Monday, July 02, 2012

ಹನುಮಾನ್ ಯಾರ್ ಪೈಕಿ?

ಸಾಬ್....ನಿಮ್ದೂಕಿ ಭಗವಾನ್ ಹನುಮಾನ್ ಇಲ್ಲ ಕ್ಯಾ?....ಅಂತ ಅಂದ ಕರೀಂ.

ಹೌದಪಾ....ಇದ್ದಾರ್....ಏನಾತು? ಏಕದಂ ಹನುಮಾನ್ ಅನಕೋತ್ತಾ ಬಂದಿ ಇವತ್ತ ? .....ಅಂತ ಕೇಳಿದೆ.

ಏನೂ ಇಲ್ಲಾ ಸಾಬ್....ಹನುಮಾನ್ ನಮ್ದು ಪೈಕೀನಾ ಅಂತಾ ಡೌಟ್ ಸಾಬ್?....ಅಂತ ಹೇಳಿದ ಕರೀಂ.

ದೇವರು ಅಂದ್ರ ಎಲ್ಲಾ ಒಂದ ನೋಡಪಾ. ಹನುಮಾನ್ ನಮಗ ನಿಮಗ ಎಲ್ಲಾರಿಗೂ ದೇವರಪಾ....ಅಂತ ಸರ್ವ ಧರ್ಮ ಸಾಮರಸ್ಯದ ಆಧುನಿಕ ಹರಿಕಾರನ ಹಾಂಗ್ ಪೋಸ್ ಕೊಟ್ಟೆ.

ಅಲ್ಲಾ ಸಾಬ್....ಹನುಮಾನ್ ಹೆಸರು ಕೇಳಿದ್ರೆ ಅವರು ನಮ್ಮ ಪೈಕಿ ಅನ್ನಿಸೋದಿಲ್ಲವಾ ನಿಮ್ಗೆ?.....ಅಂದ ಕರೀಂ.

ಹ್ಯಾಂಗಪಾ ಅದು?.....ಅಂತ ಕನ್ಫ್ಯೂಸ್ ಲುಕ್ ಕೊಟ್ಟೆ.

ನೋಡಿ ಸಾಬ್.....ನಮ್ಮಲ್ಲಿ ಸುಲೇಮಾನ್, ರೆಹಮಾನ್,ಸಲ್ಮಾನ್ ಅಂತ ಎಲ್ಲಾ ಮಂದಿ ಇದ್ದಾರೆ. ಹಾಂಗೆ ಹನುಮಾನ್ ಕೂಡ ನಮ್ಮ ಮಂದೀನೇ ಇರಬೋದಾ? ಅದೇ ಡೌಟ್ ನಮಗೆ. ಏನಂತೀರಿ?....ಅಂತ ಮಸ್ತ ಜನರಲ್ ನಾಲೇಜ್  ತೋರ್ಸೀದಾ ಕರೀಂ.

ನಿನ್ನ ಐಡಿಯಾ ಮಸ್ತ ಅದ ನೋಡು....ಆದ್ರ ಬರೆ ಮೂರು ಮಂದಿ 'ಮಾನ್' ನಿಮ್ಮಲ್ಲೆ ಇದ್ದಾರ್ ಅಂತ ಹನುಮಾನ್ ಸಹ ಅದ ಅಂತ ಹೇಳಲಿಕ್ಕೆ ಬರೋದಿಲ್ಲ ನೋಡಪಾ.ನಮ್ಮಲ್ಲೂ ಯಜಮಾನ್ ಅಂತ ಇರ್ತಾರ್.....ಅಂತ ಹೇಳಿದೆ.

ಹೌದು ಸಾಬ್....ಅದು ಖರೆ ಅದೇ.ಸ್ವಲ್ಪ ಡಿಟೇಲ್ ಆಗಿ ಯೋಚನೆ ಮಾಡೋಣ ಕ್ಯಾ ಸಾಬ್?....ಅಂದ ಕರೀಂ

ಯಾಕೋ ನಿನ್ನ ತಲಿ ಮಸ್ತ ಓಡ್ಲಿಕತ್ತದ..ನೀನಾ ಎನಾಲಿಸಿಸ್ ಮಾಡಪಾ.....ಗುರುವೇ....ಅಂತ ಅಡ್ಡ ಬಿದ್ದೆ.

ನೋಡಿ ಸಾಬ್.....ಹನುಮಾನ್ ನೋಡಿ ಏನು ಮಾಡಿದ್ರು?....ಅಂತಾ ಡಿಟೇಲ್ ಎನಾಲಿಸಿಸ್ ಕೊಟ್ಟಾ.

