ಮಾಡಿದ್ದ.

'ಏನಪಾ ಶಶಿ? ಏನೋ ಸುದ್ದಿ?' ಅಂದ್ರು ಮೋದಿ.

'ಮೋದಿ ಸರ್ರಾ, ನಾನು ನಾಲ್ಕನೇ ಮದವಿ ಮಾಡಿಕೊಳ್ಳೋಣ ಅಂತ ಹೇಳಿ ನನ್ನ ಕುಂಡಲಿಯಾಗ ಗುರು ಹುಡುಕಾಕತ್ತಿದ್ದೆರೀ. ಅವನೌನ್ ಶನಿ ಬಂದು ಸೇರಿಕೊಂಡು ಬಿಟ್ತೈತ್ರೀ. ಈ ಶನಿಂದ ನನ್ನ ಕಾಪಾಡ್ರೀ ಸರ್ರಾ,' ಅಂತ ಶಶಿ ತರೂರ್ ಹೊಯ್ಕೊಂಡ.

'ಯಾವ ಶನಿನೋ?' ಅಂತ ಕೇಳಿದರು ಮೋದಿ.

'ಸುಬ್ರಮಣಿಯನ್ ಸ್ವಾಮಿರೀ. ಶನಿ ಗತೆ ಕಾಡಾಕತ್ಯಾನ. ನನ್ನ ಹೆಂಡತಿ ಸಾವಿನ ಕೇಸ್ ಮತ್ತ reopen ಮಾಡಿಸಿ, ಹಾಕ್ಕೊಂಡು ಜಡಿಯಾಕತ್ತಾನ. ಅವಂಗ ಸ್ವಲ್ಪ ಸುಮ್ಮ ಕುಂದ್ರು ಅಂತ ಹೇಳ್ರೀ. ಇಲ್ಲಂದ್ರ ನನ್ನ ಹಾಲತ್ ಪೂರ್ತ ಬರ್ಬಾದ್ ಆಕ್ಕೈತ್ರೀ,' ಅಂತ ಶಶಿ ತರೂರ್ ಬೊಂಬಡಾ ಹೊಡೆದ.

'ಹೋಗ್ಗೋ! ಆವಾ ಸುಬ್ರಮಣಿಯನ್ ಸ್ವಾಮೀ ಯಾರ ತಾಬಾಕ್ಕೂ ಬರೋದಿಲ್ಲ ಮಾರಾಯಾ. ಯಾರ ಮಾತೂ ಕೇಳಂಗಿಲ್ಲ ಆವಾ. ನೀ ಏನೂ ತಪ್ಪ ಮಾಡಿಲ್ಲ ಅಂದ ಮ್ಯಾಲೆ ನೀ ಯಾಕ ಹೆದರತಿಯೋ? ಆರಾಮ ಇರು ನೀ. ಈಗ ಇಡ್ಲ್ಯಾ? ಅಂದ್ರ ಫೋನ್ ಇಡ್ಲ್ಯಾ ಅಂತ. ಇಡ್ಲ್ಯಾ? ಕೆಲಸ ಭಾಳ ಐತಿ,' ಅಂತ ಹೇಳಿ ಮೋದಿ ಲಗೂ ಲಗೂ ಕಳಚಿಕೊಳ್ಳಾಕ ನೋಡಿದರು.

ಇನ್ನೂ 'ಇಡೋದು' ಏನು ಬಾಕಿ ಐತಿ? ಎಲ್ಲರೂ ಕೂಡೆ ಮಸ್ತ ಬತ್ತಿ ಇಟ್ಟು ಬಿಟ್ಟೀರಿ. ನಿಮ್ಮೌರಾ! - ಅಂತ ಮನಸ್ಸಿನಲ್ಲೇ ಅಂದುಕೊಂಡ ತರೂರ್ ಫೋನ್ ಇಟ್ಟ.

'ಲೇ! ಅಮಿತ್! ಸುಬ್ರಮಣಿಯನ್ ಸ್ವಾಮೀ ವಕ್ಕರಿಸಿಕೊಂಡ ಅಂದ್ರ ಅಷ್ಟೇ ಮತ್ತ. ಅವನೌನ್! ಎಲ್ಲ ಶನಿ, ಪಂಚಮ ಶನಿ, ಅಷ್ಟಮ ಶನಿ, ನವಮ ಶನಿ, ಸಾಡೇ ಸಾತಿ ಶನಿ ಎಲ್ಲಾ ಕೂಡೆ ಬಂದಂಗ ನೋಡಲೇ. ಇವನ ಕಥಿ ಮುಗೀತ ನೋಡಲೇ' ಅಂತ ಹೇಳಿದರು ಮೋದಿ.

'ಈ ಯಬಡ ತರೂರ್ ಖರೇ ಅಂದರೂ 'external affairs' ಮಿನಿಸ್ಟರ್ ನೋಡಪಾ. ಹೋಗಿ ಹೋಗಿ ಪಾಕಿಸ್ತಾನದ ಯಾರೋ ಲೇಡಿ ಜರ್ನಲಿಸ್ಟ್ ಜೋಡಿ affair ಲಫಡಾ ಮಾಡಿಕೊಂಡು ಈಗ ತ್ರಾಸ ಪಡಾಕತ್ತಾನ. ಅವನ ಕರ್ಮ. ನಾವೇನ ಮಾಡೋಣ?' ಅಂತ ಹೇಳಿದ ಅಮಿತ್ ಷಾ.

ಇದೆಲ್ಲ ಆಗಿ ಮರುದಿನ ಮುಂಜಾನೆ ಮೋದಿ ಆಫೀಸಿಗೆ ಬಂದು ಕುಂತಿದ್ದರು. ಇನ್ನೇನು ಕೆಲಸ ಶುರು ಮಾಡಬೇಕು ಅನ್ನೋದ್ರಾಗ ಮತ್ತ ಫೋನ್ ರಿಂಗಾತು. ಯಾರದ್ದು ಅಂತ ನೋಡಿದರೆ ಮತ್ತ ಒಬಾಮನದೇ. 'ಹೋಗ್ಗೋ ನಿನ್ನ! ಮತ್ತ ಫೋನ್ ಮಾಡಿದ ನಮ್ಮ ದೋಸ್ತ. ಅದೂ ಮುಂಜಾನೆ ಮುಂಜಾನೆ,' ಅಂತ ಅಂದುಕೊಂಡು ಫೋನ್ ಎತ್ತಿದರು.

'ಏನಪಾ ಮೋದಿ? ಊಟ ಆತ? ನಂದು ಆತ ನೋಡಪಾ,' ಅಂದ ಒಬಾಮಾ.

'ಎಲ್ಲಿ ಊಟೋ? ನಮಗ ಈಗ ಬೆಳಗು ಮುಂಜಾನೆ. ನಿಮಗ ರಾತ್ರಿ. ಊಟ ಆತು ಅಂತೀ. ಏನು ಮಾಡ್ಲಿಕತ್ತಿ?' ಅಂತ ಕೇಳಿದರು ಮೋದಿ.

'ನಾನ? ನಾ ಈಗ ಊಟ ಮುಗಿಸಿ, ಒಬ್ಬನೇ ಕುಂತು ಒಂದು ಇಂಡಿಯನ್ ಹಿಂದಿ ಸಿನಿಮಾ ನೋಡಾಕತ್ತೇನಿ,' ಅಂದ ಒಬಾಮಾ. ಯಾಕೋ ಏನೋ, ಅವನೇ ಮುಂದುವರೆದು, 'ಏ! ಮತ್ತ ಯಾವದೇ ಮಲಯಾಳಿ ಹೊಲಸ ಸಿನೆಮಾ ನೋಡಾಕತ್ತಿಲ್ಲ ಮಾರಾಯಾ. ಹಿಂದಿ ಫ್ಯಾಮಿಲಿ ಮೂವಿ. ನೀ ಏನರೆ ತಿಳ್ಕೋಬ್ಯಾಡೋ ಮಾರಾಯಾ!' ಅಂತ ಹೇಳಿದ. ಅವಂಗ ಅದರ ಬಗ್ಗೆನೇ ಕಾಳಜಿ.

'ಭಾರಿ ಆತಲ್ಲೋ ದೋಸ್ತಾ. ಯಾವ ಸಿನೆಮಾ ನೋಡಾಕತ್ತೀ?' ಅಂತ ಕೇಳಿದರು ಮೋದಿ.

'ನಾ ಹನುಮಾನ್ ಖಾನನ 'ಹಮ್ ಬಿಲ್ ದೇ ಚುಕೇ ಸನಮ್' ಅನ್ನೋ ಸಿನೆಮಾ ನೋಡಾಕತ್ತೇನಿ. ನೀ ನೋಡೀ ಏನೋ ಮೋದಿ?' ಅಂತ ಕೇಳಿಬಿಟ್ಟ ಒಬಾಮಾ.

ಹನುಮಾನ್ ಖಾನ್! ಹಮ್ ಬಿಲ್ ದೇ ಚುಕೇ ಸನಮ್!

ಅದನ್ನ ಕೇಳಿಸಿಕೊಂಡ ಅಮಿತ್ ಷಾ ಹೇಳಿದ, 'ಸರ್ರಾ! ಅದು ಸಲ್ಮಾನ್ ಖಾನನ ೨೦೦೦ ರಲ್ಲಿ ಬಂದ ಹಮ್ ದಿಲ್ ದೇ ಚುಕೇ ಸನಮ್ ಅನ್ನೋ ಸಿನೆಮಾ ಇರಬೇಕು ನೋಡ್ರೀ,' ಅಂತ ಹೇಳಿ ಮೋದಿಯವರ confusion ದೂರ ಮಾಡಿದ.

'ಹೋಗ್ಗೋ ನಿನ್ನ ಒಬಾಮಾ! ಅದು ಹಮ್ ದಿಲ್ ದೇ ಚುಕೆ ಸನಮ್ ಅಂತಪಾ. ನೀ ಯಾವ ಬಿಲ್ ಚುಕ್ತಾ ಮಾಡಿದೀ ಅಂತ ನಾ ತಲಿ ಕೆಡಿಸಿಕೊಳ್ಳಾಕ ಹೊಂಟಿದ್ದೆ ನೋಡಪಾ. ಮತ್ತ ಆವಾ ಹನುಮಾನ್ ಖಾನ್ ಅಲ್ಲೋ. ಸಲ್ಮಾನ್ ಖಾನ್,' ಅಂತ ತಿಳಿಸಿ ಹೇಳಿದರು ಮೋದಿ.

'ಸಲ್ಮಾನ್, ರೆಹಮಾನ್, ಮುಸಲ್ಮಾನ್, ಹನುಮಾನ್..... ಎಲ್ಲಾ ಒಂದೇ ತಗೋ. ಆದರೂ ತಪ್ಪು ತಿದ್ದಿದ್ದಕ್ಕೆ ಧನ್ಯವಾದ ದೋಸ್ತ,' ಅಂದ ಒಬಾಮಾ.

'ಏ ಮೋದಿ! ನಾ ಬಂದಾಗ ಊಟಕ್ಕ ಏನು ಅಡಗಿ ಮಾಡಸವಾ ನೀ?' ಅಂತ ಕೇಳಿಬಿಟ್ಟ ಒಬಾಮಾ.

'ನೋಡಪಾ ಒಬಾಮಾ. ನಾನ್ವೆಜ್ ಅಂತೂ ಬಿಲ್ಕುಲ್ ಇಲ್ಲ. ಶುದ್ಧ ಗುಜರಾತಿ ಶಾಖಾಹಾರಿ ಊಟ ನೋಡಪಾ. ಓಕೆ?' ಅಂತ ಕೇಳಿಬಿಟ್ಟರು  ಮೋದಿ.

'ಹೋಗ್ಗೋ! ನನಗ ನಿಮ್ಮ ಗುಜರಾತಿ ಅಡಗಿ ಊಟ ನೆನಿಸಿಕೊಂಡ್ರನೇ ಭಾಳ tension ಆಕ್ಕೈತೋ ದೋಸ್ತ!' ಅಂದ ಒಬಾಮಾ.

'ಯಾಕಪಾ? ನಮ್ಮ ಗುಜರಾತಿ ಅಡಗಿ ಒಳಗ ಏನಪಾ ಅಂತಾ ಖರಾಬೀ ಐತಿ? ಎಲ್ಲಾರೂ ಎಷ್ಟ ಲೈಕ್ ಮಾಡ್ತಾರು. ನೀ ನೋಡಿದರ tension ತೊಗೊಳ್ಳಾಕತ್ತಿ. ಸುಮ್ಮ ಬಂದು, ಮಸ್ತಾಗಿ ಕತ್ತರಿಸಿ, ನಮ್ಮ ಊಟ ಹೊಡಿಪಾ,' ಅಂದ್ರು ಮೋದಿ.

'ಅಲ್ಲಪಾ ಮೋದಿ, ಹಾಂಗ ಕತ್ತರಿಸಿ ಊಟ ಹೊಡೆದ ಸಲ್ಮಾನ್ ಖಾನನ ಹಾಲತ್ ಏನಾಗಿತ್ತು ಅಂತ ಗೊತ್ತದನೋ ಇಲ್ಲೋ? ಅವನ ಹಾಲತ್ ಆದಂಗೆ ನಂದೂ ಆದ್ರ ಅಂತ ಭಾಳ tension ಆಗೈತಿ,' ಅಂದು ಬಿಟ್ಟ ಒಬಾಮಾ.

'ಏನೋ!? ಹಾಂ? ಏನೇನರೆ ಹೇಳಾಕತ್ತಿ. ಏನಾಗಿತ್ತು ಸಲ್ಮಾನ್ ಖಾನನ ಹಾಲತ್? ಹಾಂ?' ಅಂತ ಕೇಳಿದರು ಮೋದಿ.

'ತಡಿ ನಿನಗ ತೋರಿಸೇ ಬಿಡತೇನಿ,' ಅಂತ ಹೇಳಿದ ಒಬಾಮಾ ವೀಡಿಯೊ ಫೋನ್ ಚಾಲೂ ಮಾಡಿದ. ಕೆಳಗಿನ ಕ್ಲಿಪ್ ತೋರಿಸಿದ.
ಇದನ್ನು ನೋಡಿದ ಮೋದಿ ಬಿದ್ದು ಬಿದ್ದು ನಕ್ಕರು.

'ನಗಪಾ ನೀ ನಗು. ಬೇಕಾದಷ್ಟು ನಗು. ನಿಮ್ಮ ಗುಜರಾತಿ ಊಟ ಮಾಡಿದ ಮ್ಯಾಲೆ ನಂದೂ ಇದೇ ಹಾಲತ್ ಆಕ್ಕೈತಿ. ಆವಾಗ ಮತ್ತೂ ನಕ್ಕಿಯಂತ,' ಅಂತ ಹೇಳಿದ ಒಬಾಮಾ.

'ಧೋಕ್ಲಾ, ಉಂದ್ಯೂ, ದಾಲ್....ಸಮೀರ್ ಹವಾ ಕಾ ಝೋಕಾ' ಅಂತ ಹೇಳಿ, ಮತ್ತ ಮತ್ತ ಹೇಳಿ, ಮೋದಿ ಭಾಳ ನಕ್ಕರು.

'ಸಮೀರ್ ಹವಾ ಕಾ ಝೋಕಾ ಬದಲೀ ಒಬಾಮಾ ಹವಾ ಕಾ ಝೋಕಾ ಅಂತ ಹೇಳಿ ನೀವು ಎಲ್ಲಾರೂ ನಗೋ ಪ್ಲಾನ್ ಹಾಕೀರಿ ಹೌದಿಲ್ಲೋ? ಏನೋ ದೋಸ್ತ ನೀ ಹೀಂಗ ಮಾಡೋದು?' ಅಂತ ಹೇಳಿ ಒಬಾಮಾ ಸುಮ್ಮನೆ ಮಜಾಕ್ ಮಾಡಿದ.

'ಇಲ್ಲ ಬಾರಪಾ. ನಿನಗ ಬ್ಯಾರೆ ಅಡಿಗಿ ಮಾಡಿಸಿ ಹಾಕೋಣಂತ. ದೇಶದ ಬ್ಯಾರೆ ಬ್ಯಾರೆ ಕಡೆಗಿನ ಅಡಿಗಿ ಎಲ್ಲ ಮಾಡಿಸಿ ಹಾಕಸ್ತೇನಿ ಬಾರಪಾ ನೀ. ನಿನಗ ಬರೇ ಧೋಕ್ಲಾ, ಉಂದ್ಯೂ, ದಾಲ್ ಮಾತ್ರ ತಿನ್ನಿಸಿ, ನಮ್ಮ ಹವಾ ಕೆಡಿಸಿಕೊಳ್ಳಾಕ ನಮಗೇನು ಹುಚ್ಚ ಹಿಡದೈತಿ ಅಂತ ಮಾಡಿ ಏನು? ಹಾಂ? ಚಿಂತಿ ಮಾಡದೇ ಬಾ. ಮಸ್ತಾಗಿ ಊಟ ಮಾಡಿ ಹೋಗಿಯಂತ,' ಅಂತ ಹೇಳಿ ಮೋದಿ ಅವನ ಚಿಂತಿ ದೂರ ಮಾಡಲಿಕ್ಕೆ ನೋಡಿದರು.

'ಮೋದಿ ನಿನಗ ಹೇಳತೇನಿ. ಈ ಸೀನ್ ನೋಡಿದರೆ ನನಗ ಅನ್ನಸ್ತೈತಿ ನಾನೂ ಇದೇ ರೀತಿ ನಿಮ್ಮ ಪಾರ್ಲಿಮೆಂಟ್ ಹೌಸ್ ಮ್ಯಾಲೆ ಹೋಗಿ ಪರ್ರ್! ಡರ್ರ್! ಅಂತ ಗ್ಯಾಸ್ ಬಿಡೋ ಟೈಮ್ ಒಳಗ ಯಾರರೆ ಚಂದನೆ ಹುಡುಗಿ ಅಲ್ಲೇ ಇರ್ತಾಳ ನೋಡಪಾ. ಯಾರ ಅಕಿ? ಒಬ್ಬಾಕಿ ಅದಾಳ ನೋಡೋ ನಿಮ್ಮ ಪಾರ್ಟಿ ಮೆಂಬರ್. ಯಾರಕಿ?' ಅಂದ ಒಬಾಮಾ.

'ಯಾರಪಾ ಅಕಿ? ನಮ್ಮ ಪಾರ್ಟಿ ಮೆಂಬರ್. ಅಂತಾ ಸುಂದರಿ?' ಅಂತ ಮೋದಿ ಸಹ ಅಚ್ಚರಿ ಪಟ್ಟರು.

'ಹಾಂ! ನೆನಪಾತು. ಅಕಿನೇ ಮಾಲಿಹೇನಿನಿ. ಹಳೇ ಸಿನಿಮಾ ನಟಿ. ಮಾಲಿಹೇನಿನಿ,' ಅಂದುಬಿಟ್ಟ ಒಬಾಮಾ.

'ಹೋಗ್ಗೋ ನಿನ್ನ! ಅಕಿ ಹೆಸರು ಮಾಲಿಹೇನಿನಿ ಅಲ್ಲಪಾ ದೋಸ್ತ. ಅಕಿ ಹೆಸರು ಹೇಮಾಮಾಲಿನಿ ಅಂತ. ಹೋಗ್ಗೋ!' ಅಂತ ಹೇಳಿ ಮೋದಿ ಭಾಳ ನಕ್ಕರು.

'ತಲಿಯಾಗ ಹೇನು ತುಂಬಿಕೊಂಡ ಹೇಮಾಮಾಲಿನಿಗೆ ಮಾಲಿಹೇನಿನಿ ಅನ್ನಬಹುದೇನೋ' ಅಂತ ಅಮಿತ್ ಷಾ ಜೋಕ್ ಹೊಡೆದ. ಬೆರಕಿ ಮಗಾ ಅವಾ!

'ಹಾಂ! ಹೇಮಾಮಾಲಿನಿ ನೋಡಪಾ. ನಾನೇ ಸಲ್ಮಾನ್ ಖಾನ್ ಅಕಿನೇ ಹೀರೋಯಿನ್. ಪಾರ್ಲಿಮೆಂಟ್ ಹೌಸ್ ಅಟ್ಟದ ಮ್ಯಾಲೆ ನನ್ನ ಭಾಂಡಾ ಪೂರ್ತಿ ಬಿಚ್ಚಿ ಹೋಗ್ತದ ನೋಡಪಾ,' ಅಂದ ಒಬಾಮಾ.

'ಭಾರಿ ಚ್ಯಾಷ್ಟಿ ಮಾಡ್ತೀ ಬಿಡಪಾ ನೀ ಒಬಾಮಾ. ಭಾಳ ಮಸ್ತ ಇದ್ದಿ. ಲಗೂನ ಬಾರಪಾ. ಮಸ್ತ ಗದ್ದಲಾ ಹಾಕೋಣ,' ಅಂತ ಹೇಳಿದರು ಮೋದಿ.

'ಏ ಮೋದಿ, ನಿನಗೊಂದು ಮಸ್ತ ಜೋಕ್ ಹೇಳಲಿ? ಸ್ವಲ್ಪ ಉಡಾಳ ಜೋಕ್ ಅದನ ಮತ್ತ. ಮೊದಲೇ ಹೇಳಿಬಿಟ್ಟೇನಿ. ನನ್ನ ಸ್ವಭಾವ ನಿನಗ ಗೊತ್ತದಲ್ಲೋ. ನಾ ಯಾವಾಗಲೂ ಜೋಕ್ ಹೊಡ್ಕೋತ್ತ, ಖಾಸ್ ದೋಸ್ತರ ಜೋಡಿ ಡಬಲ್ ಮೀನಿಂಗ್ ಜೋಕ್ ಯಾವದೇ ಭಿಡೆ ಇಲ್ಲದೆ ಹೊಡಿತೇನಿ ನೋಡಪಾ. ಹೇಳಲಿ ಜೋಕ್?' ಅಂತ ಕೇಳಿಬಿಟ್ಟ ಒಬಾಮಾ. ಪಾಪ! ಅವಂಗ ಭಾಳ lonely ಅನ್ನಸ್ತದ. ಅದಕ್ಕೇ ಯಾರೇ ಸಿಕ್ಕರೂ ಹಿಡಕೊಂಡು ಕೊರದೇ ಕೊರಿತಾನ. ಹರಟಿ ಮುಗಿಯೋದಿಲ್ಲ ಅವಂದು.

'ಏನು? ಹೇಳಪಾ ಹೇಳು,' ಅಂತ ಮೋದಿ ಅನುಮತಿ ಕೊಟ್ಟರು. ಆದ್ರ ಒಬಾಮಾ ಬೆರಕಿ ಮಗ ಎಂತಾ ಜೋಕ್ ಹೇಳವಾ ಇದ್ದಾನ ಅಂತ ಅವರು ಗ್ರಹಿಸಿರಲಿಲ್ಲ. ಊಹಾ ಸಹ ಮಾಡಿರಲಿಲ್ಲ.

'ಹೆಂಗಸೂರು ಲಗ್ನಾ ಆಗೋ ತನಕಾ ಒಟ್ಟ ಹೂಸ ಬಿಡಂಗಿಲ್ಲ ನೋಡಪಾ! ಯಾಕ ಅಂತ ಹೇಳು?' ಅಂತ ಕೇಳಿಬಿಟ್ಟ ಒಬಾಮಾ.

ಮೋದಿ ಫುಲ್ ದಂಗಾಗಿ, 'ಯಪ್ಪಾ! ಏನು ಅದಾನಪಾ ಇಂವಾ? ಡಬಲ್ ಮೀನಿಂಗ್ ಅಲ್ಲ, ಕೆಟ್ಟ ಅಸಹ್ಯ ಅಸಹ್ಯ ಜೋಕ್ ಹೇಳ್ತಾನ,' ಅಂತ ಅಂದುಕೊಂಡರು. ಆದರೂ ಅವರ ದೋಸ್ತ. ಏನು ಮಾಡೋದು? ಅಂತ ಹೇಳಿ ತಡಕೊಂಡರು.

'ಥೂ! ಹೊಲಸ್! ಏನಂತ ಹೇಳ್ತೀಯೋ ಮಾರಾಯಾ? ಏನರ್ಥ ಹಾಂಗದ್ರ?' ಅಂತ ಸ್ವಲ್ಪ ಗದರಿದರು ಮೋದಿ.

'ಹಾ! ಹಾ! ಜೋಕ್ ತಿಳಿಲಿಲ್ಲ ನಿನಗ?????? ಹಾ! ಹಾ!'  ಅಂತ ನಕ್ಕೋತ್ತ ಕೇಳಿದ ಒಬಾಮಾ. ಭಾಳ ನಕ್ಕ.

ಮೋದಿ ಕಡೆಯಿಂದ ಫುಲ್ ಸೈಲೆನ್ಸ್. ಒಬಾಮಾನೇ  ಮುಂದುವರೆದು ಹೇಳಿದ.

'ಲಗ್ನ ಆಗೋ ತನಕಾ ಹೆಂಗಸೂರ ಕಡೆ asshole ಎಲ್ಲೆ ಇರ್ತದೋ? ಲಗ್ನಾಗಿ ಗಂಡ ಅನ್ನೋ asshole ಹೆಂಗಸೂರ ಲೈಫಿನ್ಯಾಗ ಬಂದ ಮ್ಯಾಲೆ ಅವರು ಹೂಸು ಬಿಡಲಿಕ್ಕೆ ತಯಾರಾಗ್ತಾರ ನೋಡಪಾ!' ಅಂತ ಕೆಟ್ಟ ಅನಾಹುತ ಜೋಕ್ ಹೇಳಿಬಿಟ್ಟ.

'ಥತ್ ನಿನ್ನ ಒಬಾಮಾ! ಏನಂತ ಮಾತಾಡ್ತೀಪಾ? ನಮ್ಮ ದೇಶದ ಹೆಂಗಸೂರು ಗಂಡನ್ನ ಪತಿ ಪರಮೇಶ್ವರ ಅಂತ ಪೂಜಸ್ತಾರ.  ಗಂಡನ್ನ asshole, ಅಯ್ಯೋ ನಾ ಅದನ್ನು ಹೇಳಲಾರೆ, ಅದು ಇದು ಅನ್ನೋದು ನಿಮ್ಮ ಪದ್ಧತಿ ಇರಬೇಕು ನೋಡು. ಥೂ ನಿನ್ನ! ಏನು ಹೇಳಿದಿ ಮಾರಾಯಾ? ಇದನ್ನ ಇಲ್ಲೆ ಬಂದಾಗ ಹೇಳಬ್ಯಾಡ ಮತ್ತ,' ಅಂತ ಸ್ವಲ್ಪ ಬೈದು ಹೇಳಿದರು ಮೋದಿ.

ಪತಿ 'ಪರಮೇಶ್ವರ' ಅಂತ ಕೇಳಿಸಿಕೊಂಡ ಒಬಾಮಾ ಬ್ಯಾರೆ ಯಾವದೋ ಮೂಡಿಗೆ ಹೋದ.

'ಈ ಪರಮೇಶ್ವರ ಯಾರು? ಅವನೇ ಕರ್ನಾಟಕದ DCM (Deputy Chief Minster) ಆಗಬೇಕು ಅಂತ ಖಟಿಪಿಟಿ ಮಾಡ್ಲಿಕತ್ತಾನಲ್ಲಾ ಅವಾ ಏನು?' ಅಂತ ಕೇಳಿಬಿಟ್ಟ ಒಬಾಮಾ.

ಮೋದಿಗೆ ಭಾಳ ಆಶ್ಚರ್ಯ ಆತು. ಅಮೇರಿಕಾದ ಪ್ರೆಸಿಡೆಂಟ್ ಒಬಾಮಾಗ ಭಾರತದ ಒಂದು ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಹ ಗೊತ್ತದಲ್ಲ ಅಂತ ಭಾಳ ಆಶ್ಚರ್ಯ ಆತು ಅವರಿಗೆ.

'ಅಲಲಲಾ! ಭಾರಿ ಮಾಹಿತಿ ಇಟ್ಟಿಯಲ್ಲಪಾ ಒಬಾಮಾ. ಇವೆಲ್ಲಾ ನಿನಗ ಹ್ಯಾಂಗ ಗೊತ್ತೋ?' ಅಂತ ಕೇಳಿದರು ಮೋದಿ.

'ನಮ್ಮ CIA ಐತಲ್ಲೋ. CIA ಅಂದ್ರ ಏನಂತ ಮಾಡಿ? ಎಲ್ಲಾ ಮಾಹಿತಿ ಬರೋಬ್ಬರಿ ಇಟ್ಟಿರ್ತಾರ. ಗೊತ್ತ?' ಅಂತ ಹೇಳಿದ ಒಬಾಮಾ.

'ಭಾರಿ CIA ಐತಿ ಬಿಡಪಾ ನಿಮ್ಮದು. ಬೆರಕಿ ಅದಾರ. ಅಷ್ಟು ಕೆಳಗ ಬೆಂಗಳೂರ ಕಡೆ ಹೋಗಿ ಸಹಿತ ಮಾಹಿತಿ ತಂದಾರ ಅಂದ ಮ್ಯಾಲೆ ಮತ್ತೇನು ಕೇಳ್ತೀ. ಭಾರಿ ಬಿಡ,' ಅಂತ ಹೇಳಿದರು ಮೋದಿ. CIA ಬಗ್ಗೆ ಸ್ವಲ್ಪ tension ಕೂಡ ಆತು ಅವರಿಗೆ. ಮತ್ತಿನ್ನೇನು ಮಾಹಿತಿ ಗೊತ್ತವನೋ ಏನೋ ಅಂತ.

'ಏ ಮೋದಿ, CIA ಅಂದ್ರ ಏನು ಅಂತ ಗೊತ್ತೈತಿ ಏನು?' ಅಂತ ಕೇಳಿದ ಒಬಾಮಾ. ಕೇಳಿದ್ದು ನೋಡಿದರೆ ಭಾರಿ ಮಜಾಕ್ ಮಾಡುವ ಮೂಡಿನ್ಯಾಗ ಇದ್ದ ಅಂತ ಮೋದಿಯವರಿಗೆ ಖಾತ್ರಿ ಇತ್ತು.

'CIA ಅಂದ್ರ Central Intelligence Agency ಅಂತ ಹೌದಿಲ್ಲೋ? ಅಥವಾ ನೀ ಏನರೆ ಬ್ಯಾರೆ ಅನರ್ಥ ಇಟ್ಟಿಯೋ?' ಅಂತ ಕೇಳಿದರು ಮೋದಿ.

'CIA ಅಂದ್ರ... ಅಂದ್ರ 'ಚಡ್ಡಿ ಇಲ್ಲದಿದ್ದರೂ ಅಡ್ಡಿಯಿಲ್ಲ' ಅಂತ. C ಫಾರ್ ಚಡ್ಡಿ I ಫಾರ್ ಇಲ್ಲದಿದ್ದರೂ A ಫಾರ್ ಅಡ್ಡಿಯಿಲ್ಲ. CIA. ಹ್ಯಾಂಗದ? ಹಾ! ಹಾ!' ಅಂತ ಕ್ಯಾಕಿ ಹಾಕಿ ನಕ್ಕು ಹೇಳಿದ ಒಬಾಮಾ.

'ಏನೋ ಹಾಂಗಂದ್ರ? ಹಾಂ? CIA  ಅಂದ್ರ ಚಡ್ಡಿ ಇಲ್ಲದಿದ್ದರೂ ಅಡ್ಡಿಯಿಲ್ಲ ಅಂತ ಹುಚ್ಚುಚ್ಚರೆ ಹೇಳಿಕೋತ್ತ. ಹಾಂ? ಬರೇ ಮಜಾಕ್ ನೋಡಪಾ ನಿಂದು,' ಅಂದ್ರು ಮೋದಿ.

'ಹೌದೋ ಮಾರಾಯಾ. ಈಗ ನೋಡಪಾ. ಈ ಒಸಮಾ ಬಿನ್ ಲಾಡೆನ್ ಇದ್ದಾ ನೋಡು. ಅವನ ಕಟ್ಟಿ ಬೆಳೆಸಿದವರು ಯಾರು? ನಾವೇ. ಅದರಾಗೂ CIA. ಆವಾ ಏನು ಮಾಡಿದ? ಸೆಪ್ಟೆಂಬರ್ ೧೧, ೨೦೧೧ ರಂದು ಬಂದು ಹೀಂಗ ಬಾಂಬ್ ಹಾಕಿ ಹೋದ ಅಂದ್ರ CIA ಮಂದಿಗೆ ಸಹ ಏನೂ ಗೊತ್ತಾಗಲೇ ಇಲ್ಲ. ಒಳ್ಳೆ ಸುಮಡಿ ಒಳಗ ಬಂದು ಚಡ್ಡಿ ಕಳೆದು ಹೋದ ಫೀಲಿಂಗ್ ಬಂತು ಅವರಿಗೆ. ಅಂತಾ ದೊಡ್ಡ ಖತರ್ನಾಕ್ ಸಂಸ್ಥೆ CIA. ಅವರಿಗೂ ಸಹ ಸ್ವಲ್ಪೂ ಖಬರು ಹತ್ತದಂಗ ಬಂದು ಹೆಟ್ಟಿ ಹೋದ ನೋಡು ಆವಾ. ಗೊತ್ತಿಲ್ಲದಾಂಗ ಚಡ್ಡಿ ಕಳೆದು ನಂಗಾ ಮಾಡಿ ಹೋದ. ಇಡೀ ಜಗತ್ತಿನ ಮುಂದ ನಮ್ಮ ಚಡ್ಡಿ ಕಳೆದುಬಿಟ್ಟ ಆ ಹಡಬಿಟ್ಟಿ ಲಾಡೆನ್. ಆವತ್ತಿಂದ CIA ಅಂದ್ರ 'ಚಡ್ಡಿ ಇಲ್ಲದಿದ್ದರೂ ಅಡ್ಡಿಯಿಲ್ಲ' ಅಂತ ನೋಡಪಾ. ಅವನೌನ್! ಕೆಲವು CIA ಮಂದಿ ಆವತ್ತಿಂದ ಚಡ್ಡಿ ಸಹಿತ ಹಾಕ್ಕೋಳ್ಳೋದು ಬಿಟ್ಟು ಬಿನ್ ಲಾಡೆನ್ ಹಿಂದ ಬಿದ್ದಿದ್ದರು ನೋಡಪಾ. ಅವರಿಗೆ ಏನು ಕೊಟ್ಟರೂ ಕೊಡಬಹುದು. ಬರೋಬ್ಬರಿ ಹತ್ತು ವರ್ಷದ ನಂತರ ಆ CIA ಮಂದಿನೇ ಅವನ್ನ ಹುಡುಕಿ, ಹೆಟ್ಟಿಸಿ ಕೊಂದು ಒಗದು ಬಂದ್ರು ನೋಡು. ಕೆಲವು ಮಂದಿ ಅಂತೂ ೯/೧೧ ನಂತರ ಮೊದಲ ಬಾರಿಗೆ ಚಡ್ಡಿ ಹಾಕ್ಕೊಂಡರು,' ಅಂತ ಹೇಳಿ CIA ಬಗ್ಗೆ ದೊಡ್ಡ ವಿವರಣೆ ಕೊಟ್ಟ.

ಮೋದಿಯವರು ಸುಮ್ಮನೇ ಕೇಳಿಕೋತ್ತ ಕೂತರು. ಏನು ಮಾಡ್ತಾರ ಪಾಪ?

'ಏ ಮೋದಿ, ನಾ ಬಂದ ಲ್ಯಾಂಡ್ ಆದ ಕೂಡಲೇ ಆರತಿ ಮಾಡಲಿಕ್ಕೆ ಎಲ್ಲಾ ತಯಾರಿ ಮಾಡಿಯೋ ಇಲ್ಲೋ?' ಅಂತ ಕೇಳಿದ ಒಬಾಮಾ.

'ಮಾಡೆನೋ ಅಪ್ಪಾ. ನೀ ಬಂದರೆ ಬಾರೋ. ಸುಮಂಗಲಿ ಮುತ್ತೈದೆಯರು ನಿನಗ ಆರತಿ ಮಾಡ್ತಾರ ಬಾ,' ಅಂತ ಹೇಳಿದರು ಮೋದಿ.

'ಮುತ್ತೈದಿ......' ಅಂತ ಒಬಾಮಾ ಡೀಪ್ ಥಿಂಕಿಂಗ್ ಮೋಡಿಗೆ ಹೋದ.

'ಯಾಕೋ? ಏನಾತು?' ಅಂದ್ರು ಮೋದಿ.

'ಮುತ್ತೈದೆಯರು ಆರತಿ ಮಾಡ್ತಾರ ಅಂದ್ರ ನಮಗ ನುಕ್ಸಾನ (loss) ಆತಲ್ಲೋ!' ಅಂದುಬಿಟ್ಟ ಒಬಾಮಾ.

ಮೋದಿ ಫುಲ್ ಥಂಡಾ ಹೊಡೆದು,'ಯಾಕೋ?' ಅಂದ್ರು.

'ಮುತ್ತೈದೆ ಅಂದ್ರ ಬರೇ ಐದೇ ಮುತ್ತು ಅಂದ್ರ ಕಿಸ್ ಕೊಡ್ತಾಳ. ಮುತ್ತು + ಐದೇ = ಮುತ್ತೈದೆ. ಹೌದಿಲ್ಲೋ? ಭಾಳ ಕಮ್ಮಿ ಆತು. ನಾ ಏನೋ ಬ್ಯಾರೆನೇ ವಿಚಾರ ಮಾಡಿದ್ದೆ ಬಿಡು. ಇರಲಿ ಬಿಡು,' ಅಂತ ಮಾತು ಕಟ್ ಮಾಡಿದ ಒಬಾಮಾ.

'ಹೋಗ್ಗೋ ನಿನ್ನ! ಯಾರಪಾ ನಿನಗ ಮುತ್ತೈದೆ ಅಂದ್ರ ಮುತ್ತು + ಐದೇ ಅಂತ ಹೇಳಿದವರು? ಮತ್ತ ಆರತಿ ಮಾಡೋ ಮುತ್ತೈದೆಯರು ನಿನಗ್ಯಾಕೋ ಕಿಸ್ ಹೊಡಿತಾರ? ಅವರು ಹಿಂದೂ ಸಂಪ್ರದಾಯಸ್ಥ ಮುತ್ತೈದೆಯರು. ಅವರು ಹಾಂಗೆಲ್ಲಾ ಮಾಡಂಗಿಲ್ಲ. ತಿಳೀತ?' ಅಂತ ಫುಲ್ clarification ಕೊಟ್ಟು, misunderstanding ಕ್ಲಿಯರ್ ಮಾಡಿದರು ಮೋದಿ. ಎಲ್ಲರೆ ಈ ಹಾಪ್ ಒಬಾಮಾ ಏನರೆ ನಿರೀಕ್ಷಾ ಇಟ್ಟುಕೊಂಡು ಬಂದರೆ ಕಷ್ಟ.

'ಅಲ್ಲಾ ಭಾಳ ಹಿಂದ ಇಂಗ್ಲೆಂಡ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಬಂದಾಗ ಒಬ್ಬಾಕಿ, ಸ್ವಾಗತಕ್ಕೆ ಅಂತ ನಿಂತಾಕಿ, ಅವನ್ನ ಹಿಡಿದು, ಬಿಟ್ಟುಬಿಡದೆ ಲೊಚಲೊಚಾ ಅಂತ ಲೆಕ್ಕ ಇಲ್ಲದಷ್ಟು ಕಿಸ್ ಹೊಡೆದು ಬಿಟ್ಟಿದ್ದಳು ನೋಡು. ಅದಕ್ಕೇ ಕೇಳಿದೆ. ಎಲ್ಲರೆ ನಮಗೂ ಅಂತಾ ಲಕ್ ಅದನೋ ಏನೋ ಅಂತ. ಇಲ್ಲ ಅಂದ್ರ ಓಕೆ. ಕೇವಲ ಆರತಿ ಮಾತ್ರ ಮಾಡಿದ, ಯಾವದೇ ಮುತ್ತು ಕೊಡದ ಮುತ್ತೈದೆಯರಿಗೆ ನಾವೂ ಬರೆ ನಮಸ್ಕಾರ ಮಾಡಿ ಬರತೇವಿ ತೊಗೋ. ಚಿಂತಿ ಮಾಡಬ್ಯಾಡಪಾ,' ಅಂತ ಹೇಳಿದ ಒಬಾಮಾ.

ಭಾಳ ವರ್ಷದ ಹಿಂದೆ ಇಂಗ್ಲೆಂಡ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಭಾರತಕ್ಕೆ ಬಂದಾಗ ಬಾಲಿವುಡ್ ನಟಿ ಪದ್ಮಿನಿ ಕೊಲ್ಹಾಪುರೆ ಅವನ ಸ್ವಾಗತಕ್ಕೆ ಅಂತ ನಿಂತಿದ್ದಳು. ಅವಳಿಗೆ ಅದೇನು ಮೂಡು ಬಂತೋ ಗೊತ್ತಿಲ್ಲ. ಆ ಪ್ರಿನ್ಸ್ ಚಾರ್ಲ್ಸ್ ಅನ್ನುವ ರಾಜಕುಮಾರನಿಗೆ ಹಾರ ಹಾಕಿದಾಕಿನೇ, ಹಾಕ್ಕೊಂಡು ಮನಗಂಡ ಕಿಸ್ ಹೊಡದೇ ಬಿಟ್ಟಿದ್ದಳು. ಅದು ಭಾಳ ಫೇಮಸ್ ಆಗಿತ್ತು. ಒಬಾಮಾ ಆ ಮಾಹಿತಿ ಎಲ್ಲಿಂದಲೋ ತೆಗೆದು, ತನಗೂ ಅಂತಾದ್ದೇ ಸ್ವಾಗತ ಸಿಗ್ತದೇನೋ ಅಂತ ಕನಸು ಕಾಣಲಿಕತ್ತಿದ್ದಾ. ಆದ್ರ ಮೋದಿಯವರ ಸರಕಾರ ಇರೋವಾಗ ಕೇವಲ ಸಂಪ್ರದಾಯಸ್ಥ ಸ್ವಾಗತ ಮಾತ್ರ.

ವೇಳ್ಯಾ ಭಾಳ ಆಗಿತ್ತು. ಒಬಾಮಾ ಹೆಂಡತಿ ಮಿಷೆಲ್ ಬಂದು, 'ಲಗೂ ಮಲ್ಕೋರೀ ಸಾಕು. ಮುಂಜಾನೆ ಎಂಟು ಹೊಡೆದರೂ ಏಳೋದಿಲ್ಲ ನೀವು,' ಅಂತ ಬೈದಳು. ಒಬಾಮಾ ಹರಟಿ ಬಂದ ಮಾಡಿದ. ಆವಾ ಮಹಾ ಕಿಡಿಗೇಡಿ. ಏನರೆ ಒಂದು ಭಾನಗಡಿ ಮಾಡೇ ಮಾಡವ. ಮಾಡೇ ಬಿಟ್ಟ.

'ಏ ಮೋದಿ, ಇಲ್ಲಿ ನೋಡು,' ಅಂತ ಹೇಳಿ ಕೆಳಗಿನ ವೀಡಿಯೊ ತೋರಿಸಿದ.'ಏನಪಾ ಇದು? ಬರೇ ಮಂಗ್ಯಾತನ ಮಾಡ್ತೀ? ಹಾಂ?' ಅಂತ ಮೋದಿ ಸ್ವಲ್ಪ ಜೋರು ಮಾಡಿದರು.

'ಅಲ್ಲೋ ಮೋದಿ. 'ಅಳುವದೋ ನಗುವದೋ ನೀವೇ ಹೇಳಿ' ಅಂತ ಒಂದು ಹಾಡು ಕೇಳಿದ್ದೆ. ಇವನ್ನ ನೋಡಿದರೆ ಅದನ್ನ ಬದಲು ಮಾಡಿ 'ಅಳುವದೋ ಗ್ಯಾಸ್ ಬಿಡುವದೋ ನೀವೇ ಹೇಳಿ' ಅಂತ ಹಾಡಬೇಕು ನೋಡಪಾ! ಹೇ! ಹೇ!' ಅಂತ ಸಿಕ್ಕಾಪಟ್ಟೆ ನಕ್ಕ.

'ಸಾಕು ಸಾಕು. ಭಾಳ ಜೋರಾಗಿ ನೀ ಒಬಾಮಾ,' ಅಂದ್ರು ಮೋದಿ.

'ಅಲ್ಲೋ ಮಾರಾಯಾ! ಈ ಶಾರುಖ್ ಖಾನ್ ಅನ್ನೋ ನಿಮ್ಮ ಹೀರೋ ಹಿಂಗ್ಯಾಕ ಅಳತಾನೋ ಮಾರಾಯಾ. ಅಳುವದೋ (ಗ್ಯಾಸ್) ಬಿಡುವದೋ ನೀವೇ ಹೇಳಿ. ಹಾ!ಹಾ!ಹೇ!ಹೇ!' ಅಂತ ಜೋರಾಗಿ ನಕ್ಕ ಒಬಾಮಾ.

ಮೋದಿ ಸುಮ್ಮನೆ ಕೂತಿದ್ದರು. ಯಾವಾಗ ಫೋನ್ ಇಡ್ತಾನಪಾ ಇವಾ ಅಂತ ಸುಮ್ಮ ಕೂತಿದ್ದರು.

'ಓಕೆ ದೋಸ್ತ್! ಭಾಳ ಮಜಾ ಬಂತು. ಲಗೂನೆ ಬಂದೇ ಬಿಡತೇನಿ. ಈಗ ಬೈ ಬೈ. ನನ್ನ ಜೋಡಿ ಹರಟಿ ಹೊಡೆದಿದ್ದಕ್ಕೆ ಭಾಳ ಥ್ಯಾಂಕ್ಸ್!' ಅಂತ ಹೇಳಿ ಒಬಾಮಾ ಅಂತೂ ಮಾತು ಮುಗಿಸಿದ.

ಮೋದಿಯವರು ಉಸ್! ಅಂತ ಒಂದು ದೊಡ್ಡ ಉಸಿರು ಬಿಟ್ಟು, ಒಂದು ಗ್ಲಾಸ್ ನೀರು ಕುಡಿದು ತಮ್ಮ ಕೆಲಸ ಶುರು ಮಾಡಿದರು. ಭಾಳ ಕೆಲಸ ಬಾಕಿ ಉಳಿದು ಬಿಟ್ಟಿತ್ತು .

* ಒಬಾಮಾ ಬಗ್ಗೆ ಬರೆದಿದ್ದ ಮತ್ತೊಂದು ಹಾಸ್ಯ ಲೇಖನ - ಓ ಬಾಮ್ಮಾ, ಓ ಬಾಮ್ಮಾ, ಅಂತ ಹುಡುಗಿ ಕರದ್ರ ಗಂಡು 'ಬರಾಕ್' ಹತ್ತಿದ್ದ!

Tuesday, January 20, 2015

ಹೆಸರಾಗೇನೈತಿ? ಹೆಸರು ಹೇಳೋದ್ರಾಗೇನೈತಿ?

ಬಸ್ ಸ್ಟಾಪಿನಲ್ಲಿ ಕಂಡ ಹುಡುಗಿಯನ್ನು ಸಹಜ ಮಾತಾಡಿಸಿದ ದ್ಯಾಮ್ಯಾ. ಸುಮ್ಮನೆ ಟೈಮ್ ಪಾಸಿಗೆ ಅಂತ.

'ಹಾಯ್! ನಿನ್ನ ಹೆಸರೇನು?' ಅಂದ ದ್ಯಾಮ್ಯಾ

ಅಕಿ ಮಹಾ ಬೆರಕಿ ಹುಡುಗಿ ಇರಬೇಕು.

'ನನ್ನ ಹೆಸರೇ? ನಿಮ್ಮಪ್ಪನ ದುಗುಸು' - ಅಂದ ಹುಡುಗಿ ಕಿಡಿಗೇಡಿ ಲುಕ್ ಕೊಟ್ಟಳು .

'ನೋಡ! ನೋಡ ಮತ್ತ! ಅಪ್ಪಾ, ಅವ್ವನ ಮ್ಯಾಗ ಬರ್ಬ್ಯಾಡ ನೀ! ನನ್ನ ತಲಿ ಕೆಡ್ತ ಅಂದ್ರ ಅಷ್ಟ ಮತ್ತ!' - ಅಂತ ಜಗಳಕ್ಕೇ ಹೊಂಟ ದ್ಯಾಮ್ಯಾ.

'ಅಯ್ಯ! ಸಿಟ್ಟ್ಯಾಕೋ??? ನನ್ನ ಹೆಸರು ಪುಷ್ಪಾ (Push Pa = ನಿಮ್ಮಪ್ಪನ ದುಗುಸು)' ಅಂದಳು ಹುಡುಗಿ.

'ಅಲೀ ಇಕಿನೌನ್! ಭಾರಿ ಜಾಬಾದ್ ಅದಾಳ'  ಅಂತ ಅಂದುಕೊಂಡ ದ್ಯಾಮ್ಯಾ.

ದ್ಯಾಮ್ಯಾನ ನಶೀಬಕ್ಕೆ ಅಕಿನೂ  ಇವನ ಹೆಸರು ಕೇಳೇಬಿಟ್ಟಳು. ದ್ಯಾಮ್ಯಾ ಅದೆಂಗ ತನ್ನ ಹಳೆ ಟೈಪಿನ ಹೆಸರಾದ ದ್ಯಾಮಣ್ಣ ಅಂತ ಹೇಳಿಕೊಂಡಾನು? ಏನರೆ ಮಾಡ್ರನ್, ಹೊಸ ಟೈಪಿನ ಹೆಸರು ಹೇಳೋಣ, ಅಕಿ ಹೇಳಿದಂಗೆ ಒಗಟಿನ ಮಾದರಿಯಲ್ಲೇ ಹೇಳಿ, ಅಕಿನ್ನೂ ಮಂಗ್ಯಾ ಮಾಡೋಣ ಅಂತ ಹೇಳಿ ಒಂದು ಮಸ್ತ ಐಡಿಯಾ ಹಾಕಿದ.

'ನನ್ನ ಹೆಸರೇ? 'ಕೈಯಾಗ ಕೊಡಲೋ ಅಥವಾ ಬಾಯಾಗೇ ಇಡಲೋ'????' ಅಂತ ಹೇಳಿ ಅವನೂ ಮಹಾ ಕಿಡಿಗೇಡಿ ಲುಕ್ ಕೊಟ್ಟ ದ್ಯಾಮ್ಯಾ.

ಅದನ್ನು ಕೇಳಿ ಬೆಚ್ಚಿ ಬಿದ್ದ ಹುಡುಗಿ ಒಂದು ಕೈಯಾಗ ಚಪ್ಲಿ, ಇನ್ನೊಂದು ಕೈಯಾಗ ಕಲ್ಲು ತೊಗೊಂಡು, 'ಏ! ಹಲ್ಕಟ್! ಬದ್ಮಾಶ್! ಬೇಕೇನು ಕಡತಾ? ಮೈಯಾಗ ಹೆಂಗೈತೀ!????' ಅಂತ ಲಡಾಯಿ ಮಾಡಲಿಕ್ಕೇ ಬಂದು ಬಿಟ್ಟಳು.

'ಏ! ತಡೀವಾ! ನನ್ನ ಹೆಸರು ಪ್ರಸಾದ' ಅಂದುಬಿಟ್ಟ ದ್ಯಾಮ್ಯಾ.

'ಪ್ರಸಾದ ಅಂತೇನು ನಿನ್ನ ಹೆಸರು? ನಾ ಏನೋ ಅಂತ ತಿಳ್ಕೊಂಡು ನಿನಗ ಬೈಲಿಕತ್ತಿದ್ದೆ. ಸ್ವಾರೀ!' ಅಂತು ಹುಡುಗಿ.

ದ್ಯಾಮ್ಯಾ ಖುಷ್ ಆಗಿ, 'ನೀ ಒಗಟಾ ಹಾಕಿ ಹೆಸರು ಹೇಳಿದ್ಯಲ್ಲಾ? ಅದಕ್ಕೇ ನಾನೂ ಸುಮ್ಮನೇ ಮಷ್ಕಿರಿ ಮಾಡಿದೆ. ಹೇ!!! ಹೇ!!! ಟಿಟ್ ಫಾರ್ ಟ್ಯಾಟ್! ಟ್ಯಾಟ್ ಫಾರ್ ಟಿಟ್!' ಅಂತ ಮತ್ತ ಮತ್ತ  ಹೇಳಿ ಹೇಳಿ, ಚಪ್ಪಾಳಿ ತಟ್ಟಿ ತಟ್ಟಿ, ಹೆಚ್ಚಿಗಿ ಸ್ಕೋಪ್ ತೊಗೋಳ್ಳಿಕ್ಕೆ ನೋಡಿದ. ಅದು ಬ್ಯಾಡಾಗಿತ್ತು. ಅನಾಹುತ ಮಾಡಿಕೊಂಡ.

ಯಾಕೋ ಏನೋ. ಈಗ ಅಕಿಗೆ ಈ ದ್ಯಾಮ್ಯಾ ಮಹಾ ಮಿಂಡ್ರಿಕೆ ಅಂತ ಖಾತ್ರಿ ಆಗಿ ಆಕಿ, 'ಏ! ಮತ್ತ ಮಷ್ಕಿರಿ ಮಾಡ್ತೀ!???? ಏನು ಟಿಟ್, ಟ್ಯಾಟ್ ಹಚ್ಚಿ???? ಏನ್ ಬೇಕಾಗಿಲ್ಲ, ಏನೂ ಕೊಡಂಗಿಲ್ಲ,' ಅನ್ಕೋತ್ತ ಅಕಿ ಆ ಬಸ್ ಸ್ಟಾಪ್ ಬಿಟ್ಟು ಮುಂದಿನ ಸ್ಟಾಪಿಗೆ ಹೋಗಿಬಿಟ್ಟಳು.

'ಅಯ್ಯ ಇಕಿನ! ಪ್ರಸಾದ ಅಂದ ಕೂಡಲೇ ನಕ್ಕು ಮಾತಾಡಿಸಿದಾಕಿ ಈಗ್ಯಾಕ ಹೀಂಗ ಶಟಗೊಂಡು ಹೋದಳು?' ಅಂತ ದ್ಯಾಮ್ಯಾಗ ತಿಳಿಲೇ ಇಲ್ಲ.

ಆಮ್ಯಾಲೆ ಯಾರೋ ತಿಳಿಸಿ ಹೇಳಿದರು, 'ಅಷ್ಟೆಲ್ಲಾ ಮಷ್ಕಿರಿ ಮಾಡಿ ಕೊನೇ ಒಳಗ ಟಿಟ್ ಫಾರ್ ಟ್ಯಾಟ್ ಅದು ಇದು ಅಂತ ಅನ್ನಲೇಬಾರದು. ಯಾವದೇ ರೀತಿ ಅಪಾರ್ಥ ಬರದ ಶುದ್ಧ ಕನ್ನಡದ 'ಮುಯ್ಯಿಗೆ ಮುಯ್ಯಿ' ಅಂತ ಬೇಕಾದರ ಅನ್ನಬಹುದು' ಅಂತ.

ಯಾಕ ಅಂತ ದ್ಯಾಮ್ಯಾಗ ಇನ್ನೂ ತಿಳಿದಿಲ್ಲ!

Monday, January 19, 2015

ಬೆಕ್ಕಿನ ಮರಿ, ಮೋಸಂಬಿ - ಲೆಕ್ಕದ ಭಾನಗಡಿ

ಭಾಳ ಹಳೆ ಮಾತು. ದ್ಯಾಮ್ಯಾ ಇನ್ನೂ ಕನ್ನಡ ಸಾಲ್ಯಾಗಿದ್ದ. ಕಟಗಿ ಸರ್ ಗಣಿತ ಕಲಸ್ತಿದ್ದರು. ಅವರ ಖರೆ ಅಡ್ದೆಸರು ಏನೋ ನೆನಪಿಲ್ಲ. ದೇವರಿಗೇ ಗೊತ್ತು. ಆದ್ರ ಅವರ ಕೈಯ್ಯಾಗ ಒಂದು ಕಟಗಿ ಮಾತ್ರ ಖಾಯಂ. ಹುಡುಗುರನ್ನ ಹಾಕ್ಕೊಂಡು ಕಟಿಲಿಕ್ಕೆ. ಅದಕ್ಕೇ ಅವರಿಗೆ ಅನ್ವರ್ಥಕನಾಮ - ಕಟಗಿ ಸರ್!

ಅದರಾಗೂ ನಮ್ಮ ದ್ಯಾಮ್ಯಾಗ ಹಿಡಿದು ಕಟಿಯೋದು ಅಂದ್ರ ಕಟಗಿ ಸರ್ ಗೆ ಭಾಳ ಖುಷಿ. 'ಅವನೌನ್! ನಾ ದೇವರಿಗೆ ಹೂವು ಏರಸೋದು ಒಂದು ದಿನಾ ಬಿಟ್ಟರೂ ಬಿಟ್ಟೆರೀ. ಆದ್ರ ನಮ್ಮ 'ಪ್ರೀತಿ'(!) ಶಿಷ್ಯಾ ದ್ಯಾಮಣ್ಣಗ ಕಟಿಯೋದು ಮಾತ್ರ ಬಿಡಂಗಿಲ್ಲ ನೋಡ್ರೀ. ಅವನೂ ಅದೇ ಮಾದರಿಯವನೇ ಅದಾನ. ಪಕ್ಕಾ 'ಉಗುಳು ಮಾರಿ ದೇವರ' ಟೈಪಿನ ದಡ್ಡ ಸೂಳೆಮಗ! ದಿನಾ ಕಟಿಸಿಕೊಳ್ಳಲಿಲ್ಲ ಅಂದ್ರ ಅವಂಗೂ ಸಮಾಧಾನ ಇಲ್ಲ ನೋಡ್ರೀ!' ಅಂತ ಹೇಳವರು ಕಟಗಿ ಸರ್. ಹಾಂಗ ಹೇಳಿ ಹೇಳೇ ಕಟಿಯವರು.

ಒಂದು ದಿನ ಕಟಗಿ ಸರ್ ಗಣಿತ ಕಲಿಸಾಕತ್ತಿದ್ದರು.

'ಲೇ ದ್ಯಾಮ್ಯಾ! ಒಂದು ಲೆಕ್ಕಾ ಕೇಳತೇನಿ. ಉತ್ತರಾ ಬರೋಬ್ಬರಿ ಹೇಳಬೇಕು ನೋಡಲೇ!' ಅಂದ್ರು ಸರ್.

ಮುಂದೆ ಬರಲಿರುವ ಗಣಿತ ಲೆಕ್ಕದ ಮಿಸೈಲ್ ಎದುರಿಸಲು ಎದ್ದು ನಿಂತ ದ್ಯಾಮ್ಯಾ. ಎದ್ದು ನಿಂತ ಕೂಡಲೇ ಅವನ ಯುನಿಫಾರ್ಮ್ ಖಾಕಿ ಚೊಣ್ಣ ಸರಕ್ ಅಂತ ಕೆಳಗ ಇಳಿದುಬಿಡ್ತು. ಸರಕ್ ಅಂತ ಚೊಣ್ಣ ಮೇಲೆ ಎಳಕೊಂಡ. ಮ್ಯಾಲೆ ಹಿಡಕೊಂಡೇ ನಿಂತ. ಅವರಪ್ಪನ ಕಡೆ 'ಏ ಯಪ್ಪಾ! ಒಂದು ಪಟ್ಟಾ ಕೊಡಸೋ. ಚೊಣ್ಣ ಜಾರಿ ಜಾರಿ ಬೀಳ್ತೈತಿ,' ಅಂದಿದ್ದ. ಅವರಪ್ಪ ದೊಡ್ಡ ಕುಡುಕ ಸೂಳೆಮಗ. 'ನಿಮ್ಮೌನ್! ಪಟ್ಟಾ ಅಂತ ಪಟ್ಟಾ. ಪಟ್ಟಾ ಬೇಕಂದ್ರ ಪಟ್ಟೆಗಾರ ಮಂದಿ ಮನ್ಯಾಗ ಹುಟ್ಟಬೇಕಿತ್ತು,' ಅಂತ ಬೈದು ದ್ಯಾಮ್ಯಾನ ಬೀಡಿ ತರಾಕ ಕಳಿಸಿದ್ದ. ಇದೆಲ್ಲ ನೆನಪಾತು ದ್ಯಾಮ್ಯಾಗ.

'ದ್ಯಾಮಣ್ಣ, ನಾ ನಿನಗ ಇವತ್ತು ಎರಡು ಬೆಕ್ಕಿನ ಮರಿ ಕೊಡತೇನಿ. ಸರಿನ? ನಾಳೆ ಮತ್ತೆ ಎರಡು ಬೆಕ್ಕಿನ ಮರಿ ಕೊಡತೇನಿ. ಸರಿನ? ಹಾಂಗಿದ್ದರ ನಿನ್ನ ಕಡೆ ಒಟ್ಟು ಎಷ್ಟು ಬೆಕ್ಕಿನ ಮರಿ ಆದವು? ಹೇಳು ನೋಡೋಣ,' ಅಂದ್ರು ಕಟಗಿ ಸರ್.

ದ್ಯಾಮ್ಯಾ ಡೀಪ್ ಥಿಂಕಿಂಗ್ ಮೋಡಿಗೆ ಹೋದ. ತಪ್ಪು ಉತ್ತರ ಹೇಳಿದರ ಸರ್ ಮನಗಂಡ ಕಟಿತಾರ. ಅದಕ್ಕೇ ಡಬಲ್, ಟ್ರಿಪಲ್ ಖಾತ್ರಿ ಮಾಡಿಕೊಂಡೇ ಉತ್ತರ ಹೇಳಬೇಕು. ಹಾಗಂತ ಹೇಳಿ ತಲಿಯೊಳಗೇ ಲೆಕ್ಕ ಮಾಡಿದ.  ಮತ್ತ ಮತ್ತ ಮಾಡಿದ. ಉತ್ತರ ಹೇಳಿಬಿಟ್ಟ!

'ಸರ್, ಐದರೀ. ಐದು ಬೆಕ್ಕಿನ ಮರಿ ಆಕ್ಕಾವ್ರೀ!' ಅಂದೇ ಬಿಟ್ಟ.

ಗೋವಿಂದಾ! ಗೋssವಿಂದಾ!

ಆವಾಗಲೇ ಕಟಗಿ ಸರ್ ಹಾಕ್ಕೊಂಡು ಕಟಿಬೇಕಿತ್ತು. ಯಾಕೋ ಕಟಿಲಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣ ಅಂತ ಹೇಳಿ ವಿಚಾರ ಮಾಡಿದರು.

'ಮತ್ತೊಮ್ಮೆ ಕೇಳತೇನಿ. ಬ್ಯಾರೆ ರೀತಿಂದ ಕೇಳತೇನಿ. ನೋಡೋಣ ಈಗರೆ ಸರಿ ಉತ್ತರ ಹೇಳ್ತಿಯೋ ಅಂತ. ಸರಿನ?' ಅಂದ್ರು ಕಟಗಿ ಸರ್.

'ಹೂಂರೀ ಸರ್!' ಅಂತ ದ್ಯಾಮ್ಯಾ ರೆಡಿ ಆಗಿ ನಿಂತ.

'ನೋಡ ದ್ಯಾಮಣ್ಣ. ನಾ ಇವತ್ತು ನಿನಗ ಎರಡು ಮೋಸಂಬಿ, ನಾಳೆ ಎರಡು ಮೋಸಂಬಿ ಕೊಟ್ಟೆ ಅಂತ ತಿಳಕೋ. ನಿನ್ನ ಕಡೆ ಎಷ್ಟು ಮೋಸಂಬಿ ಆಕ್ಕಾವು? ಹೇಳು ನೋಡೋಣ?' ಅಂದ್ರು ಕಟಗಿ ಸರ್.

ಈಗ ದ್ಯಾಮ್ಯಾ ಫಟ್ ಅಂತ ಉತ್ತರ ಹೇಳಿದ.

'ಸರ್! ಒಟ್ಟ ಕೂಡಿ ನಾಲ್ಕು ಮೋಸಂಬಿರೀ ಸರ್!' ಅಂತ ಹೇಳಿ ನಿಂತ.

'ವೆರಿ ಗುಡ್! ಈ ಸರೆ ಬರೋಬ್ಬರಿ ಹೇಳಿದಿ ನೋಡು. ಸರಿ ಅದ ಉತ್ತರ. ಮೊದಲು ಕೇಳಿದ ಪ್ರಶ್ನೆ ಮತ್ತ ನೆನಪು ಮಾಡಿಕೊ. ಎರಡು ಬೆಕ್ಕಿನ ಮರಿ ಇವತ್ತು. ನಾಳೆ ಮತ್ತ ಎರಡು ಬೆಕ್ಕಿನ ಮರಿ. ಒಟ್ಟ ಎಷ್ಟು?' ಅಂತ ಕಟಗಿ ಸರ್ ಕೇಳಿದರು.

'ಮೋಸಂಬಿ ಉದಾಹರಣೆ ಕೊಟ್ಟು ರೈಟ್ ಟ್ರಾಕಿಗೆ ತಂದೇನಿ. ನೋಡೋಣ ಹುಡುಗ ಏನು ಹೇಳ್ತಾನ,' ಅಂತ ಕಾದು ಕೂತರು.

'ಐದರೀ ಸರ್! ಐದು ಬೆಕ್ಕಿನ ಮರಿ ರೀ ಸರ್!' ಅಂದು ಬಿಟ್ಟ ದ್ಯಾಮ್ಯಾ.

ಎರಡು + ಎರಡು = ಐದು!

ಕಟಗಿ ಸರ್ ಫುಲ್ ಈಗ confuse ಆಗಿ ಬಿಟ್ಟರು. ಈ ದ್ಯಾಮ್ಯಾ ಹಿಂಗ್ಯಾಕ ಅಂತ ಅವರಿಗೆ ಒಟ್ಟ ತಿಳಿಲಿಲ್ಲ. ಇನ್ನು ದಂಡ ಪ್ರಯೋಗ ಮಾಡೋದೇ ಅಂತ ವಿಚಾರ ಮಾಡಿದರು. ಆದರೂ ಒಂದು clarification ಕೇಳಿಬಿಡೋಣ ಅಂತ ಅನ್ನಿಸಿ ಕೇಳಿದರು.

'ಅಲ್ಲಲೇ ಮಂಗ್ಯಾನಿಕೆ! ಎರಡು ಪ್ಲಸ್ ಎರಡು ಮೋಸಂಬಿ ಎಷ್ಟು ಅಂತ ಕೇಳಿದರ ನಾಕು ಅಂತ ಬರೋಬ್ಬರಿ ಹೇಳ್ತಿ. ಅದೇ ಎರಡು ಪ್ಲಸ್ ಎರಡು ಬೆಕ್ಕಿನ ಮರಿ ಅಂದ್ರ ಐದು ಅಂತೀಯಲ್ಲಲೇ. ಹ್ಯಾಂ?' ಅಂತ ಜಬರಿಸಿದರು.

'ಸರ್ರ! ಅದು ನಮ್ಮನಿಯಾಗ ಆಗಲೇ ಒಂದು ಬೆಕ್ಕಿನ ಮರಿ ಐತ್ರೀ ಸರ್ರಾ. ನೀವು ಇವತ್ತು ಕೊಡೋದು ಎರಡು, ಮತ್ತ ನಾಳೆ ಕೊಡೋದು ಎರಡು ಬೆಕ್ಕಿನ ಮರಿ, ಮತ್ತ ಮನಿಯಾಗಿನ ಒಂದು ಬೆಕ್ಕಿನ ಮರಿ ಕೂಡಿಸಿದರೆ ಐದು ಆತಲ್ಲರೀ ಸರ್!?' ಅಂದು ಬಿಟ್ಟ ದ್ಯಾಮ್ಯಾ.

ಮುಂದೆ ಕಟಗಿ ಸರ್ ಮಾತಾಡಲಿಲ್ಲ. ಅವರ ಕೈಯಾಗಿನ ಕಟಗಿ ದ್ಯಾಮ್ಯಾನ ಮೈತುಂಬಾ ತಾಂಡವ ನೃತ್ಯ ಮಾಡಿಬಿಡ್ತು. ದ್ಯಾಮ್ಯಾನ ಮೈಮ್ಯಾಲೆ ಬಾಸುಂಡಿ ಬಿಸಿ ಬಿಸಿ ಬುರ್ಬುರಿ ತರಹ ಎದ್ದವು. ಬಿಸಿ ಬಿಸಿ ಕೊಟ್ಟ ಮ್ಯಾಲೆ ಮತ್ತ ಥಂಡ ಥಂಡ ಏಳ್ತಾವೇನು?

'ಮಂಗ್ಯಾ ಸೂಳಿಮಗನ! ಆಟಾ ಹಚ್ಚಿ ಏನು? ಹ್ಯಾಂ? ನಿಮ್ಮ ಮನಿಯಾಗ ಎಷ್ಟು ಬೆಕ್ಕು ಅದಾವು, ಎಷ್ಟು ನಾಯಿ ಅದಾವು ಅಂತ ನಾ ಕೇಳಿದೆ ಏನು? ಹಾಂ? ನಿಮ್ಮ ಮನಿಯಾಗ ಒಂದು ಮಂಗ್ಯಾ ಮಾತ್ರ ಖರೇನೇ ಐತಿ. ಅದು ನೀನೇ,' ಅಂದವರೇ ದ್ಯಾಮ್ಯಾನ ಉಳ್ಳಾಡಿಸಿ ಉಳ್ಳಾಡಿಸಿ ಕಟದರು. ಮನಗಂಡ ಕಟದರು. ಅವರ ಧೋತ್ರದ ಕಚ್ಚಿ ಬಿಚ್ಚಿ ಹೋಗೋವಾಂಗ ಕಟದರು. ಕಟದು ಮುಗಿಸಿದ ಮ್ಯಾಲೆ ಧೋತ್ರಾ ಸರಿ ಮಾಡಿಕೊಂಡು, 'ನೀ ಎಂದೂ ಉದ್ಧಾರ ಆಗೋದಿಲ್ಲ ನೋಡಲೇ ದ್ಯಾಮ್ಯಾ. ಹಾಳಾಗಿ ಹೋಗು!' ಅಂತ ಬೈದು ಪಾಠ ಮುಂದುವರಿಸಿದರು. ದ್ಯಾಮ್ಯಾ ದನಾ ಇದ್ದಂಗ ಇದ್ದ. ಜಬರ್ದಸ್ತ ಘಟ್ಟ ಮುಟ್ಟ ಆಸಾಮಿ. ಆ ಪರಿ ಕಡಬು ತಿಂದರೂ ಏನೂ ಆಗದವನಾಂಗ ಕಿಸಿಕಿಸಿ ನಕ್ಕೋತ್ತ ಕೂತಿದ್ದ. ಸಂಜಿ ಸಾಲಿ ಮುಗಿಯೋ ಹೊತ್ತಿಗೆ ಇದೆಲ್ಲ ಮರ್ತೂ ಹೋಗಿತ್ತು ಅವಂಗ.

**

fast forward. ಮೂವತ್ತು ವರ್ಷಗಳ ನಂತರ. ದ್ಯಾಮ್ಯಾ ಅವರ ಬ್ಯಾಚಿನ reunion ಅಂದ್ರ ಅವರು SSLC ಮುಗಿಸಿ ಇಪ್ಪತ್ತೈದು ವರ್ಷಗಳ ನಂತರದ ರಜತಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ. ಅದಕ್ಕೇ ಅಂತಲೇ ಎಲ್ಲರೂ ಶಾಲೆಯಲ್ಲಿ ಕೂಡಿದ್ದರು. ಎಲ್ಲ ಹಳೆ ಸ್ಟೂಡೆಂಟ್ಸ್ ಕುಟುಂಬ ಸಮೇತ ಬಂದಿದ್ದರು. ಹಳೆ ಮಾಸ್ತರುಗಳು, ಟೀಚರ್ ಎಲ್ಲಾ ಬಂದಿದ್ದರು.

ದ್ಯಾಮ್ಯಾನೂ ಅವನ ಹೆಂಡತಿ ಅಕ್ಕಮ್ಮನ ಜೋಡಿ ಬಂದಿದ್ದ. ಎಲ್ಲಾ ಹಳೆ ಮಾಸ್ತರ್, ಟೀಚರ್ ಗಳನ್ನು ಭೆಟ್ಟಿ ಆಕ್ಕೋತ್ತ, ಎಲ್ಲರಿಗೂ ತನ್ನ ಪರಿಚಯ, ಮರು ಪರಿಚಯ ಮಾಡುತ್ತ ನಡೆದಿದ್ದ. ಕಟ್ಟ ಕಡೆಗೆ ಕಟಗಿ ಸರ್ ಸಿಕ್ಕರು.

'ನಮಸ್ಕಾರ್ರೀ ಸರ್ರಾ! ನಾನ್ರೀ ನಿಮ್ಮ ದ್ಯಾಮ್ಯಾ? ನೆನಪಾತ್ರೀ ಸರ್?' ಅಂತ ಕೇಳಿದ.

ಭಾಳ ವರ್ಷ ಆಗಿತ್ತು. ಕಟಗಿ ಸರ್ ಗೆ ಏಕ್ದಂ ನೆನಪಿಗೆ ಬರಲಿಲ್ಲ. ದ್ಯಾಮ್ಯಾನಂತಹ ಅದೆಷ್ಟು ಮಂದಿ ಅವರ ಕಡೆ ಕಲ್ತು ಎಲ್ಲೆಲ್ಲಿ ಇದ್ದಾರೋ ಏನೋ.

ತಮ್ಮ ಚಸ್ಮಾ ಫುಲ್ ಮ್ಯಾಲೆ ಮಾಡಿಕೊಂಡು ನೋಡಿದ ಕಟಗಿ ಸರ್, 'ಯಾರಪಾ ನೀನು?' ಅಂದರು. 

'ಸರ್! ನಾನ್ರೀ. ಎರಡು ಪ್ಲಸ್ ಎರಡು ಮೋಸಂಬಿ ಕೂಡಿಸಿದರ ನಾಲ್ಕು. ಆದ್ರ ಎರಡು ಪ್ಲಸ್ ಎರಡು ಬೆಕ್ಕಿನ ಮರಿ ಕೂಡಿಸಿದರ ಐದು ಅಂತ ಉತ್ತರ ಹೇಳಿದ್ದೆ ನೋಡ್ರೀ ಸರ್! ನೆನಪಾತ್ರೀ?' ಅಂತ ನೆನಪು ಮಾಡಿಕೊಟ್ಟ.

ಈಗ ಕಟಗಿ ಸರ್ ಗೆ ಫುಲ್ ನೆನಪಾತು. ಎಲ್ಲಾ ತರಹದ ಸ್ಟೂಡೆಂಟ್ಸ್ ನೋಡಿದ್ದರು. ಆದ್ರ ದ್ಯಾಮ್ಯಾನಂತಹ ಸ್ಟೂಡೆಂಟ್ ಮತ್ತ ಅವರ ಜೀವನದಾಗ ಸಿಕ್ಕಿರಲಿಲ್ಲ.

'ಹಾಂ! ನೆನಪಾತು ನೋಡಪಾ. ಆರಾಮಿದ್ದಿ? ಇಕಿ ಯಾರು? ನಿನ್ನ ಹೇಣ್ತಿಯಾ? ಒಳ್ಳೇದು ಒಳ್ಳೇದು,' ಅಂತ ದ್ಯಾಮ್ಯಾನ ಹೆಂಡ್ತಿ ಕಡೆನೂ ನೋಡಿದರು.

ಕಟಗಿ ಸರ್ ನೋಡೋದೇ ಒಂದು ತರಹ. ಪಾಪ ಅವರು ಯಾವದೇ ತರಹ ನೋಡಿದರೂ ಒಂದು ತರಹ ಕೀಚಕ ನೋಡಿದಂಗ ಕಾಣ್ತದ ಮಂದಿಗೆ. ಯಾಕೋ ಏನೋ. ಅವರ ಪರ್ಸನಾಲಿಟಿನೇ ಹಾಂಗದನೋ ಏನೋ.

ಕಾಟಾಚಾರಕ್ಕ ಅಂತ ದ್ಯಾಮ್ಯಾನ ಹೆಂಡತಿ ಅಕ್ಕಮ್ಮ ಸಹ 'ನಮಸ್ಕಾರ್ರೀ ಸರ್,' ಅಂದಳು.

'ಏನವಾ ನಿನ್ನ ಹೆಸರು?' ಅಂತ ಕೇಳಿದರು ಕಟಗಿ ಸರ್.

'ಅಕ್ಕಮ್ಮ ಅಂತರೀ ಸರ್,' ಅಂತ ದ್ಯಾಮ್ಯಾನೇ ಹೇಳಿಬಿಟ್ಟ.

'ಅಕ್ಕಮ್ಮ ಅಂತನೇ?! ಅಂದ್ರ ಇಕಿನ್ನ ಏನಂತ ಕರಿತೀಲೇ ದ್ಯಾಮ್ಯಾ? ಅಕ್ಕ ಅಂತನೂ ಅನ್ನುವಾಂಗಿಲ್ಲ. ಅಮ್ಮ ಅಂತನೂ ಅನ್ನುವಾಂಗಿಲ್ಲ. ಹೇ! ಹೇ!' ಅಂತ ಇಲ್ಲದ ಸಲ್ಲದ ಜೋಕ್ ಹೊಡೆದರು ಸರ್. ಕಟಗಿ ಸರ್ sense of humor ಅಂದ್ರ ಅದೊಂದು ತರಹದ ವಿಚಿತ್ರ ಹಾಸ್ಯ ಪ್ರಜ್ಞೆ.

ಅಕ್ಕಮ್ಮ ಒಳಗಿಂದಲೇ ಭಗ! ಭಗ! ಅಂತ ಉರಕೊಂಡಳು. ದ್ಯಾಮ್ಯಾ ಸುಮ್ಮ ಸುಮ್ಮನೇ ನಕ್ಕ. ತಮ್ಮ ಹಳೇ ಪೆಟ್ ವಿದ್ಯಾರ್ಥಿ ಸಿಕ್ಕಾನ ಅಂತ ಹೇಳಿ ಕಟಗಿ ಸರ್ ಒಳ್ಳೆ ಮೂಡ್ ಒಳಗ ಬಂದಿದ್ದರು ಅಂತ ಕಾಣಸ್ತದ. ಅವರ ಕಣ್ಣಿಗೆ ಅಕ್ಕಮ್ಮಂದು ಏನೋ ಕಣ್ಣಿಗೆ ಬಿತ್ತು. ಮೀಸಿ ಕೆಳಗ ತುಂಟ ನಗೆ ನಕ್ಕರು. 'ಹಿಂಗ್ಯಾಕ ನಗ್ತಾನ ಈ ಹಲ್ಕಟ್ ಭಾಡ್ಯಾ ಬುಡ್ಡಾ ಮಾಸ್ತರ್ ?' ಅಂತ ಅಕ್ಕಮ್ಮ ಅಂದುಕೊಂಡಳು.

'ಲೇ ದ್ಯಾಮ್ಯಾ,' ಅಂದರು ಕಟಗಿ ಸರ್.

'ಏನ್ರೀ ಸರ್?' ಅಂದ ದ್ಯಾಮ್ಯಾ.

'ಬಹಳ ವರ್ಷದ ಹಿಂದ ನೀ ಮೋಸಂಬಿ ಲೆಕ್ಕ ಸರಿ ಹೇಳಿದ್ದಿ ಆದ್ರ ಬೆಕ್ಕಿನ ಮರಿ ಲೆಕ್ಕ ತಪ್ಪ ಹೇಳಿದ್ದಿ. ನನಗ ಅನಸ್ತೈತಿ ಈಗ ಕೇಳಿದರ ನೀ ಮೋಸಂಬಿ ಲೆಕ್ಕಾ ತಪ್ಪ ಹೇಳ್ತೀ ನೋಡಲೇ. ಜರೂರ್ ತಪ್ಪೇ ಹೇಳ್ತಿ ನೋಡಲೇ. ಬೆಟ್ ಕಟ್ಟತೀ ಏನು?' ಅಂತ ಅಂದವರೇ ಮತ್ತ 'ಹೇ! ಹೇ!' ಅಂತ ನಕ್ಕರು ಕಟಗಿ ಸರ್.

'ಯಾಕ್ರೀ ಸರ್ರಾ? ಈಗ್ಯಾಕ ಮೋಸಂಬಿ ಲೆಕ್ಕಾ ತಪ್ಪ ಹೇಳಲಿ? ಹಾಂ? ಈಗೂ ಎರಡು ಪ್ಲಸ್ ಎರಡು ಮೋಸಂಬಿ ಅಂದ್ರ ನಾಲ್ಕು ಅಂತನೇ ಹೇಳ್ತೇನ್ರೀ ಸರ್,' ಅಂದ ದ್ಯಾಮ್ಯಾ.

'ಉತ್ತರ ತಪ್ಪು ಹೇಳೇ ಬಿಟ್ಟಿಯಲ್ಲೋ ನಿನ್ನಾಪನಾ. ಹೇ! ಹೇ! ನಾ ಏನು ಹೇಳಿದ್ದೆ? ತಪ್ಪು ಹೇಳ್ತೀ ಅಂತ. ತಪ್ಪು ಹೇಳೇಬಿಟ್ಟಾ. ನನ್ನ ಕಟಗಿ ಎಲ್ಲೈತಿ? ನಿನ್ನ ಹಾಕ್ಕೊಂಡು ಕಟಿಯಾಕ? ಹೇ! ಹೇ!' ಅಂತ ಹೇಳಿಕೋತ್ತ ಕಟಗಿ ಸರ್ ಬಿದ್ದು ಬಿದ್ದು ನಕ್ಕರು.

'ಏನವಾ ಅಕ್ಕಮ್ಮ? ನಿನ್ನ ಗಂಡಗ ಇನ್ನೂ ಸರಳ ಗಣಿತ ಬರೋದಿಲ್ಲ ನೋಡವಾ. ಹೇ!ಹೇ!' ಅಂತ ವಿಚಿತ್ರವಾಗಿ ನಕ್ಕರು.

'ನಾ ಹೇಳಿದ್ರಾಗ ಏನು ತಪ್ಪು ಐತ್ರೀ ಸರ್?' ಅಂತ ಕೇಳಿದ ದ್ಯಾಮ್ಯಾ. ಅಕ್ಕಮ್ಮ ಅಂತೂ ಫುಲ್ ಉರಕೊಂಡು, 'ಯಾಕರೆ ಬಂದೆನೋ ಇವರ ಜೋಡಿ?'ಅಂದುಕೊಂಡಳು. ಅಕಿಗೆ ಇವರ ಲೆಕ್ಕದ ಭಾನಗಡಿ ಏನೂ ಗೊತ್ತಿರಲಿಲ್ಲ.

'ಅಲ್ಲಲೇ ದ್ಯಾಮ್ಯಾ. ನೀನು ಯಾವಾಗಲೂ ಮನಿಯಾಗಿನ ಸಾಮಾನು ಸಹಿತ ಕೂಡಿಸಿ ಲೆಕ್ಕ ಮಾಡಿ ಹೇಳವ. ಆವಾಗ ಮನಿಯಾಗಿನ ಒಂದು ಬೆಕ್ಕಿನ ಮರಿ ಸಹಿತ ಕೂಡಿಸಿ ಐದು ಅಂದಂಗ ಈಗ್ಯಾಕ ಮೋಸಂಬಿ ಸಹಿತ ಕೂಡಿಸಿ ಹೇಳಲಿಲ್ಲ? ಹಾಂ?' ಅಂದರು ಕಟಗಿ ಸರ್.

ದ್ಯಾಮ್ಯಾಗ ಒಟ್ಟ ತಿಳಿಲಿಲ್ಲ. 'ಮತ್ಯಾವ ಮೋಸಂಬಿ ಕೂಡಿಸಿ ಹೇಳು ಅನ್ನಾಕತ್ತಾರು ಸರ್?' ಅಂತ ತಲಿ ಕೆಡಿಸ್ಕೊಂಡ. ಹೆಂಡತಿ ಅಕ್ಕಮ್ಮನ ಕಡೆ ನೋಡಿದ. ಅಕಿ ಕೆಟ್ಟ ಮಾರಿ ಮಾಡಿ ನಿಂತಿದ್ದಳು.

ಕಟಗಿ ಸರ್ ಅವರಿಗೆ ಗೊತ್ತಾತು, 'ಈ ಹಾಪ್ ಸೂಳಿಮಗಂಗ ತಿಳಿವಲ್ತು,' ಅಂತ.

'ಲೇ ದ್ಯಾಮ್ಯಾ, ಎರಡು ಪ್ಲಸ್ ಎರಡು ಮೋಸಂಬಿ ಅಂದ್ರ ಟೋಟಲ್ ಆರು ಅಂತ ಹೇಳಲೇ. ನಿನ್ನ ಲೆಕ್ಕದ ಪ್ರಕಾರ ಅದೇ ಸರಿ!' ಅಂದವರೇ ಸಿಕ್ಕಾಪಟ್ಟೆ ನಕ್ಕರು. ದ್ಯಾಮ್ಯಾನ ಡುಬ್ಬಾ ಚಪ್ಪರಿಸಿ ಚಪ್ಪರಿಸಿ ನಕ್ಕರು. ಏನು ಅಂತಾದ್ದು ಕಂಡಿತ್ತೋ ಅವರಿಗೆ ಆ ಪರಿ ನಗಲಿಕ್ಕೆ? ದೇವರಿಗೇ ಗೊತ್ತು.

'ಎರಡು ಪ್ಲಸ್ ಎರಡು ಪ್ಲಸ್ ಮೋಸಂಬಿ ಅಂದ್ರ ಆರು ಹೆಂಗ್ರೀ ಸರ್? ಹ್ಯಾಂ? ನಾಲ್ಕು ಅಲ್ಲರೀ?' ಅಂತ ಕೇಳಿದ ದ್ಯಾಮ್ಯಾ.

'ನಿನ್ನ ಹೆಂಡತಿ ಕಡೆ ಇರೋ ಎರಡು ಮೋಸಂಬಿ ಕೂಡಿಸಿ ಹೇಳಲೇ ಮಂಗ್ಯಾನಿಕೆ. ಬೆಕ್ಕಿನ ಮರಿ ಅಂದ್ರ ಮನ್ಯಾಗಿಂದು ಕೂಡಿಸಿ ಹೇಳ್ತೀ. ಈಗ ಮೋಸಂಬಿ ಕೇಳಿದಾಗ ಮನಿಯಾಗಿರೋದು, ಇಲ್ಲೆ ಹೆಂಡತಿ ಕಡೆ ಇರೋದು ಎಲ್ಲಾ ಮರ್ತೇ ಬಿಟ್ಟಿಯೇನೋ? ಅವನ್ನೂ ಎಲ್ಲಾ ಕೂಡಿಸಿಯೇ ಹೇಳೋ ನಮ್ಮಪ್ಪಾ,' ಅಂದವರೇ ಮತ್ತ ಮತ್ತ ನಕ್ಕರು ಕಟಗಿ ಸರ್.

'ಏನು ಹಲ್ಕಟ್ ಮಾಸ್ತರ್ ಅದಾನು ಇಂವಾ? ನಮ್ಮಜ್ಜನ ವಯಸ್ಸಾಗೈತಿ ಬುಡ್ಡಾಗ. ಹ್ಯಾಂಗ ಡಬಲ್ ಮೀನಿಂಗ್ ಡೈಲಾಗ್ ಹೊಡಿತಾನ ನೋಡು ಈ ಮಾಸ್ತರ್! ಹಲ್ಕಟ್! ಮಷ್ಕಿರಿ ಹಲ್ಕಟ್! ಬದ್ಮಾಷ್ ಭಾಡಕೋವ್!' ಅಂತ ಅಕ್ಕಮ್ಮ ಉರಿದುಕೊಂಡಳು. ಸೀರಿ ಸೆರಗನ್ನು ಮತ್ತೂ ಎಳೆದೆಳೆದು, ಮತ್ತ ಮತ್ತ ಸರೀತ್ನಾಗಿ ಮುಚ್ಚಿಕೊಂಡಳು. ಮೋಸಂಬಿ ಅಂದ್ರ ಅಕಿ line of thinking ಏನೋ ಬ್ಯಾರೆನೇ ಹೊಂಟಿತ್ತು. ಏನೋ ಏನೋ. ಯಾರಿಗೆ ಗೊತ್ತು.

'ಹೆಂಡ್ತಿ ಕಡೆ ಇರೋ ಎರಡು ಮೋಸಂಬಿ ಕೂಡಿಸಿ ಹೇಳಿದರ ಆರು ಆಗ್ತಾವು ಅಂದ್ರ ಏನು?' ಅಂತ ದ್ಯಾಮ್ಯಾಗೂ ತಿಳಿಲಿಲ್ಲ.

ಕಟಗಿ ಸರ್ ಕಡೆ ನೋಡಿ, 'ಹೇಂ? ಏನು?' ಅನ್ನೋ ಲುಕ್ ಕೊಟ್ಟ.

'ಅಲ್ಲಲೇ, ನಿನ್ನ ಹೆಂಡ್ತಿ ಕೈಯಾಗ ಹಿಡಕೊಂಡ ಜಾಳಿಗಿ ಜಾಳಿಗಿ ಪ್ಲಾಸ್ಟಿಕ್ ಬುಟ್ಟಿಯಾಗ ಎರಡು ಮೋಸಂಬಿ ಅವ ನೋಡಲೇ. ಅವನೋ ಇಲ್ಲೋ? ನಾ ಇವತ್ತು ಕೊಟ್ಟ ಎರಡು ಮೋಸಂಬಿ, ನಾಳೆ ಕೊಡೋ ಎರಡು ಮೋಸಂಬಿ, ನಿನ್ನ ಹೆಂಡತಿ ಕಡೆ ಇರೋ ಎರಡು ಮೋಸಂಬಿ. ಒಟ್ಟ ಎಷ್ಟಾತು? ನಿನ್ನ ಪ್ರಕಾರನೇ ಲೆಕ್ಕ ಮಾಡಿದರ ಆರು ಆತೋ ಇಲ್ಲೋ?' ಅಂದವರೇ ಕಟಗಿ ಸರ್ ಮತ್ತ ಬಿದ್ದು ಬಿದ್ದು ನಕ್ಕರು.

ಈಗ ದ್ಯಾಮ್ಯಾನೂ ಬಿದ್ದ ಬಿದ್ದ ನಕ್ಕ. 'ಆಹಾ! ಈ ಮೋಸಂಬಿ ನೋಡಿ ಅಂದರೇನ್ರೀ ಸರ್? ಎಲ್ಲಾ ಮಾಸ್ತರ್, ಟೀಚರ್ ಮಂದಿಗೆ ಎರಡೆರೆಡು ಮೋಸಂಬಿ ಕೊಡೋಣ ಅಂತಲೇ ನಾಲ್ಕು ಡಜನ್ ತೊಗೊಂಡು ಬಂದಿದ್ದೆ ನೋಡ್ರೀ. ಎಲ್ಲಾರಿಗೆ ಕೊಟ್ಟು, ಕಡೇ ಎರಡು ಮೋಸಂಬಿ ನಿಮಗೇ ಅಂತೇ ಉಳದಾವು ನೋಡ್ರೀ ಸರ್!' ಅಂದ ದ್ಯಾಮ್ಯಾ ಹೆಂಡ್ತಿ ಕಡೆ ನೋಡಿ, 'ಆವು ಎರಡು ಮೋಸಂಬಿ ಈ ಕಡೆ ಕೊಡಬೇ. ಸರ್ ಗೆ ಕೊಡಬೇಕು,' ಅಂದ.

ಅಕ್ಕಮ್ಮ 'ಯಾವ ಮೋಸಂಬಿ?ಹ್ಯಾಂ???' ಅನ್ನೋ ಹಾಂಗ ನೋಡಿದಳು.

'ಏ ನಿನ್ನ! ನಿನ್ನ ಕೈಯ್ಯಾಗ ಇರೋ ಪ್ಲಾಸ್ಟಿಕ್ ಬುಟ್ಯಾಗಿರೋ ಎರಡು ಮೋಸಂಬಿ ಕೊಡಬೇ. ದೌಡ್ ಕೊಡಬೇ. ಇನ್ನೂ ರಗಡ ಮಂದಿ ಭೆಟ್ಟಿ ಆಗೋದೈತಿ. ಲಗೂನ ಅವು ಎರಡು ಮೋಸಂಬಿ ಕೊಡಬೇ,' ಅಂದು ಗಡಿಬಿಡಿ ಮಾಡಿದ ದ್ಯಾಮ್ಯಾ.

ಈಗ ಅಕ್ಕಮ್ಮನಿಗೆ ಫ್ಲಾಶ್ ಆತು. ಅಕಿ ಮೋಸಂಬಿ ಗೊಂದಲ ಬಗಿಹರಿತು.

'ನಿಮ್ಮ ಮಾಸ್ತರ್ರು, ನೀವು ಎಲ್ಲಾ ಈ ಮೋಸಂಬಿ ಬಗ್ಗೆ ಮಾತಾಡಾಕತ್ತಿದ್ದರಿ ಏನು? ನಾ ಏನೋ ಬ್ಯಾರೆ ಮೋಸಂಬಿ ಬಗ್ಗೆನೇ ವಿಚಾರ ಮಾಡಾಕತ್ತಿದ್ದೆ......' ಅಂತ ರಾಗ ಎಳೆದಳು. ಹಾಂಗೆ ರಾಗ ಎಳಕೋತ್ತೇ, ತನ್ನ ಕಡೆ ಬುಟ್ಟಿಯಾಗ ಇದ್ದ ಕೊನೇ ಎರಡು ಮೋಸಂಬಿ ತೆಗೆದು ಕೊಟ್ಟಳು. ಮೋಸಂಬಿ ಅಂದ್ರ ಅಕಿ ತಲಿ ಹಾಂಗ ಓಡಲಿಕತ್ತಿತ್ತು ಅದಕ್ಕೆ ಅಂತನೋ ಏನೋ ಗೊತ್ತಿಲ್ಲ. ಆದ್ರ ಕಡೆ ಎರಡು ಮೋಸಂಬಿ Siamese twins ಗತೆ ಒಂದಕ್ಕೊಂದು ಕೂಡಿಕೊಂಡು ಇದ್ದವು. ನೋಡಿದರೆ ಒಂದು ಪರ್ಫೆಕ್ಟ್ ಜೋಡಿ ಮೋಸಂಬಿ ಗತೆನೇ ಇದ್ದವು.

'ಹೋಗ್ಗ ನಿನ್ನ! ನಾವು ಮಾತಾಡಾಕತ್ತಿದ್ದು ಇವೇ ಮೋಸಂಬಿ ಬಗ್ಗೆ ಬೇ. ತಿನ್ನೋ ಮೋಸಂಬಿ,' ಅಂತ ಹೇಳಿಕೋತ್ತ ದ್ಯಾಮ್ಯಾ ಅಕಿ ಕಡೆಯಿಂದ ಮೋಸಂಬಿ ಇಸ್ಕೊಂಡ. ಎಲಿ ಮ್ಯಾಲೆ ಅಡಕಿ ಮತ್ತ ಒಂದು ಐದುನೂರಾ ಒಂದು ರೂಪಾಯಿ ಇಟ್ಟು, ಕಟಗಿ ಸರ್ ಅವರಿಗೆ ಎರಡು ಮೋಸಂಬಿ ಜೋಡಿ ಎಲ್ಲವನ್ನೂ ಮರ್ಡರ್ ಮಾಡಲು ಕೊಡುವ ಸುಪಾರಿ ಮಾದರಿಯಲ್ಲಿ ಅರ್ಪಣೆ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದ ತೊಗೊಂಡ. ಸರ್ ಮನತುಂಬಿ ಆಶೀರ್ವಾದ ಮಾಡಿದರು.

'ಲೇ ದ್ಯಾಮ್ಯಾ! ಒಂದು ನೆನಪಿಡ ನೀ! ನೀ ಯಾವಾಗಲೂ ಮನಿಯಾಗಿನ ಸಾಮಾನು ಕೂಡಿಸೇ ಲೆಕ್ಕಾ ಮಾಡೋದನ್ನ ಮಾತ್ರ ಮರಿಬ್ಯಾಡಲೇ!' ಅಂತ ಹೇಳಿಕೋತ್ತ, ಪೆಕಪೆಕಾ ಅಂತ ನಕ್ಕೋತ್ತ ಕಟಗಿ ಸರ್ ಹೋದರು.

ದ್ಯಾಮ್ಯಾ, ಅಕ್ಕಮ್ಮನನ್ನು ಕರಕೊಂಡು ರಜತಮಹೋತ್ಸವದ ಇತರೆ ಕಾರ್ಯಕ್ರಮಗಳಲ್ಲಿ ತಲ್ಲೀನನಾದ.

* ಸ್ಪೂರ್ತಿ: ಶಿವರಾಂ ಶಾಸ್ತ್ರಿ ಅವರು ಬರೆದಿದ್ದ ಒಂದು ಸಣ್ಣ ಜೋಕ್. ಅವರದ್ದರಲ್ಲಿ reunion ಭಾಗ ಇರಲಿಲ್ಲ. reunion ಭಾಗ ಪೂರ್ತಿ ನನ್ನದೇ ಕಲ್ಪನೆ.

ಕಟಗಿ ಸರ್ ಗೆ ಕೊಟ್ಟ ಕೊನೇ ಎರಡು ಮೋಸಂಬಿ ! Natural Twin Pack

Sunday, January 18, 2015

ಶ್ರೀಖಂಡ!

ಟೀಚರ್: ಮನಿಗೆ ಹೋಗಿ ನಿಮ್ಮಪ್ಪನ್ನ ಕರ್ಕೊಂಡು ಬಾ. ನಿನ್ನ ಬಗ್ಗೆ ಮಾತಾಡೋದು ಅದ.

ಸ್ಟೂಡೆಂಟ್: ಏ! ಇವತ್ತು ನಮ್ಮ ಅಪ್ಪ ಬರಲಿಕ್ಕೆ ಸಾಧ್ಯನೇ ಇಲ್ಲ ಬಿಡ್ರೀ.

ಟೀಚರ್: ಯಾಕ?? ಊರಾಗ ಇಲ್ಲ??

ಸ್ಟೂಡೆಂಟ್: ಇದ್ದಾರ್ರೀ.

ಟೀಚರ್: ಮತ್ತ??
 

ಸ್ಟೂಡೆಂಟ್: ನಾಳೆ ನಮ್ಮನಿಯೊಳಗ ಹಬ್ಬ ಅದರಿ.
 

ಟೀಚರ್: ಏ! ಹುಚ್ಚ ಮಂಗ್ಯಾನಿಕೆ. ನಾಳೆ ನಿಮ್ಮನಿಯೊಳಗ ಹಬ್ಬ ಇರೋದಕ್ಕೂ ಇವತ್ತು ನಿಮ್ಮಪ್ಪನ್ನ ಸಾಲಿಗೆ ಕರ್ಕೊಂಡು ಬರಲಿಕ್ಕೆ ಆಗದೇ ಇರೋದಕ್ಕೂ ಏನೋ ಸಂಬಂಧ?? ಹಾಂ?? ಕೊಡಲೇನು ಒಂದು??
 

ಸ್ಟೂಡೆಂಟ್: ನಾಳೆ ಹಬ್ಬಕ್ಕ ಶ್ರೀಖಂಡ ಮಾಡಾಕಿದ್ದಾಳರೀ ನಮ್ಮವ್ವ!
 

ಟೀಚರ್: ಅದಕ?? ಏನು??
 

ಸ್ಟೂಡೆಂಟ್: ಶ್ರೀಖಂಡ ಮಾಡಲಿಕ್ಕೆ ಮೊಸರು ನಮ್ಮಪ್ಪಗ ಇರೋ ಒಂದೇ ಒಂದು ಧೋತ್ರದಾಗೇ ಕಟ್ಟಿ, ನೇತು ಹಾಕಿ ಬಿಟ್ಟಾಳರೀ ನಮ್ಮವ್ವ!!!! ಉಟ್ಟುಕೊಂಡು ಬರಲಿಕ್ಕೆ ನಮ್ಮಪ್ಪನ ಕಡೆ ಬ್ಯಾರೆ ಧೋತ್ರ ಇಲ್ಲರೀ!

ಇದನ್ನು ಕೇಳಿದ ಟೀಚರ್ ಎಚ್ಚರ ತಪ್ಪಿ ಬಿದ್ದು, ನಂತರ ಎದ್ದು ಸುಧಾರಿಸಿಕೊಂಡ ನಂತರ ಕೇಳಿದ್ದು ಒಂದೇ ಪ್ರಶ್ನೆ

ಶ್ರೀಖಂಡಕ್ಕ ಮೊಸರು ತೂಗು ಹಾಕೋಕಿಂತ ಮೊದಲು ಧೋತ್ರಾ ಒಗೆದಿದ್ದರಿ (ತೊಳೆದಿದ್ದಿರಿ) ಏನು???

ಸ್ಟೂಡೆಂಟ್: ಗೊತ್ತಿಲ್ಲರೀ!!!!!!

ಟೀಚರ್ ಮತ್ತೊಮ್ಮೆ ಎಚ್ಚರ ತಪ್ಪಿ ಬಿದ್ದವರು ಇನ್ನೂ ಎದ್ದಿಲ್ಲ!

ಒಂದೇ ಧೋತರಂ

ಯಾವಾಗಲೂ ಧೋತ್ರ (ಪಂಚೆ) ಉಟ್ಟುಗೊಳ್ಳುತ್ತಿದ್ದ ಮಹನೀಯರೊಬ್ಬರು ಯಾಕೋ ಬರೇ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಕಟ್ಟಿ ಮ್ಯಾಲೆ ಕೂತಿದ್ದರು.

'ಯಾಕ್ರೀ ಸರ್ರಾ? ಧೋತ್ರ ಏನಾತ್ರೀ?' ಅಂತ ಕೇಳಿದೆ.

ಅವರು ಹೇಳಿ ಕೇಳಿ ಸಾಹಿತಿಗಳು. ಅವರ ಧೋತ್ರದ ಸ್ಥಿತಿಗತಿಗಳನ್ನು ಕವನದ ರೂಪದಲ್ಲಿ ಹೇಳಿಬಿಟ್ಟರು. 'ಏನಪಾ ಇವರು ನಾ ಇವರ ಧೋತ್ರದ ಬಗ್ಗೆ ಕೇಳಿದರೆ ಇವರು 'ವಂದೇ ಮಾತರಂ' ಹಾಡ್ಲಿಕತ್ತುಬಿಟ್ಟರಲ್ಲಾ!?' ಅಂತ ಘಾಬ್ರಿಯಾದ್ರ ಅವರು ಅದೇ ಮಾದರಿಯಲ್ಲಿ 'ಒಂದೇ ಧೋತರಂ' ಅಂತ ಹಾಡಿಬಿಟ್ಟರು. ಎಷ್ಟು ಮಸ್ತ ಹೇಳ್ಯಾರ ನೋಡ್ರೀ!

ಒಂದೇ ಧೋತರಂ
ಇರುವದೊಂದೇ ಧೋತರಂ ।।ಪ।।

ಈ ಹಳೆಯ ಧೋತರಂ
ಈ ಹರಕಾ ಧೋತರಂ

ಒಂದೇ ಧೋತರಂ
ಇರುವದೊಂದೇ ಧೋತರಂ

ಉಟ್ಟುಗೊಂಡರೆ ಎಲ್ಲಾ ಕಾಣಸ್ತದಂ
ಕಂಡವರೆಲ್ಲ ಕೈ ಮುಗಿತಾರಂ
ನಾಚ್ತಾರಂ, ನಾಚಿ ನಾಚಿ ನೀರಾಗತಾರಂ
ಬೈತಾರಂ, ಉಗಿತಾರಂ, ಝಾಡಿಸಿ ಝಾಡಿಸಿ ಒದಿತಾರಂ.

ಒಂದೇ ಧೋತರಂ
ಇರುವದೊಂದೇ ಧೋತರಂ

ಒಂದೇ ಧೋತರಂ
ಇರುವದೊಂದೇ ಧೋತರಂ

**

ಒಮ್ಮೊಮ್ಮೆ ಬಲು ವಿಚಿತ್ರ ಅನ್ನುವ ಘಟನೆಗಳು ನಡೆದುಬಿಡುತ್ತವೆ. ಈ ಮಂಗಗೀತೆ (ರಂಗಗೀತೆ ಇದ್ದಂಗೆ ಮಂಗಗೀತೆ) ತಲೆಗೆ ಹೊಳೆದಿದ್ದು, ಬರೆದಿದ್ದು, ಹಾಡಿದ್ದು ಎಲ್ಲ ಆಗಸ್ಟ್ ೧೪, ೨೦೧೩ ರಂದು. ಭಾರತದಲ್ಲಿ ಆಗಲೇ ಆಗಸ್ಟ್ ೧೫ ರ  ಬೆಳಿಗ್ಗೆ ಆಗಿ ಎಲ್ಲರೂ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದ್ದರು. ನನ್ನದೇ ತರಹದ sense of humor ಇದ್ದು, ಇಂತದ್ದನ್ನೆಲ್ಲ ಓದಿ, ನಕ್ಕು ಬಿಡುವಂತಹ ಕೆಲ ಸಹೃದಯಿ ಮಿತ್ರ ಮಿತ್ರೆಯರಿಗೆ ಸುಮ್ಮನೆ ಫೇಸ್ಬುಕ್ ನಲ್ಲಿ ಫಾರ್ವರ್ಡ್ ಮಾಡಿದ್ದೆ.

ಸರಿ. ಅಂತವರಲ್ಲಿ ಒಬ್ಬ ಗೆಳತಿ ಸ್ವಾತಂತ್ರ ದಿನಾಚರಣೆಗೆ ಮುಖ್ಯ ಅತಿಥಿ ಅಂತಲೋ, ಅಧ್ಯಕ್ಷೆ ಅಂತಲೋ ಹೋಗಿ ಅವಳ ಮಗಳ ಶಾಲೆಯ ಸಮಾರಂಭದಲ್ಲಿ ವೇದಿಕೆ ಮೇಲೆ ಕೂತಿದ್ದಳು. ಆ ಊರಿನ ಗಣ್ಯ ವ್ಯಕ್ತಿಗಳಲ್ಲಿ ಅವಳೂ ಒಬ್ಬಳೂ. ಅದಕ್ಕೇ ಅಂತ ಧ್ವಜಾರೋಹಣ ಮಾಡಿ ಹೋಗಿ ಅಂತ ಕರೆದಿದ್ದರು ಅಂತ ಕಾಣುತ್ತದೆ.

ಈ ಕಾಲದ ಎಲ್ಲರಂತೆ ಈಕೆಯೂ smartphone ವಿಭೂಷಿತೆ. ಕೂತಿದ್ದಾಳೆ ವೇದಿಕೆ ಮೇಲೆ. ಏನೋ ಭಾಷಣ ಅದು ಇದು ನಡೆದಿತ್ತು ಅಂತ ಹೇಳಿ, ಎಲ್ಲರ ಹಾಗೆ smartphone ತೆಗೆದು, ಫೇಸ್ಬುಕ್ ಅದು ಇದು ಅಂತ ಕೆತ್ತೆಬಜೆ ಕಾರ್ಬಾರ್ ಮಾಡುತ್ತ ಕೂತಿದ್ದಾಳೆ. ಅದೇ ಸಮಯಕ್ಕೆ ನನ್ನ 'ಒಂದೇ ಧೋತರಂ' ಇದ್ದ ಮೆಸೇಜ್ ಹೋಗಿ, ಪಿಂಗ್ ಅಂತ ಸೌಂಡ್ ಮಾಡಬೇಕೇ? ಏನೋ ಮೆಸೇಜ್ ಬಂದಿರಬೇಕು. Happy Independence Day, ಅಂತ ಯಾರೋ ಮೆಸೇಜ್ ಕಳಿಸಿರಬಹುದು ಅಂತ ಮೆಸೇಜ್ ಓದಿದ್ದಾಳೆ. 'ಒಂದೇ ಧೋತರಂ' ಓದಿದ್ದೇ, ನಗು ತಡೆಯಲಾಗದೆ, ಅಲ್ಲೇ ಕಿಸಿಕಿಸಿ ಅಂತ ನಕ್ಕುಬಿಟ್ಟಳಂತೆ ಪುಣ್ಯಾತ್ಗಿತ್ತಿ. ಒಂದಿಷ್ಟು ನಕ್ಕ ನಂತರ, ವೇದಿಕೆ ಮೇಲಿದ್ದದ್ದು ಅರಿವಾಗಿ, ಪಕ್ಕದಲ್ಲಿ ಆಕೆಯ ಮಕ್ಕಳ ಶಿಕ್ಷಕರೂ, ಮುಂದೆ ಆಕೆಯ ಮಕ್ಕಳೂ ಸೇರಿದಂತೆ ಇತರ ವಿದ್ಯಾರ್ಥಿಗಳಿದ್ದಾರೆ ಅಂತ ಅರಿವಾಗಿ, ಹೇಗೋ ಮಾಡಿ ಬಾಯಿಗೆ ಕೈಯಿಟ್ಟುಕೊಂಡು, ನಗೆ ತಡೆದುಕೊಂಡು, ಹೇಗೋ ಸಮಾರಂಭ ಮುಗಿಸಿಬಂದಳಂತೆ.

ನಂತರ ಮೆಸೇಜ್ ಮಾಡಿ, 'ಏನೋ ನೀನು!? ಹಾಂ? ಹೀಂಗ ಮಾಡೋದು?' ಅಂದಳು.

'ಅಯ್ಯ! ನಾ ಏನ್ ಮಾಡಿದೆ ಮಾರಾಳ????' ಅಂದೆ.

'ಏನು ಅದು? ಅಂತಾ ಮೆಸೇಜ್ ಅದೂ ನಾ ಸ್ಟೇಜ್ ಮೇಲೆ ಕೂತಾಗೇ ಕಳಿಸೋದ?' ಅಂದಳು.

ಶಿವನೇ ಶಂಭುಲಿಂಗ!

'ನನಗೇನು ಗೊತ್ತ? ನೀ ಸ್ಟೇಜ್ ಮ್ಯಾಲೆ ಇರ್ತೀ ಅಂತ. ಸ್ಟೇಜ್ ಮೇಲೆ ಇದ್ದಾಗ ಸುಮ್ಮನೇ ಕೂಡದೇ smartphone ತೆಗೆದು ಕೆತ್ತೆಬಜೆ ಕಾರ್ಬಾರ್ ಮಾಡಿದ್ದು ನಿಂದೇ ತಪ್ಪು!' ಅಂತ ನಾನೂ ರಿವರ್ಸ್ ಇಟ್ಟೆ.

ಇಬ್ಬರೂ ನಕ್ಕು ಮಾತು ಮುಗಿದಿತ್ತು. ಆದರೆ ನಗು ಮಾತ್ರ ನಿರಂತರ.

*

ಗೀತಕಾರರು ಸಂಗೀತ ಸಂಯೋಜನೆ ಸಹಿತ ಮಾಡಿ ಗಾಯಕರೂ ಆಗಿ ಬಿಟ್ಟರೆ??? ನಿಮ್ಮ ಕಿವಿ ಬಗ್ಗೆ ಕಾಳಜಿ ಇಲ್ಲದಿದ್ದರೆ ಇಲ್ಲಿ 'ಒಂದೇ ಧೋತರಂ' ಕೇಳಿ. ನಿಮ್ಮ ಕಿವಿ ತಮ್ಮಟೆ ಢಂ ಅಂದರೆ ಅದಕ್ಕೆ ನಾವು ಜವಾಬ್ದಾರಲ್ಲ!

'ಏ! ಇದನ್ನ ಡುಯೆಟ್ ಹಾಡೋ!' ಅಂತ ಇನ್ನೊಬ್ಬಳ ಸಲಹೆ.

'ಬ್ಯಾಡ ಮಾರಾಳ!' ಅಂದೆ.

ಕೋತಿ ತಾನು ಕೆಡೋದಷ್ಟೇ ಅಲ್ಲದೇ ವನವನ್ನೂ ಕೆಡಿಸಿತಂತೆ.

*

parody ಬರೆದಾಗ 'ಮೂಲ ಲೇಖಕರ ಕ್ಷಮೆ ಕೋರಿ' ಅಂತ ಹಾಕುವದು ರಿವಾಜು. ಅದೇ ರೀತಿ 'ವಂದೇ ಮಾತರಂ' ಬರೆದ ಬಂಕೀಮ್ ಚಂದ್ರ ಚಟರ್ಜೀ, ಸಂಗೀತ ಸಂಯೋಜಕರ ಕ್ಷಮೆ ಕೋರಿಯೇ ಬಿಡುತ್ತೇನೆ. ಒಂದು ಕಾಲದಲ್ಲಿ ರಾಷ್ಟ್ರಗೀತೆ ಆಗಬೇಕಿದ್ದ ಪವಿತ್ರ 'ವಂದೇ ಮಾತರಂ' ಗೀತೆಗೆ ಯಾವದೇ ತರಹದ ಅಗೌರವ ತೋರುವ, ಅಪಚಾರ  ಉಂಟುಮಾಡುವ ಉದ್ದೇಶ ಇತ್ಯಾದಿ ಇಲ್ಲವೇ ಇಲ್ಲ. ಅದೊಂದು ಮಾತ್ರ ಖಾತ್ರಿ. ಹಾಗಾಗಿ ತಪ್ಪು ತಿಳಿಯುವದು ಬೇಡ. ಹಾಸ್ಯ ಪ್ರಜ್ಞೆ ಜಾರಿಯಲ್ಲಿರಲಿ.

ಒಂದೇ ಧೋತರಂ! ಹೊಸ ಧೋತರಂ!

Thursday, January 15, 2015

I is fine!

ಟೀಚರ್: ಇಂಗ್ಲೀಷ್ "I" ಉಪಯೋಗಿಸಿ ಒಂದು ವಾಕ್ಯ ಮಾಡ್ರೀ. ಯಾರು ಮಾಡ್ತೀರಿ?????

ದ್ಯಾಮ್ಯಾ (ಕೈಯೆತ್ತಿ, ಕೈಯೆತ್ತಿ, ಜಿಗಿದು, ಜಿಗಿದು, ಜಿಗಿಯೋವಾಗ ಚೊಣ್ಣಾ ಜಾರುತ್ತಿದ್ದರೂ): ಟೀಚರ್ ನಾನ್ರೀ! ನಾನ್ರೀ! ನನ್ನೇ ಕೇಳ್ರೀ. ಪ್ಲೀಸ್ ರೀ ಟೀಚರ್!

ಟೀಚರ್: ಸರಿ. ಮಾಡಪಾ ದ್ಯಾಮಣ್ಣ. ಏನು ವಾಕ್ಯ ಮಾಡ್ತೀ??

ದ್ಯಾಮ್ಯಾ: I is.......

(ಅಷ್ಟರಾಗ ಅವನ ತಡೆದ) ಟೀಚರ್: ಏ! ಹುಚ್ಚ ಖೋಡಿ! "I is" ಅಂತೀ ಅಲ್ಲೋ?! ಹಾಂ?! ಅದು I am....I am....

ದ್ಯಾಮ್ಯಾ (ಮತ್ತೊಮ್ಮೆ): I is......

ಈಗ ಟೀಚರ್ ಉರಿದು ಬಿದ್ದು, ಡಯಾಸ್ ಬಿಟ್ಟು ಕೆಳಗ ಇಳಿದು ಬಂದು, ದ್ಯಾಮ್ಯಾನ ತಲಿಗೆ ಒಂದು 'ಫಟ್' ಅಂತ ಕೊಟ್ಟರು. ಅದರಿಂದ ದ್ಯಾಮ್ಯಾನ ತಲಿ ಗಿಂವ್ ಅಂತು. ಟೀಚರ್ ಹೇಳಿದಾಂಗ ಕೇಳದಿದ್ದರೆ ಭರಪೂರ ಕಡತ, ಕಡಬು ಎಲ್ಲಾ ಬೀಳ್ತಾವ ಅಂತ ಹೇಳಿ ಬರೋಬ್ಬರಿ, ಟೀಚರ್ ಹೇಳಿದಂಗೆ ವಾಕ್ಯ ಮಾಡಿ, ಕೂತುಬಿಟ್ಟ.

ದ್ಯಾಮ್ಯಾ: I am the ninth letter of English alphabet!

ಟೀಚರ್ ಮತ್ತ ರಪ್ಪಂತ ಒಂದು ತಲಿಗೆ ಕೊಟ್ಟರು.

ಟೀಚರ್: ಈ ವಾಕ್ಯ ಮಾಡಲಿಕ್ಕೆ ಹೊಂಟಿದ್ದಿ ಏನು? ಅಂದ್ರ "I is" ಬರೋಬ್ಬರಿ ಇತ್ತಲ್ಲೋ! ಮೊದಲೇ ಹೇಳಬೇಕೋ ಬ್ಯಾಡೋ??? (!!!) ಹುಚ್ಚನ ತಂದು!

ಇದನ್ನು ಕೇಳಿದ ದ್ಯಾಮ್ಯಾ ಢಮಾರ್!!!!

ಮುಂದ ಆವಾ ಎಂದೂ ಇಂಗ್ಲೀಷ್ ಕ್ಲಾಸ್ ಒಳಗ ಇಲ್ಲದ ಉಸಾಬರಿ ಮಾಡಲಿಲ್ಲ! :)

(ಮೂಲ: ಶಿವರಾಂ ಶಾಸ್ತ್ರಿ)

ವಿವರಣೆ (ಬೇಕಾದವರಿಗೆ ಮಾತ್ರ): ದ್ಯಾಮ್ಯಾ ಹೇಳಲಿಕ್ಕೆ ಹೊಂಟಿದ್ದು - "I" is the ninth letter of the alphabet - ಅನ್ನುವ ಬರೋಬ್ಬರಿ ವಾಕ್ಯವಾಗಿತ್ತು. ಪೂರ್ತಿ ಕೇಳದ ಟೀಚರ್ I am ಅಂತ ತಿದ್ದಿದ್ದಕ್ಕೆ ದ್ಯಾಮ್ಯಾ - "I" am the ninth letter of English alphabet - ಅಂತ ಅಂದುಬಿಟ್ಟ! :)Monday, January 12, 2015

ಕ್ಯಾಬರೆ, ಲೈವ್ ಬ್ಯಾಂಡ್, ಕೈಕುಲುಕಿದ್ದ ದೇಶದ ಅಧ್ಯಕ್ಷನ ಮಗ!

ಈ ಕ್ಯಾಬರೆ (Cabaret) ಅನ್ನುವದು ಮಹಾ ಡೇಂಜರ್ ಶಬ್ದ. ಅದರ ಮೂಲ ಅರ್ಥವೇ ಬದಲಾಗಿ ಹೋಗಿದೆ, at least ನಮ್ಮ ದೇಶದ ಮಟ್ಟಿಗೆ. ಪಶ್ಚಿಮದ ದೇಶಗಳಲ್ಲಿ  ಒಂದು ತರಹದ ಮನರಂಜನೆ ನೃತ್ಯ, ಸಂಗೀತ ಅಂತ ಹೇಳಿ ಹುಟ್ಟಿಕೊಂಡ ಕ್ಯಾಬರೆ ಅದು ಹೇಗೋ ಆಗಿ ನಮ್ಮಲ್ಲಿ ನಂಗಾ ನಾಚ್, ಅರ್ಧ ನಂಗಾ ನಾಚ್ ಆಗಿ ಒಂದು ತರಹ 'ನಿಷೇಧಿತ ಐಟಂ' ಆಗಿ ಬಿಟ್ಟಿದೆ. ಅದಕ್ಕೇ ಏನೋ ಗೊತ್ತಿಲ್ಲ ಈಗ ಅದಕ್ಕೆ ಐಟಂ ಸಾಂಗ್ ಅಂದು ಬಿಡುತ್ತಾರೆ.

ಕ್ಯಾಬರೆ ಅನ್ನುವದನ್ನು ಮೊದಲು ಕೇಳಿದ್ದು ಹೀಗೆ. ೧೯೭೫-೭೬ ರ ಸಮಯ. ಅದೆಲ್ಲೋ ಮಂಗಳೂರು ಬದಿಗಿನ ಸುದ್ದಿಯಂತೆ. ಯಾರೋ ಒಂದಿಷ್ಟು ಜನ ಹಿಂದುಳಿದ ವಿದ್ಯಾರ್ಥಿಗಳಿಗೆ, ಏನೋ ಮೀಸಲಾತಿ ಅಂತ ಒಂದಿಷ್ಟು ಕಾಸು, ಅದು ಯಾವದೋ ಕೋಟಾದಲ್ಲಿ, ಕೊಟ್ಟರೆ ಹೋಗಿ ಕ್ಯಾಬರೆ ನೋಡಿ ಬಂದಿದ್ದರಂತೆ. ಅದು ದೊಡ್ಡ ಸುದ್ದಿಯಾಗಿ, ಹಿರಿಯರು ಮಾತಾಡಿದ್ದು ಕೇಳಿದ್ದೇ ಕ್ಯಾಬರೆ ಅಂದರೆ  ತುಂಬಾ ಕೆಟ್ಟದ್ದು (bad very bad) ಅಂತ ಅನಿಸಿಬಿಟ್ಟಿತ್ತು.

ಆಮ್ಯಾಲೆ ಕೆಲವು ಸಿನೆಮಾಗಳಲ್ಲಿ ಬಾಲಿವುಡ್ ಹಿಂದಿ, ಸ್ಯಾಂಡಲ್ ವುಡ್ ಕನ್ನಡ ಕ್ಯಾಬರೆ ಡಾನ್ಸ್ ಎಲ್ಲ ನೋಡಿದ್ದೂ ಆಯಿತು ಬಿಡಿ. ಬಾರಿನಲ್ಲಿ, ಕ್ಲಬ್ಬಿನಲ್ಲಿ ಸಿನೆಮಾದ ಕೆಟ್ಟವರು ಅಂದ್ರೆ ವಿಲನ್ನುಗಳು ಎಣ್ಣೆ ಹೊಡೆಯುತ್ತ ಕೂತಿರುತ್ತಾರೆ. ಯಾವದೋ ಒಂದು ಹುಡುಗಿ ತುಂಡುಡುಗೆ ತೊಟ್ಟು ಬಂದು ಝಮ್ಮ ಚಕ್ಕ ಅಂತ ಕುಣಿದು, ತೊಡೆ ಹತ್ತಿ, ಪಪ್ಪಿ ಕೊಟ್ಟು, ಕೈಗೆ ಸಿಕ್ಕಂತೆ ಮಾಡಿ, ಪಸಕ್ ಅಂತ ತಪ್ಪಿಸಿಕೊಂಡು, ಏನೇನೋ ಕೆರಳಿಸಿ ಹೋದರೆ ಅದೇ ಕ್ಯಾಬರೆ. at least ಬಾಲಿವುಡ್ ಕ್ಯಾಬರೆ. ಪ್ರತಿ ಸಿನೆಮಾದಲ್ಲೂ ಒಂದು ಅಂತಹ ಹಾಡು, ನೃತ್ಯ ಇರಲೇಬೇಕು. ಅದಕ್ಕೇ ಅಂತಲೇ ಬೇರೆಯೇ ತರಹದ ನಟಿಯರು ತಯಾರಾದರು. ಕ್ಯಾಬರೆ ಡಾನ್ಸರುಗಳು. ಹೆಲೆನ್, ಬಿಂದು, ಜಯಮಾಲಿನಿ, ಜ್ಯೋತಿಲಕ್ಷ್ಮಿ, ಡಿಸ್ಕೋ ಶಾಂತಿ, ಸಿಲ್ಕ್ ಸ್ಮಿತಾ - ಎಲ್ಲ ಈ ಗುಂಪಿಗೆ ಸೇರಿದವರು. ಯಾಕೆಂದ್ರೆ ಹೀರೋಯಿನ್ನುಗಳು ಅದನ್ನೆಲ್ಲ ಆವಾಗ ಮಾಡುತ್ತಿರಲಿಲ್ಲ. ನಂತರ ಹೀರೋಯಿನ್ನುಗಳೇ ಪೈಪೋಟಿ ಮೇಲೆ ಬಿದ್ದು ಝಕ್ಕ ನಕ್ಕ ಮಾಡತೊಡಗಿದಾಗಿನಿಂದ ಕ್ಯಾಬರೆ ನರ್ತಕಿಯರು, ಹೀರೋಯಿನ್ನುಗಳ ನಡುವೆ ವ್ಯತ್ಯಾಸ ಕಡಿಮೆಯಾಗುತ್ತ ಹೋಗಿ ಈಗ ಇಲ್ಲವೇ ಇಲ್ಲ ಅನ್ನುವ ಹಾಗಾಗಿಬಿಟ್ಟಿದೆ.

ಇಷ್ಟೆಲ್ಲಾ ಆದರೂ ನಿಜವಾದ ಕ್ಯಾಬರೆ ಅನ್ನುವದರ ಸುತ್ತ ಮುತ್ತ ಸುಳಿದಿರಲಿಲ್ಲ ಬಿಡಿ. ನಮ್ಮ ಧಾರವಾಡದಲ್ಲಂತೂ ಇರಲಿಲ್ಲ. ಈಗೂ ಇಲ್ಲ. ಆ ಟೈಪಿನ ರೌಡಿ ಮನೋರಂಜನೆ ಸಭ್ಯ ಊರಾದ ಧಾರವಾಡಕ್ಕೆ ಬರಲು ಸಾಧ್ಯವೂ ಇಲ್ಲ. ಅಂತಹ ತೆವಲಿದ್ದವರು ಮುಂಬೈಗೋ, ಗೋವಾಕ್ಕೋ, ಮತ್ತೆಲ್ಲೋ ಹೋಗಿ ನೋಡಿ ಬರುತ್ತಿದ್ದರಂತೆ. ಹಾಗಂತ ಕೇಳಿದ್ದು.

೧೯೯೩ ರಲ್ಲಿ ಆರು ತಿಂಗಳು ದಿಲ್ಲಿಯಲ್ಲಿ ಇದ್ದೆ. ಫೈನಲ್ ಇಯರ್ ಇಂಜಿನಿಯರಿಂಗ್ ನಲ್ಲಿ ಒಂದು ಸೆಮಿಸ್ಟರ್ industry internship ಮಾಡಬೇಕಾಗಿತ್ತು. ನನಗೆ ದೆಹಲಿಯ ಒಂದು ಕಂಪನಿಗೆ ಹಾಕಿದ್ದರು. ದೆಹಲಿಯ posh ಏರಿಯಾ South Extension - II  ನಲ್ಲಿ ನಮ್ಮ ಒಬ್ಬ ದೋಸ್ತನ ಮನೆಯಿತ್ತು. ಅವನ ಮನೆ ಮಹಡಿ ಮೇಲೆ ಒಂದು ದೊಡ್ಡ ಹಾಲಿನ ಟೈಪ್ ರೂಮಿತ್ತು. ಅದನ್ನು ನಾವು ನಾಕು ಜನ ಭಾಡಿಗಿಗೆ ಹಿಡಿದು, ಏನೋ ಒಂದು ಬ್ಯಾಚುಲರ್ ಮನೆ ಸೆಟಪ್ ಮಾಡಿಕೊಂಡು ಇದ್ದೆವು.

ಇರಲು ರೂಮೇನೋ ಸಿಕ್ಕಿತು. ಆದರೆ ಊಟ? ಹಾಸ್ಟೆಲ್ಲಿನಲ್ಲಿ ಮೂರು ವರ್ಷ ಯಾವದೇ ತಲೆಬಿಸಿಯಿಲ್ಲದೆ ದಿನಕ್ಕೆ ನಾಕು ಬಾರಿ ಪುಷ್ಕಳ ಊಟ ತಿಂಡಿ ಮಾಡಿ ಬಂದವರಿಗೆ ಈಗ ದೆಹಲಿಯಲ್ಲಿ ನಮ್ಮ ಬಜೆಟ್ಟಿಗೆ ಹೊಂದೋ ಊಟ ಹುಡುಕಿಕೊಂಡು ಅಲೆಯೋ ಪರಿಸ್ಥಿತಿ. ರಾತ್ರಿ ಊಟ ಒಂದೇ ಅನ್ನಿ. ಬೆಳಿಗ್ಗೆ ತಿಂಡಿ, ಮಧ್ಯಾನ ಊಟ ಎಲ್ಲ ಕಂಪನಿಯಲ್ಲೇ ಮಾಡಿ ಮುಗಿಸುತ್ತಿದ್ದೆವು.

ಊಟ ಹುಡುಕಿಕೊಂಡು ಒಂದು ದಾಭಾ ಟೈಪಿನ ರೆಸ್ಟುರಾಂಟಿಗೆ ಹೋದೆವು. ಮಸ್ತ ಪಂಜಾಬಿ ದಾಭಾ ಊಟ. ಹೋಟೆಲಿನ ನೆಲಮಹಡಿಯಿಂದ ಕಿವಿಗಡಚಿಕ್ಕುವ ಅಬ್ಬರದ ಸಂಗೀತ ಕೇಳಿ ಬರುತ್ತಿತ್ತು. ಏನು ಅಂತ ಗೊತ್ತಾಗಲಿಲ್ಲ. ವೇಟರ್ ಹುಡುಗನನ್ನು  ಕರೆದು ಕೇಳಿದರೆ, 'ನಂಗಾ ನಾಚ್ ಸಾಬ್! ಕ್ಯಾಬರೆ ಸಾಬ್' ಅಂದು ಬಿಟ್ಟ. 'ದೇಖೋಗೆ ಕ್ಯಾ? ಸಿರ್ಫ್ ಸೌ ರುಪೆ. ತೀನ್ ಘಂಟಾ ಫುಲ್ ಐಶ್ ಕರೋ!' ಅಂತ ಫುಲ್ ಮಾರ್ಕೆಟಿಂಗ್ ಬೇರೆ ಮಾಡಿಬಿಟ್ಟ. ಗೊತ್ತಾಯಿತು. ಕ್ಯಾಬರೆ ನಡೆಯುತ್ತಿದೆ. ನೂರು ರೂಪಾಯಿ ಎಂಟ್ರಿ ಫೀ. ಮೂರು ಘಂಟೆ ನಾಚ್ ಗಾನಾ, ಅಂತ. 'ಏ! ಮಾರಾಯಾ! ಅದೆಲ್ಲ ಬೇಡಪ್ಪ! ಇನ್ನೂ ನಾಕು ತಂದೂರಿ ರೊಟ್ಟಿ ತಂದುಬಿಡು ರಾಜಾ' ಅಂತ ಅವನನ್ನು ಸಾಗಹಾಕೋಣ ಅನ್ನುವಷ್ಟರಲ್ಲಿ ವೇಟರ್ ಒಂದು ಸಕತ್ ಫೈನಲ್ ಮಾರ್ಕೆಟಿಂಗ್ ಬಾಂಬ್ ಹಾಕಿಬಿಟ್ಟ, 'ಸಾಬ್! ಆಖಿರ್ ಲಾಸ್ಟ್ ಮೇ ಏಕ್ ಫುಲ್ ನಂಗಾ ನಾಚ್ ಹೋತಾ ಹೈ. ಹಾಂ!' ಅಂದು ಬಿಟ್ಟ. ಈಗ ಹ್ಯಾಂ!! ಅಂತ ಬಾಯಿಬಿಟ್ಟವರು ನಾವು. ಹಲ್ಕಟ್ ವೇಟರ್ ಹ್ಯಾಗೆ ಪ್ರಚೋದಿಸಿ ಸೆಲ್ಲಿಂಗ್ ಮಾಡುತ್ತಿದ್ದ ನೋಡಿ. ಅಲ್ಲಿ ನಡೆಯುತ್ತಿದ್ದ ಕ್ಯಾಬರೆಯಲ್ಲಿ ಕಟ್ಟ ಕಡೆಗೆ ಒಂದು ಪೂರ್ಣ ನಗ್ನ ನೃತ್ಯ ನಡೆಯುತ್ತಿಂತೆ. ಅವೆಲ್ಲ ಬೇಡ ಅಂತ ಹೇಳಿ, ಊಟ ಮುಗಿಸಿ ಬಂದಾಯಿತು. ನಾವಾಗಲಿ, ಆಗ ನಮ್ಮ ಜೊತೆಯಲ್ಲಿದ್ದ ದೋಸ್ತುಗಳಾಗಲಿ ಆ ಟೈಪಿನ ಮಂದಿಯೇ ಅಲ್ಲ. ಕೆಲವರು ಚಹಾ, ಕಾಫಿ ಸಹ ಕುಡಿಯದೇ, ಬಾಲವೊಂದು ಮಾತ್ರ ಇಲ್ಲದ ಇನ್ನೂ ಪುಟ್ಟ 'ಬಾಲ'ಕರು. innocent ಹುಡುಗರು. ಅಂತವರಲ್ಲಿ ಆಗಾಗ ಜರ್ದಾ ಕವಳ, ದಿನಕ್ಕೆ ನಾಕು ಗುಟ್ಕಾ ಹಾಕಿ, ತಾಸಿಗೊಮ್ಮೆ ಚಹಾ ಕುಡಿದು, ಆರು ತಿಂಗಳಿಗೊಮ್ಮೆ ಯಾರಾದರೂ ಬಾಸು, ಸಾಹೇಬ ಎಲ್ಲೋ ಪಾರ್ಟಿಯಲ್ಲಿ ಎಣ್ಣೆ ಹೊಡೆಸಿದರೆ ಒಂದೇ ಒಂದು ಗ್ಲಾಸು ಬಿಯರ್ ಕುಡಿದು ಬರುತ್ತಿದ್ದ ನಾವೇ ದೊಡ್ಡ 'ಚಟ' ಸಾರ್ವಭೌಮರು (ನಟ ಸಾರ್ವಭೌಮ ಇದ್ದಂಗೆ). ನಾವೆಲ್ಲ ಹಾಗೆ ಭಕ್ತ ಪ್ರಲ್ಹಾದನಂತಹ ಒಳ್ಳೆ ಹುಡುಗರು ಇದ್ದಾಗ ಅಲ್ಲೆಲ್ಲೋ ತಗಡು ನೆಲಮಹಡಿಯಲ್ಲಿ ನಡೆಯುತ್ತಿದ್ದ ಕ್ಯಾಬರೆ ಗೀಬರೆ ನೋಡುವ ಪ್ರಶ್ನೆಯೇ ಇರಲಿಲ್ಲ. ಮತ್ತೆ ಮೊದಲಿಂದ ಅವೆಲ್ಲ ಕೆಟ್ಟದ್ದು, ಸಂಸ್ಕಾರವಂತರು ಹೋಗುವ ಜಾಗಗಳಲ್ಲ, ಅಲ್ಲಿ ಹೋಗುವರೆಲ್ಲ ರೌಡಿ ಮಾದರಿಯ ಜನ, ಗಲಾಟೆಗಳಾಗುತ್ತವೆ, ಲಫಡಾಗಳು ಆಗುತ್ತವೆ, ಪೊಲೀಸರು ಬರುತ್ತಾರೆ, ಅದು ಇದು ಅಂತ ಒಂದು ಟೈಪ್ ತಲೆಯಲ್ಲಿ ಕೂತು ಬಿಟ್ಟಿತ್ತಲ್ಲ? ಹಾಗಾಗಿ ಕೇವಲ ದೂರದಿಂದಲೇ ಅಬ್ಬರದ ಸಂಗೀತ ಅಷ್ಟೇ ಕೇಳಿ ಬಂದಾಯಿತು ಬಿಡಿ. ಭಾರತದಲ್ಲಿ ಕ್ಯಾಬರೆ ಹತ್ತಿರ ಹೋಗಿದ್ದು ಅಂದರೆ ಅಷ್ಟೇ.

ಮತ್ತೆ ಒಂದು ದಿವಸ ಅದೇ ಜಾಗಕ್ಕೆ ಊಟಕ್ಕೆ ಹೋದಾಗ ಪಕ್ಕದ ಟೇಬಲ್ಲಿನಲ್ಲಿ ಕೂತವ ದೊಡ್ಡ ಮೀಸೆಯ ಪೋಲೀಸ್ ಸಾಹೇಬ. ಕೆಳಗಿನ ಕ್ಯಾಬರೆಯಿಂದ ಎದ್ದು ಆಗ ಮಾತ್ರ ಮೇಲೆ ಬಂದಿದ್ದ. ಅಲ್ಲಿ ಗರ್ಮಿ ಜಾಸ್ತಿಯಾಗಿತ್ತು ಅಂತ ಕಾಣುತ್ತದೆ. ಅವನ ಟೇಬಲ್ಲಿಗೆ ಆನಿಕೊಂಡು ನಿಂತಿತ್ತು ಒಂದು ದೊಡ್ಡ ಪೋಲೀಸ್ ದಂಡಾ! ಅದರಲ್ಲಿ ಏನಾದರೂ ಬಾರಿಸಿದ ಅಂದರೆ ಅಷ್ಟೇ ಮತ್ತೆ. ಕ್ಯಾಬರೆನಲ್ಲಿ ಏನಾದರೂ ಲಫಡಾ ಆಗಿತ್ತು ಅಂತ ಬಂದಿದ್ದನೋ, ಮಾಮೂಲು ವಸೂಲಿ ಮಾಡಲು ಬಂದಿದ್ದನೋ ಗೊತ್ತಿಲ್ಲ. ಆ ಪುಣ್ಯಾತ್ಮನನ್ನು ನೋಡಿದಾಗಿಂದ ಕ್ಯಾಬರೆಗೆ ಹೋಗೋದು ದೂರ ಉಳಿಯಿತು, ನಾವು ಆ ದಾಭಾ ಕಡೆಗೂ ತಲೆ ಹಾಕಲಿಲ್ಲ. ಅದೇನೋ ಅಂತಾರಲ್ಲ, at wrong place at wrong time ಅಂತ ಇಲ್ಲದ ಲಫಡಾದಲ್ಲಿ ಸಿಕ್ಕಿ ಹಾಕ್ಕೊಳ್ಳೋ ದರ್ದು, ಅಗತ್ಯ ಯಾರಿಗೂ ಇರಲಿಲ್ಲ. ಹಾಗಾಗಿ ಕ್ಯಾಬರೆ ಮತ್ತೊಂದು ಲಫಡಾ ಇಲ್ಲದ, ಪೋಲೀಸ್ ಗೀಲೀಸ್ ಬರದ, ಫುಲ್ ಸೇಫ್ ಆದ ಬೇರೆ ದಾಭಾ ಒಂದನ್ನು ಹುಡುಕಿಕೊಂಡು ಹೋದೆವು. ಹೋಗಿದ್ದೇ ಒಳ್ಳೇದಾಯಿತು. ಸ್ವಲ್ಪ ಹಿಂದೆ ಇದ್ದ ಮಸ್ಜೀದ್ ಮೋಥ್ ಏರಿಯಾದಲ್ಲಿ ಸಾಲಾಗಿ ಸರ್ದಾರ್ಜೀ ದಾಭಾಗಳಿದ್ದವು. ಇನ್ನೂ ಒಳ್ಳೆಯ ಪಕ್ಕಾ ಪಂಜಾಬೀ ಊಟ ಮತ್ತೂ ಕಮ್ಮಿ ಬೆಲೆಯಲ್ಲಿ ಸಿಕ್ಕಿತು. ಉಳಿದ ದುಡ್ಡಲ್ಲಿ ಒಂದು ಮಲಾಯಿ, ಗುಲಾಬಿ ಹಾಕಿದ ದೊಡ್ಡ ಲಸ್ಸಿ ಕುಡಿದು, ಒಂದು ಜರ್ದಾ ಕವಳ ಹಾಕುವಷ್ಟು ಕಾಸು ಮಿಕ್ಕುತ್ತಿತ್ತು. ಇದಕ್ಕೆಲ್ಲ ಕಾರಣನಾದ ದುರುಳನಂತೆ ಕಾಣುತ್ತಿದ್ದ ದೊಡ್ಡ ಮೀಸೆ ದೆಹಲಿ ಪೊಲೀಸನಿಗೆ ಒಂದು ಸಲಾಂ! ಅವನನ್ನು ನೋಡಿ ತಾನೇ ನಾವು ಬೇರೆ ದಾಭಾ ಹುಡುಕಿದ್ದು!?

ಕ್ಯಾಬರೆಯ ಮತ್ತೊಂದು ರೂಪ ಲೈವ್ ಬ್ಯಾಂಡ್. ಲೈವ್ ಬ್ಯಾಂಡ್  ಅಂದರೆ ಏನು ಅಂತ ಕೇಳಿದ್ದೆ. ಒಳ ಹೋಗಿ ನೋಡಿರಲಿಲ್ಲ. ೧೯೯೪ -೯೫ ರ ಟೈಮಿನಲ್ಲಿ ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್ ಹಾವಳಿಯೋ ಹಾವಳಿ. ಎಲ್ಲ ಏರಿಯಾದಲ್ಲೂ ಇರಲಿಲ್ಲ ಅಂತ ನೆನಪು. ಮೆಜೆಸ್ಟಿಕ್, ಬ್ರಿಗೇಡ್ ರೋಡ್, ಮತ್ತೆ ಕೆಲವು ಕಡೆ ಬಹಳ ಇದ್ದವು. ಒಳಗೆ ನಾಚ್, ಗಾನಾ ಎಲ್ಲ ನಡೆಯುತ್ತದೆ ಅಂತೆ. ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಆಧುನಿಕ 'ಮುಜರಾ ಡಾನ್ಸ್.' ನೋಡುವವರು ನೋಡುತ್ತ, ಹಾಡುವವರ ಮೇಲೆ, ಕುಣಿಯುವವರ ಮೇಲೆ ಕಾಸು ಎಸೆಯುತ್ತ, ಒಟ್ಟಿನಲ್ಲಿ ಮಸ್ತ ಮಜಾ ಮಾಡುವ ತಾಣ ಅಂತ ಕೇಳಿಯಾಗಿತ್ತು. ಆದರೆ ಅವೆಲ್ಲ ಒಳ್ಳೆ ಸಂಸ್ಕಾರವಿದ್ದ ಮಂದಿ ಹೋಗುವಂತಹ ಜಾಗ ಅಲ್ಲವೇ ಅಲ್ಲ ಅಂತ ಬೇರೆ ತಲೆಯಲ್ಲಿ ಇತ್ತಲ್ಲ? ಮತ್ತೆ ಆಗಾಗ್ಗೆ ಲೈವ್ ಬ್ಯಾಂಡ್ ಎಂಬ ತಾಣಗಳು ಸುದ್ದಿಯಲ್ಲಿ ಬರುತ್ತಿದ್ದವು - for wrong reasons. ರೌಡಿಗಳ ಕಾಳಗ, ಪೋಲೀಸ್ ರೈಡ್, ಹೊಡೆದಾಟ, ಬಡಿದಾಟ ಇತ್ಯಾದಿ ಸಹ ಅಲ್ಲೇ ಆಗುತ್ತಿದ್ದವು. ಆಗಿನ್ನೂ ರವಿ ಬೆಳಗೆರೆಯವರ 'ಹಾಯ್ ಬೆಂಗಳೂರ್' ಪತ್ರಿಕೆ ಬಂದಿರಲಿಲ್ಲ. ಅವರು ಆಗ 'ಕರ್ಮವೀರ' ಪತ್ರಿಕೆ ಸಂಪಾದಕರಾಗಿದ್ದರು. 'ಪಾಪಿಗಳ ಲೋಕದಲ್ಲಿ' ಅಂತ ಬೆಂಗಳೂರು ಅಂಡರ್ವರ್ಲ್ಡ್ ಬಗ್ಗೆ ಒಂದು ರೋಚಕ ಅಂಕಣ ಬರೆಯುತ್ತಿದ್ದರು. ನಿಜವಾದ ರೌಡಿಗಳನ್ನು ಮತ್ತು ಇನ್ನಿತರೇ ಕ್ರಿಮಿನಲ್ಲುಗಳನ್ನು ಸಂದರ್ಶಿಸಿ  ಭೂಗತ ಜಗತ್ತಿನ ನೈಜ ಚಿತ್ರಣ ಕಟ್ಟಿಕೊಡುತ್ತಿದ್ದರು. ಅದನ್ನು ಓದಿಯೇ ಬೆಂಗಳೂರು ಅಂಡರ್ವರ್ಲ್ಡ್ ಪರಿಚಯ ಆಗತೊಡಗಿದ್ದು. ಅದರಲ್ಲೆಲ್ಲೋ ಒಂದು ಸಲ ಲೈವ್ ಬ್ಯಾಂಡ್ ಬಗ್ಗೆ ಬರೆದು, ಅಲ್ಲಿನ ಅಂಡರ್ವರ್ಲ್ಡ್ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರು ರವಿ ಬೆಳಗೆರೆ. ಎಲ್ಲ ಓದಿದ ಮೇಲೆ ಅನಿಸಿದ್ದು, 'ಇದರ ಸಹವಾಸ ಬ್ಯಾಡಪ್ಪೋ ಬ್ಯಾಡ! ದೊಡ್ಡ ನಮಸ್ಕಾರ' ಅಂತ. ಹಲವಾರು ಬಗೆಯ ಕುತೂಹಲಗಳು ಇರುತ್ತವೆ. ಹಾಗಂತ ಎಲ್ಲವನ್ನೂ ಟ್ರೈ ಮಾಡುತ್ತ ಹೋಗಲು ಆಗುತ್ತದೆಯೇ?

ಮತ್ತೆ ಆ ಕಾಲದಲ್ಲಿ ಬೆಂಗಳೂರಲ್ಲಿ ಇದ್ದ ನಾಕಾರು ಮಿತ್ರರೂ ಸಹ ಎಲ್ಲ 'ಶಾಂತಿ ಸಾಗರ್' ಟೈಪಿನ ವೆಜಿಟೇರಿಯನ್ ಗಿರಾಕಿಗಳೇ. ಯಾರಿಗೂ  ಲೈವ್ ಬ್ಯಾಂಡ್ ಇತ್ಯಾದಿ ಮಳ್ಳು ಇರಲಿಲ್ಲ. ವಾರಕ್ಕೆ ಐದು ದಿವಸ ಕೆಲಸ. ವಾರಾಂತ್ಯದಲ್ಲಿ ಎಲ್ಲೋ ಹೊರಗೆ ಊಟ, ಸಿನಿಮಾ, ಹೆಚ್ಚೆಂದರೆ ಸ್ಯಾಂಕಿ ಟ್ಯಾಂಕ್, ಬೋಟಿಂಗ್ ಅಂತ ಸಣ್ಣ ಪಿಕಿನಿಕ್. ಅಷ್ಟೇ ವೀಕ್ ಎಂಡ್ ಉಸಾಬರಿ.

ಲೈವ್ ಬ್ಯಾಂಡ್ ಅಂದರೆ ಏನು ಅಂತ ನೋಡುವ 'ಸೌಭಾಗ್ಯ' ಒದಗಿ ಬಂದಿದ್ದು ೧೯೯೫ ಅಕ್ಟೋಬರ್ ನಲ್ಲಿ ಒಂದು ವರ್ಷ ಪೂರ್ವ ಆಫ್ರಿಕಾದ ಟಾಂಜಾನಿಯಾಕ್ಕೆ ಹೋಗಿ, ರಾಜಧಾನಿ ದಾರ್-ಏ-ಸಲಾಂ ನಲ್ಲಿ ಝೇಂಡಾ ಹೊಡೆದು ಕೂತಾಗ. ಅಲ್ಲೂ ನಮ್ಮದು ಸರಳ ಲೈಫೇ ಆಗಿತ್ತು. ಆಫೀಸ್ ಮೇಲೆಯೇ ಮನೆ. ಊಟ ತಿಂಡಿಗೆ ಮನೆ ಹತ್ತಿರದ ಹೋಟೆಲ್ಲುಗಳು. ಕಾರ್ ಗೀರ್ ನಮ್ಮ ನೌಕರಿ ಗ್ರೇಡಿಗೆ ಇರಲಿಲ್ಲ. ಕೆಲವೊಂದು ಸಾಯಂಕಾಲ, ವಾರಾಂತ್ಯದಲ್ಲಿ ಸೀನಿಯರ್ ಜನ ಹೊರಗೆ ಹೋಗುವಾಗ ನಮ್ಮನ್ನೂ ಕರೆದೊಯ್ಯುತ್ತಿದ್ದರು. ಇನ್ನೂ ಬೇಕು ಅಂದರೆ ಕಂಪನಿ ಕಾರು, ಡ್ರೈವರ್ ಮೊದಲೇ ಬುಕ್ ಮಾಡಿಕೊಂಡು ಅಡ್ಯಾಡಿ ಬರಬಹುದಿತ್ತು. ಮತ್ತೆ ಸಿಟಿ ಮಧ್ಯೆ ಇದ್ದು, ಸುತ್ತ ಮುತ್ತ ಸೇಫ್ ಇದ್ದಿದ್ದರಿಂದ ಎಲ್ಲ ಕಡೆ ನಟರಾಜಾ ಸರ್ವೀಸ್ ನಲ್ಲೇ ನಮ್ಮ ಸವಾರಿ. ಅಂದರೆ ಕಾಲ್ನಡಿಗೆಯಲ್ಲಿಯೇ ಸುತ್ತಾಟ.

ಅದೆಂದೋ ಒಂದು ದಿವಸ ಒಬ್ಬರಿಗೆ ಬಿಳ್ಕೊಡುಗೆ (farewell party) ಸಮಾರಂಭವಿತ್ತು. ಬಹಳ ವರ್ಷ ಆಫ್ರಿಕಾದಲ್ಲಿದ್ದ ಅವರು ಪರ್ಮನೆಂಟ್ ಆಗಿ ಭಾರತಕ್ಕೆ ವಾಪಸ್ ಹೋಗುತ್ತಿದ್ದರು. ಒಂದು ಇಪ್ಪತ್ತು ಜನ ಕೂಡಿ ಅವರನ್ನು ರಾತ್ರಿ ಡಿನ್ನರ್ ಗೆ ಕರೆದುಕೊಂಡು ಹೋಗಿದ್ದು ಟಾಂಜಾನಿಯಾದ ರಾಜಧಾನಿ ದಾರ್-ಏ-ಸಲಾಂ ನಲ್ಲಿದ್ದ 'Son Afrique' ಅನ್ನುವ ಲೈವ್ ಬ್ಯಾಂಡ್ ಒಂದಕ್ಕೆ. ಗುಂಪಿನಲ್ಲಿ ಗೋವಿಂದ ಅಂತ ನಾವೂ ಹೋಗಿದ್ದೆವು. ಅದೇ ಲೈವ್ ಬ್ಯಾಂಡಿಗೆ ಮೊದಲ ಭೇಟಿ. ಹೋದ ಮೇಲೆ ಅದು ಲೈವ್ ಬ್ಯಾಂಡ್ ಅಂತ ಗೊತ್ತಾಯಿತು. ಖರೆ ಅಂದರೆ ಒಳಗೆ ನಾಚ್ ಗಾನಾ ಶುರು ಆದ ಮೇಲೆ ಗೊತ್ತಾಯಿತು, 'ಓಹೋ! ಇದು ಲೈವ್ ಬ್ಯಾಂಡ್' ಅಂತ. ಇಂಡಿಯಾದ ಲೈವ್ ಬ್ಯಾಂಡ್ ಗಳ ಕುಖ್ಯಾತಿ ನೆನಪಾಗಿ ಒಮ್ಮೆ ಅಳುಕುಂಟಾಯಿತು. ಎದೆ ಢವ ಢವ ಅಂತು. ಆದರೇನು ನಮ್ಮ ಕಂಪನಿಯ ಘಟಾನುಘಟಿಗಳೇ ಎಲ್ಲ ಅಲ್ಲೇ ಇದ್ದರು. ದೊಡ್ಡ ದೊಡ್ಡ ಬಾಸುಗಳೇ ಇದ್ದರು. ಏನಾದರೂ ಹೆಚ್ಚು ಕಮ್ಮಿ ಆದರೆ ಅವರೆಲ್ಲ ಇದ್ದಾರೆ ಅಂತ ಧೈರ್ಯ ತಂದುಕೊಂಡಿದ್ದು ಆಯಿತು ಅನ್ನಿ. ಮತ್ತೆ ನಾವು ಸ್ವಲ್ಪ ಹೆಚ್ಚಿನ ಕಾಳಜಿಯಲ್ಲೇ ಇದ್ದೆವು. ಮತ್ತೆ ಅಲ್ಲಿದ್ದ ಜನರೆಲ್ಲ ತುಂಬ ಡೀಸೆಂಟ್ ಅನ್ನಿಸುವಂತವರೇ ಇದ್ದರು. ಯಾರೂ ರೌಡಿಗಳ ಹಾಗೆ ಕಾಣಲಿಲ್ಲ. ಯಾರ ಬೆನ್ನ ಹಿಂದೆಯೂ ಲಾಂಗು, ಮಚ್ಚು ಕಾಣಲಿಲ್ಲ. ಮುಖ್ಯವಾಗಿ ಎಲ್ಲರೂ ಭಾರತ, ಪಾಕಿಸ್ತಾನ ಮೂಲದವರೇ ಇದ್ದರು. ಪೂರ್ವ ಆಫ್ರಿಕಾದ ವಾಣಿಜ್ಯ ವ್ಯವಹಾರ ಎಲ್ಲ ಇರುವದು ನಮ್ಮವರ ಕೈಯಲ್ಲೇ ನೋಡಿ.

ರಾತ್ರಿ ಒಂಬತ್ತರ ಮೇಲೆ ನಾಚ್ ಗಾನಾ ಶುರು ಆಯಿತು. ಮೊದಲು ಒಂದಿಷ್ಟು ಗಾನಾ ಅಷ್ಟೇ. ಒಳ್ಳೊಳ್ಳೆ ಗಾಯಕಿಯರಿದ್ದರು. ಇದ್ದ ಸಣ್ಣ ಸೆಟಪ್ ಉಪಯೋಗಿಸಿಕೊಂಡೇ ಒಳ್ಳೊಳ್ಳೆ ಹಿಂದಿ ಹಾಡು ಹಾಡಿದರು. ಕೆಲ ಗಿರಾಕಿಗಳು ಸರ್ವ ಮಾಡುತ್ತಿದ್ದ ವೇಟರುಗಳ ಕೈಯಲ್ಲಿ ತಮ್ಮ ತಮ್ಮ ಫೇವರಿಟ್ ಹಾಡುಗಳನ್ನು ಚೀಟಿಯಲ್ಲಿ ಬರೆದು ಕಳಿಸುತ್ತಿದ್ದರು. ಗಾಯಕಿಯರು ಸಂದರ್ಭಾನುಸಾರ ಅವನ್ನು ಹಾಡುತ್ತಿದ್ದರು. ನಮಗೂ ಇಲ್ಲದ ತಿಮಿರು ನೋಡಿ. ನಾನೂ ಒಂದು ಚೀಟಿ ಬರೆದು, ವೈಟರ್ ಕೈಯಲ್ಲಿ ಇಟ್ಟೆ. ವೈಟರ್ ಹಿಂದೆ ಮುಂದೆ ಮಕಮಕ ನೋಡಿದ. ನನ್ನ ಬಾಸ್ ಅವನ ಕೈಯಲ್ಲಿ ಒಂದಿಷ್ಟು ಕಾಸು ತುರುಕಿದ. ಅದು ಪದ್ಧತಿಯಂತೆ. 'ಅಯ್ಯೋ, ನಮ್ಮ ಬಡ್ಡು ತಲೆಯೇ!' ಅಂದುಕೊಂಡೆ.ಎಲ್ಲ ಕಡೆ ಹಾಗೆಯೇ. 'ಕಾಸಿದ್ದವನೇ ಬಾಸು'. ಕಾಸು ಕೊಟ್ಟು ಕಳಿಸಿದ್ದಕ್ಕೆ ನಮ್ಮ ಗಾನಾ ಕೂಡ ಹಾಡಿದರು. ನಮಗೂ ಸಿಕ್ಕಾಪಟ್ಟೆ ಖುಶಿ. ಬಾಸ್ ನೋಡಿ, 'ಹ್ಯಾಂಗೆ??' ಅನ್ನೋ ಲುಕ್ ಕೊಟ್ಟ. 'ಸೂಪರ್ ಬಾಸು,' ಅನ್ನೋ ಲುಕ್ ಕೊಟ್ಟೆ.

ಸುಮಾರು ರಾತ್ರಿ ಒಂಬತ್ತೂವರೆ ಹತ್ತು ಘಂಟೆ ನಂತರ ವಾತಾವರಣ ರಂಗೇರತೊಡಗಿತು. ನೋಡಿದರೇ ದೊಡ್ಡ ದೊಡ್ಡ ಬಿಸಿನೆಸ್ ಕುಳಗಳು ಅಂತ ಗೊತ್ತಾಗುವಂತಿದ್ದ ಮಣಗಟ್ಟಲೆ ಬಂಗಾರ ಧರಿಸಿದ್ದ ಜನರು ಬರತೊಡಗಿದರು. ಅವರಿಗೇನು ವಿಶೇಷ ಸ್ವಾಗತವೋ ಸ್ವಾಗತ! ಯಾಕೆ ಅಂತ ನಂತರ ಗೊತ್ತಾಯಿತು. ಯಾಕೆಂದರೆ ಅವರು ರೊಕ್ಕದ ಮಳೆ ಸುರಿಸುವಂತಹ ಗಿರಾಕಿಗಳು. ನಮ್ಮಂತಹ ಅಬ್ಬೆಪಾರಿಗಳಲ್ಲ.

ಈಗ ಲೈವ್ ಬ್ಯಾಂಡ್ ಮಾಹೋಲೇ ಪೂರ್ತಿ ಬದಲಾಗಿ ಹೋಯಿತು. ನಾನು ಅಷ್ಟಾಗಿ ಗಮನಿಸಿರಲಿಲ್ಲ. ಹಿಂದೆ ಊಟದ ಬಫೆ ಹತ್ತಿರ ಒಂದಿಬ್ಬರು ಸ್ವಲ್ಪ ಜಾಸ್ತಿಯೇ ಅನ್ನುವಷ್ಟು ಮೇಕ್ಅಪ್ ಮಾಡಿಕೊಂಡಿದ್ದ ಹುಡುಗಿಯರು ಓಡಾಡಿಕೊಂಡಿದ್ದರು. ಅವರೇ ನರ್ತಕಿಯರು ಅಂತ ಆಮೇಲೆ ಗೊತ್ತಾಯಿತು.

ಈಗ ಎಲ್ಲ ದೊಡ್ಡ ಜನ ಬಂದು ಕೂತರಲ್ಲ? ಬೇರೆ ತರಹದ ಮ್ಯೂಸಿಕ್ ಅಂದರೆ ಡಾನ್ಸ್ ಮಾಡಲು ಬರೋಬ್ಬರಿ ಆಗುವಂತಹ ಮ್ಯೂಸಿಕ್ ಶುರುವಾಯಿತು. ಕೆಲವೊಂದು ಲೈವ್ ಹಾಡಿದರೆ, ಕೆಲವೊಂದು ರೆಕಾರ್ಡೆಡ್. ನಮ್ಮಂತ ಆರ್ಡಿನರಿ ಕಸ್ಟಮರ್ ಹಾಡು ಬರೆದು, ಚೀಟಿ ಕೊಟ್ಟರೆ, ವೇಟರ್ ನಕ್ಕು ನಮ್ಮ ಬಾಸ್ ಮುಖ ನೋಡಿದ. ಬಾಸ್, 'ಈಗ ನಿನ್ನಂತವರ ಆಪ್ ಕಿ ಫರ್ಮಾಯಿಶ್ (ಬೇಡಿಕೆ ಹಾಡು) ಮುಗಿಯಿತು. ಈಗ ಏನಿದ್ದರೂ ನೋಟುಗಳ ಮಾಲೆ ಹಾಕುವವರಿಗೆ ಯಾವದು ಬೇಕು ಅದು. ನೋಡ್ತಾ ಇರು,' ಅಂದು ಮುಗುಳ್ನಕ್ಕ. ಮುಂದೆ ಅರ್ಥವಾಯಿತು.

ಇದ್ದ ಸಣ್ಣ ಸ್ಟೇಜ್ ಮೇಲೇ ಇಬ್ಬರು ನರ್ತಕಿಯರು ಬಂದು ಢಂ ಢಂ ಅಂತ ಕುಣಿಯಲು ಶುರು ಮಾಡೇ ಬಿಟ್ಟರು. ಮುಂದಿನ ಟೇಬಲ್ ನಲ್ಲಿ ಕುಳಿತಿದ್ದ ಒಬ್ಬ ಗಿರಾಕಿ ಸಹ ಎದ್ದು ಕುಣಿಯಲು ಶುರು ಮಾಡಿಬಿಟ್ಟ. ಉಳಿದವರು ಅವನನ್ನು ಬಲವಂತ ಮಾಡಿ ಕೂಡಿಸಿದರು. ಆದರೂ ಕೂತಲ್ಲೇ ಕುಣಿಯುತ್ತಿದ್ದ. 'ಅವನಿಗೆ ಸ್ವಲ್ಪ ಜಾಸ್ತಿಯಾಗಿದೆ,' ಅಂದರು. ಏನು ಜಾಸ್ತಿಯಾಗಿತ್ತೋ? ದೇವರಿಗೇ ಗೊತ್ತು.

ಢಂ ಢಂ ಡಾನ್ಸ್ ಮುಗಿದು ಒಂದು semi classical ಅನ್ನುವಂತಹ ಹಾಡು ಶುರುವಾಯಿತು. ಪುರಾತನ ನರ್ತಕಿಯರ ತರಹ ವೇಷ ಹಾಕಿಕೊಂಡಿದ್ದ ಇನ್ನೊಬ್ಬಾಕೆ ಬಂದಳು. ಈಗ ಈಕೆಯ ಶಾಸ್ತ್ರೀಯ ನೃತ್ಯ. ಏನೋ ಒಂದು ತರಹ ಮಾಡಿದಳು. ನಡುವೆ ಊಟದ ತಟ್ಟೆ ಅಂತದ್ದು ಏನೋ ತಂದಿಟ್ಟುಕೊಂಡು ಅದರಲ್ಲೂ ಏನೋ ಕಸರತ್ತು ಮಾಡಿದಳು. ಆಕೆ ತಲೆ ಮೇಲೆ ಒಂದರ ಮೇಲೆ ಒಂದರ ಹಾಗೆ ಕೊಡಗಳನ್ನು ಇಟ್ಟುಕೊಂಡು ಮಾಡುವ ನೃತ್ಯ, ದೀಪ ನೃತ್ಯ ಇತ್ಯಾದಿ ಎಲ್ಲ ಮಾಡುತ್ತಾಳಂತೆ. ಹಾಗಂತ ಆಕೆಯ ಮೊದಲಿನ performance ನೋಡಿದವರು ಹೇಳಿದರು. ನಮಗೇನು ಗೊತ್ತು? ಹೂಂ! ಅಂತ ಗೋಣಾಡಿಸಿ ಸುಮ್ಮನಾದೆವು.

ಮತ್ತೆ ಫಾಸ್ಟ್ ಮ್ಯೂಸಿಕ್. ಈ ಸಲ ಒಬ್ಬಳು ಪಟಾಕಾ ಫಿಗರ್ ಬಂದು 'ಮೆಹಬೂಬಾ, ಮೆಹಬೂಬಾ' ಎಂಬ 'ಶೋಲೆ' ಸಿನೆಮಾದ ತುಂಬಾ ಪ್ರಖ್ಯಾತ ಹಾಡಿಗೆ ಥೇಟ್ ಹೆಲೆನ್ ತರಹ ಡಾನ್ಸ್ ಮಾಡಿದಳು. ವ್ಯತ್ಯಾಸ ಅಂದರೆ ಈಕೆ ಸ್ವಲ್ಪ ಜಾಸ್ತಿ ಬಟ್ಟೆ ಹಾಕಿಕೊಂಡಿದ್ದಳು. ಈಗ ನೋಟಿನ ಸುರಿಮಳೆ ಆಯಿತು. ಒಂದಿಬ್ಬರು ಎದ್ದು ಬಂದು ನೋಟಿನ ಮಾಲೆ ಹಾಕಿದರು. ಮತ್ತೊಬ್ಬ ಪರ್!ಪರ್! ಅಂತ ನೋಟ್ ಉದುರಿಸಿದ. ಕೆಲವರು ಸಿಳ್ಳೆ ಹೊಡೆದರು. ಕೆಲವರು ಚಪ್ಪಾಳೆ ಹೊಡೆದರು. ನಮ್ಮಂತವರು ಡಾನ್ಸ್ ನೋಡುತ್ತ ಊಟ ಹೊಡೆದರು. ಇನ್ನೂ ನಮ್ಮ ಊಟ ಮುಗಿದಿರಲಿಲ್ಲ. ಬಫೆ ಅಂದ ಮೇಲೆ ಹಾಗೆ ಅಷ್ಟು ಬೇಗ ಊಟ ಮುಗಿಸಿಬಿಟ್ಟರೆ ಕೊಟ್ಟ ರೊಕ್ಕಕ್ಕೆ ತುಂಬಾ ಲಾಸು. ಅಲ್ಲವೇ????

ಸುಮಾರು ರಾತ್ರಿ ಒಂದು ಘಂಟೆಗೆ ಮುಗಿಯಿತು. ಎದ್ದು ಮನೆಗೆ ಬಂದು ಮಲಗಿದರೆ ಈಗ ಮಾತ್ರ ನೋಡಿಬಂದ ಲೈವ್ ಬ್ಯಾಂಡಿನದೇ ಗುಂಗು. ರಂಗು ರಂಗಾದ ಗುಂಗು!

'ಅರ್ರೇ! ನಮ್ಮ ದೇಶದಲ್ಲಿ ಲೈವ್ ಬ್ಯಾಂಡ್ ಅಂದರೆ ಏನೋ ಭಾಳ ದೊಡ್ಡ ಡೇಂಜರ್ ಅಂತ ತಿಳಿದಿದ್ದರೆ ಇಲ್ಲಿ ಎಲ್ಲ ಸೇಫಾಗಿ ಇರೋ ಹಾಗಿದೆ. ನಿನ್ನೆ ಅಲ್ಲಿ ಬಂದ ಜನರೆಲ್ಲ ತುಂಬಾ decent ಆಗಿದ್ದರು. ಕೆಲವರ ಜೊತೆಗೆ ಅವರ ಪತ್ನಿಯರೋ ಯಾರೋ ಹೆಂಗಸರೂ ಸಹ ಇದ್ದರು. ನಾಚ್ ಗಾನಾ ಬಿಟ್ಟರೆ ಏನೂ ಆಗಲಿಲ್ಲ. ಡಾನ್ಸ್ ಇದ್ದರೂ ಅಶ್ಲೀಲ ಅನ್ನುವ ಹಾಗೆ ಏನೂ ಇರಲಿಲ್ಲ. ಹೀಗಿದ್ದಾಗ ಆಗಾಗ ಹೋಗಲಿಕ್ಕೆ ಅಡ್ಡಿಯಿಲ್ಲ. ಎಷ್ಟೋ ಶಿಲ್ಲಿಂಗ್ ಅಂತ ಒಂದು ಎಂಟ್ರಿ ಫೀ ಕೊಟ್ಟರೆ ಆಯಿತು. ಫ್ರೀ ಊಟ ಅದರಲ್ಲೇ ಸೇರಿದೆ. ಎಣ್ಣೆ ಬೇಕಾದರೆ ಎಕ್ಸಟ್ರಾ. ಎಣ್ಣೆ ಏನೂ ಬೇಡ. ಬೇಕಾದರೆ ಮೊದಲೇ ಒಂಚೂರು, ಹೊರಗೆ ರೆಗ್ಯುಲರ್  ರೇಟಿನಲ್ಲೇ ಸಿಗುವ ಎಣ್ಣೆ ಹಾಕ್ಕೊಂಡು ಹೋದರಾಯಿತು. ಒಳಗೆ ಬೇಕಾದ ಹಾಡು ಕೇಳಬೇಕು ಅಂದರೆ ಕಾಸು ಬಿಚ್ಚಬೇಕು. ಹೋಗುವ ನಾಲ್ಕಾರು ಗೆಳೆಯರು ಶೇರ್ ಮಾಡಿಕೊಂಡರೆ ಒಂದು ಹತ್ತು ಹಾಡಾದರೂ ಕೇಳಬಹದು. ನಂತರ ರಾತ್ರಿ ರಂಗೇರಿದಂತೆ ದೊಡ್ಡ ಕುಳಗಳು ಬರುತ್ತಾರೆ. ನಂತರ ಅವರು ದುಡ್ಡು ಸುರಿದು ತಮಗೆ ಬೇಕಾದ ಹಾಡು, ಡಾನ್ಸ್ ಮಾಡಿಸುತ್ತಾರೆ. ನಾವೂ ನೋಡಿ ಎದ್ದು ಬಂದರಾಯಿತು,' ಅಂತೆಲ್ಲ ಸ್ಕೀಮ್ ಹಾಕಿದ್ದಾಯಿತು.

ಇಷ್ಟೆಲ್ಲಾ ಸ್ಕೀಮ್ ಹಾಕಿದ ಮೇಲೆ ಮುಂದಿನ ಶನಿವಾರ ಬರುವದನ್ನ ಕಾಯುವದೇ ದೊಡ್ಡ ಕೆಲಸವಾಯಿತು. ಲೈವ್ ಬ್ಯಾಂಡ್ ಏನೋ ದಿನ ರಾತ್ರಿಯೂ ಇರುತ್ತದೆ. ಆದರೆ ನಮಗೆ ಬೆಳಿಗ್ಗೆ ಬೇಗ ಏಳಲು ಮೊದಲೇ ಆಗುವದಿಲ್ಲ. ಒಂಬತ್ತಕ್ಕೆ ಆಫೀಸ್ ನಲ್ಲಿ ಇರಬೇಕು. ಹೀಗಾಗಿ ವಾರದ ದಿನದ ರಾತ್ರೆ ಲೈವ್ ಬ್ಯಾಂಡ್ ನಲ್ಲಿ ಹೋಗಿ ಕೂಡುವದು ಅಸಾಧ್ಯ. ಮತ್ತೆ ನಮ್ಮದೇ ಆದ ರೀತಿ ರಿವಾಜು ಸಹಿತ ಇದ್ದವಲ್ಲ? ಏನೇ ಪಾರ್ಟಿ ಮಾಡಿದರೂ ಅವೆಲ್ಲ ಕೇವಲ್ ವೀಕ್ ಎಂಡ್ ನಲ್ಲಿ ಮಾತ್ರ, ಇತ್ಯಾದಿ. ಮತ್ತೆ ಕೆಲಸ ವಾರಕ್ಕೆ ಆರು ದಿವಸ. ಶನಿವಾರ ಹಾಫ್ ಡೇ. ಹಾಗಾಗಿ ಹೋದರೆ ಶನಿವಾರ ಸಂಜೆ ಹೋಗಬಹುದು. ಅಷ್ಟೇ. ಬೇರೆ ದಿನ ರಾತ್ರಿ ಮನೆಯಲ್ಲೇ ಟೀವಿ!

ಶನಿವಾರ ಬಂದಂತೆ ನಮಗೆ ಹುರುಪು ಹೆಚ್ಚಾದರೆ ಉಳಿದ ಕೆಲವರಿಗೆ ಅಷ್ಟೇನೂ ಆಸಕ್ತಿಯಿರಲಿಲ್ಲ. ಕೆಲವರು ಮನೆಯಲ್ಲಿದ್ದು ಟೀವಿ ನೋಡೋಣ ಅಂದುಕೊಂಡರು. ಇನ್ನು ಕೆಲವರು 'ಸುಸ್ತು, ಬೇಗ ಮಲಗತೀವಿ' ಅಂದರು. ಇನ್ನು ಕೆಲವರು, 'ನಮಗೆ ಎಣ್ಣೆ ಪಾರ್ಟಿ ಮಾಡಬೇಕಿದೆ. ದಬಾಯಿಸಿ ಎಣ್ಣೆ ಹಾಕೋದಿದೆ. ಹಾಗಾಗಿ ಅದಕ್ಕೆ ಮನೆಯೇ ಬೆಸ್ಟ್,' ಅಂದು ಬಿಟ್ಟರು. ಕಡೆಗೆ ಲೈವ್ ಬ್ಯಾಂಡ್ ಹೋಗಲಿಕ್ಕೆ ರೆಡಿ ಆದವರು ಇಬ್ಬರೋ ಮೂವರೋ ಅಷ್ಟೇ.

ಹೀಗೆ ಆಗಾಗ ಲೈವ್ ಬ್ಯಾಂಡಿಗೆ ಹೋಗಿ ಬಂದದ್ದಾಯಿತು. ಎಷ್ಟೇ ಮಾಡಿದರೂ ನಮಗೆ ಅತೀ ಮುಂದಿನ ಟೇಬಲ್ ಮಾತ್ರ ಎಂದೂ ಕೊಡಲಿಲ್ಲ. ಅದು always reserved for big rollers. ಮೊದಲೇ ಫೋನ್ ಮಾಡಿದರೆ ಬೇರೆ ಹತ್ತಿರದ ಟೇಬಲ್ ಸಿಗುತ್ತಿತ್ತೆ ವಿನಾ ಫಸ್ಟ್ ಟೇಬಲ್ ಎಂದೂ ಸಿಗುತ್ತಿರಲಿಲ್ಲ. ಯಾಕೆಂದರೆ ನಾವು ರೊಕ್ಕದ ಮಳೆ ಎಂದೂ ಸುರಿಸಲಿಲ್ಲ. ಅಲ್ಲರೀ, ಅಷ್ಟು ದೂರದ ದೇಶಕ್ಕೆ ಹೋಗಿದ್ದೇ ಆದಷ್ಟು ರೊಕ್ಕಾ ಮಾಡಿಕೊಂಡು ಬರಲಿಕ್ಕೆ ಅಂತ. ಅಂತಾದ್ರಲ್ಲಿ ಉಳಿಸಿದ ರೊಕ್ಕಾ ಲೈವ್ ಬ್ಯಾಂಡ್ ಡ್ಯಾನ್ಸರ್ ತಲೆ ಮೇಲೆ ಸುರಿಯಲು ನಮಗೇನು ಹುಚ್ಚೆ? ಲೆಕ್ಕ ಇಟ್ಟು, ಒಂದೋ ಎರಡೋ ಹಾಡಿನ ಬೇಡಿಕೆ ಜೊತೆಗೆ ಟಿಪ್ ತರಹ ಇರಲಿ ಅಂತ ಮಿನಿಮಂ ರೊಕ್ಕಾ ಇಟ್ಟು ಕಳಿಸಬೇಕಾದರೇ ನಮಗೆ ಸಿಕ್ಕಾಪಟ್ಟೆ ಹಿಂಸೆಯಾಗುತ್ತಿತ್ತು. ಇನ್ನು ರೊಕ್ಕಾ ಉಡಾಯಿಸುವ ಮಾತೆಲ್ಲ ದೂರ ಉಳಿತು ಬಿಡಿ. ಲೈವ್ ಬ್ಯಾಂಡ್ ನಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತ ಅಲ್ಲಿ ಎಣ್ಣೆನೇ ಹಾಕದವರು ನಾವು. ಇಂತಾ ಕೆಲವು ಉಪಯೋಗವಿಲ್ಲದ ವಿಷಯಗಳಲ್ಲಿ ಶೆಟ್ಟಿ ಮಂದಿಗಿಂತ ದೊಡ್ಡ ಜಿಪುಣ ಶೆಟ್ಟಿ ನಾವು.

ಒಂದು ತಿಂಗಳು ಆಕಡೆ ಹೋಗಿರಲಿಲ್ಲ. ಮತ್ತೊಮ್ಮೆ ಹೋದಾಗ ಪೂರ್ತಿ ಬೇರೆ ಗುಂಪು ಇತ್ತು. ಹಾಡುವವರು, ಕುಣಿಯುವವರು ಎಲ್ಲ ಬೇರೆ. ಅದೇನೋ ಎರಡೋ ಮೂರೋ ತಿಂಗಳ ವೀಸಾ ಮೇಲೆ ಇಂಡಿಯಾದಿಂದ ಬಂದಿರುತ್ತಾರಂತೆ. ಅವರ ವೀಸಾ ಮುಗಿದು ಪಕ್ಕದ ದೇಶ ಕೀನ್ಯಾಕ್ಕೋ, ಉಗಾಂಡಕ್ಕೋ ಹೋದರಂತೆ. ಹಾಗಾಗಿ ಹೊಸ ಟೀಮ್ ಬಂದಿತ್ತು.

ಹೊಸ ಟೀಮ್. ಹೊಸ ಜನ. ಬಹಳ ಏನೂ ವ್ಯತ್ಯಾಸ ಇರಲಿಲ್ಲ. ಎಲ್ಲ ಸೇಮ್ ಸೇಮ್. 'ಈಗ ಡಾನ್ಸ್ ಮಾಡುವವರ ನಖರಾ ಜಾಸ್ತಿ' ಹಾಗಂತ ದೊಡ್ಡ ರೊಕ್ಕದ ಕುಳಗಳು ಮಾತಾಡುವದನ್ನು ಕೇಳಿದೆ. ನಮಗೇನು ಗೊತ್ತು? ದೊಡ್ದವರದ್ದು, ನರ್ತಕಿಯರದ್ದು ಅದೇನು ಡೀಲುಗಳೋ, ಏನು ನಖರಾಗಳೋ ಏನೋ? ದೊಡ್ಡವರ ವಿಷಯ.

ಒಂದು ಶನಿವಾರ ರಾತ್ರಿ ಹೋಗಿದ್ದೆ. ಆವತ್ತು ಏನೋ ಅಪರೂಪಕ್ಕೆ ಸುಮಾರು ನಮ್ಮ ಕಂಪನಿ ಜನ ಜೊತೆ ಬಂದಿದ್ದರು. ಒಳಗೆ ಹೋಗಿ ಕೂತು ಸ್ವಲ್ಪ ಹೊತ್ತಾದ ಮೇಲೆ ನಮ್ಮ ಕಂಪನಿ ಮಾಲೀಕರು, ಅವರ ಸೋದರ, ಅವರ ಇತರೆ ಕೆಲವು ರಿಷ್ತೆದಾರರು ಎಲ್ಲ ಬಂದರು. ಬಂದು ನಮ್ಮ ಜೊತೆಗೇ ಜಾಯಿನ್ ಆದರು. ಈಗ ನಮ್ಮ ಟೇಬಲ್ಲಿಗೂ ವಿಶೇಷ ಮರ್ಯಾದೆ. ದೊಡ್ಡ ಶ್ರೀಮಂತರು ಬಂದು ಕೂತಿದ್ದಾರೆ ನೋಡಿ. ಅದಕ್ಕೇ ರಾಯಲ್ ಟ್ರೀಟ್ಮೆಂಟ್. ನಮ್ಮ ಮಾಲೀಕರು ಭಾಳ decent. ಆಗಾಗ ಲೈವ್ ಬ್ಯಾಂಡ್ ಗೆ ಬಂದರೂ ನರ್ತಕಿಯರ ಮೇಲೆ ಖುದ್ದು ಹೋಗಿ ರೊಕ್ಕ ತೂರುವದಾಗಲಿ, ಎಸೆಯುವದಾಗಲಿ  ಮಾಡುತ್ತಿರಲಿಲ್ಲ. ನೋಟಿನ ಮಾಲೆ ಖರೀದಿಸುತ್ತಿದ್ದರು. ವೇಟರ್ ಕೈಗೆ ಕೊಡುತ್ತಿದ್ದರು. ವೇಟರ್ ಹೋಗಿ ನರ್ತಕಿಗೆ, ಗಾಯಕಿಗೆ ಅರ್ಪಿಸುತ್ತಿದ್ದ. ದೂರಿಂದಲೇ ನರ್ತಕಿ, ಗಾಯಕಿ ದುವಾ, ಸಲಾಂ ಮಾಡುತ್ತಿದ್ದರು. ನಮ್ಮ ಸಾಹೇಬರು, 'It's OK. It's OK. You are welcome,' ಅನ್ನೋ ರೀತಿಯಲ್ಲಿ ಗಂಭೀರವಾಗಿಯೇ ವರ್ತಿಸುತ್ತಿದ್ದರು. ದುಬಾರಿ ಎಣ್ಣೆ ಹೀರುತ್ತ, ಟೇಬಲ್ ಮೇಲೆ ಇದ್ದ ಎಲ್ಲ ಪರಿಚಿತರಿಗೆ ಏನು ಬೇಕೋ ಅದನ್ನು ಕೇಳಿ ಕೇಳಿ, ಕೊಡಿಸಿ ಕೊಡಿಸಿ, ಒಂದೆರೆಡು ಪೆಗ್ ಜಾಸ್ತಿಯೇ ಹಾಕಿಸಿ, ಟೋಟಲ್ ಬಿಲ್ಲ ಎಲ್ಲ ಅವರ ಖಾತೆಗೇ  ಹಾಕಿಸಿಕೊಂಡು, ಮೊದಲೇ ಎದ್ದು ಹೋಗುತ್ತಿದ್ದರೆ ಬಾರ್ ಟ್ಯಾಬ್ ಓಪನ್ ಇಟ್ಟು,'ಬೇಕಾದ್ದು ಕೇಳಿ ತೊಗೊಳ್ಳಿ. ಭಿಡೆ ಬೇಡ,' ಅಂತ ನಮಗೆಲ್ಲ ಹೇಳಿ, 'ಬಿಲ್ ಕಳಿಸಿಬಿಡಿ' ಅಂತ ಹೋಟೆಲ್ಲಿನವರಿಗೆ ಹೇಳಿ ಹೋಗಿ ಬಿಡುತ್ತಿದ್ದ ಒಳ್ಳೆ ದಿಲ್ದಾರ್ ಮನುಷ್ಯ ಅವರು.

ಲೈವ್ ಬ್ಯಾಂಡ್ ನಲ್ಲಿ ಸದಾ ಕಾಣುತ್ತಿದ್ದ ಜನ ಅಂದರೆ ಎಲ್ಲ ನಮ್ಮವರೇ ಅಂದರೆ ಭಾರತೀಯ ಮೂಲದವರು. ಪೂರ್ವ ಆಫ್ರಿಕಾದ ವಾಣಿಜ್ಯ ವ್ಯವಹಾರ ಇರುವದೇ ಭಾರತದಿಂದ ಬಹಳ ವರ್ಷ ಮೊದಲೇ ಅಲ್ಲಿ ಹೋಗಿ ಸೆಟಲ್ ಆದ ಗುಜರಾತಿ ಮೂಲದ ಜನರ ಕೈಯಲ್ಲಿ. ಅವರಲ್ಲಿ ಹಿಂದುಗಳೂ, ದಾವೂದಿ ಬೋಹ್ರಾ ಮುಸ್ಲೀಮರೂ ಇದ್ದಾರೆ. ಹಾಗೆ ಸ್ವಲ್ಪ ಪಾಕಿಸ್ತಾನದ ಜನರೂ ಇದ್ದಾರೆ. ಅವರೆಲ್ಲ ಅಲ್ಲಿಯವರೇ ಆಗಿಬಿಟ್ಟಿದ್ದಾರೆ. ನಮ್ಮ ಮಾಲೀಕರೂ ಅಷ್ಟೇ. ಅಲ್ಲೇ ಹುಟ್ಟಿ, ಬೆಳೆದ ಮೂರನೆಯದೋ ನಾಲ್ಕನೆಯದೋ ತಲೆಮಾರಿನ ಗುಜರಾತಿ. ಆಗರ್ಭ ಶ್ರೀಮಂತ. ಇಸ್ಪೀಟ್ ಆಡಲು ಕುಳಿತರೆ ಸಾವಿರಾರು ಡಾಲರ್ ಲೆಕ್ಕದಲ್ಲಿ ಅಂತ ನೋಡಿದವರು ಹೇಳುತ್ತಿದ್ದರು. ಲೈವ್ ಬ್ಯಾಂಡಿಗೆ ಬಂದಾಗೊಮ್ಮೆ ಎಲ್ಲರ ಬಿಲ್ ಕೊಟ್ಟು, unlimited ಎಣ್ಣೆ ಹೊಡೆಸಿ, ರೊಕ್ಕಾ ಉಡಾಯಿಸುವದನ್ನು ನೋಡಿದರೆ ಇರಬಹುದು ಬಿಡಿ ಅನ್ನಿಸುತ್ತಿತ್ತು.

ಲೈವ್ ಬ್ಯಾಂಡಿನಲ್ಲಿ ಎಲ್ಲೋ ಅಪರೂಪಕ್ಕೆ ಬಿಳಿ ಜನ ಕಂಡು ಬರುತ್ತಿದ್ದರು. ಹೇಳಿ ಕೇಳಿ ಮೊದಲು ಬ್ರಿಟಿಷರು ಟಾಂಜಾನಿಯ ಆಳಿದ್ದರು. ಅವರಿಗೆ ಅಲ್ಲಿ ಇನ್ನೂ ಸಾಕಷ್ಟು ಸಂಪರ್ಕ, ದಂಧೆ ಎಲ್ಲ ಇದೆ. ಎಷ್ಟೋ ಬಿಳಿ ಜನ ನಮ್ಮ ಗುಜರಾತಿ ಮೂಲದ ಜನರ ಜೊತೆ partnership ನಲ್ಲಿ ಬಿಸಿನೆಸ್ ಮಾಡುತ್ತಾರೆ. ಹಾಗಾಗಿ ಆಗಾಗ ಟಾಂಜಾನಿಯಾಗೆ ಬಂದು ಹೋಗಿ ಮಾಡುತ್ತಿರುತ್ತಾರೆ. ಒಮ್ಮೊಮ್ಮೆ ಅಂತಹ ಬಿಳಿ ಜನರನ್ನು ದೊಡ್ಡ ದೊಡ್ಡ ಕುಳಗಳು ಲೈವ್ ಬ್ಯಾಂಡಿಗೆ ಕರೆದುಕೊಂಡು ಬಂದಿದ್ದು ಇತ್ತು. ಆದರೆ ಬಹಳ ಕಮ್ಮಿ.

ಇನ್ನು ಕರಿಯರು??? ಅವರನ್ನೂ ಎಂದೂ ಅಲ್ಲಿ ನೋಡಿರಲಿಲ್ಲ. ಕೆಲವು ಜನ ವೇಟರುಗಳು ಇದ್ದರು. ಆದರೆ ಗಿರಾಕಿಗಳಲ್ಲಿ ಅವರನ್ನು ನೋಡಿದ್ದು ಎಂದೂ ಇಲ್ಲ. ಒಬ್ಬ ದೇಶಿ ಗಾಯಕ ಸಕತ್ತಾಗಿದ್ದ. ಒಮ್ಮೆ ಶಾಲಿಮಾರ್ ಚಿತ್ರದ ಫೇಮಸ್ ಹಾಡು ಹಾಡುತ್ತಿದ್ದ. ಅದರಲ್ಲಿ ಕೋರಸ್ ನಲ್ಲಿ 'ಜಿಂಗಾ ಲಾ ಲಾ. ಹೂಂ ಹೂಂ' ಅಂತ ಆದಿವಾಸಿಗಳು ಅರಚುವ, ಕೂಗುವ ಸನ್ನಿವೇಶ ಇದೆ. ಅದಕ್ಕೆ ಈ ಪುಣ್ಯಾತ್ಮ ಗಾಯಕ ಅಲ್ಲೇ ಇದ್ದ ನಾಲ್ಕಾರು ನಿಗ್ರೋ ವೇಟರ್ ಜನರಿಗೆ ಬರೋಬ್ಬರಿ ತರಬೇತಿ ಕೊಟ್ಟು ಕೋರಸ್ ಹಾಡಿಸಿದ್ದ. ನಕ್ಕೂ ನಕ್ಕೂ ಸಾಕಾಗಿತ್ತು. ಹಿಂದಿ ಹಾಡಿಗೆ ಕರಿಯರ ಕೋರಸ್. ಹುಚ್ಚೆದ್ದು ಹೋಗಿದ್ದ ಮಹನೀಯನೊಬ್ಬ ಅಂದು ಕರಿಯರ ಮೇಲೂ ನೋಟಿನ ಮಳೆಗರೆದುಬಿಟ್ಟಿದ್ದ. ಕರಿಯ ವೇಟರುಗಳಿಗೆ ದೊಡ್ಡ ಮಟ್ಟದ ಟಿಪ್ಪು!

ಹೀಗೆಲ್ಲ ಇದ್ದಾಗ ಆವತ್ತು ಒಬ್ಬ ಕರಿಯ ಬಂದಿದ್ದನ್ನು ಗಮನಿಸಿದೆ. ಕರಿಯ, ಅದೂ ಗಿರಾಕಿಯಾಗಿ ಬಂದಿದ್ದ ಅಂದ ಮೇಲೆ ಅದು ದೊಡ್ಡ ಮಾತೇ. ಅಷ್ಟೇ ಅಲ್ಲ. ಬಂದ ಕರಿಯ ಮೊತ್ತ ಮೊದಲ ಸಾಲಿನಲ್ಲಿದ್ದ  reserved for high rollers ಟೇಬಲ್ ಮೇಲೆ ಹೋಗಿ ಕೂತ. ದೊಡ್ಡವರ ಜೊತೆಗೇ ಬಂದಿದ್ದ. ಸಾಮಾನ್ಯವಾಗಿ ಯಾರು ಬಂದರೂ ಎದ್ದೋಗಿ ಮಾತಾಡಿಸದ ನಮ್ಮ ಮಾಲೀಕರೂ ಸಹ ಎದ್ದು, ಹಾಕಿದ್ದ ಎಣ್ಣೆ ಜಾಸ್ತಿಯಾಗಿದ್ದಕ್ಕೆ ಸ್ವಲ್ಪ ಆಚೆ ಈಚೆ ಒಲಿದು, ಸುಧಾರಿಕೊಂಡು, ಅವನಿದ್ದ ಟೇಬಲ್ಲಿಗೆ ಹೋಗಿ, ಕೈಕುಲುಕಿ, ಭಾರಿ ಆತ್ಮೀಯತೆಯಿಂದ 'ಜಾಂಬೋ! ಹಬಾರಿ ಗಾನಿ?' ಅಂತ ಸ್ವಾಹಿಲಿಯಲ್ಲಿ ಮಾತಾಡಿಸಿ ಬಂದಿದ್ದರು. 'ಜಾಂಬೋ! ಹಬಾರಿ ಗಾನಿ?' ಅಂದರೆ Hello, How are you? ಅಂತ ಅರ್ಥ. ಅಷ್ಟು ಸ್ವಾಹಿಲಿ ಭಾಷೆ ನಾವೂ ಕಲಿತಿದ್ದೆವು. ಅಲ್ಲಿದ್ದಾಗ ಇನ್ನೂ ಜಾಸ್ತಿಯೇ ಬರುತ್ತಿತ್ತು ಬಿಡಿ. ಯಾಕೆಂದರೆ ಅಲ್ಲಿನ ಕರುಪರಿಗೆ ಬೇರೆ ಭಾಷೆ ಬಂದರೆ ತಾನೇ?

ಬಂದಿದ್ದ ನಿಗ್ರೋ ಸ್ಪೆಷಲ್ ಆಗಿದ್ದ. ದುಬಾರಿ ಸೂಟ್ ಧರಿಸಿದ್ದ. ದುಬಾರಿ ಫೆಲ್ಟ್ ಹ್ಯಾಟ್ ಹಾಕಿದ್ದ. ರಾತ್ರಿಯಾದರೂ ಕೂಲಿಂಗ್ ಗ್ಲಾಸ್ ಹಾಕಿದ್ದ. ಗಿಡ್ಡನಾಗಿ, ಧಪ್ಪ ಇದ್ದ. ತಲೆ ನುಣ್ಣಗೆ ಬೋಳಿಸಿಕೊಂಡಿದ್ದ. ನೋಡಿದರೆ ನಮ್ಮ ಕನ್ನಡ ನಟ ಬುಲೆಟ್ ಪ್ರಕಾಶರ ಅಣ್ಣ ಇದ್ದಂಗೆ ಇದ್ದ. ಒಳ್ಳೆ ಕಪ್ಪು ನೀರಾನೆ ತರಹ.

ಕನ್ನಡ ಹಾಸ್ಯ ನಟ ಬುಲೆಟ್ ಪ್ರಕಾಶ್. ಇಂತಹ ನೀಗ್ರೋ ಮನುಷ್ಯನನ್ನು ಊಹೆ ಮಾಡಿಕೊಳ್ಳಿ. ಹಾಗಿದ್ದ ಆವತ್ತು ಬಂದವ.

ಬಂದ ಕರಿಯನಿಗೆ ಅಂತ ದುಬಾರಿ ಎಣ್ಣೆ, ಸ್ಪೆಷಲ್ ಖಾನಾ ಎಲ್ಲ ಬಂದೂ ಬಂದೂ ಟೇಬಲ್ ತುಂಬತೊಡಗಿತು. ಹಾಡುತ್ತಿದ್ದವರಿಗೆ, ಕುಣಿಯುತ್ತಿರುವವರಿಗೆ ಏನೋ ಸ್ಪೆಷಲ್ ಮೆಸೇಜ್ ಹೋಯಿತು. ಅವರು ಮತ್ತೂ ದಬಾಯಿಸಿ ಕುಣಿಯತೊಡಗಿದರು. ರೊಕ್ಕದ ಮಳೆ ಸುರಿಯಿತು. ಗುಜರಾತಿಯೊಬ್ಬ ನೀರಾನೆಯಂತಹ ಕರಿಯನ ತಲೆ ಮೇಲೆ ನೋಟುಗಳನ್ನು ನಿವಾಳಿಸಿ ನಿವಾಳಿಸಿ, ನರ್ತಕಿ ಮೇಲೆ ತೂರಿದ. ಕರಿಯ ಫುಲ್ ಖುಷ್ ಆಗಿ, ಹೆ! ಹೆ! ಅಂತ ದೊಡ್ಡ ನಿಗ್ರೋ ನಗೆ ನಕ್ಕ. ಕರಿಯನ ಬಿಳಿಯ ಹಲ್ಲು ಕಣ್ಣು ಕೋರೈಸುವಂತೆ ಫ್ಲಾಶ್ ಆಯಿತು. ಕರಿಯ ಗುಜರಾತಿಯ ಕೈಗೆ ಕೈ ಅಪ್ಪಳಿಸಿ, ಖುಷಿ ವ್ಯಕ್ತಪಡಿಸಿದ.

ಒಬ್ಬ ಕರಿಯನಿಗೆ ಇಷ್ಟೆಲ್ಲ ಮೆಹಮಾನ್ ನವಾಜಿ, ಸತ್ಕಾರ ಮಾಡುತ್ತಿದ್ದಾರೆ ಅಂದ ಮೇಲೆ ಈ ನಿಗ್ರೋ ಯಾರೋ ದೊಡ್ಡ ಕುಳವೇ ಇರಬೇಕು. ಯಾರೋ ಏನೋ?

ಸುಮಾರು ಮುಕ್ಕಾಲು ಘಂಟೆ ಆದ ಮೇಲೆ ಕರಿಯ ಮತ್ತು ಅವನನ್ನು ಕರೆದುಕೊಂಡು ಬಂದವರು ಎದ್ದು ಹೊರಟರು. ಅವರೇನು ನಮ್ಮ ಹಾಗೆ ದರಿದ್ರ ನೌಕರಿ ಮಾಡುವವರೇ ಒಂದೇ ಕಡೆ ಗೂಟ ಹೊಡೆದುಕೊಂಡು ಕೂಡಲಿಕ್ಕೆ? ಹತ್ತಾರು ಪಬ್ಬು, ಕ್ಲಬ್ಬು ಅಂತೆಲ್ಲ ಹೋಗಿ ರೊಕ್ಕಾ ಉಡಾಯಿಸುತ್ತಾರೆ. ನಮಗೆ ರೊಕ್ಕ ಉಳಿಸುವದು ಹೇಗೆ ಅಂತ ಚಿಂತೆ. ಅವರಿಗೆ ರೊಕ್ಕ  ಉಡಾಯಿಸುವದು ಹೇಗೆ ಅಂತ ಚಿಂತೆ. ಅಜ್ಜಿಗೆ ಅರಿವೆ ಚಿಂತೆ. ಮಮ್ಮಗಳಿಗೆ ಮಿಂಡನ ಚಿಂತೆ. ಸೇಮ್ ಹಾಗೆ.

ಈ ಕಡೆ ನಮ್ಮ ಸಾಹೇಬರೂ ಕೂತಿದ್ದರಲ್ಲ. ಕರಿಯ ಮತ್ತು ಇತರರು ಎದ್ದು ಹೊರಟಾಗ ನಮ್ಮ ಟೇಬಲ್ ಮುಂದೆ ಸಹ ಒಂದು ಕ್ಷಣ ನಿಂತರು. ನಮ್ಮ ಟೇಬಲ್ ಮೇಲಿದ್ದ ಸಾಹೇಬರು, ಅವರ ಸೋದರ ಇತ್ಯಾದಿಗಳ ಕೈಕುಲುಕಿದರು. ಮತ್ತೆ ನಾವೂ ಒಂದು ನಾಕು ಜನ ಆಫ್ರಿಕಾದಲ್ಲಿ ಕೆಲಸ ಮಾಡಲು ಬಂದ ಕೂಲಿ ಜನರ ಮಾದರಿಯ ಜನ ಸಹಿತ ಇದ್ದೆವು ನೋಡಿ. ನಮ್ಮ  ಕೈಕುಲುಕದೇ ಹೋದರೆ ಅದು ಸರಿಯಾಗೋದಿಲ್ಲ ಅಂತ ಹೇಳಿ ನಮ್ಮದೂ ಕೈ ಎಲ್ಲರೂ ಕುಲುಕಿದರು. ಕೊನೆಗೆ ಕೈಕುಲುಕಿದವನೇ ಆ ನೀರಾನೆ ಮಾದರಿಯ ಕರಿಯ ದಡಿಯ. ಅದ್ಯಾವ ನಮ್ನಿ ಕೈಕುಲುಕಿದ ಅಂತೀನಿ! ಉಕ್ಕಿನ ಇಕ್ಕುಳದಲ್ಲಿ ಕೈ ಇಟ್ಟು ಅಡಚಿ ಅದುಮಿದಂತಾಯಿತು. ಸೈಜಿಗೆ ತಕ್ಕ ಶಕ್ತಿ ಆ ದಡಿಯಾ ಕರಿಯಾ ನನ್ಮಗಂದು. ಹೊಟ್ಟೆಗೆ ಏನು ತಿಂತಾರೋ? ದನಾ ಅದು ಇದು ಅಂತ ಸಿಕ್ಕಿದ್ದೆಲ್ಲ ಪ್ರಾಣಿ ತಿಂದೂ ತಿಂದೂ ದೈತ್ಯ ಶಕ್ತಿ ಕಪ್ಪು ಸೂಳೆಮಕ್ಕಳಿಗೆ, ಅಂತ ಅಂದುಕೊಂಡೆ.

ಅವರೆಲ್ಲ ಹೋದ ಮೇಲೆ ನಮ್ಮ ಮಾಲೀಕರು ಮತ್ತೊಂದು ರೌಂಡ್ ಎಣ್ಣೆಗೆ ಆರ್ಡರ್ ಮಾಡಿದರು. ಕರಿಯ ಕೈಕುಲುಕಿದ ಶಾಕಿನಿಂದ, ನೋವಿನಿಂದ ಮಳ್ಳ ಮುಖ ಮಾಡಿ ಕೂತಿದ್ದ ನಮ್ಮನ್ನು ನೋಡಿ, 'ಯಾರು ಗೊತ್ತಾ ಅವನು?' ಅಂತ ಕೇಳಿದರು. ಅವರು ಕಂಪನಿ ಮಾಲೀಕರೇ ಆದರೂ ತುಂಬ ಸಿಂಪಲ್ ಮತ್ತು easy going. ಹಾಗಾಗಿ ನಮಗೂ ಸಲಿಗೆ. 'ರೀ ಬಾಸು, ಯಾರ್ರೀ ಆ ಪುಣ್ಯಾತ್ಮಾ? ಯಪ್ಪಾ! ಶೇಕ್ ಹ್ಯಾಂಡ್ ಮಾಡೋ ಅಬ್ಬರದಲ್ಲಿ ಕೈ ಮುರಿದು ಹೋಗೋ ಹಾಗೆ ಕೈ ಅದುಮಿಬಿಟ್ಟ!' ಅಂದೆ. ಮಾಲೀಕರು ತಟ್ಟಿ ತಟ್ಟಿ ನಕ್ಕರು. 'ಅವನು ಯಾರು ಗೊತ್ತಾ? ಮಕಪ್ಪನ ಮಗ,' ಅಂದು ಬಿಟ್ಟರು. 'ಯಾವ ಅಪ್ಪನ ಮಗ ಆದ್ರೆ ನಮಗೇನ್ರೀ? ಅವನೇನು ಮನುಷ್ಯಾ ಏನ್ರೀ?' ಅನ್ನೋ ಲುಕ್ ಕೊಟ್ಟೆ. ನನಗೆ ತಿಳಿಯಲಿಲ್ಲ ಅಂತ ಅವರಿಗೆ ತಿಳಿಯಿತು. 'ಏ! ಅವನು ಮಕಪ್ಪನ ಮಗ ಅಂದರೆ ಬೆಂಜಾಮಿನ್ ಮಕಪ್ಪನ ಮಗ. ಬೆಂಜಾಮಿನ್ ಮಕಪ್ಪ ಗೊತ್ತಲ್ಲ? ಟಾಂಜಾನಿಯಾದ ಅಧ್ಯಕ್ಷ. ಮೊನ್ನೆ ಮಾತ್ರ ಹೊಸದಾಗಿ ಆರಿಸಿಬಂದವನು. ಈಗ ಗೊತ್ತಾಯಿತಾ ಯಾರು ಅಂತ???' ಅಂತ ದೊಡ್ಡ ಬಾಂಬನ್ನೇ ಹಾಕಿ ಬಿಟ್ಟರು.

ಅಂದಿನ ಟಾಂಜಾನಿಯಾದ ಅಧ್ಯಕ್ಷ ಬೆಂಜಾಮಿನ್ ಮಕಾಪಾ. ಮಗನೂ ಸುಮಾರು ಹೀಗೆ ಇದ್ದ.

ಹ್ಯಾಂ???!!! ಅಂತ ಬಾಯಿ ಮತ್ತೊಂದು ಬಿಟ್ಟುಕೊಂಡು ಕೂಡೋ ಬಾರಿ ಈಗ ನಮ್ಮದು ಮತ್ತು ಅಲ್ಲಿದ್ದ ಇತರೇ ಕೂಲಿಗಳದ್ದು. ನಾವಿದ್ದ ಲೈವ್ ಬ್ಯಾಂಡಿಗೇ ಬಂದು, ಎಲ್ಲ್ಲ ಮೇಜವಾನಿ ಸ್ವೀಕರಿಸಿ, ಹೋಗೋವಾಗ ಕೈಕುಲುಕಿ ಹೋದವನು ದೇಶದ ಅಧ್ಯಕ್ಷನ ಮಗನೇ??? ಅಲಲಲಲಾ!!! ಇದು ಭಾರೀ ಆಯಿತು. ಭಾರತದಲ್ಲಿದ್ದಾಗ ನಮಗೆ ಕೆಲವೊಂದು MLA, MP ಗಳು, ಅದೂ ತಂದೆಯವರಿಗೆ ಗೊತ್ತಿತ್ತು, ಅಂತ ನಮಗೂ ಗೊತ್ತಿತ್ತು ಅಷ್ಟೇ. ಅದೂ ನಮಸ್ಕಾರ ಹೊಡೆಯೋ ಪರಿಚಯ ಅಷ್ಟೇ. ಯಾರೂ ದೊಡ್ಡ ಮಂದಿ  ಹೀಗೆ ಕೈಕುಲುಕಿ ಹೋಗಿದ್ದು ಎಲ್ಲ ಇಲ್ಲವೇ ಇಲ್ಲ. ಇದೇ ಮೊದಲ ಸಲ. ಊಟ ಗೀಟ ಮುಗಿಸಿ, ಕೈ ಪೈ ತೊಳೆದುಕೊಂಡು ಕೂತಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ದೇಶದ ಅಧ್ಯಕ್ಷನ ಮಗನಿಂದ ಕೈ ಕುಲುಕಿಸಿಕೊಳ್ಳುವ, ಕೈ crush ಮಾಡಿಸಿಕೊಳ್ಳುವ ಮಹಾ ಸೌಭಾಗ್ಯದಿಂದ ವಂಚಿತರಾಗಿಬಿಡುತ್ತಿದ್ದೆವು.

ಆಮೇಲೆ ಗೊತ್ತಾಯಿತು ಅದೆಲ್ಲ ಅಲ್ಲಿನ ಬಿಸಿನೆಸ್ ಮಾಡೋ ಜನ ಮಾಡುವ ಖಾಯಂ ಕೆಲಸ ಅಂತ. ಅಲ್ಲಿನ ಕರಿಯರು ಪೂರ್ತಿ ಕರಪ್ಟ್ ಆಗಲು ನಮ್ಮವರೇ ಕಾರಣವಂತೆ. ಅದಕ್ಕೇ ಉಗಾಂಡದ ಮಾಜಿ ಸರ್ವಾಧಿಕಾರಿ ತಲೆ ಕೆಟ್ಟ ಹುಚ್ಚ ಇದಿ ಅಮೀನ್ ಎಲ್ಲ ಭಾರತೀಯ ಮೂಲದ ಜನರನ್ನು ಓಡಿಸಿದ್ದ. ಎರಡೂ ಕೈ ಕೂಡಿದರೆ ಮಾತ್ರ ಚಪ್ಪಾಳೆ. ಕರಿಯರಿಗೆ ಬಿಟ್ಟಿ ದುಡ್ಡು ಬೇಕು. ಗುಜರಾತಿ ಮಂದಿಗೆ ಒಟ್ಟಿನಲ್ಲಿ ದೊಡ್ಡ ಮಟ್ಟದ ದಂಧೆ, ಅದಕ್ಕೂ ದೊಡ್ಡ ಮಟ್ಟದ ಫಾಯಿದೆ ಆದರೆ ಆಯಿತು. ಅದರ ಸಲುವಾಗಿ ಅವರು ಅಧ್ಯಕ್ಷನ ಮಗನ ತಲೆ ಹಿಡಿದು, ಅಮೃತಾಂಜನ ತಿಕ್ಕಲೂ ರೆಡಿ. ಅದೆಲ್ಲ ಕಾರ್ನಾಮೆಗಳ ರೋಚಕ ವಿವರಗಳನ್ನು ಬರೆಯುತ್ತ ಕುಳಿತರೆ ಪುಸ್ತಕ ತುಂಬಿಸಬಹುದು. ಹಾಗಿವೆ ಪೂರ್ವ ಆಫ್ರಿಕಾದ corruption ಕಾರ್ನಾಮೆಗಳು.

ಅದೇ ಕೊನೆ. ನಂತರ ಮೂರ್ನಾಕು ಬಾರಿ ಅಲ್ಲೇ ಹೋದರೂ ಅಂತಹ ದೊಡ್ಡ ವ್ಯಕ್ತಿಯಾರೂ ಕಂಡು ಬರಲಿಲ್ಲ. ಸದಾ ಲೈವ್ ಬ್ಯಾಂಡ್ ನಲ್ಲಿ ಕಂಡು, ಅಲ್ಲೇ ಪರಿಚಯವಾಗಿ, 'ಕೇಮ್ ಛೋ? ಬದ್ದೂ ಬರಾಬರ್?' (ಹೇಗಿದ್ದೀರಿ? ಎಲ್ಲ ಆರಾಮ್?) ಅಂತ ಸಹಜವಾಗಿ ಕೇಳುತ್ತಿದ್ದ ಗುಜರಾತಿಗಳನ್ನು ಬಿಟ್ಟರೆ ಮತ್ತೆ ಯಾರೂ ದೊಡ್ಡ ಕರಿ ಮನುಷ್ಯ, ಬಿಳಿ ಮನುಷ್ಯ ಇತ್ಯಾದಿ ಸಿಗಲಿಲ್ಲ.

ನೋಡ ನೋಡುತ್ತಿದ್ದಂತೆ ಒಂದು ವರ್ಷ ಮುಗಿದೇ ಹೋಯಿತು. ಅಲ್ಲಿ ಲೈಫು ಮಸ್ತಾಗಿದ್ದರೂ ಅಷ್ಟು ಕೆಲಸದ ತೃಪ್ತಿ ಇರಲಿಲ್ಲ. ಮತ್ತೆ ಅದು ೧೯೯೬ ಟೈಮ್. ಅಮೇರಿಕಾದಲ್ಲಿ IT boom ಎಂಬ ಹುಚ್ಚು ಮುಂಡೆ ಮದುವೆ ಶುರುವಾಗಿತ್ತು. ಆ ಹುಚ್ಚು ಮುಂಡೆ ಮದುವೆಯಲ್ಲಿ ದಂಡಿಯಾಗಿ ಉಂಡವರೇ ಜಾಣರು. 'ಜಾವಾ ಬರ್ತದೆ ಏನು?' ಅಂತ ಕೇಳಿದರೆ, 'ಜಾವಾ ಇಲ್ಲ ಸಾರ್. ಆದ್ರೆ ಯೆಜಡೀ ಬೈಕ್ ಹೊಡೆದ ಅನುಭವ ಇದೆ' ಅಂತ ಅಸಂಬದ್ಧ ಉತ್ತರ ಕೊಡುತ್ತಿದ್ದ, ಹಶಿ ದಡ್ಡ, ಕಾಂಜಿ ಪೀಂಜಿ IT ಕೂಲಿಗಳೆಲ್ಲ ಅಮೇರಿಕಾಗೆ ಹಾರಿ, ಝಣ ಝಣ ಅಂತ ಡಾಲರ್ ಎಣಿಸುತ್ತಿದ್ದರೆ ನಾವು ಇಲ್ಲಿ ಪೂರ್ವ ಆಫ್ರಿಕಾದಲ್ಲಿ ಕೂತು ಏನು ಮಾಡೋಣ? ಅಷ್ಟರವರೆಗೆ at least ಮೂರು ವರ್ಷದ ಅನುಭವ ಇರಲಿಲ್ಲ. ಅಮೇರಿಕಾಗೆ ಹೋಗಲು ಅಷ್ಟು ಮಿನಿಮಂ ಬೇಕು ಅಂತ ಗೊತ್ತಾಗಿದ್ದಕ್ಕೆ ಆಫ್ರಿಕಾಗೆ ಬಂದಿದ್ದಾಗಿತ್ತು. ಅಮೇರಿಕಾದಷ್ಟು ಅಲ್ಲದಿದ್ದರೂ ಸುಮಾರು ರೊಕ್ಕ ಅಂತೂ ಮಾಡಬಹದು ಅಂತ ಬಂದಿದ್ದು ಸರಿಯೇ ಇತ್ತು. ಆದರೆ ಅಲ್ಲೇ ಉಳಿಯುವದು ಅಷ್ಟು ಲೈಕ್ ಆಗಲಿಲ್ಲ. ಅತಿ ಉತ್ತಮ ಅಲ್ಲಿನ ಗುಜರಾತಿ ಗೆಳೆಯರಿದ್ದರು. tension ಇಲ್ಲದ ಲೈಫ್ ಆರಾಮಾಗಿತ್ತು. ಆದ್ರೆ ಅದು ಏನೋ ಅಂತಾರಲ್ಲ, ಇದ್ದುದೆಲ್ಲವ ಬಿಟ್ಟು, ಅನ್ನೋ ಹಾಗೆ ಟಾಂಜಾನಿಯಾ ಬಿಟ್ಟು ಬಂದಾಯಿತು. ನಂತರ ಇಲ್ಲಿಗೆ ಬಂದಿದ್ದು. ಆದರೆ ಅಲ್ಲಿ ಕಳೆದ ಒಂದು ವರ್ಷ ನೆನಪಿಸಿಕೊಂಡರೆ ಇವತ್ತಿಗೂ ಹ್ಯಾಪಿ, ಹ್ಯಾಪಿ! ಅಷ್ಟೊಂದು ಮಸ್ತ ಇತ್ತು. ಒಂದೇ ವರ್ಷ ಇದ್ದಿದ್ದು. ಆದರೆ ನೂರು ಬ್ಲಾಗ್ ಪೋಸ್ಟ್ ಬರೆಯಬಹುದು. ಅಷ್ಟೊಂದು ಹೊಸ ಹೊಸ, ಚಿತ್ರ ವಿಚಿತ್ರ ಅನುಭವಗಳು.

ಲೈವ್ ಬ್ಯಾಂಡ್ ನರ್ತಕಿ ಒಬ್ಬಳ ಕುರಿತ ಬಂದ ಒಂದು ಮನೋಜ್ಞ ಚಿತ್ರ 'ಚಾಂದಿನಿ ಬಾರ್'. ಸೂಪರ್ ನಿರ್ದೇಶಕ ಮಧುರ ಭಂಡಾರ್ಕರ್ ಮಾಡಿದ ಚಿತ್ರಗಳಲ್ಲೇ ಅತ್ಯುತ್ತಮ ಚಿತ್ರ. ಅದನ್ನು ನೋಡಿ ಬಿಟ್ಟರೆ ಲೈವ್ ಬ್ಯಾಂಡ್ ಕರ್ಮಚಾರಿಗಳ ಬಗ್ಗೆ ಸಿಕ್ಕಾಪಟ್ಟೆ ಮರುಕ, ಕರುಣೆ ಎಲ್ಲ ಮೂಡಿ, ಕೊನೆಯ ದೃಶ್ಯದಲ್ಲಂತೂ ಕಣ್ಣಲ್ಲಿ ನೀರೇ ಬಂದು ಬಿಡುವಷ್ಟು ಮನ ಕಲಕುವ ಚಿತ್ರ. ಅದನ್ನು ನೋಡಿದಾಗೆಲ್ಲ ಟಾಂಜಾನಿಯಾದ ಲೈವ್ ಬ್ಯಾಂಡ್ ನೆನಪಾಗುತ್ತದೆ. ಅಲ್ಲಿ ಹಾಡಿದ್ದ, ಕುಣಿದಿದ್ದ ಕಲಾವಿದರ ಹಿಂದೆ ಕೂಡ ಏನೇನು ಕಥೆಗಳಿದ್ದವೋ ಏನೋ? ಆದರೂ ಅವನ್ನೆಲ್ಲ ಬಚ್ಚಿಟ್ಟುಕೊಂಡು, ಪ್ರತಿ ರಾತ್ರಿ ಮೇಕ್ಅಪ್ ಮಾಡಿಕೊಂಡು, ಬಂದು ಕಾಸು ತೂರುವ ಮಂದಿಗೆ ಖುಷಿ ಕೊಡಲು ಅವರೆಲ್ಲ ಭರ್ಜರಿ ಹಾಡಿದ್ದೇ ಹಾಡಿದ್ದು, ದಬಾಯಿಸಿ ಕುಣಿದಿದ್ದೇ ಕುಣಿದಿದ್ದು. ಅವರೆಲ್ಲ ಎಲ್ಲೇ ಇರಲಿ ತಣ್ಣಗಿರಲಿ.

* ಅನೇಕ ಹಿಂದಿ ಚಿತ್ರಗಳಲ್ಲಿ ಲೈವ್ ಬ್ಯಾಂಡ್ ಹಾಡುಗಳು ಬಂದು ಹೋಗಿವೆ. ಅದ್ಭುತ ಅನ್ನಿಸುವಂತಹದ್ದು ಅಂದರೆ ೨೦೦೦ ರಲ್ಲಿ ರಿಲೀಸ್ ಆಗಿದ್ದ 'ಕುರುಕ್ಷೇತ್ರ' ಮೂವಿಯದು. ಕೆಳಗಿದೆ ನೋಡಿ. ರೌಡಿಗಳು, ರೊಕ್ಕದ ಮಳೆ ಎಲ್ಲ ಬರೋಬ್ಬರಿ ತೋರಿಸಿದ್ದಾರೆ.
* ಅದೇ ಮಾದರಿಯ ಇನ್ನೊಂದು ಹಾಡು 'ಆನ್' ಚಿತ್ರದ್ದು.

Sunday, January 11, 2015

Wake up call for the unawakened

(Random thoughts regarding corporate firings. Copied from my FB status.)

Well! what to say. Can't blame the company. They have to hire and fire according to their business needs. They have to protect themselves from potential liability. So they have to make up some data.

This is a wake up call for the unawakened. Nobody watches your back. You alone are solely responsible for your career, life and everything. So take really good care of yourself. Job security - forget it. No company can provide it. Look for jobs that provide reasonable opportunities for future employment. That means companies which not only pay well but also provide good work & life balance. Stop burning yourself out for some employer who can get rid of you in a moment. Use some of that time to keep yourself healthy (mentally and physically), read, get skills and always be prepared for such eventuality. First time is always hard but good professionals will succeed. My thoughts are with such people. Seen this sham in so many places. What goes behind the screens is very very ugly. Cooked up data, made up performance ratings, deliberately given poor ratings to justify terminations.

Long long ago, employees and employers used to have discussions and come up with creative ideas to save jobs and save the company during difficult times. Way back in 2001 time frame, when the company I was working had some problems due to general market slump, one of the measures proposed was to take 5% pay cut at employee level and more % at higher levels. Some people grumbled but the measure saved quite a few talented people from getting laid off. Still today I feel very proud that we as a company of more than 2000 people came together and made such a benevolent measure work. Do such things happen now or companies simply try to rightsize right away??

At will employment - that's the kind of employment contract. But if companies want loyalty they can't treat people like disposable items. Without employee loyalty and dedication, no company becomes great or stays great. Many companies that figured in business classics like 'Good to Great', 'Built to Last' do not exist today because at some point they stopped caring for employees. Business triad of employees, customers, shareholders has to be balanced carefully. Productive employees are happy and happy employees make customers happy and happy customers make wealthy shareholders, in the long run. But, many businesses are so focused on short term that they are busy kissing up to wall street and meeting their earnings/ share projections.

Sorry for the long ramble....getting rid of people really hurts at mid management level because only people in that role know how hard it is to hire good people, keep them motivated, keep them focused, request them to make many sacrifices and then some bozo at the top take decision to fire them just to fit some stupid financial model which does not survive the first brush with reality.

(Disclaimer: No reflection on what may be going on in TCS or elsewhere. Just my thoughts on such happenings. This incident just prompted me to write down few thoughts)

Thursday, January 08, 2015

ಈಜಿಪ್ಟಿನಲ್ಲಿರುವ ಮಮ್ಮಿ!

ಟೀಚರ್ : ಕ್ಲಾಸ್, ಇವತ್ತಿಗೆ ಇಷ್ಟು ಸಾಕು. ನಾಳೆ ಈಜಿಪ್ಟ್ ಬಗ್ಗೆ ಹೇಳತೇನಿ. ಅಲ್ಲೆ ಮಮ್ಮಿ (mummy) ಅದಾವು.

ದ್ಯಾಮ್ಯಾಗ ಮಮ್ಮಿ ಅಂದ್ರ ಏನು ಅಂತ ಗೊತ್ತಾಗಲಿಲ್ಲ. ಟೀಚರ್ ಕಡೆ ಕೇಳಾಕ ಹೆದರಿಕಿ. ಎಲ್ಲರೆ ಮನಗಂಡ ಕಟದಾರು ಅಂತ. ಅದಕ ದೋಸ್ತ್ ಸೋಮ್ಯಾನ ಕಡೆ ಕೇಳಿದ. 'ಲೇ ಸೋಮ್ಯಾ, ಈ ಮಮ್ಮಿ ಅಂದ್ರ ಏನಲೇ????????'

ಸೋಮ್ಯಾ ದೊಡ್ಡ ದೀಡ್ ಪಂಡಿತ. ಹುಚ್ಚ ಮಂಗ್ಯಾನಿಕೆ. 'ಲೇ, ಮಮ್ಮಿ ಅಂದ್ರ....ಅಂದ್ರ ಅವ್ವ ಲೇ....ಅವ್ವ!!!' ಅಂತ ಚೌಕ್ ಉಳ್ಳಿಸಿದ. ಪೂರ್ತಿ ತಪ್ಪು ಅಲ್ಲ ಬಿಡ್ರೀ.

ದ್ಯಾಮ್ಯಾ 'ಮಮ್ಮಿ ಅಂದ್ರ ಅವ್ವ' ಅನ್ನೋ ಅದೇ ಧ್ಯಾನದಾಗ ಮನಿಗೆ ಬಂದ. ಅವರಪ್ಪ ಅಲ್ಲೇ ಕಂಡ. ಕಂಟ್ರಿ ಎಣ್ಣಿ ಹೊಡದ, ಕಟ್ಟಿ ಮ್ಯಾಲೆ ಟೈಟಾಗಿ ಕುಂತಿದ್ದ. ಬೀಡಿ ಸೇದಿಕೋತ್ತ.

'ಯಪ್ಪಾ............................ಏ ಯಪ್ಪಾ.......' ಅಂತ ಒದರಿದ ದ್ಯಾಮ್ಯಾ.

'ಏನಲೇ????? ಹ್ಯಾಂ????' ಅಂತ ನಶಾದಾಗ ಹೂಂಕರಿಸಿದ ಅವರಪ್ಪ.

'ಯಪ್ಪಾ, ಒಂದು ಮಾತು ಕೇಳೋದೈತಿ...' ಅಂದ ದ್ಯಾಮ್ಯಾ.

'ಏನಲೇ ಅದು?????' ಅಂದ ಅವರಪ್ಪ.

'ಯಪ್ಪಾ, ನೀ ಈಜಿಪ್ಟ್ ದೇಶಕ್ಕ ಹೋಗಿದ್ದಿ ಏನು????' ಅಂತ ಕೇಳಿಬಿಟ್ಟ ದ್ಯಾಮ್ಯಾ.

'ಏನ್ ಈಜಿಪ್ಟ್ ಹಚ್ಚಿಲೇ????? ನಾ ಧಾರವಾಡ ಬಿಟ್ಟ ಅವನೌನ್ ಹೊರಗ ಕಾಲಿಟ್ಟಿಲ್ಲಲೇ. ಈಜಿಪ್ಟ್ ಅಂತ ಈಜಿಪ್ಟ್!!!!' ಅಂದಾ ಅವರಪ್ಪಾ.

'ಈಜಿಪ್ಟ್ ಹೋಗಿಲ್ಲ ಅಂದ್ರ ಮತ್ತ ನಮ್ಮ ಅವ್ವನ್ನ ಎಲ್ಲಿಂದ ತಂದಿ?????????' ಅಂತ ಕೇಳಿಬಿಟ್ಟ ದ್ಯಾಮ್ಯಾ.

'ನಿಮ್ಮೌನ್!!! ನಿಮ್ಮ ಅವ್ವನ್ನ ಕೇಳ ಹೋಗ. ಅಕಿ ಎಲ್ಲಿಂದ ಬಂದಾಳ ಅಂತ!' ಅಂತ ಒದರಿದ ಅವರಪ್ಪ.

ದ್ಯಾಮ್ಯಾಗ ಗೊತ್ತೈತಿ, ಅವರ ಅವ್ವ ಭೈರಿದೇವರಕೊಪ್ಪದಿಂದ ಬಂದಾಳ ಅಂತ. ಹಾಂಗಿದ್ದರ ಈಜಿಪ್ಟ್ ಅಂದ್ರ ಭೈರಿದೇವರಕೊಪ್ಪ ಏನ????? ಅಂತ ತಲಿ ಕೆರಕೊಂಡ.

'ಏನ್ ಹಡಬಿಟ್ಟಿ ಟೀಚರ್ ಅದಾಳೋ ಅಕಿ. ಭೈರಿದೇವರಕೊಪ್ಪಕ್ಕ ಈಜಿಪ್ಟ್ ಅಂತಾಳ. ನಾಳೆ ಸೋಮ್ಯಾಗ ಹೇಳಬೇಕು' ಅಂತ ಹೇಳಿ ಊಟ ಮಾಡಿ, ಕೌದಿ ಹೊದಕೊಂಡ ಮಕ್ಕೊಂಡ.

ಆಕಡೆ ಸಾಲಿ ಟೀಚರ್ ಮರುದಿವಸ ಮಾಡಬೇಕಾದ ಈಜಿಪ್ಟ್ ಪಾಠದ ರಿವಿಶನ್ ಮಾಡಾಕ ಹತ್ತಿದರು. ನಂತರ ಇಳಿದರು.

ಇದೆಲ್ಲೆದರ ಮಧ್ಯೆ ಸಾಲಿ ಹುಡುಗುರ ಜಿಯಾಗ್ರಫಿ ಗೋವಿಂದಾ ಗೋವಿಂದಾ!!!!

(ಮೂಲ: ಶಿವರಾಂ ಶಾಸ್ತ್ರಿ)

Tuesday, January 06, 2015

'ಎಷ್ಟು ಎತ್ತರಕ್ಕೆ, ಎಷ್ಟು ಚಂದ ಇದ್ದಾನೆ!' ಕೂಸಿನ ಕಣ್ಣಲ್ಲಿ ಬಾಲಿವುಡ್ ಅಕ್ಕಿ, ಹೃದಯದಲ್ಲಿ ಪುಟರ್ ಪುಟರ್ ಹಕ್ಕಿ

೧೯೯೧ ಡಿಸೆಂಬರ್. ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ಮುಗಿದ ನಂತರ ರಜೆಗೆ ಧಾರವಾಡಕ್ಕೆ ಬಂದಿದ್ದೆ. ಅದೊಂದು ದಿವಸ ಮಧ್ಯಾನದ ಚಹಾದ ಟೈಮಿಗೆ ಒಬ್ಬರು ಪರಿಚಯಸ್ಥ ಆಂಟಿ ಬಂದಿದ್ದರು. ಹಾಗೇ ಸುಮ್ಮನೆ. ಹುಡುಕುತ್ತ ಹೋದರೆ ನಮ್ಮ ದೂರದ ಬಳಗದವರೇ. ಅದಕ್ಕಿಂತ ಹೆಚ್ಚಿನ ಒಡನಾಟ ಇತ್ತು. ಅವರ ಜೊತೆಗೆ ಬಾಲಂಗೋಚಿ ಹಾಗೆ ಬಂದಿದ್ದಳು ಅವರ ಮಗಳು. ನಮಕಿಂತ ಒಂದೆರೆಡು ವರ್ಷಕ್ಕೆ ದೊಡ್ಡವಳು. ಮದುವೆಗೆ ಹುಡುಗನ ಹುಡುಕಾಟ ನಡೆದಿತ್ತು. ಹುಡುಗ ಸಿಗುವವರೆಗೆ ಟೈಮ್ ಪಾಸಿಗಿರಲಿ ಅಂತ ಕರ್'ನಾಟಕ' ಯೂನಿವರ್ಸಿಟಿಯಲ್ಲಿ ಓದೋ 'ನಾಟಕ' ಮಾಡುತ್ತಿದ್ದಳು. ಅಥವಾ ಹಾಗಂತ ನಮ್ಮ ಕುಚೋದ್ಯ. ಕರ್ ನಾಟಕ ಅಂದ್ರೆ ನಾಟಕ ಮಾಡು ಅಂತ ಅಂದ ಮೇಲೆ ಮತ್ತೇನು?!

ಅಕ್ಕನಂತ ಹುಡುಗಿ. ಹುಡುಗಿಯಂತ ಅಕ್ಕ ಅಲ್ಲ ಮತ್ತೆ. ಯಾಕೆ ಹೇಳಿದೆ ಅಂದರೆ ತಮ್ಮ ಕೊನೆಯ ಕಾಲದಲ್ಲಿ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಯಾರ್ಯಾರಿಗೋ 'ತಮ್ಮನಂತಹ ಹುಡುಗಿ' ಅಂತೆಲ್ಲ ಬರೆದುಕೊಂಡು ಬಿಡುತ್ತಿದ್ದರು. ಓದಿ ನಗು ಬರುತ್ತಿತ್ತು. ಹಾಗಾಗಿ ಈ ಹುಡುಗಿ ಕಂಡಾಗೊಮ್ಮೆ, 'ಅಕ್ಕನಂತಹ ಹುಡುಗಿ ಅಥವಾ ಹುಡುಗಿಯಂತಹ ಅಕ್ಕ' ಅಂತ ಹೇಳಿ ಸುಮ್ಮನೆ ತಮಾಷೆ ಮಾಡುತ್ತಿದ್ದೆ. ಆಕೆ ಹೋದ ಮೇಲೆ. ಅವಳ ಎದುರಿಗೇ ಮಾಡುವಷ್ಟು ಕೆಟ್ಟ ಬುದ್ಧಿ ಇರಲಿಲ್ಲ ಬಿಡಿ.

ಅಕ್ಕಾ ಪಕ್ಕಾ ಅನ್ನುತ್ತಿರಲಿಲ್ಲ ಬಿಡಿ. ಅಕ್ಕಾ ಪಕ್ಕಾ ಅನ್ನಲಿಕ್ಕೆ ಕಮ್ಮಿ ಕಮ್ಮಿ ಅಂದರೂ ಒಂದು ಐದು ವರ್ಷದ ವ್ಯತ್ಯಾಸ ಇರಬೇಕು. ಹಾಗಂತ ನಮ್ಮ ಕರಾರು. ಈಕೆ ಕೇವಲ ಎರಡೇ ವರ್ಷಕ್ಕೆ ದೊಡ್ಡವಳು. ಹಾಗಾಗಿ ಹೆಸರು ಹಿಡಿದೇ ಕರೆದು ಅಭ್ಯಾಸ. ತುಂಬ informal ಅನ್ನುವ ಹಾಗೆ ಇತ್ತು ದೋಸ್ತಿ ಅನ್ನಿ.

'ಏನೇ ಕೂಸೇ, ಮತ್ತೆ ಎಂತಾ ಸುದ್ದಿ?' ಅಂತ ಶುದ್ಧ ಹವ್ಯಕ ಕನ್ನಡದಲ್ಲಿ ಲೋಕಾಭಿರಾಮವಾಗಿ ಶುರುವಿಟ್ಟುಕೊಂಡೆ. ಎದುರಿಗೇ ಚಹಾ ಹೀರುತ್ತ ಕೂತಾಗ ಏನಾದರೂ ಮಾತಾಡಲೇಬೇಕಲ್ಲ. ಅಮ್ಮ ಅವರಮ್ಮನ ಜೊತೆ ಏನೋ ಮಾತಾಡುತ್ತಿದ್ದರು. ನಾವು ಇವಳ ಜೊತೆ. ಕೂಸು ಅಂದರೆ ಹವ್ಯಕ ಭಾಷೆಯಲ್ಲಿ ಹುಡುಗಿ. ಅದೆಷ್ಟು ದೊಡ್ಡ ಕ್ವಾಣ (ಕೋಣ) ಹುಡುಗಿಯಾದರೂ ಆಕೆ ಕೂಸೇ. 'ಕ್ವಾಣ ಕೂಸು' ಅನ್ನಬಹುದೇ? ಗೊತ್ತಿಲ್ಲ. ಲಂಕೇಶರನ್ನೇ ಕೇಳಬೇಕೋ ಏನೋ?!

'ಎಂತೂ ಇಲ್ಲ್ಯ. ಅದೇ ಸೇಮ್. ನಿಂದೆಂತದು ಸುದ್ದಿ?' ಅಂತ ಉಲ್ಟಾ ಕೇಳಿದಳು ಹುಡುಗಿ.

'ನಮ್ಮದೂ ಎಲ್ಲಾ ಸೇಮ್ ಸೇಮ್ ಮಾರಾಯ್ತೀ. ಇನ್ನು ಎರಡೂವರೆ ವರ್ಷ, ಇಂಜಿನಿಯರಿಂಗ್ ಮುಗಿಯಲ್ಲಿವರಿಗೆ, ಎಂತೂ ವಿಶೇಷ ಇರ್ತಿಲ್ಲೆ ನೋಡು,' ಅಂತ ಬೋರಿಂಗ್ ಇಂಜಿನಿಯರಿಂಗ್ ಬಗ್ಗೆ ಹೇಳಿದೆ.

'ಥೋ! ನಿಂದೂ ಇದೇ ಆಗೋತಲಾ,' ಅಂತು ಅಕ್ಕನಂತಹ ಹುಡುಗಿ.

'ಮತ್ತೆ? ಯಾವದಾದ್ರೂ ಸಿನೆಮಾ ಗಿನೆಮಾ ನೋಡ್ಜ್ಯನೇ ಕೂಸೇ?' ಅಂದೆ. ಆಗೆಲ್ಲ ಹುಡುಗಿಯರು ಎಲ್ಲೋ ಅಪರೂಪಕ್ಕೊಂದು ಸಿನಿಮಾ ನೋಡಿಬಿಟ್ಟರೆ ಅದು ದೊಡ್ಡ ಮಾತು.

'ಹೌದೋ! ನಿನ್ನೆ ಮಾತ್ರ ಒಂದು ಸಿನೆಮಾಕ್ಕೆ ಹೋಗಿದ್ದಿ ನೋಡು,' ಅಂದು ಬಿಟ್ಟಿತು ಕೂಸು.

ಆವಾಗ ನಮಗೂ ಸಿನೆಮಾ ಹುಚ್ಚು. ನೋಡದ ಹಿಂದಿ ಸಿನೆಮಾಗಳಿರಲಿಲ್ಲ. ಇಂಗ್ಲೀಷ್ ಸಿನೆಮಾಗಳ ಹುಚ್ಚು ಅಷ್ಟಿರಲಿಲ್ಲ. ಯಾಕೆಂದರೆ ನಾಚ್ ಗಾನಾ ಇಲ್ಲದೆ, ಕೇವಲ ಒಂದೂವರೆ ಘಂಟೆಗಳಲ್ಲಿ ಮುಗಿದು ಹೋಗುತ್ತಿದ್ದ ಇಂಗ್ಲೀಷ್ ಸಿನೆಮಾಗಳನ್ನು ನೋಡಿದರೆ ಪೂರ್ತಿ 'ಪೈಸಾ ವಸೂಲ್' ಆದ ಸಂತೃಪ್ತ ಭಾವನೆ ಬರುತ್ತಿರಲಿಲ್ಲ. ಕಥೆಯಂತೂ ಮೊದಲೇ ತಿಳಿಯುತ್ತಿರಲಿಲ್ಲ. ಅವರ ಭಾಷೆ, ಸಂಸ್ಕೃತಿ  ತಿಳಿದರೆ ತಾನೇ ಕಥೆ ತಿಳಿಯುವದು? ಆದರೆ ತಲೆಬುಡವಿಲ್ಲದ ಹಿಂದಿ ಮೂವಿಗಳು ಹಾಗಲ್ಲ. ಪೂರ್ತಿ ಮೂರು, ಮೂರುವರೆ ತಾಸು ಭರಪೂರ್ ಮನರಂಜನೆ. ಆಮೇಲೆ, ಧಾರವಾಡದ ಕೆಟ್ಟಾ ಕೊಳಕ ಭಾಷೆಯಲ್ಲಿ, 'ಅವನೌನ್! ತಲಿ ಹಡೋ ಮೂವಿ ಲೇ' ಅಂತ ಬೈಯುತ್ತ, ಬಟ್ಟೆಗೆ ಹತ್ತಿಕೊಂಡಿದ್ದ ಥೇಟರ್ ನವರು ಫ್ರೀಯಾಗಿ ಕೊಡುತ್ತಿದ್ದ ತಗಣಿ ಒರೆಯುತ್ತ ಎದ್ದು ಬಂದರೂ ಓಕೆ. ಆದರೆ ಮೂರುವರೆ ತಾಸು ಹಿಂದಿ ಮೊಳೆ ಮಾತ್ರ ಹೊಡೆಸಿಕೊಳ್ಳಲೇಬೇಕು. ಅದು ಅಂದಿನ ವೈಪರೀತ್ಯ! ಆ ಕಾಲದ ಧಾರವಾಡ ಪರಮ ಕೊಳಕ 'ರೀಗಲ್ ಥೇಟರ್' ತಗಣಿ ಅಂದ್ರೆ ಭಯಂಕರ!

ಇರಲಿ ಇವಳು ಯಾವ ಸಿನೆಮಾ ನೋಡಿ ಬಂದಿದ್ದಳೋ ಏನೋ?!

'ಹೌದ? ಜೋರು. ಯಾವ ಸಿನೆಮಾಕ್ಕೆ ಹೋಗಿದ್ಯೇ?' ಅಂತ ಕೇಳಿದೆ.

'ಕಿಲಾಡಿ!' ಅಂದು ಬಿಟ್ಟಳು.

ಶಿವನೇ ಶಂಭುಲಿಂಗ!

''ಕಿಲಾಡಿ' ಅಂತ ಹೆಸರಿನ ಸಿನೆಮಾ ಕೂಡ ಇರಬಹುದೇ ಶಿವನೇ!?' ಅನ್ನಿಸಿತು.

ಸುಮ್ಮನೆ ಹುಡುಗಿಯ ಕಿಚಾಯಿಸೋಣ ಅಂತ ಹೇಳಿ, 'ಎಂತದು? ಸಿನೆಮಾಕ್ಕೂ ಹೋಗಿ ಕಿಲಾಡಿ ಮಾಡಿಕ್ಕೆ ಬಂದ್ಯಾ? ಹಾಂ?' ಅಂದೆ. ನಮ್ಮ ಹವ್ಯಕ ಭಾಷೆಯಲ್ಲಿ ಕಿಲಾಡಿ ಅಂದರೆ ತುಂಟತನ ಅಂತ ಅರ್ಥ.

'ಥೋ! ಮಳ್ಳನೆಯಾ! ಕಿಲಾಡಿ ಹೇಳ ಸಿನೆಮಾಕ್ಕೆ ಹೋಗಿದ್ದಿ ಅಂದ್ರೆ ಕಿಲಾಡಿ ಮಾಡಿದ್ನೇ  ಹೇಳಿ ಕೇಳ್ತ್ಯಲಾ? ಎಂತಾ ಆಜಾ ನಿಂಗೆ?' ಹೇಳಿ ಹುಡುಗಿ ಸ್ವಲ್ಪ ರಾಂಗ್ ಆದಳು. ಯಾರಿಗಾದರೂ ಒಂದಿಷ್ಟು ಕಿರಿಕ್ಕು ಮಾಡಿ ಕೆರಳಿಸದಿದ್ದರೆ ನಮಗೆ ಉಂಡನ್ನ ಅರಗದ ದಿನಗಳು ಅವು. ಆ ಚಾಳಿಗೆ ಅವತ್ತಿಗೆ ಆಕೆ ಬಲಿ.

'ಓಹೋ! ಸಿನೆಮಾ ಹೆಸರೇ ಕಿಲಾಡಿ. ಯಾರ್ಯಾರ ಇದ್ದ?' ಅಂತ ತಾರಾಗಣದ ಬಗ್ಗೆ ಕೇಳಿದೆ.

'ಅಕ್ಷಯ ಕುಮಾರ ಹೇಳಿ ಯಾರೋ ಹೊಸಬ್ನಡಾ. ಮತ್ತೆ ಯಾರ್ಯಾರೋ ಇದ್ದ ಮಾರಾಯಾ,' ಅಂತ ಹೇಳಿತು ಹುಡುಗಿ. ಆಕೆಗೆ ಹೀರೋ ಒಬ್ಬನ ಹೆಸರು ನೆನಪಿತ್ತು. ಬಾಕಿ ಎಲ್ಲ ನಾಸ್ತಿ.

ಅಕ್ಷಯ ಕುಮಾರ?!

ನಾ ಅಂತೂ ಆ ಹೆಸರು ಕೇಳಿರಲಿಲ್ಲ ಬಿಡಿ. ಈಗೇ ಕೇಳಿದ್ದು.

'ಹ್ಯಾಂಗಿದ್ದಾ ಹೀರೋ?' ಅಂತ ಸಹಜ ಕೇಳಿದೆ. ಮುಂದಾಗೋದನ್ನು ನಿರೀಕ್ಷೆ ಮಾಡಿರಲಿಲ್ಲ.

'ಅಕ್ಷಯ ಕುಮಾರ ಹೇಳ ಹೀರೋ ಮಸ್ತ ಇದ್ದಾ. ಹ್ಯಾಂಗಿದ್ದಾ ಅಂದರೆ.... ಅಂದರೆ..... ಎತ್ತರಕ್ಕೇ, ಛಂ........................,' ಅಂತ ಏನೋ ಹೇಳಲಿಕ್ಕೆ ಹೊರಟವಳು, ಏನು ಹೇಳುತ್ತಿದ್ದೇನೆ ಅನ್ನುವದರ ಖಬರು ಸ್ವಲ್ಪ ಲೇಟಾಗಿ ಆಗಿ, ಅದರ implications ಅರ್ಥವಾಗಿ, ನಾಚಿಕೊಂಡು, ಕೆಂಪು ಕೆಂಪಾಗಿ, ಎತ್ಲಾಗೋ ನೋಡುತ್ತ ಕೂತು ಬಿಟ್ಟಳು. ಆಕೆ ಮುಂದೆ ಮಾತಾಡಿದರೆ ಕೇಳಿ! ನಾನೂ ಬಿಟ್ಟೆ. ಮುಂದುವರಿಸಲಿಲ್ಲ. ಪಾಪ ಹುಡುಗಿ! ಅದೂ ಅಕ್ಕನಂತಹ ಹುಡುಗಿ.

'ಅಯ್ಯೋ ಪಾಪ! ಎಷ್ಟು ಎತ್ತರಕ್ಕೆ, ಎಷ್ಟು ಚಂದಾಗಿ (ಛಂದಾಗಿ) ಇದ್ದಾನೆ ಅಂತ ಹೇಳೋಕೆ ಹೊರಟಿದ್ದಳು ಅಂತ ಕಾಣುತ್ತದೆ. ಏಕ್ದಂ ಫ್ಲಾಶ್ ಆಗಿ, ನಾಚಿ ಬ್ರೇಕ್ ಹಾಕಿ ಬಿಟ್ಟಳು,' ಅಂದುಕೊಂಡು, ಮನಸ್ಸಿನಲ್ಲೇ ಪೆಕಪೆಕಾ ಅಂತ ನಕ್ಕೆ.

ಕೆಲವೊಂದು ಕಾಮನೆಗಳೇ ಹಾಗೇ. consciously ಅದುಮಿಟ್ಟುಕೊಂಡರೂ unconsciously ಹೊರ ಬಿದ್ದುಬಿಡುತ್ತವೆ. ಆ ವಯಸ್ಸೇ ಹಾಗೋ ಏನೋ.

'ಎಷ್ಟು ಎತ್ತರಕ್ಕೆ, ಎಷ್ಟು ಚಂದ ಇದ್ದಾನೆ!'

ಕೂಸಿನ ಕಣ್ಣಲ್ಲಿ ಬಾಲಿವುಡ್ ಅಕ್ಕಿ, ಹೃದಯದಲ್ಲಿ ಪುಟರ್ ಪುಟರ್ ಹಕ್ಕಿ.


ನಂತರ ನಾವೂ 'ಖಿಲಾಡಿ' ಅನ್ನೋ ಮೂವಿ ನೋಡಾಯಿತು ಬಿಡಿ. ಒಳ್ಳೆ ಮೂವಿ. ಎಲ್ಲ ಹೊಸಬರನ್ನೇ ಹಾಕಿಕೊಂಡು ಮಾಡಿದ ಒಂದು ಒಳ್ಳೆ ಮೂವಿ. ಪಡ್ಡೆ ಹುಡುಗರ ಮಂಗ್ಯಾತನ, ಒಂದಿಷ್ಟು ಕಾಲೇಜ್ ರೋಮ್ಯಾನ್ಸ್, ನಂತರ ಒಂದು ಕೊಲೆ ಕೇಸಿನ ಸಸ್ಪೆನ್ಸ್, ಒಂದಿಷ್ಟು ಥ್ರಿಲ್ಲರ್ ಕ್ಷಣಗಳು, ಒಳ್ಳೆ ಇಂಪಾದ ಸಂಗೀತ, ಎಲ್ಲ ಬರೋಬ್ಬರಿ ಮಿಕ್ಸ್ ಮಾಡಿದ ಒಳ್ಳೆ ಟೈಮ್ ಪಾಸ್  ಮೂವಿ. ಜಾನಿ ಲೀವರ್ ಕಾಮಿಡಿಯಂತೂ - ಸಿಂಪ್ಲಿ ಸುಪರ್ಬ್.

ಕಳೆದ ವರ್ಷ ನಟ ಅಕ್ಷಯ ಕುಮಾರನಿಗೆ ನಲವತ್ತೇಳು ವರ್ಷವಾಯಿತಂತೆ. ಬಾಲಿವುಡ್ಡಿನಲ್ಲಿ ಈಗ AK - 47, ಅಂತ ಯಾರೋ ಅಂದರು. AK ಅಂದರೆ ಗೊತ್ತಾಯಿತಲ್ಲ? ಅಕ್ಷಯ ಕುಮಾರ ಅಂತ.

ಯಾಕೋ ಇಂದು ಯಾವದೋ ವಿಷಯಕ್ಕೆ AK - 47 ಬಂದೂಕು ನೆನಪಾದಾಗ ಅಕ್ಕಿ ಉರ್ಫ್ ಅಕ್ಷಯ ಕುಮಾರ ಉರ್ಫ್ AK ನೆನಪಾದ. ಅಕ್ಷಯ ಕುಮಾರ ಉರ್ಫ್ ಅಕ್ಕಿಯ ಕನಸು ಕಂಡ ಅಕ್ಕನಂತಹ ಹುಡುಗಿ ನೆನಪಾದಳು. ಆಕೆಯ ಹೃದಯದಲ್ಲಿ ಹಾರಿದ ಪುಟರ್, ಪುಟರ್ ಹಕ್ಕಿ ನೆನಪಾದವು. ಹಳಿ ತಪ್ಪಿದ ಮನಸ್ಸಿನ ರೈಲು ಎಲ್ಲೆಲ್ಲೋ ಹರಿದು ಹೋದಂತೆ ಉಳಿದೆಲ್ಲ ನೆನಪುಗಳು ಬಂದವು.

ಕೆಳಗೆ ನೋಡಿ. ೧೯೯೧-೯೨ ರಲ್ಲಿ ಬಿಡುಗಡೆಯಾದ 'ಖಿಲಾಡಿ' ಮೂವಿಯ ಒಂದು ಸಿಕ್ಕಾಪಟ್ಟೆ ಕಾಮಿಡಿ ಸೀನ್. ಎಷ್ಟು ನೋಡಿದರೂ ಬೋರ್ ಬರದು. ಬದಲಿಗೆ ಯಾವಾಗಲೂ ನಗೆ ಬುಗ್ಗೆಯ ಬೋರ್ವೆಲ್!

Monday, January 05, 2015

Long live random acts of kindness!

Last Friday, I had gone to the recycling center here, to recycle bottles, cans etc. There was a fairly long queue of people waiting to recycle their items. The person working there and doing the manual recycling was a young lady. Manual recycling means instead of using the slow recycling machine which accepts one item at a time, you put all your similar recyclable items in a bin, have the person weigh it and issue the refund based on the weight instead of actual per item refund deposit. She was working very hard and fast, lugging huge barrels in and out, non-stop. My turn came, I finished my recycling, got paid and returned home to get the next load of items to recycle. When I came back for the second time, I saw that the recycling center had been closed. But there were still some people lingering around. I asked if the young lady had closed the recycling center for good for that day. They said, No, she had cut herself while working, got a minor injury and had gone to the restroom to wash the wound and clean up. She would come back and reopen in a few minutes, they said. Fine, I said and continued to wait. The young woman came back, reopened and continued working as if nothing had happened. Felt for her. Considering her age, she should  probably be in school or college or at home enjoying life like other young people of her age. But here she was doing a hard job and doing it really well with lot of energy and enthusiasm. Now she had a minor injury as well. But nothing slowed her down.

There was this lady customer, in her mid fifties, who was recycling using one of the machines. Her very old mother was also there with her little dog, just hanging around, waiting for her daughter to complete their recycling.

The lady finished her recycling, submitted her receipts, got her money and left. She went to her car and came back. She came to the counter and left 'something' for the young woman who was manning the recycling center. I was right in the front to see what was that she gave. It was a very nice first aid kit!! The lady said, "I had an extra in the car. You can probably use it." The young lady who was then issuing my refund could only mutter,"Thank you, mam!" She was so engrossed in her duty. Only after issuing my refund, she took a minute to look at the nice first aid kit the stranger had left for her and marveled at the kit and more probably at the random act of kindness from a customer, a stranger.

Felt good to witness this act of random kindness first hand. Long live humanity. Long live random acts of kindness. Good Karma everywhere!