ಯಾರದೋ ಹೆಂಡ್ತಿ...............ಸೀತಮ್ಮಾ. ಯಾರೋ ಹೊತ್ತಗೊಂಡು ಹೋದರು.......................ರಾವಣ ಭಾಯಿ. ಅದಕ್ಕೆ ಹನುಮಾನ್ ಯಾಕೋ ಸಿಕ್ಕಾಪಟ್ಟೆ ಎಕ್ಸೈಟ್ ಆಗಿ ಬಿಟ್ಟಿ, ರೈಸ್ ಆಗಿ ಬಿಟ್ಟಿ, ಸಮುಂದರ್  ಎಲ್ಲಾ ಹಾರಿ ಹಾರಿ ಹೋಗಿ, ನಡು ಸಿಕ್ಕ ರಾಕ್ಷಸ್ ಹುಡುಗಿ ಒಬ್ಬಾಕಿಗೆ ಹಾರ್ತಾ ಹಾರ್ತಾನೆ ಆಕಾಶ್ ದಾಗೇ ಇರೋ ಹಾಂಗೇ ಪ್ಯಾರ್ ಮಾಡಿ  ಬಚ್ಚಾ ಮಾಡ್ಬಿಟ್ಟು, ಇನ್ನೊಬ್ಬಾ ರಾಕ್ಷಸಿ ಆಂಟಿನ್ನ ಕೊಂದ ಬಿಟ್ಟಿ, ಲಂಕಾಗೆ ಹೋಗಿ ಗಾರ್ಡನ್ ಎಲ್ಲ ಹಾಳ್ ಮಾಡ ಬಿಟ್ಟಿ, ಶಾದಿಶುದಾ ಸೀತಮ್ಮಾಗೆ ಬನ್ನಿ ನಮ್ಮ ಬ್ಯಾಚಲರ್ ಹೆಗಲೂ ಮೇಲೆ ಕುತ್ಗೋಳಿ, ಸೀದಾ ರಾಮಜಿ ಕಡೆ ಕರ್ಕೊಂಡು ಹೋಗ್ತೀವಿ ಅಂತ ಅಪದ್ದ ಹೇಳಿ, ರಾವಣ ಭಾಯಿಗೆ ಬೈದು ಅವರದ್ದು ಕಡೆ ಬಾಲಕ್ಕೆ ಬೆಂಕಿ ಹಚ್ಚಿಸ್ಗೊಂಡು, ಪೂರಾ ಅವರ ಲಂಕಾ ಸುಟ್ಟಿ, ಸಮುದ್ರದಾಗೆ ಬಾಲ ಇಳಿಸಿ ಬೆಂಕಿ ಆರ್ಸಿಕೊಂಡು ವಾಪಸ್ ಬಂದು ರಾಮಾಜಿ ಅವರಿಗೆ ಹ್ಯಾಪಿ ನ್ಯೂಸ್ ಕೊಟ್ಟವರು ಹನುಮಾನ್ ಅವರು.....ಅಂತ ಕರೀಂ ಎನಾಲಿಸಿಸ್ ಮುಗಿಸಿದ.

ಇದೆಲ್ಲಾ ನೋಡಿದ್ರೆ ನಿಮಗೆ ಏನು ಅನ್ನಿಸ್ತದೆ? ಸಂಬಂಧ ಇಲ್ಲದ ಹುಚ್ಚಾಟ್  ಅನ್ಸೋದಿಲ್ಲವಾ?.....ಅಂತ ತನಗ ಗೊತ್ತದ ಅನ್ನೋ ಲುಕ್ ಕೊಟ್ಟಾ.

ಯಾರ ಪೈಕಿ ಅಂತೀಪಾ?....ಅಂದೆ.

ಸಾಬ್....ನನಗೆ ಅನ್ನಿಸೋ ಹಾಂಗೆ....ಹನುಮಾನ್ ಸರ್ದಾರ್ ಪೈಕಿ ಇರಲೇಬೇಕು ಸಾಬ್.....ಸರ್ದಾರ್ ಮಂದಿ ಮಾತ್ರ ಅಂಥಾ ಮಂಗ್ಯಾನ್ ಆಟ ಆಡೋಕ್ಕೆ ಸಾಧ್ಯ..... ಸರ್ದಾರ್  ಜೋಕ ಅಂತ ಹೇಳಿ ನಕ್ಕಾ.

ಮಂಗ್ಯಾನ್ ಕೆ....ಇದು ಜೋಕ? ಇದಕ್ಕ ನಗಬೇಕಾ? ಜೋಕುಮಾರ್ ಆಗಿ ನೋಡ ಕರೀಂ....ಅಂದೆ. ಜೋಕ ಚೊಲೋ ಅದ.No comments: